15- 20 ನಿಮಿಷ ಆದ್ರೂ ಕಂಟ್ರೋಲ್ ಸಿಗುವುದಿಲ್ಲ; ವಿಚಿತ್ರ ಕಾಯಿಲೆ ಬಗ್ಗೆ ಮೌನ ಮುರಿದ ಅನುಷ್ಕಾ ಶೆಟ್ಟಿ
ಸಮಂತಾ ಬಳಿಕ ಅನಾರೋಗ್ಯದ ಸಮಸ್ಯೆ ಬಗ್ಗೆ ಬಹಿರಂಗ ಪಡಿಸಿದ ಸ್ವೀಟಿ ಅನುಷ್ಕಾ ಶೆಟ್ಟಿ. ಈ ರೀತಿನೂ ಕಾಯಿಲೆ ಇರುತ್ತದೆ ಎಂದು ತಿಳಿದು ಅಭಿಮಾನಿಗಳು ಶಾಕ್...
ದಕ್ಷಿಣ ಭಾರತ ಚಿತ್ರರಂಗದ ಸ್ವೀಟಿ ಕ್ಯೂಟಿ ಆಂಡ್ ನಮ್ಮ ಬ್ಯೂಟಿ ಅನುಷ್ಕಾ ಶೆಟ್ಟಿಗಿರುವ ಹೊಸ ಕಾಯಿಲೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಇತ್ತೀಚಿಗೆ ನಡೆದ ಖಾಸಗಿ ಸಂದರ್ಶನದಲ್ಲಿ ಸ್ವೀಟಿ ನರಳುತ್ತಿರುವ 'ಲಾಫ್ಟರ್' ಕಾಯಿಲೆ ಬಗ್ಗೆ ಹಂಚಿಕೊಂಡಿದ್ದಾರೆ.
ಈ ಕಾಯಿಲೆಗೆ ಏನೆಂದು ಕರೆಯುತ್ತಾರೆ ಗೊತ್ತಿಲ್ಲ ಆದರೆ ಇದರಿಂದ 15 ರಿಂದ 20 ನಿಮಿಷಗಳ ಕಾಲ ಕಂಟ್ರೋಲ್ ಮಾಡಲಾಗದೆ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಿತ್ತಂತೆ. ಹೀಗಾಗಿ ಅನುಷ್ಕಾ ಶೆಟ್ಟಿ ಹೊಸ ಕಾಯಿಲೆ ಹೆಡ್‌ಲೈನ್ಸ್ ಕ್ರಿಯೇಟ್ ಮಾಡುತ್ತಿದೆ.
'ನನಗೆ ಲಾಫಿಂಗ್ ಕಾಯಿಲೆ ಇದೆ. ತುಂಬಾ ನಗುವುದು ಸಮಸ್ಯೆನಾ ಎಂದು ನೀವು ಪ್ರಶ್ನೆ ಮಾಡಬಹುದು. ಕೆಲವರಿಗೆ ಸಮಸ್ಯೆ ಅಲ್ಲ ಆದರೆ ನನಗೆ ದೊಡ್ಡ ಸಮಸ್ಯೆ ಆಗಿದೆ' ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.
'ಒಮ್ಮೆ ನಗುವುದಕ್ಕೆ ಶುರು ಮಾಡಿದರೆ ಸುಮಾರು 20 ನಿಮಿಷಗಳ ಕಾಲ ನಗುತ್ತಲೇ ಇರುವೆ. ಸಿನಿಮಾ ನೋಡುವಾಗ ಅಥವಾ ಕಾಮಿಡಿ ಸೀನ್ ಚಿತ್ರೀಕರಣ ಮಾಡುವಾಗ ಸಮಸ್ಯೆ ಆಗುತ್ತದೆ'
'ಕಾಮಿಡಿ ಸೀನ್ ಶೂಟ್ ಮಾಡುವಾಗ ನೆಲದ ಮೇಲೆ ಉರಳಾಡಿಕೊಂಡು ನಗುವುದು ಇದರಿಂದ ಸುಮಾರು ಸಲ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಇದೇ ನನಗಿರುವ ದೊಡ್ಡ ಆರೋಗ್ಯ ಸಮಸ್ಯೆ' ಎಂದಿದ್ದಾರೆ ಅನುಷ್ಕಾ.
ಯೋಗ ಟೀಚರ್ ಆಗಿದ್ದ ಅನುಷ್ಕಾ ಶೆಟ್ಟಿಗೆ ನಟನೆ ಪರಿಚಯ ಮಾಡಿಕೊಟ್ಟಿದ್ದು ನಟ ನಾಗಾರ್ಜುನ. ಸೂಪರ್ ಸಿನಿಮಾ ನಂತರ ವಿಕ್ರಮಾರ್ಕು, ಚಿಂತಕಾಯಲ ರವಿ ಮತ್ತುಅರುಂಧತಿ ಹಿಟ್ ತಂದುಕೊಟ್ಟಿತ್ತು.
ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿರುವ ಬಾಹುಬಲಿ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದರು. ಆನಂತರ ಪ್ರಭಾಸ್ ಜೊತೆ ಅತಿ ಹೆಚ್ಚಾಗಿ ಹೆಸರು ಕೇಳಿ ಬಂದಿತ್ತು.