Anushka Shetty social media break : ದಕ್ಷಿಣ ಭಾರತದ ಪ್ರಸಿದ್ಧ ನಟಿ ಅನುಷ್ಕಾ ಶೆಟ್ಟಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾಕ್ಕೆ ಬ್ರೇಕ್‌ ನೀಡಿರುವ ಅವರು, ಶೀಘ್ರವೇ ವಾಪಸ್‌ ಬರ್ತೇನೆ ಎನ್ನುವ ಭರವಸೆ ನೀಡಿದ್ದಾರೆ. 

ಮಹಿಳಾ ಪ್ರಧಾನ ಸಿನಿಮಾ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಅರುಂಧತಿ ಅಲಿಯಾಸ್‌ ಅನುಷ್ಕಾ ಶೆಟ್ಟಿ (Anushka Shetty) ಅಭಿನಯದ ಘಾಟಿ (Ghaati) ಸಿನಿಮಾ ಕೆಲ ದಿನಗಳ ಹಿಂದಷ್ಟೆ ತೆರೆಗೆ ಬಂದಿದೆ. ಅದ್ರೆ ಘಾಟಿ ನಿರೀಕ್ಷೆಯಷ್ಟು ಯಶಸ್ಸು ಕಂಡಿಲ್ಲ. ಘಾಟಿ ಚಿತ್ರ ಬಿಡುಗಡೆಯಾದ ವಾರದ ಮೇಲೆ ಅನುಷ್ಕಾ ಶೆಟ್ಟಿ, ಸೋಶಿಯಲ್‌ ಮೀಡಿಯಾದಲ್ಲಿ ಮಹತ್ವದ ನಿರ್ಧಾರವೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಿಂದ ಸ್ವಲ್ಪ ದಿನ ದೂರ ಇರೋದಾಗಿ ಅನುಷ್ಕಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಿಂದ ಹೊರ ನಡೆದ ಅನುಷ್ಕಾ ಶೆಟ್ಟಿ : ಸಿನಿಮಾ ತೆರೆಗೆ ಬಂದಾಗ, ಸಿನಿಮಾ ಪ್ಲಾಪ್‌ ಆದಾಗ ಇಲ್ಲವೆ ವರ್ಕ್‌ ಔಟ್‌, ಶೂಟಿಂಗ್‌ ಅಂತ ಬೇರೆ ಕೆಲ್ಸದಲ್ಲಿ ಬ್ಯುಸಿಯಾದಾಗ ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾದಿಂದ ದೂರ ಸರೀತಾರೆ. ಸೋಶಿಯಲ್‌ ಮೀಡಿಯಾ, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳ ಮಧ್ಯೆ ದೊಡ್ಡ ಕೊಂಡಿ. ತಮ್ಮ ಸೂಪರ್‌ ಸ್ಟಾರ್ಸ್ ಏನು ಮಾಡ್ತಿದ್ದಾರೆ, ಎಲ್ಲಿದ್ದಾರೆ ಎನ್ನುವ ಅಪ್‌ ಡೇಟ್‌, ಅಭಿಮಾನಿಗಳಿಗೆ ಸೋಶಿಯಲ್‌ ಮೀಡಿಯಾ ಮೂಲಕ ಸಿಗುತ್ತೆ. ಆದ್ರೆ ಅನೇಕ ಬಾರಿ ಅಭಿಮಾನಿಗಳ ಜೊತೆ ಕನೆಕ್ಟ್‌ ಆಗುವ ಭರದಲ್ಲಿ ಸೆಲೆಬ್ರಿಟಿಗಳಿಗೆ ಸಮಯ ಸಿಗೋದಿಲ್ಲ. ಶೂಟಿಂಗ್‌, ವರ್ಕ್‌ ಔಟ್‌ ಸೇರಿದಂತೆ ಇಡೀ ದಿನ ಬ್ಯುಸಿ ಇರುವ ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾದಲ್ಲಿ ಸಮಯ ವ್ಯರ್ಥ ಮಾಡೋಕೆ ಇಷ್ಟಪಡೋದಿಲ್ಲ. ಅಂತ ಸಂದರ್ಭದಲ್ಲಿ ಸ್ವಲ್ಪ ದಿನದ ಮಟ್ಟಿಗೆ ಸೋಶಿಯಲ್‌ ಮೀಡಿಯಾದಿಂದ ಬ್ರೇಕ್‌ ಪಡೆಯುತ್ತಾರೆ. ಈಗ ಅನುಷ್ಕಾ ಶೆಟ್ಟಿ ಈ ಲೀಸ್ಟ್‌ ಗೆ ಸೇರಿದ್ದಾರೆ.

ಅನುಶ್ರೀಗೆ ತವರಿನಲ್ಲಿ ಮಡಿಲು ತುಂಬುವ ಶಾಸ್ತ್ರ, ತಾಳಿ ಹಿಡಿದು ಆಂಕರ್ ಹೇಳಿದ್ದೇನು?

