ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು?
ಮೂರು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ನಟಿ ಅನುಷ್ಕಾ ಶೆಟ್ಟಿ ಅವರು ಮದುವೆಯ ಬಗ್ಗೆ ಕೇಳಿರೋ ಪ್ರಶ್ನೆಗೆ ಹೇಳಿದ್ದೇನು?
ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲಿಯೂ ಮಾಡುವೆ ಎಂದಿದ್ದರೂ ಇದುವರೆಗೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ತೆಲುಗು ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' (Mrs Shetty Mrs Poli Shetty) ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಮೂರು ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಆಗಮಿಸುತ್ತಿರೋ ಅನುಷ್ಕಾ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಚಿತ್ರ ಇಂದು (ಸೆ. 7) ಬಿಡುಗಡೆ ಆಗಿದೆ. ಮಹೇಶ್ ಬಾಬು ಪಿಚಿಗೊಲ್ಲ ನಿರ್ದೇಶನದಲ್ಲಿ ಮೂಡಿಬಂದಿದೆ ಈ ಚಿತ್ರ. ಈ ಸಿನಿಮಾದಲ್ಲಿ ಶೆಫ್ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇದೀಗ ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಷಯ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ, ಅನುಷ್ಕಾ ಸಿನಿ ಕೆರಿಯರ್ನಲ್ಲಿ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರು. ಸ್ಟಾರ್ ಸ್ಟೇಟಸ್ ಇದ್ದರೂ ಸಿನಿಮಾ ರಂಗದಲ್ಲಿ ತುಸು ಅಂತರ ಕಾಯ್ದುಕೊಂಡಿದ್ದರು. ಇದೇ ಕಾರಣ ಹೆಚ್ಚಿನ ಅನುಮಾನಗಳು ಹುಟ್ಟಿಕೊಂಡಿತ್ತು. ಆಕೆಯ ಮದುವೆಯ ವಿಚಾರದಲ್ಲಿ ಹಲವು ಚರ್ಚೆಗಳು ನಡೆದಿದ್ದವು. ಇದರ ವೈರುಧ್ಯ ಎಂಬಂತೆ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಚಿತ್ರದಲ್ಲಿ ಅನುಷ್ಕಾ ಪ್ರೀತಿ ಮತ್ತು ಸಂಬಂಧದ ಮೇಲೆ ನಂಬಿಕೆ ಇರದ ಯುವತಿಯಾಗಿ ನಟಿಸಿದ್ದಾರೆ.
Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?
ಈ ಸಿನಿಮಾದ ಬಿಡುಗಡೆ ಹಿನ್ನೆಲೆಯಲ್ಲಿ ಕೆಲವೊಂದು ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ. ಮದುವೆಯ ಕುರಿತು ಅವರಿಗೆ ಪ್ರಶ್ನೆ ಕೇಳಲಾಯಿತು. ನಟ ಪ್ರಭಾಸ್ (Prabhas) ಜತೆ ನಿಮ್ಮ ಮದುವೆ ಯಾವಾಗ ಎಂಬಿತ್ಯಾದಿ ಮಾತುಗಳು ಸದಾ ಇವರಿಗೆ ಕೇಳುತ್ತಲೇ ಇರಲಾಗುತ್ತದೆ. ಲೇಡಿ ಓರಿಯೆಂಟೆಡ್ ಚಿತ್ರಗಳಿಗೆ ಕೇರಾಫ್ ಅಡ್ರೆಸ್ ಆಗಿರುವ ಅನುಷ್ಕಾ, ಟಾಲಿವುಡ್ ಸ್ಟಾರ್ ಹೀರೋ ಪ್ರಭಾಸ್ ಗೆ ಒಳ್ಳೆಯ ಜೋಡಿ ಅಂತ ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ತೆರೆಕಂಡ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಒಂದು ರೀತಿಯ ಕ್ರೇಜ್ ಹುಟ್ಟಿಕೊಂಡಿದೆ. ಬಾಹುಬಲಿ ಸಿನಿಮಾದ ನಂತರ ಅವರಿಬ್ಬರ ನಡುವಿನ ಸ್ನೇಹ ಹೆಚ್ಚಾಗಿದ್ದು, ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಪ್ರಭಾಸ್ ಮಾತ್ರ, ಅನುಷ್ಕಾ ನಾನು ಗುಡ್ ಫ್ರೆಂಡ್ಸ್ ಎಂದಿದ್ದರು.
