ಕನ್ನಡದಲ್ಲೇ ಹಾಡು ಹೇಳಿ ಕನ್ನಡಿಗರ ಮನಗೆದ್ದ ಮಾರ್ಟಿನ್​ ಸಿನಿಮಾ ನಟಿ ವೈಭವಿ ಶಾಂಡಿಲ್

ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ಮಾತನಾಡಲು ಬಾರದವರ ನಡುವೆ, ಮರಾಠಿ ನಟಿ ವೈಭವಿ ಶಾಂಡಿಲ್​ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
 

Martin Film Marathi actress Vaibhavi Shandil has won Kannadiga's heart by singing Kannada song suc

ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಹಿಂಜರಿಯುವವರು ಎಷ್ಟೋ ಮಂದಿ ಇದ್ದಾರೆ. ಅದರಲ್ಲಿಯೂ ಇಂದಿನ ಕೆಲವು ಯುವತಿಯರಿಗೆ ಕನ್ನಡ್​ ಗೊತ್ತಿಲ್​ ಅನ್ನೋದು ಬಿಟ್ಟರೆ ಬೇರೆ ಏನೂ ಬರುವಂತೆ ಕಾಣುವುದಿಲ್ಲ. ಇಂಗ್ಲೆಂಡ್​ನಲ್ಲಿಯೇ ಹುಟ್ಟಿ ಬೆಳೆದವರ ರೀತಿ ಆಡುವವರಿಗೇನೂ ಕೊರತೆ ಇಲ್ಲ. ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುವುದೇ ಕನ್ನಡ ನಾಡಿನಲ್ಲಿ ಹೆಮ್ಮೆಯ ಸಂಕೇತ ಎಂದುಕೊಳ್ಳುವವರು ಅದೆಷ್ಟು ಮಂದಿ ಇಲ್ಲ! ಇದರ ನಡುವೆಯೇ ಕೆಲವರು ಬೇರೆ ನೆಲದಿಂದ ಬಂದಿದ್ದರೂ ಕರ್ನಾಟಕ ಮತ್ತು ಕನ್ನಡದ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುವವರು ಇದ್ದಾರೆ.ಕೆಲವೇ ಕೆಲವು ನಟಿಯರು ಕನ್ನಡದಲ್ಲಿ ನಟಿಸಿ, ಕನ್ನಡವನ್ನು ತಕ್ಕಮಟ್ಟಿಗೆ ಕಲಿತಿದ್ದಾರೆ. ಇದಾಗಲೇ ಮಳೆಯ ಹುಡುಗಿ ಪೂಜಾ ಬಗ್ಗೆ ಕನ್ನಡಿಗರು ಹೆಮ್ಮೆ ಪಟ್ಟುಕೊಳ್ಳುವುದು ಇದೆ. ಇದೀಗ ಗಾಳಿಪಟ-2 ನಟಿಯ ಸರದಿ

ಹೌದು. ಈಕೆಯೇ ವೈಭವಿ ಶಾಂಡಿಲ್. ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ಮಾಡಿರುವ ವೈಭವಿ, 'ರಾಜ್ ವಿಷ್ಣು' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು. ನಂತರ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ-2' ಸಿನಿಮಾದಲ್ಲಿ ನಟಿಸಿದರು. ಮೊನ್ನೆಯಷ್ಟೇ ಬಿಡುಗಡೆಗೊಂಡಿರುವ ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಮಾರ್ಟಿನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹುಟ್ಟಿ ಬೆಳೆದದ್ದು ಮುಂಬೈ, ಮನೆಯ ಮಾತು ಕನ್ನಡ ಆದರೂ ವೈಭವಿ ಅವರು ಕನ್ನಡದಲ್ಲಿ ಮಾತನಾಡಿದ್ದು ಮಾತ್ರವಲ್ಲದೇ ಕನ್ನಡದ ಹಾಡೊಂದನ್ನು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.  ಆ್ಯಕ್ಷನ್ ‍ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಮಾರ್ಟಿನ್ ಚಿತ್ರ ಮೊನ್ನೆ ಅಂದರೆ ಅಕ್ಟೋಬರ್ 11ರಂದು ಬಿಡುಗಡೆಯಾಗಿ ಚೆನ್ನಾಗಿ ಕಲೆಕ್ಷನ್​ ಮಾಡುತ್ತಿದೆ.

ಕಾವೇರಿ ನದಿಯಲ್ಲಿ ಕಿಚ್ಚ ಸುದೀಪ್​ ತಾಯಿ ಅಸ್ಥಿ ವಿಸರ್ಜನೆ: ಭಾವುಕನಾದ ನಟ- ವಿಡಿಯೋ ವೈರಲ್​

ಈ ಹೊತ್ತಿನಲ್ಲಿ  ವೈಭವಿ ಅವರು ಕರ್ನಾಟಕದ ಬಗ್ಗೆ ಒಳ್ಳೆಯ ಮಾತನಾಡಿದ್ದೂ ಅಲ್ಲದೇ ಕನ್ನಡದಲ್ಲಿಯೇ ಹಾಡು ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ.  ರಕ್ಷಿತ್‌ ಶೆಟ್ಟಿ, ರಿಷಭ್ ಶೆಟ್ಟಿ ಇಷ್ಟ ಎಂದಿರುವ ವೈಭವಿ, ಕರ್ನಾಟಕ ನನ್ನ ಮನೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ನಾನು ಇದಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೀಗ ಮಾರ್ಟಿನ್​ನಂಥ  ಸಂಪೂರ್ಣ ಆ್ಯಕ್ಷನ್ ಸಿನಿಮಾ ಜೊತೆಗೆ  ಲವ್‌ಸ್ಟೋರಿಯೂ ಇರೋ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ನಟಿ.

ಮಾರ್ಟಿನ್​ ಚಿತ್ರದಲ್ಲಿ  ನನ್ನ ಹೆಸರು ಪ್ರೀತಿ. ಇಡೀ ಸಿನಿಮಾದಲ್ಲಿ ಪ್ರೀತಿಯ ಪಾತ್ರ ಖಂಡಿತ ಇಲ್ಲ, ಆದರೂ ಈ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾದಲ್ಲಿ ನನ್ನ ಪಾತ್ರ ಚಿಕ್ಕದಾದರೂ ಇಂತಹ ಬಿಗ್‌ ಬಜೆಟ್ ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ಖಂಡಿತ ಖುಷಿ ಇದೆ ಎಂದು ಚಿಕ್ಕ ಪಾತ್ರವಾದರೂ ಮಾರ್ಟಿನ್‌ನಲ್ಲಿ ನಟಿಸಿರುವುದೇ ಖುಷಿ ಎಂದಿರುವ ನಟಿ ಕನ್ನಡದಲ್ಲಿ ಹಾಡು ಹೇಳುವ ಮೂಲಕ ಈಗ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.  

ಬೆಂಗಳೂರಿನಲ್ಲಿ ಮಧ್ಯರಾತ್ರಿ ಬೈಕ್​ ಹಿಂಬದಿ 'ಭೂತ'ದ ಸವಾರಿ: ವಿಡಿಯೋದಲ್ಲಿರೋ ಕಾಲಿನ ಮೇಲೆ ಎಲ್ಲರ ಕಣ್ಣು!

Latest Videos
Follow Us:
Download App:
  • android
  • ios