ಮಲೈಕಾ ಅರೋರಾ ತಾಯಿ- ಮಾಜಿ ಪತಿಯ ಅಪ್ಪ ಒಂದೇ ಕಾರಲ್ಲಿ: ಎಲ್ಲೋ ಮಿಸ್​ ಹೊಡಿತಿದೆ ಎಂದ ನೆಟ್ಟಿಗರು!

ಮಲೈಕಾ ಅರೋರಾ ತಾಯಿ ಮತ್ತು ನಟಿಯ ಮಾಜಿ ಪತಿ ಅರ್ಬಾಜ್​ ಖಾನ್​ ಅಪ್ಪ ಸಲೀಂ ಖಾನ್​ ಒಂದೇ ಕಾರಲ್ಲಿ ಕಾಣಿಸಿಕೊಂಡಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.
 

Arbaaz Khans Father Salim Khan Spotted With Malaika Aroras Mom Netizens in Shock suc

ಬಾಲಿವುಡ್​ ನಟಿ ಮಲೈಕಾ ಅರೋರಾ  ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್​ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ.  

ಅದೇ ಇನ್ನೊಂದೆಡೆ, ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​  ಕಳೆದ ಡಿಸೆಂಬರ್​ 25ರಂದು ಮದುವೆಯಾದರು.  56 ವರ್ಷದ ಅರ್ಬಾಜ್​ ಖಾನ್​ ಅವರು 33 ವರ್ಷದ ಶುರಾ ಖಾನ್​ ಅವರ ಕೈಹಿಡಿದು ಸುಖಿ ದಾಂಪತ್ಯ ನಡೆಸುತ್ತಿದ್ದಾರೆ.  ಮದುವೆಯಲ್ಲಿ ಮಲೈಕಾ ಪುತ್ರ ಅರ್ಹಾನ್​ ಖಾನ್​ ಕೂಡ ಆಗಮಿಸಿ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು,  ಅಪ್ಪನ ಮದ್ವೆಗೆ ಭರ್ಜರಿ ಡ್ಯಾನ್ಸ್​ ಕೂಡ ಮಾಡಿದ್ದು ವಿಶೇಷವಾಗಿತ್ತು.  ಆದರೆ ಮಲೈಕಾ ಶರಾವತ್​ ಮಾತ್ರ ಮಾಜಿ ಪತಿಯ ಮದ್ವೆಗೆ ಹೋಗಿರಲಿಲ್ಲ. ಮದುವೆಯಾಗುತ್ತಿದ್ದಂತೆಯೇ ಅರ್ಬಾಜ್​, ಮಲೈಕಾ ಅರೋರಾ ಅವರನ್ನು ಸೋಷಿಯಲ್​ ಮೀಡಿಯಾ ಖಾತೆಯಿಂದ ಅನ್​ಫಾಲೋ ಮಾಡಿಯೂ ಆಗಿದೆ.

ಪತ್ನಿಯೂ ಬಿಟ್ಟಳು, ಗರ್ಲ್​ಫ್ರೆಂಡೂ ಕೈಕೊಟ್ಟಳು... ಮಲೈಕಾ ಅರೋರಾ ಮಾಜಿ ಪತಿಗೆ ಕೊನೆಗೂ ಸಿಕ್ಕಳೀ ಹೊಸ ಬೆಡಗಿ?

ಇವೆಲ್ಲವುಗಳ ನಡುವೆ ಇದೀಗ ಕುತೂಹಲದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದೇನೆಂದರೆ ಮಲೈಕಾ ಅವರ ತಾಯಿ ಜಾಯ್ಸ್ ಪಾಲಿಕಾರ್ಪ್ (Joyce Polycarp) , ಅರ್ಬಾಜ್​ ಖಾನ್​ ತಂದೆ ಸಲೀಂ ಖಾನ್​ ಜೊತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಲೀಂ ಖಾನ್​ ಇಳಿಯುತ್ತಿದ್ದಂತೆಯೇ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಮುಂದಾದಾಗ ಖುದ್ದು ಶಾಕ್​ ಆದರು. ಏಕೆಂದರೆ ಅದೇ ಕಾರಿನಲ್ಲಿ, ಮಲೈಕಾ ಅವರ ತಾಯಿಯೂ ಇದ್ದು, ಇದರ ವಿಡಿಯೋಗೆ ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಮಗನಿಗೆ ಮಲೈಕಾ ಕೈಕೊಟ್ಟಿದ್ದಕ್ಕೆ ಅವಳ ಅಮ್ಮನ ಮೇಲೆ ಸೇಡು ತೀರಿಸಿಕೊಳ್ತಿದ್ದಾರಾ ಸಲೀಂ ಎಂದು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು. 
 
ಅಷ್ಟಕ್ಕೂ ಅವರೇನೂ ಸುಮ್ಮನೇ ಒಟ್ಟಿಗೇ ಹೋಗಿದ್ದಲ್ಲ. ಮಲೈಕಾ ಮತ್ತು ಅರ್ಬಾಜ್​ ಖಾನ್​ ಪುತ್ರ ಅರ್ಹಾನ್ ಖಾನ್ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ಗ್ರ್ಯಾಂಡ್ ಪಾರ್ಟಿ ನಡೆದಿತ್ತು. ಆ ಸಂದರ್ಭದಲ್ಲಿ ಅರ್ಬಾಜ್ ಖಾನ್ ಅವರ ತಂದೆಯೂ ಹೋಗಿದ್ದಾರೆ,  ಮಲೈಕಾ ಅಮ್ಮನೂ ಹೋಗಿದ್ದಾರೆ. ಅದರೆ ಒಂದೇ ಕಾರಿನಲ್ಲಿ ಹೋದದ್ದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಈ ವೈರಲ್ ವಿಡಿಯೋದಲ್ಲಿ  ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ತಮ್ಮ ಕಾರಿನಿಂದ ಇಳಿಯುತ್ತಿರುವುದು ಕಾಣಬಹುದು. ಅದೇ ಕಾರಿನಲ್ಲಿ  ಜಾಯ್ಸ್ ಪಾಲಿಕಾರ್ಪ್ ಕೂಡ ಇದ್ದದ್ದು, ನೆಟ್ಟಿಗರು ಏನೋ ಮಿಸ್​ ಹೊಡೀತಿದೆ ಅಂತಿದ್ದಾರೆ. 

ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ​ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?
 
 

Latest Videos
Follow Us:
Download App:
  • android
  • ios