Anchor Anushree: ತಮಿಳು ನಟನ ಜೊತೆ ಅನುಶ್ರೀ ಫೋಟೋ ವೈರಲ್, ಕನ್ನಡಿಗರ ತರಾಟೆ

ಆ್ಯಂಕರಿಂಗ್​ ಮೂಲಕ ಮನೆಮಾತಾಗಿರುವ ಅನುಶ್ರೀ ಅವರು ತಮಿಳು ನಟನ ಜೊತೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಶೇರ್​ ಮಾಡಿದ್ದಾರೆ. ಇದನ್ನು ನೋಡಿ ಕೆಲವರು ಗರಂ ಆಗಿದ್ದಾರೆ. ಇದಕ್ಕೆ ಕಾರಣವೇನು?
 
 

Anushrees photo with Tamil actor went viral Kannadigas trolled her,

ಆ್ಯಂಕರ್​ ಅನುಶ್ರೀ (Anchor Anushree) ಬಹುತೇಕ ಎಲ್ಲರಿಗೂ ಚಿರಪರಿಚಿತ. ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಇವರು ಸಾಕಷ್ಟು ಹೆಸರು ಮಾಡಿದ್ದಾರೆ. ತಮ್ಮ ಅಪೂರ್ವ ನಿರೂಪಣೆಯಿಂದಾಗಿ  ಝೀ ಕುಟುಂಬ ಪ್ರಸಿದ್ಧ ನಿರೂಪಕಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ. 33 ವರ್ಷದ ಅನುಶ್ರೀ ನಿರೂಪಕಿಯಾಗಿ ಮಾತ್ರವಲ್ಲದೇ ಕೆಲ ಚಿತ್ರಗಳಲ್ಲಿಯೂ ಇವರು ನಟಿಸಿದ್ದು, ಅದರಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. 'ಮುರಳಿ ಮೀಟ್ಸ್ ಮೀರಾ' (Murali Meets Meera) ಎಂಬ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ದೊರಕಿದೆ.  'ಬೆಂಕಿ ಪಟ್ಣ' ಕನ್ನಡ ಚಲನ ಚಿತ್ರದಲ್ಲಿ, ಉತ್ತಮ ನಾಯಕಿ ಪ್ರಶಸ್ತಿ' ಕೂಡ ಲಭಿಸಿದೆ.  ನಿರೂಪಣೆಯ ಜೊತೆಗೆ ಯೂಟ್ಯೂಬ್​ ಚಾಲೆನ್​ ಒಂದನ್ನು ತೆರೆದಿರುವ ಅವರು, ಅಲ್ಲಿ ಹಲವಾರು ನಟ-ನಟಿಯರ ಸಂದರ್ಶನ ಮಾಡುತ್ತಿದ್ದಾರೆ. ಈಗ ಅವರು ತಮಿಳು ನಟರೊಬ್ಬರ ಸಂದರ್ಶನ ಮಾಡಿದ್ದು, ಅದರ ಕುರಿತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆದರೆ ಈ ಪೋಸ್ಟ್​ಗೆ ಅನೇಕ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಅನುಶ್ರೀ ಅವರ ಈ ಪೋಸ್ಟ್​ಗೆ ನೆಟ್ಟಿಗರು ಸಿಟ್ಟು (Angry) ಮಾಡಿಕೊಳ್ಳಲು ಕಾರಣ ಏನೆಂದು ಕೇಳುವುದಾದರೆ ಇವರು ಸಂದರ್ಶನ ಮಾಡಿರುವುದು ತಮಿಳಿನ ಪ್ರಸಿದ್ಧ ನಟರೊಬ್ಬರನ್ನು. ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಯಾವ ಮೂವಿ ಎಂದು ಹೇಳಬಲ್ಲಿರಾ?' ಎಂದು ಕ್ಯಾಪ್ಷನ್​ ನೀಡಿರುವ ಅನುಶ್ರೀ ಅವರು, ಒಂದು ಸಂದರ್ಶನದ ವೇಳೆ ಕ್ಲಿಕ್ಕಿಸಿದ ಚಿತ್ರವಿದು ಎಂದು ಹೇಳಿದ್ದಾರೆ. ಅಷ್ಟಕ್ಕೂ ಆ ಚಿತ್ರದಲ್ಲಿ ಇರುವುದು ತಮಿಳಿನ ಖ್ಯಾತ ನಟ ವಿಕ್ರಮ್​.  ಅವರ ಜೊತೆ ನಿಂತು ಫೋಟೋ ಶೇರ್ ಮಾಡಿಕೊಂಡಿರುವ ಅನುಶ್ರೀ, 'ಸಂದರ್ಶನದ ವೇಳೆ ಕ್ಲಿಕ್ಕಿಸಿದ ಚಿತ್ರವಿದು. ನನ್ನ ಸಂದರ್ಶನ ಶೈಲಿ ತುಂಬಾ ಇಷ್ಟ ಪಟ್ಟು ಅವರೇ selfie ಕ್ಲಿಕ್ ಮಾಡಿ ಸರಳತೆ ಮೆರೆದರು. ವೇದಿಕೆಯಲ್ಲಿಯೂ ನನ್ನ ಬಗ್ಗೆ ತುಂಬಾ ಅಭಿಮಾದಿಂದ ಮಾತಾಡಿದ ಅತ್ಯದ್ಭುತ ನಟ and very Humble' ಎಂದು ಬರೆದುಕೊಂಡಿದ್ದಾರೆ.

