ಪ್ರಿಯಾಂಕಾ ಚೋಪ್ರಾ ಲ್ಯಾಪ್ಟಾಪ್ನಲ್ಲಿ ಭದ್ರವಾಗಿದ್ದ ಗುಟ್ಟೊಂದು ರಟ್ಟು!
ಹಾಲಿವುಡ್ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಬರೀ ನಟಿ, ನಿರ್ಮಾಪಕಿಯಾಗಿ ಹೆಸರು ಮಾಡಿಲ್ಲ. ಬದಲಿಗೆ ಯಾರೂ ಅರಿಯದ ಅವರ ಗುಟ್ಟೊಂದು ಲ್ಯಾಪ್ಟಾಪ್ನಲ್ಲಿ ಭದ್ರವಾಗಿದೆ. ಏನದು?
ಬಾಲಿವುಡ್ ಮೇಲೆ ಮುನಿಸಿಕೊಂಡು ಇದರ ಸಹವಾಸವೇ ಬೇಡ ಎಂದು ಹಾಲಿವುಡ್ನಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಬರೀ ನಟನೆಯಲ್ಲಿ ಹೆಸರು ಮಾಡಿದವರಲ್ಲ. ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಹಲವಾರು ನಟ- ನಟಿಯರು ನಟನೆಯಿಂದ ಮಾತ್ರವಲ್ಲದೇ ಸುಮಧುರವಾದ ಕಂಠದಿಂದಲೂ ಜನಪ್ರಿಯತೆ ಗಳಿಸಿರುತ್ತಾರೆ. ಅಂಥವರಲ್ಲಿ ಒಬ್ಬರು ಪ್ರಿಯಾಂಕಾ. ಈಕೆಯದ್ದು ಬಹುಮುಖ ಪ್ರತಿಭೆ. ರೂಪದರ್ಶಿಯಾಗಿಯೂ ಹೆಸರು ಮಾಡಿರುವ ಪ್ರಿಯಾಂಕಾ, ನಿರ್ಮಾಪಕಿಯೂ ಹೌದು. ಇವರು ಸಂಗೀತ ಕ್ಷೇತ್ರದಲ್ಲಿಯೂ ಮುಂದು. ಹಾಲಿವುಡ್ (Hollywood) ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ಪ್ರಿಯಾಂಕಾ ಚೋಪ್ರಾ, ಕೆಲವು ಜಗತ್ ವಿಖ್ಯಾತ ಸಂಗೀತಗಾರರೊಟ್ಟಿಗೆ ಜಂಟಿಯಾಗಿ ಆಲ್ಬಂ ಸಹ ಬಿಡುಗಡೆ ಮಾಡಿದ್ದರು. ಆದರೆ ಅವರಿಗೆ ನಟನಾ ಕ್ಷೇತ್ರವೇ ಕೈಹಿಡಿಯಿತು.
ಹೌದು. ಹಾಲಿವುಡ್ಗೆ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಕರಿಯರ್ (career) ಶುರು ಮಾಡಿದ್ದು ನಟನೆಯಿಂದ ಅಲ್ಲ. ಬದಲಿಗೆ ತಮ್ಮ ಕರಿಯರ್ ಶುರು ಮಾಡಿದಾಗ ಅವರು ಸಂಗೀತಗಾರರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. will.i.am, ಪಿಟ್ಬುಲ್ ಮುಂತಾದವರ ಜೊತೆ ಇವರು ಕೈ ಜೋಡಿಸಿದ್ದರು. ನಟನೆಯಲ್ಲಿಯೇ ಫೇಮಸ್ ಆದಾಗ ಸಂಗೀತ ವೃತ್ತಿಜೀವನವು ತೆರೆಮರೆಯ ಹಿಂದೆ ಸರಿಯಿತು. ಸಂಗೀತವನ್ನು ತಮ್ಮ ಎರಡನೇ ವೃತ್ತಿಜೀವನ ಅಂತ ಪರಿಗಣಿಸಿದ್ದರು ಪ್ರಿಯಾಂಕಾ. ಬಿಡುಗಡೆಗೆ ಸಿದ್ಧವಾಗಿರುವ ಹೊಸ ವೆಬ್ ಸರಣಿ (web series) ಸಿಟಾಡೆಲ್ (Citadel) ಪ್ರೊಮೋಷನ್ನಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಈ ಸಂದರ್ಭದಲ್ಲಿ ತಮ್ಮ ಸಂಗೀತ ಕ್ಷೇತ್ರದ ಎಂಟ್ರಿ ಹಾಗೂ ಆ ವೃತ್ತಿಯ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ, ನನ್ನ 22 ವರ್ಷದ ನಟನಾ ವೃತ್ತಿಯಲ್ಲಿ ನನ್ನ ಸಂಗೀತಗಾರ್ತಿಯಾಗಿ ನನ್ನ ಪದಾರ್ಪಣೆ ಕೇವಲ ಎರಡು ಸೆಕೆಂಡ್ ಎನಿಸುತ್ತದೆ. ಅಷ್ಟು ಬೇಗನೆ ಅದು ಮುಗಿದು ಬಿಟ್ಟಿತು ಎಂದಿದ್ದಾರೆ ಪ್ರಿಯಾಂಕಾ.
ಬಾಲಿವುಡ್‌ನಲ್ಲಿ ಅವಕಾಶ ವಂಚಿತಳಾದ ಪ್ರಿಯಾಂಕಾ, ಅವರಮ್ಮ ಹೇಳುವುದೇನು?
