Anchor Anushree: ಬರ್ತ್‌ಡೇಗೂ ಮೊದಲು ಅನುಶ್ರೀಗೆ ಶುಭಾಶಯಗಳ ಮಹಾಪೂರ, ಅಂದಹಾಗೆ ಅನುಶ್ರೀ ವಯಸ್ಸೆಷ್ಟು?
ನಿರೂಪಕಿ, ನಟಿ ಅನುಶ್ರೀ ನಿರೂಪಣೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು. ಈ ಸ್ಟಾರ್ ನಿರೂಪಕಿಯ ವಯಸ್ಸೆಷ್ಟು ಅನ್ನೋದು ಹಲವರ ಕುತೂಹಲ. ಇನ್ನೊಂದೆಡೆ ಅನುಶ್ರೀ ಬರ್ತ್ ಡೇಗೂ ಮೊದಲೇ ಅಭಿನಂದನೆ ಮಹಾಪೂರ ಹರಿದುಬಂದಿದೆ. ಇನ್ನೊಂದೆಡೆ ಅವರ ವಯಸ್ಸೆಷ್ಟು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಿರೂಪಕಿ ಅನುಶ್ರೀ ನಿರೂಪಣೆ ಮಾಡಲು ಶುರು ಮಾಡಿ ಅನೇಕ ವರ್ಷಗಳಾಗಿವೆ. ಮಂಗಳೂರಿನ ಸ್ಥಳೀಯ ಚಾನಲ್ ಒಂದರಿಂದ ಶುರುವಾದ ಅವರ ನಿರೂಪಣೆಯ ಜರ್ನಿ ಈಗ ಬಹಳ ಎತ್ತರಕ್ಕೆ ಬೆಳೆದಿದೆ. ತಂದೆಯಿಲ್ಲದೇ ಗಾಡ್ ಫಾದರ್ ಇಲ್ಲದೇ ತನ್ನ ಪ್ರತಿಭೆ, ಮಾತಿನ ಕೌಶಲ್ಯದಿಂದಲೇ ಮೇಲೆ ಬಂದ ನಟಿ ಇವರು. ಅನೇಕ ರಿಯಾಲಿಟಿ ಶೋಗಳಲ್ಲೂ ಮಿಂಚಿದವರು. ಇವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ದೂರದ ಉತ್ತರ ಕರ್ನಾಟಕದಲ್ಲಂತೂ ಅನುಶ್ರೀ ಅಂದರೆ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ಇವರೂ ತಮ್ಮ ಫ್ಯಾನ್ಸ್‌ಗಳನ್ನು ರಂಜಿಸುತ್ತಲೇ ಇರುತ್ತಾರೆ. ಕಾರ್ಯಕ್ರಮಗಳಲ್ಲಿ ಗದ್ದಲ ಮಾಡಿದರೂ ಜಾಣ್ಮೆಯಿಂದ ತಮ್ಮ ಮಾತಿನ ಬಲದಿಂದಲೇ ನಿಯಂತ್ರಣಕ್ಕೆ ತರುತ್ತಾರೆ. ಈ ಚಟಪಟ ಮಾತಿನ ಮಲ್ಲಿಗೆ ಮದುವೆ ಯಾವಾಗ ಅನ್ನೋದು ಅವರ ಪ್ರತೀ ಬರ್ತ್ ಡೇಯಂದೇ ಕೇಳಿ ಬರ್ತಿರೋ ಮಾತು. ಆದರೆ ಮುಗುಳ್ನಗುವಲ್ಲೇ ಅನುಶ್ರೀ ಈ ಪ್ರಶ್ನೆಯನ್ನೂ ನಿಭಾಯಿಸುತ್ತಾರೆ.
ಅಂದಹಾಗೆ ನಿರೂಪಕಿ ಅನುಶ್ರೀ ಅವರ ಹುಟ್ಟುಹಬ್ಬ ಇದೇ ತಿಂಗಳು ಅಂದರೆ ಜನವರಿ 25ರಂದು ಇದೆ. ಅದಕ್ಕೆ, ಮುಂಚಿತವಾಗಿಯೇ ಜೀ ಕನ್ನಡ ವಾಹಿಯೂ ಅನುಶ್ರೀ ಅವರಿಗೆ ಸರ್ಪ್ರೈಸ್ ನೀಡಿದೆ. ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಕಾರ್ಯಕ್ರಮ ಪ್ರಸಾರವಾಗ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಹಾಡಿ ಹಾಡು ಕಲಿತುಕೊಂಡು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಬಾರಿ ಸಹ ಎಲ್ಲ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ. ಈ ಬಾರಿ ಈ ಕಾರ್ಯಕ್ರಮದ ನಿರೂಪಕಿ ಆಗಿರುವ ಅನುಶ್ರೀ ಅವರ ಹುಟ್ಟುಹಬ್ಬಕ್ಕೆ ವೇದಿಕೆಯಲ್ಲಿ ಸಪ್ರ್ರೈಸ್ ನೀಡಿದ್ದು ವಿಶೇಷವಾಗಿತ್ತು.
