ಕಾಂತಾರ ಚಿತ್ರದ ಪ್ರಿಕ್ವೆಲ್ 'ಕಾಂತಾರ: ಅಧ್ಯಾಯ ೧' ಚಿತ್ರದ ಡಿಜಿಟಲ್ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ. ಡಲ್ವುಡ್ ಇತಿಹಾಸದಲ್ಲಿಯೇ ಅಪರೂಪದ ದಾಖಲೆಯನ್ನು ಬರೆದಿದೆ. ಏನೆಲ್ಲಾ ದಾಖಲೆ ನೋಡಿ…
ಚಿಕ್ಕ ಬಜೆಟ್ನಲ್ಲಿಯೇ ಒಂದೊಳ್ಳೆ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳಗಿಸಬಹುದು ಎನ್ನುವುದಕ್ಕೆ ಸಾಕ್ಷಿಯಾದದ್ದು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ, 2022ರಲ್ಲಿ ರಿಲೀಸ್ ಆಗಿದ್ದ ಕಾಂತಾರಾ (Kantara) ಚಿತ್ರ. ಇದೀಗ 'ಕಾಂತಾರಾ ಅಧ್ಯಾಯ 1'ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ 'ಕಾಂತಾರ' ಪ್ರಿಕ್ವೆಲ್ ಆಗಿದೆ. 2025 ಅಕ್ಟೋಬರ್ 2ಕ್ಕೆ 'ಕಾಂತಾರ: ಅಧ್ಯಾಯ 1' ಬಿಡುಗಡೆಯಾಗಲಿದೆ ಎಂದು ಇದಾಗಲೇ ತಿಳಿದುಬಂದಿದೆ. ಥಿಯೇಟ್ರಿಕಲ್ ಟ್ರೇಲರ್ ಸೆಪ್ಟೆಂಬರ್ 20 ರ ಆಸುಪಾಸಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉತ್ತರ ಭಾರತದ ಭಾಗಗಳಲ್ಲಿ ಅನಿಲ್ ಥಡಾನಿ ತಮ್ಮ AA ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಥಿಯೇಟರ್‌ಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದ ಸಿನಿಮಾದ ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಅಪ್ಡೇಟ್ ಸಿಕ್ಕಿದೆ.
ದಾಖಲೆ ಮೊತ್ತಕ್ಕೆ ಖರೀದಿ
ಇದರ ನಡುವೆಯೇ ಇದೀಗ ಬಿಗ್ ಅಪ್ಡೇಟ್ ಒಂದು ಹೊರಬಂದಿದೆ. ಅದೇನೆಂದರೆ, ಕಾಂತಾರಾ ಚಾಪ್ಟರ್-1 (Kantara Chapter-01) ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ಸಿನಿಮಾದ OTT ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ದಾಖಲೆ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಸದ್ಯಕ್ಕೆ ಸಿಕ್ಕಿರುವ ಮೂಲಗಳ ಪ್ರಕಾರ, ಸುಮಾರು 125 ಕೋಟಿ ರೂ. ಹಣವನ್ನು ನೀಡಿ ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು 'ಕಾಂತಾರ: ಚಾಪ್ಟರ್ 1' ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಭಕ್ತಿಪೂರ್ವ ಮಹಾಕಾವ್ಯ ಹಾಗೂ ಆಕ್ಷನ್ ಸಿನಿಮಾ ಇದಾಗಿದ್ದು, ಕಾಂತಾರ ಹಿಟ್ ಆಗಿದ್ದರಿಂದಲೇ ಅದರ ಪ್ರಿಕ್ವೆಲ್‌ಗೆ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಅಷ್ಟಕ್ಕೂ ಕನ್ನಡದ ಯಾವ ಸಿನಿಮಾದ ಡಿಜಿಟಲ್ ಹಕ್ಕುಗಳು ಇಷ್ಟೊಂದು ದೊಡ್ಡಮೊತ್ತಕ್ಕೆ ಸೇಲ್ ಆಗಿಲ್ಲ ಎನ್ನಲಾಗುತ್ತಿದ್ದು, ಇದೀಗ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಾಂತಾರಾ ಚಾಪ್ಟರ್ 1' ಸಿನಿಮಾ ಬ್ರೇಕ್ ಮಾಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ನಟಿ ಶ್ರುತಿ ಪುತ್ರಿ ಎಂಟ್ರಿ? ವಿಡಿಯೋಶೂಟ್ ಮೂಲಕ ಗಮನ ಸೆಳೆದ ಶ್ರುತಿ
ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಗಳಿಗೆ ಡಬ್
ಇಂಗ್ಲೀಷ್ ಹಾಗೂ ತುಳು ಭಾಷೆಗೂ ಕೂಡ 'ಕಾಂತಾರ' ಸಿನಿಮಾ ಡಬ್ ಆಗಿತ್ತು. ಇಂಗ್ಲೀಷನಲ್ಲಿಯೂ ಇದು OTTಯಲ್ಲಿ ರಿಲೀಸ್ ಆಗಿತ್ತು. ಈ ಬಾರಿ ಈ ಸಿನಿಮಾವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಿ ಯೂರೋಪ್ ದೇಶಗಳಲ್ಲಿ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆದ್ರೆ ಸದ್ಯ ಅದರ ಮಾಹಿತಿ ಇಲ್ಲ. ಆದರೆ ಇದೀಗ ಚಾಪ್ಟರ್-1 ಅನ್ನು ಏಕಕಾಲಕ್ಕೆ ಸ್ಪ್ಯಾನಿಶ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಓವರ್‌ಸೀಸ್‌ನಲ್ಲಿ Phars Film Co LLC ಸಂಸ್ಥೆ 'ಕಾಂತಾರ-1' ಸಿನಿಮಾ ವಿತರಣೆ ಮಾಡಲಿದೆ ಎಂದೂ ತಿಳಿದುಬಂದಿದೆ.
30 ದೇಶಗಳಲ್ಲಿ ಏಳು ಭಾಷೆಯಲ್ಲಿ
ಕಾಂತಾರಾ ಪ್ರೀಕ್ವಲ್ (Kantara prequel) ಅನ್ನು 30 ದೇಶಗಳಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬೆಂಗಾಲಿ ಜೊತೆಗೆ ಇಂಗ್ಲೀಷ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ ಏಕಕಾಲಕ್ಕೆ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಜೊತೆಗೆ, ಉತ್ತರ ಅಮೆರಿಕಾ, ಮಧ್ಯಪ್ರಾಚ್ಯ, ಯೂರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಏಕಕಾಲಕ್ಕೆ 'ಕಾಂತಾರ-1' ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಚೀನಾ ಹಾಗೂ ಜಪಾನ್ ದೇಶಗಳಲ್ಲಿ ದಕ್ಷಿಣ ಭಾರತ ಸಿನಿಮಾಗಳು ಬಿಡುಗಡೆ ಆಗಿ ಸದ್ದು ಮಾಡ್ತಿವೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಬಿಗ್ಬಾಸ್ ಗೌತಮಿ ಜಾದವ್: ಸತ್ಯ ಸೀರಿಯಲ್ ನಟಿಯ ಖುಷಿಯ ಗುಟ್ಟು ಇಲ್ಲಿದೆ...