ತಾವು ಹಾಡಿರುವ ಅನೇಕ ಹಾಡುಗಳು ಎಲ್ಲಿಯೂ ಇದುವರೆಗೆ ರಿಲೀಸ್ ಆಗಿಲ್ಲ ಎನ್ನುವ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಟಿ ಪ್ರಿಯಾಂಕಾ ಅವರ ‘ಇನ್ ಮೈ ಸಿಟಿ’, ‘ಎಕ್ಸೋಟಿಕ್’ ಮತ್ತು ‘ಐ ಕಾಂಟ್ ಮೇಕ್ ಯು ಲವ್ ಮಿ’ ಹಾಡುಗಳು ಯೂಟ್ಯೂಬ್ ನಲ್ಲಿ ಲಕ್ಷಾಂತರ ಹಿಟ್ಸ್ ಸಹ ಪಡೆದಿವೆ. ಆದರೆ ಇನ್ನೂ ಅವರ ಬಳಿ ಇಂತಹ 40 ಹಾಡುಗಳು ಇರುವುದು ಬಹುಶಃ ಯಾರಿಗೂ ಈ ಹಿಂದೆ ಗೊತ್ತಿರಲಿಕ್ಕಿಲ್ಲ.
ಪ್ರಿಯಾಂಕಾ ಅವರ ನಟನಾ ವೃತ್ತಿಜೀವನವು ಟಿವಿ ಶೋ ಕ್ವಾಂಟಿಕೊದೊಂದಿಗೆ ಪ್ರಾರಂಭವಾಯಿತು, ಇದು ಅನೇಕ ಸೀಸನ್ ಹೊಂದಿದ್ದವು. ತಮ್ಮ ಸಂಗೀತ ವೃತ್ತಿಜೀವನದ ಬಗ್ಗೆ ಹೇಳಿಕೊಂಡಿರುವ ಪ್ರಿಯಾಂಕಾ, 'ಸಂಗೀತಗಾರರು ಸ್ವತಃ ಅವರೇ ಹಾಡುಗಳನ್ನು ರಚಿಸುತ್ತಾರೆ, ಆದ್ದರಿಂದಲೇ ನನಗೆ ಸಂಗೀತದ (Music) ಬಗ್ಗೆ ಅಷ್ಟೊಂದು ಒಲವು ಅಂತ ಹೇಳಿದರು. ಅದೇ ನಟ-ನಟಿಯರು ಇತರರ ಕೆಲಸ ಮತ್ತು ನಿರ್ದೇಶನವನ್ನು ಅವಲಂಬಿಸುತ್ತಾರೆ. ಬಹಳ ಉತ್ಸುಕತೆಯಿಂದ ನಾನು ಸಂಗೀತಗಾರ್ತಿಯಾಗಿ ವೃತ್ತಿ ಆರಂಭಿಸಿದೆ ಕೆಲವು ಒಳ್ಳೆಯ ಕೊಲ್ಯಾಬರೇಶನ್ಗಳನ್ನು ಮಾಡಿದೆ. ಆದರೆ ಏಕೋ ಅದು ಬಹು ಬೇಗನೆ ಮುಗಿದುಬಿಟ್ಟಿತು. ಈಗಲೂ ಬಿಡುಗಡೆ ಮಾಡಲಾಗದ ನನ್ನದೇ 40 ಹಾಡುಗಳು ನನ್ನ ಲ್ಯಾಪ್ಟಾಪ್ನಲ್ಲಿ (Laptop) ಭದ್ರವಾಗಿದೆ' ಎಂದಿದ್ದಾರೆ.
Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!
'ನಾನು ನನ್ನ ಮೊದಲ ಹಾಡನ್ನು ಕೇಳಿದಾಗ ಇದು ತುಂಬಾ ವರ್ಷಗಳ ಕಾಲ ವೃತ್ತಿಜೀವನ ಮುಂದುವರೆಯುವುದಿಲ್ಲ ಅಂತ ಅವರು ಅರಿತುಕೊಂಡೆ. ನನ್ನ 22 ವರ್ಷಗಳ ವೃತ್ತಿಜೀವನದಲ್ಲಿ, ಸಂಕ್ಷಿಪ್ತ ಸಂಗೀತ ವೃತ್ತಿಜೀವನವು ಕೇವಲ 2 ಸೆಕೆಂಡುಗಳಂತೆ ಭಾಸವಾಯಿತು. ನನ್ನ ನಾಲ್ಕು ಹಾಡುಗಳಷ್ಟೆ ಬಿಡುಗಡೆ ಆಗಿವೆ. ಖ್ಯಾತ ಗಾಯಕ ಪಿಟ್ಬುಲ್ ಜೊತೆಗೆ ಒಂದು ಹಾಡನ್ನು ಹಾಡಿದ್ದೇನೆ. ಅದಾದ ಬಳಿಕ ಅದೇ ವೃತ್ತಿಯನ್ನು (Profession) ಮುಂದುವರೆಸುವ ಉದ್ದೇಶದಿಂದ ಇನ್ನೂ ಕೆಲವು ಹಾಡನ್ನು ಮಾಡಿಕೊಂಡಿದ್ದೆ. ಆದರೆ ನಟನಾ ವೃತ್ತಿಯನ್ನೇ ಗಂಭೀರವಾಗಿ ಪರಿಗಣಿಸಿ ಗಾಯನವನ್ನು ಮೊಟಕುಗೊಳಿಸಿದೆ' ಎಂದಿದ್ದಾರೆ.