Asianet Suvarna News Asianet Suvarna News

ಪತ್ನಿಯೂ ಬಿಟ್ಟಳು, ಗರ್ಲ್​ಫ್ರೆಂಡೂ ಕೈಕೊಟ್ಟಳು... ಮಲೈಕಾ ಅರೋರಾ ಮಾಜಿ ಪತಿಗೆ ಕೊನೆಗೂ ಸಿಕ್ಕಳೀ ಹೊಸ ಬೆಡಗಿ?

ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್​ ಖಾನ್​ ಅವರಿಗೆ 56ನೇ ವಯಸ್ಸಿನಲ್ಲಿ ಇನ್ನೋರ್ವ ಪಾರ್ಟನರ್​ ಸಿಕ್ಕಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಯಾರೀ ಬೆಡಗಿ? 
 

Malaika Aroras ex hubby Arbaaz Khan Finds Love Again After Break Up With Giorgia Andriani suc
Author
First Published Dec 21, 2023, 12:51 PM IST

ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್​ಗೆ ಮಾತ್ರ ಇದುವರೆಗೂ ಸರಿಯಾದ ಜೋಡಿ ಸಿಕ್ಕೇ ಇರಲಿಲ್ಲ. ಇದೀಗ ಹೊಸ ವಿಷಯವೊಂದು ಬೆಳಕಿಗೆ ಬಂದಿದೆ.

ಅದೇನೆಂದರೆ. ಮಲೈಕಾ ಅರೋರಾ ಅವರಿಂದ ಬೇರ್ಪಟ್ಟ ಬಳಿಕ ಅರ್ಬಾಜ್​ ಖಾನ್​ ಅವರು,  ಇಟಲಿಯ ನಟಿ ಮತ್ತು ರೂಪದರ್ಶಿಯಾಗಿದ್ದು ಜಾರ್ಜಿಯಾ ಆಂಡ್ರಿಯಾನಿ ಜೊತೆ ಸಂಬಂಧದಲ್ಲಿದ್ದರು.  2019 ರಲ್ಲಿ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗಿನ ಸಂಬಂಧವನ್ನು ಅರ್ಬಾಜ್​ ಖಾನ್​ ದೃಢಪಡಿಸಿದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ. ಇಬ್ಬರ ನಡುವೆ ಕಳೆದ ವರ್ಷ ಅಂದರೆ 2022ರಲ್ಲಿ ಸಂಬಂಧ ಮುರಿದು ಬಿತ್ತು.  ಅರ್ಬಾಜ್ ಮತ್ತು ಜಾರ್ಜಿಯಾ  ನಾಲ್ಕು ವರ್ಷಗಳ ಕಾಲ ಸಂಬಂಧದಲ್ಲಿದ್ದು ಕೊನೆಗೆ ಕಳೆದ ವರ್ಷ ಸಂಬಂಧ ಕೊನೆಗೊಳಿಸಿದರು.  ಸಂಬಂಧ ಮುರಿದ ಬಳಿಕ ಈ ಕುರಿತು ಮಾತನಾಡಿದ್ದ  ಜಾರ್ಜಿಯಾ ಆಂಡ್ರಿಯಾನಿ,  ಈ ಸಂಬಂಧ  ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಮೊದಲಿನಿಂದಲೂ ನಮಗಿಬ್ಬರಿಗೂ ಗೊತ್ತಿತ್ತು. ಏಕೆಂದರೆ ನಾವು ತುಂಬಾ ಭಿನ್ನರು. ಅದು ಇಬ್ಬರಿಗೂ ಗೊತ್ತಿತ್ತು ಆದರೆ ಅದನ್ನು ಒಪ್ಪಿಕೊಳ್ಳುವ ಧೈರ್ಯ ನಮ್ಮಿಬ್ಬರಿಗೂ ಇರಲಿಲ್ಲ ಎಂದಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ  ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿರುತ್ತೇವೆ. ಆ ಸಮಯದಲ್ಲಿ ನಾವು ಸ್ನೇಹಿತರಿಗಿಂತ ಹೆಚ್ಚಾಗಿದ್ದೆವು. ನಾವು ಯಾವಾಗಲೂ ತುಂಬಾ ಹತ್ತಿರವಾಗಿದ್ದೇವೆ.  ಒಟ್ಟಿಗೆ ಮೋಜು ಮಾಡಿ, ಸ್ನೇಹಿತರಿಂದ ಸ್ನೇಹಿತರಾಗಲು ಕಷ್ಟವಾಗಲು ಇದು ಕೂಡ ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.
ಇಬ್ಬರು ಪತ್ನಿಯರ ಜೊತೆ ಮಗ ಸೋಹೈಲ್​ ಬರ್ತ್​ಡೇಗೆ ಬಂದ ಸಲ್ಮಾನ್​ ಖಾನ್​ ಅಪ್ಪ! ಸಲ್ಲು ಭಾಯಿ ಗರಂ ಆಗಿದ್ದೇಕೆ?

