Asianet Suvarna News Asianet Suvarna News

ನಿರ್ದೇಶಕಿ Ekta Kapoor ಮತ್ತು ತಾಯಿ ಬಂಧನಕ್ಕೆ ಬಿಹಾರ ಕೋರ್ಟ್‌ ವಾರೆಂಟ್‌!

ಏಕ್ತಾ ಕಪೂರ್‌ನ ಸಂಕಷ್ಟಕ್ಕೆ ಸಿಲುಕಿಸಿದ ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌. ಸಮನ್ಸ್‌ಗೂ ಬಂದಿಲ್ಲ ಅರೆಸ್ಟ್‌ ಗ್ಯಾರಂಟಿ...

Arrest warrant against producer Ekta kapoor and mother for XXX web series vcs
Author
First Published Sep 29, 2022, 9:37 AM IST

ಬಾಲಿವುಡ್ ಚಿತ್ರರಂಗದ ಖ್ಯಾತ ಸಿನಿಮಾ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್‌ ಮತ್ತು ಅವರ ತಾಯಿ ಶೋಭಾ ಕಪೂರ್‌ ಬಂಧನಕ್ಕೆ ಬಿಹಾರ ಕೋರ್ಚ್‌ ಬುಧವಾರ ವಾರೆಂಟ್‌ ಜಾರಿಗೊಳಿಸಿದೆ. ‘ಎಕ್ಸ್‌ಎಕ್ಸ್‌ಎಕ್ಸ್‌ ’ ಎಂಬ ವೆಬ್‌ ಸೀರಿಸ್‌ ಮೂಲಕ ಯೋಧರನ್ನು ಅಪಮಾನಗೊಳಿಸಲಾಗಿದೆ ಮತ್ತು ಅವರ ಕುಟುಂಬದ ಭಾವನೆಗಳಿಗೆ ಘಾಸಿ ಮಾಡಲಾಗಿದೆ ಎಂದು ಆರೋಪಿಸಿ ನಿವೃತ್ತ ಸೈನಿಕ ಶಂಭು ಕುಮಾರ್‌ 2020 ರಲ್ಲಿ ಎಕ್ತ ಮತ್ತು ಅವರ ತಾಯಿಯ ವಿರುದ್ದ ದೂರು ಸಲ್ಲಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಲು ಕೋರ್ಚ್‌ಗೆ ಹಾಜರಾಗುವಂತೆ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಸಮನ್ಸ್‌ ಜಾರಿಯಾದರೂ ಹಾಜರಾಗಾದ ಹಿನ್ನಲೆಯಲ್ಲಿ , ನ್ಯಾ.ವಿಕಾಸ್‌ ಕುಮಾರ್‌ ಅವರು ಬಂಧನದ ವಾರೆಂಟ್‌ ಜಾರಿಗೊಳಿಸಿದ್ದಾರೆ.

'ಎಕ್ಸ್‌ಎಕ್ಸ್ಎಕ್ಸ್‌ ಸೀರಿಸ್‌ನ ALTBalaji ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದ ಹಕ್ಕು ಏಕ್ತಾ ಕಪೂರ್ ಬಾಲಾಜೀ ಟೆಲಿಫಿಲ್ಮಸ್‌ಗೆ ಸೇರಿದ್ದು. ಶೋಭಾ ಕಪೂರ್ ಕೂಡ ಬಾಲಾಜೀ ಟೆಲೆಫಿಲ್ಮಸ್‌ ಸಂಸ್ಥೆಗೆ ಸೇರಿದವರು. ಏಕ್ತಾ ಕಪೂರ್ ಕುಟುಂಬಕ್ಕೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಸ್ವಷ್ಪನೆ ನೀಡಲು ಹಾಜರಾಗುವಂತೆ ಹೇಳಿತ್ತು. ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅನೇಕ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು ಸ್ಪಷ್ಟನೆ ಯಾಕೆ ಎಂದು ಕಪೂರ್ ಅವರು ತಿಳಿಸಿದ್ದಾರೆ. ಆದರೆ ಯಾರೂ ಕೋರ್ಟ್‌ಗೆ ಬಂದು ಸ್ಪಷ್ಟನೆ ಕೊಟ್ಟಿಲ್ಲ ಹೀಗಾಗಿ ವಾರೆಂಟ್‌ ಜಾರಿಗೊಳಿಸಿದೆ' ಎಂದು ವಕೀಲರಾದ ಶ್ರೀ ಪಾಠಕ್ ಹೇಳಿದ್ದಾರೆ. 

Arrest warrant against producer Ekta kapoor and mother for XXX web series vcs

ಕಳೆದ ತಿಂಗಳು ಏಕ್ತಾ ಕಪೂರ್ ಫೇಕ್ ಕಾಸ್ಟಿಂಗ್ ಏಜೆಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆ ಹೆಸರನ್ನು ಬಳಸಿಕೊಂಡು ಯುವ ಕಲಾವಿದರಿಗೆ ಅವಕಾಶ ನೀಡುವುದಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಹಾಗೂ ಅವರನ್ನು ತಪ್ಪು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು.

