ಬೆಂಗಳೂರು (ಮಾ. 13): ವಿರಾಟ್ ಕೊಹ್ಲಿ- ಅನುಷ್ಕ ಶರ್ಮಾ ಮದುವೆ ವಿಚಾರವನ್ನು ಕೊನೆ ಘಳಿಗೆವರೆಗೂ ಬಹಳ ಗೌಪ್ಯವಾಗಿಟ್ಟಿದ್ದರು. ಸೆಲಬ್ರಿಟಿಗಳಿಗೆ ಖಾಸಗಿತನ ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಹೋದಲ್ಲಿ ಬಂದಲ್ಲಿ ಜನ , ಮಾಧ್ಯಮದವರು ಮುತ್ತುತ್ತಲೇ ಇರುತ್ತಾರೆ. ಸುದ್ದಿಯಾಗಿ ಬಿಡುತ್ತದೆ.

ಮಹೇಶ್ ಬಾಬು ಸಿನಿಮಾ ಆಫರ್‌ಗೆ ’ನೋ’ಎಂದ ಉಪೇಂದ್ರ! 

2017 ರಲ್ಲಿ ಅನುಷ್ಕಾ- ವಿರಾಟ್ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಖಾಸಗಿತನ ಕಾಪಾಡಿಕೊಳ್ಳಲು ವಿರಾಟ್- ಅನುಷ್ಕಾ ಹೆಸರು ಬದಲಾಯಿಸಿಕೊಂಡಿದ್ದರು ಎಂದು ತಡವಾಗಿ ತಿಳಿದು ಬಂದಿದೆ. ಮದುವೆಗೆ ಕ್ಯಾಟರಿಂಗ್ ಮಾಡುವಾಗ, ಡೆಕೋರೇಶನ್ ಮಾಡುವಾಗ ವಿರಾಟ್ ಹೆಸರು ರಾಹುಲ್ ಎಂದು ಬದಲಾಯಿಸಿಕೊಂಡಿದ್ದೆವು. ನನ್ನ ಹೆಸರು ಕೂಡಾ ಬದಲಾಯಿಸಿದ್ದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. 

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಶುರುವಾಗುತ್ತಿದೆ ಕೆಜಿಎಫ್-2 ಶೂಟಿಂಗ್

‘ನಮಗೆ ನಮ್ಮ ಸ್ಟೈಲಲ್ಲಿ ಮದುವೆಯಾಗಬೇಕು ಎಂದಿತ್ತು. ಸೆಲಬ್ರಿಟಿಗಳ ರೀತಿ ಮದುವೆಯಾಗುವುದು ನಮಗೆ ಇಷ್ಟವಿರಲಿಲ್ಲ. ನಮ್ಮ ಮದುವೆಯಲ್ಲಿ ಕುಟುಂಬದವರು, ಸ್ನೇಹಿತರು, ಆತ್ಮೀಯರು ಸೇರಿದಂತೆ 42 ಮಂದಿ ಮಾತ್ರ ಇದ್ದರು‘ ಎಂದು ಅನುಷ್ಕಾ ಹೇಳಿದ್ದಾರೆ.