ಇದೇ ವೇಳೆ, ಮಲೈಕಾ ಮತ್ತು ಅರ್ಬಾಜ್​ ಸಂಬಂಧದ ಕುರಿತು ಮಾತನಾಡಿದ್ದ ನಟಿ, ಮಲೈಕಾ ಜೊತೆಗಿನ ಅರ್ಬಾಜ್ ಸಂಬಂಧದ ಕುರಿತು ಮಾತನಾಡಿದ ಜಾರ್ಜಿಯಾ,  ಇದು ನನ್ನ  ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. ಮಲೈಕಾ ಅವರೊಂದಿಗಿನ ಸಂಬಂಧವು ನಿಜವಾಗಿಯೂ ಅವನೊಂದಿಗಿನ ನನ್ನ ಸಂಬಂಧಕ್ಕೆ ಅಡ್ಡಿಯಾಗಲಿಲ್ಲ. ಅದು ಈಗಾಗಲೇ ಮುಗಿದ ಅಧ್ಯಾಯ.  ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ಅರ್ಬಾಜ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಜಾರ್ಜಿಯಾ ಹೇಳಿದ್ದರು. ಈ ಸಂಬಂಧ ಮುರಿದ ಬಳಿಕ ಒಂಟಿಯಾಗಿದ್ದ ಅರ್ಬಾಜ್​ಗೆ ಈಗ ಮತ್ತೊಬ್ಬ ಸ್ನೇಹಿತೆ ಸಿಕ್ಕಿದ್ದಾರೆ.  56 ವರ್ಷದ ಅರ್ಬಾಜ್​ ಈಗ ಮೇಕಪ್ ಕಲಾವಿದ ಶುರಾ ಖಾನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. 
 
ಅಂದಹಾಗೆ ಮೇಕಪ್​  ಕಲಾವಿದೆಯ ಹೆಸರು ಶುರಾ ಖಾನ್​. ಅರ್ಬಾಜ್​ ಖಾನ್​ ಅವರ ಮುಂಬರುವ ಚಿತ್ರ  ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್  ನೋಡಿದಾಗ, ಅವರು ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಾರೆ ಎನ್ನುವುದು ತಿಳಿಯುತ್ತದೆ. ಅರ್ಬಾಜ್​ ಖಾನ್​ ಮತ್ತು ಶುರಾ ಖಾನ್​ ಅವರು ಡೇಟಿಂಗ್​ನಲ್ಲಿ ಇರುವುದನ್ನು ಇಬ್ಬರೂ ಇದುವರೆಗೆ ಬಹಿರಂಗಗೊಳಿಸದೇ ಇದ್ದರೂ, ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಹಾಗೂ ಎಲ್ಲಾ ಸೂಕ್ಷ್ಮತೆಯನ್ನು ಗಮನಿಸಿ ಬೀ-ಟೌನ್​ನಲ್ಲಿ ಸದ್ಯ ಈ ವಿಷಯ ಬಹಳ ಸದ್ದು ಮಾಡುತ್ತಿದೆ.   
ಎಲ್ಲೆಡೆ ಅತ್ಯಾಚಾರ, ಮಹಿಳೆಯ ಬದುಕು ನರಕ, ಸ್ಥಿತಿ ಭಯಾನಕ: ಕರಾಳ ಅನುಭವ ಹೇಳಿಕ ಪಾಕ್​ ನಟಿ ಆಯೇಷಾ

Follow Us:
Download App:
  • android
  • ios