 

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

ಇದು ಅನುಶ್ರೀ ಅವರ ಇನ್​ಸ್ಟಾಗ್ರಾಮ್​ನ (Instagram) ಹಲವು​ ಫಾಲೋವರ್ಸ್​ ಅಸಮಾಧಾನಕ್ಕೆ ಕಾರಣವಾಗಿದೆ. ಇವರಿಗೆ 20 ಲಕ್ಷ ಮಂದಿ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಇದ್ದಾರೆ. ಅವರ ಪೈಕಿ ಕೆಲವರು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ವಿಕ್ರಮ್​ ಕುರಿತೂ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಅನುಶ್ರೀಯವರ ಆ್ಯಂಕರ್​ ಶೈಲಿಯನ್ನು ಮೆಚ್ಚಿ ಹಲವರು ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ತಮಿಳು ನಟನ ಸಂದರ್ಶನ ಮಾಡಿರುವುದು ಮಾತ್ರ ಯಾಕೋ ಅನೇಕ ನೆಟ್ಟಿಗರಿಗೆ ಬೇಸರ ತಂದಿದೆ. ಇದಕ್ಕೆ ಕಾರಣ, ಅವರೇ ಬರೆದಿರುವಂತೆ ಅನುಶ್ರೀ ಅವರು ಕನ್ನಡ ನಟರನ್ನು ಬಿಟ್ಟು ತಮಿಳು ನಟರಿಗೆ ಪ್ರಾಶಸ್ತ್ರ್ಯ ಕೊಟ್ಟಿರುವುದು. ಹೀಗೆಂದು ಕಮೆಂಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಪ್ರಿನ್ಸ್​ಪಿರೂ ಎಂಬ ಬಳಕೆದಾರ, 'ಇವರೂ ಒಬ್ಬ ಕನ್ನಡಿಗರಾ? ಕನ್ನಡ ನಟರ ಸಂದರ್ಶನ ಮಾಡಲು ಇವರಿಗೆ ಟೈಂ ಇರಲ್ಲ. ಇವರಿಗೆ ಇದರಿಂದಲೇ ಕನ್ನಡದ ಮೇಲೆ ಎಷ್ಟು ಅಭಿಮಾನ ಎನ್ನುವುದು ತಿಳಿಯುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅರ್ಪಿತಾ ಎನ್ನುವವರು, ಇವರನ್ನು ಮೊದಲು ಬ್ಯಾನ್​ ಮಾಡಬೇಕು. ಕನ್ನಡದ ಬಗ್ಗೆ ಸ್ವಲ್ಪವೂ ಅಭಿಮಾನವಿಲ್ಲ. ಒಬ್ಬರಿಗೆ ಒಂಥರ ಇನ್ನೊಬ್ಬರಿಗೆ ಇನ್ನೊಂದು ಥರ ಮಾಡುತ್ತಾರೆ ಎಂದು ಬರೆದಿದ್ದಾರೆ. ಇದು ಯಾವ ಚಿತ್ರ ಎಂದು ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಕಾಲೆಳೆದಿರುವ ಶಾನ್​ಬಾಂಡ್​ ಎನ್ನುವ  ಬಳಕೆದಾರ 'ಗಡ್ಡ ಬೋಳ್ಸೋ ಮಹಾರಾಯ' ಎಂದು ಇರಬಹುದಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ರಾಹುಲ್​ ಬಾಬಾ (Rahul Baba) ಎಂದು ಬರೆದಿದ್ದರೆ, ಮತ್ತೊಬ್ಬರು ನಮ್​ ಬಾಸ್​ ಎಂದು ಬರೆದಿದ್ದಾರೆ. ಕೆಲವರು ಗ್ರೇಟ್​ ಮೋಮೆಂಟ್​ ಎಂದು ಶ್ಲಾಘಿಸಿದ್ದಾರೆ. 

Anchor Anushree: ಬರ್ತ್‌ಡೇಗೂ ಮೊದಲು ಅನುಶ್ರೀಗೆ ಶುಭಾಶಯಗಳ ಮಹಾಪೂರ, ಅಂದಹಾಗೆ ಅನುಶ್ರೀ ವಯಸ್ಸೆಷ್ಟು?

 

Latest Videos
Follow Us:
Download App:
  • android
  • ios