ಈ ವೇಳೆ ಬಾಲಾಜಿ ಟೆಲಿಫಿಲ್ಮಸ್‌ ಮತ್ತು ALT ಡಿಜಿಟಲ್ ಎಂಟರ್ಟೈಮೆಂಟ್‌ ಹೇಳಿಕೆ ನೀಡಿದ್ದಾರೆ, 'ನಾವು ಎಂದೂ ಕಲಾವಿದರಿಂದ ಹಣ ಪಡೆದುಕೊಳ್ಳುವುದಿಲ್ಲ ಪ್ರತಿಭೆಗೆ ಬೆಲೆ ಕೊಡುವ ಸಂಸ್ಥೆ ಇದು. ನೀಚ ಕೆಲಸ ಮಾಡುತ್ತಿರುವವರ ವಿರುದ್ಧ ಸಂಸ್ಥೆ ತನಿಖೆ ಮಾಡುತ್ತಿದೆ. ಸಿನಿಮಾ ಅಥವಾ ಧಾರಾವಾಹಿ ಆಡಿಷನ್ ಇದ್ದಲಿ ನಾವೇ ಘೋಷಣೆ ಮಾಡುತ್ತೇವೆ. ಏಜೆಂಟ್‌ಗಳಿಗೆ ಹಣ ಕೊಟ್ಟು ಸಿಲುಕಿಕೊಂಡವರು ನಮ್ಮ ಜವಾಬ್ದಾರಿ ಅಲ್ಲ ಅವರು ಪೊಲೀಸರಿಗೆ ದೂರು ನೀಡಬೇಕು. ನಮಗೂ ಇದಕ್ಕೂ ಯಾವ ಸಂಬಂಧವಿಲ್ಲ' ಎಂದಿದ್ದರು.

Influential People : ಏಕಮೇವ ಅದ್ವಿತೀಯಳಾದ ಏಕ್ತಾ... ಅಮೀರ್ ಖಾನ್‌ಗಿಂತ ಮುಂದೆ!

ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್

'ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಬ್ಯುಸಿನೆಸ್ ನೀಡಿದ ಜನರನ್ನು ನಾವು ಬಹಿಷ್ಕರಿಸುತ್ತಿರುವುದು ತುಂಬಾ ವಿಚಿತ್ರವಾಗಿದೆ. ಉದ್ಯಮದಲ್ಲಿರುವ ಎಲ್ಲಾ ಖಾನ್‌ಗಳು (ಶಾರುಖ್ ಖಾನ್, ಸಲ್ಮಾನ್ ಖಾನ್) ಮತ್ತು ವಿಶೇಷವಾಗಿ ಅಮೀರ್ ಖಾನ್ ಲೆಜೆಂಡ್‌ಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ, ಅಮೀರ್ ಖಾನ್ ಅವರನ್ನು ಎಂದಿಗೂ ಬಹಿಷ್ಕರಿಸಲಾಗುವುದಿಲ್ಲ, ಅವರು ಸಾಫ್ಟ್ ರಾಯಭಾರಿ, ಅಮೀರ್ ಖಾನ್ ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. 

ತಮ್ಮನನ್ನೇ ಆರೆಸ್ಟ್ ಮಾಡಿ ಎಂದು ಪೊಲೀಸಿಗೆ ಕಾಲ್‌ ಮಾಡಿದ್ದ ಏಕ್ತಾ ಕಪೂರ್!

 

ಏಕ್ತಾ ಕಪೂರ್‌ ಕಿಡ್ನ್ಯಾಪ್, ಗನ್‌ ಹಿಡಿದ ಮುಸುಕುಧಾರಿಗಳಾರು?

ಏಕ್ತಾ ಕಪೂರ್ ಟಿವಿಯಿಂದ OTT ಪ್ಲಾಟ್‌ಫಾರ್ಮ್‌ಗೆ ಕಂಟೆಂಟ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಸೋಮವಾರ ಸಂಜೆ, ಅವರು ಬಾಲಾಜಿ ಕಚೇರಿಯಿಂದ ಹೊರಬಂದು ಕ್ಯಾಮೆರಾಗಳ ಮುಂದೆ ಪೋಸ್ ನೀಡಲು ಬಂದಿದ್ದಾರೆ. ಈ ವೇಳೆ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆದಿದೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ.ಅಷ್ಟರಲ್ಲಿ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಕೈಯಲ್ಲಿ ಪಿಸ್ತೂಲ್ ಹಿಡಿದು ಬಂದಿದ್ದಾರೆ. ಅವರಲ್ಲಿ ಒಬ್ಬರು ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಬೆದರಿಕೆ ಹಾಕಿದರೆ, ಇನ್ನೊಬ್ಬರು ಏಕ್ತಾ ಅವರರಿಗೆ ಗನ್ ತೋರಿಸಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಏಕ್ತಾ ಕಪೂರ್‌ಗೆ ಏನಾಯಿತು ಎಂಬುದು ದೃಢೀಕರಿಸಲ್ಪಟ್ಟಿಲ್ಲವಾದರೂ, ಇದು ಮುಂಬರುವ ಶೋ ಲಾಕ್ ಅಪ್‌ನ ಪ್ರೋಮೋ ಎಂದು ಪ್ರೇಕ್ಷಕರು ಊಹಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

Follow Us:
Download App:
  • android
  • ios