ಅನುಷ್ಕಾ ಶೆಟ್ಟಿ ಪೋಸ್ಟ್‌ ನಲ್ಲಿ ಏನಿದೆ? : ಬ್ಲ್ಯೂ ಲೈಟನ್ನು ಕ್ಯಾಂಡಲ್‌ ಲೈಟ್‌ ಗೆ ಬದಲಿಸುತ್ತಿದ್ದೇನೆ. ಸ್ವಲ್ಪ ದಿನಗಳ ಕಾಲ ಸೋಶಿಯಲ್‌ ಮೀಡಿಯಾದಿಂದ ದೂರವಾಗ್ತಿದ್ದೇನೆ. ಸ್ಕ್ರೋಲಿಂಗ್ಗಿಂತಲೂ ಹೊರಗೆ, ಜಗತ್ತಿನೊಂದಿಗೆ ಮತ್ತೆ ಸಂಪರ್ಕ ಬೆಳೆಸಲು ಈ ನಿರ್ಧಾರ, ಶೀಘ್ರದಲ್ಲೇ ಇನ್ನಷ್ಟು ಕಥೆಗಳೊಂದಿಗೆ ಮತ್ತು ಇನ್ನಷ್ಟು ಪ್ರೀತಿಯೊಂದಿಗೆ ನಿಮ್ಮೆದುರು ಬರ್ತೇನೆ. ಸದಾಕಾಲ, ಯಾವಾಗ್ಲೂ ನಗುತ್ತಿರಿ, ಪ್ರೀತಿಯ ಅನುಷ್ಕಾ ಶೆಟ್ಟಿ ಅಂತ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬಿಡುಗಡೆಗೂ ಮುನ್ನವೇ ಈ ಪರಿ ದಾಖಲೆ ಬರೆದ Kantara-1: ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿ

ಅನುಷ್ಕಾ ಶೆಟ್ಟಿ ಈ ನಿರ್ಧಾರಕ್ಕೆ ಕಾರಣ ಏನು? : ಅನೇಕ ದಿನಗಳ ನಂತ್ರ ಅನುಷ್ಕಾ ಶೆಟ್ಟಿ ಘಾಟಿ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಕ್ರಿಶ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಘಾಟಿ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಮೊದಲ ದಿನದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದ್ರೂ ದಿನ ಕಳೆದಂತೆ ಚಿತ್ರದ ಗಳಿಕೆ ಕಡಿಮೆಯಾಗ್ತಾ ಬಂತು. ಅನುಷ್ಕಾ ಶೆಟ್ಟಿ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌ ಬಿದ್ರೂ ಸಿನಿಮಾ ಓಡಿಲ್ಲ. ಅನುಷ್ಕಾ ತೂಕ ಏರಿಕೆ ಇದಕ್ಕೊಂದು ಕಾರಣ ಇರ್ಬಹುದು ಎನ್ನುವ ಊಹಾಪೋಹ ಇದೆ. ಅನುಷ್ಕಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ತಿಲ್ಲ. ಘಾಟಿ ಸಿನಿಮಾ ಪ್ರಮೋಷನ್‌ ಗೂ ಅವರು ಬಂದಿರಲಿಲ್ಲ. ಹಾಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವು ಅನುಮಾನ ಕೂಡ ಇದೆ. ಕಮೆಂಟ್‌ ಸೆಕ್ಷನ್‌ ನಲ್ಲಿ ಕೂಡ ಅನುಷ್ಕಾ ಶೆಟ್ಟಿ, ಆರೋಗ್ಯವಾಗಿ ಸೋಶಿಯಲ್‌ ಮೀಡಿಯಾಕ್ಕೆ ವಾಪಸ್‌ ಆಗಿ ಎನ್ನುವ ಕಮೆಂಟ್‌ ಕಾಣಸಿಗ್ತಿದೆ. ಅನುಷ್ಕಾ ಈ ಹಿಂದೆ ತಾವು ಸ್ಯೂಡೋಬಲ್ಬಾರ್ ಅಫೆಕ್ಟ್ (ಪಿಬಿಎ) ಯಿಂದ ಬಳಲುತ್ತಿರೋದಾಗಿ ಹೇಳಿದ್ರು. ನಿಯಂತ್ರಿಸಲಾಗದ ನಗು ಅಥವಾ ಅಳು ಇದ್ರಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ರೆ ಈಗ ಏನಾಗಿದೆ ಎನ್ನುವ ಬಗ್ಗೆ ಎಲ್ಲೂ ಸ್ಪಷ್ಟನೆ ಇಲ್ಲ. ನಟಿ ಕೂಡ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ರಿಯಲ್‌ ಜಗತ್ತಿಗೆ ನಾನು ಬರ್ತೇನೆ ಎಂಬುದನ್ನು ಕೇಳಿ ಫ್ಯಾನ್ಸ್‌ ಖುಷಿಯಾಗಿದ್ದಾರೆ. ಅನುಷ್ಕಾರನ್ನು ನೋಡುವ ಕಾತುರ ವ್ಯಕ್ತಪಡಿಸಿದ್ದಾರೆ.

View post on Instagram