ಇದೀಗ ಮದುವೆಯ ಕುರಿತು ಮಾತನಾಡಿರುವ ನಟಿ, 'ನಿಜ ಹೇಳಬೇಕೆಂದರೆ, ಈ ಪ್ರಶ್ನೆಗೆ ನನ್ನ ಬಳಿ ನಿಖರ ಉತ್ತರವಿಲ್ಲ. ಸಮಯ ಕೂಡಿಬಂದಾಗ ಮದುವೆ ಆಗಲಿದೆ. ಮದುವೆ ಎಂಬುದು ನನ್ನ ಪಾಲಿಗೆ ಅದಾಗಿಯೇ ಘಟಿಸಬೇಕು. ಅದಕ್ಕೆ ಅದರದೇ ಆದ ಸಮಯ ಬೇಕು ಎಂದು ನಾನು ನಂಬುತ್ತೇನೆ. ಹಾಗಾಗಿ ಸದ್ಯಕ್ಕೆ ಆ ಬಗ್ಗೆ ನನ್ನ ಬಳಿ ಉತ್ತರವಿಲ್ಲ' ಎಂದಿದ್ದಾರೆ. ಮದುವೆ, ಮಕ್ಕಳು, ಕೌಟುಂಬಿಕ ಸಂಬಂಧ, ಇವೆಲ್ಲವೂ ತುಂಬಾ ಸುಂದರವಾಗಿರುತ್ತದೆ. ಹಿರಿಯರು ನಿಶ್ಚಯಿಸಿದ ಮದುವೆಯಾಗಲಿ, ಲವ್ ಮ್ಯಾರೇಜ್ (Love marriage) ಆಗಲಿ ಅದರಲ್ಲಿ ಭಾವುಕತೆ ಇರಬೇಕು ಎಂದಿದ್ದಾರೆ. ಈ ಷರತ್ತು ಮದುವೆಯ ಕುರಿತು ನನಗೆ ಇದೆ ಎಂದು ನಟಿ ಹೇಳಿದ್ದಾರೆ. ಪ್ರೀತಿ ಮತ್ತು ಭಾವನೆಗಳಿಲ್ಲದೆ ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ. ತಡವಾದರೂ ಪರವಾಗಿಲ್ಲ, ಅನುಷ್ಕಾ ತನ್ನ ಮದುವೆ ಭಾವನಾತ್ಮಕ ಬೇಸುಗೆ ಆಗಬೇಕು ಎಂದು ಬಯಸುತ್ತಿದ್ದಾರೆ. ಎಲ್ಲಿಗೆ ಹೋದರೂ ಮದುವೆಯ ಬಗ್ಗೆಯೇ ಮಾತು, ಮದುವೆ ಆದಾಗ ಖಂಡಿತಾ ಎಲ್ಲರಿಗೂ ಹೇಳುತ್ತೇನೆ ಎಂದಿದ್ದಾರೆ. ಅಂದಹಾಗೆ ನಟಿ ಅನುಷ್ಕಾ ಶೆಟ್ಟಿಗೆ (Anushka Shetty) ಈಗ 41 ವರ್ಷ ವಯಸ್ಸು.
15- 20 ನಿಮಿಷ ಆದ್ರೂ ಕಂಟ್ರೋಲ್ ಸಿಗುವುದಿಲ್ಲ; ವಿಚಿತ್ರ ಕಾಯಿಲೆ ಬಗ್ಗೆ ಮೌನ ಮುರಿದ ಅನುಷ್ಕಾ ಶೆಟ್ಟಿ