ಕಿರುತೆರೆಯ ಸ್ಟಾರ್ ನಟರ ಸುಂದರಿ ಹೆಂಡ್ತೀರು…ಹೀಗಿದ್ದಾರೆ ನೋಡಿ…
ಹಳೇ ಸ್ಪರ್ಧಿಗಳು ಈ ಬಾರಿ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದರು. ಅವರೆಲ್ಲಾ ಅನುಶ್ರೀಗೆ ಹಾಡು ಹೇಳಿ, ಗುಲಾಬಿ ಕೊಟ್ಟು ವಿಶ್ ಮಾಡಿದ್ದಾರೆ. ಈ ಬಾರಿ ಸರಿಗಮಪ ಶೋಗೆ ಸ್ಪರ್ಧಿಯಾಗಿ ದಿಯಾ ಹೆಗಡೆ ಬಂದಿದ್ದಾಳೆ. ಅವಳು ಎಲ್ಲರ ಮೇಲೂ ಕವಿತೆ ಬರೆಯುತ್ತಾಳೆ. ಅದನ್ನು ಅಂದವಾಗಿ ಹಾಡಿ ಮೆಚ್ಚುಗೆ ಪಡೆಯುತ್ತಾಳೆ. ಈ ಹಿಂದೆಯೂ ಅನೇಕ ಬಾರಿ ಹೀಗೆ ಕವಿತೆ ಬರೆದ ಹೇಳಿದ ಈ ಪುಟಾಣಿ ಈ ಬಾರಿ ಅನುಶ್ರೀ ಮೇಲೆ ಕವಿತೆ ಬರೆದಿದ್ದಾಳೆ.
'ಇವರೆಂದ್ರೆ ಅಕ್ಕರೆ, ಇವರು ನಕ್ಕರೆ ಸವಿ ಸಕ್ಕರೆ/ ಮಾತಿನಲ್ಲಿ ಶಕ್ತಿ, ಕನ್ನಡದ ಅಪರೂಪದ ಅಭಿವ್ಯಕ್ತಿ/ ಅನುಶ್ರೀ ಅಕ್ಕ ನೀವು ನಮ್ಮವರು' ಅಂತ ಸಾಗೋ ಕವಿತೆ(Poem)ಯ ಸಾಲಿನಲ್ಲಿ 'ಮಾತಿನಲ್ಲೇ ಮುನ್ನಡೆಸುವಿರಿ ಕರುನಾಡ ತೇರು/ಭಾಷೆಯಲ್ಲಿ ನುಡಿ ಸರಸ್ವತಿ, ನಾರಿ ಶಕ್ತಿಗೆ ನೀವು ಸದಾ ಸ್ಪೂರ್ತಿ/ ದಿಕ್ಕು ದಿಕ್ಕುಗಳಲ್ಲಿ ಧ್ವನಿಸುತ್ತಿದೆ ನಿಮ್ಮ ಕೀರ್ತಿ/ ಸಪ್ತ ಸ್ವರಗಳಿಗೆ ಅನುರಾಗದ ಗೆಳತಿ/ ಅಪ್ಪು ಪರಮಾತ್ಮನಿಗಾಗಿ ಮೀಸಲಿಟ್ಟ ಈ ಜೀವನ/ ಸಂಜೀವನ, ಅದುವೇ ಪಾವನ/ ನೀವು ಕರುನಾಡ ಮನೆ ಮಗಳು, ಜೀ ಕನ್ನಡದ ಹಿರಿ ಮಗಳುಹುಟ್ಟು ಹಬ್ಬದ ಶುಭಾಶಯ, ನಿಮಗೆ ಮೀಸಲು ಈ ಪುಟ್ಟ ಹೃದಯ(Heart)' ಎಂದು ಮುಂದುವರಿಯುತ್ತೆ.
ವೈಂಡ್‌ಅಪ್ ಆಗ್ತಿದೆಯಾ ಜೊತೆ ಜೊತೆಯಲಿ ಸೀರಿಯಲ್?
ಈ ಕವಿತೆ ಕಾರ್ಯಕ್ರಮದಲ್ಲಿ ಎಲ್ಲರ ಮೆಚ್ಚುಗೆ ಪಡೆಯಿತು. ಅನುಶ್ರೀ ಅವರೂ ಖುಷಿಯಿಂದಲೇ ಪುಟಾಣಿ ಹುಡುಗಿಯ ಅಭಿನಂದನೆ(Wishes) ಸ್ವೀಕರಿಸಿದರು. ಅಂದಹಾಗೆ ಅನುಶ್ರೀ ಅವರು ತಮ್ಮ ವಯಸ್ಸನ್ನು(Age) ಮುಚ್ಚಿಟ್ಟಿಲ್ಲ. ಆ ಬಗ್ಗೆ ಹೇಳಲು ತಡಬಡಿಸಿಲ್ಲ. ಅವರ ವಯಸ್ಸು ಈಗ 35 ವರ್ಷ. ಓದುತ್ತಿದ್ದಾಗಲೇ ನಿರೂಪಕಿಯಾಗಿ ಗುರುತಿಸಿಕೊಂಡ ಈಕೆ ಈ ವರ್ಷದ ಬರ್ತ್ ಡೇ ದಿನದಂದಾದರೂ ತಮ್ಮ ಮದುವೆ ಯಾವಾಗ ಅನ್ನೋದನ್ನು ಹೇಳ್ತಾರ ಅನ್ನೋದು ಅಭಿಮಾನಿಗಳ ಪ್ರಶ್ನೆ.