Asianet Suvarna News Asianet Suvarna News

ಕನ್ನಡದ ನಟ ಅಚ್ಯುತ್‌ ಕುಮಾರ್‌ರನ್ನು ಹಾಡಿ ಹೊಗಳಿದ ಲೇಡಿ ಸೂಪರ್‌ಸ್ಟಾರ್

ನಟಿ ನಯನತಾರಾ ಅನ್ನಪೂರ್ಣಿ ಸಿನಿಮಾದಲ್ಲಿ ತನ್ನ ತಂದೆಯ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅಚ್ಯುತ್‌ ಕುಮಾರ್ ಅವರನ್ನು ಹಾಡಿ ಹೊಗಳಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Annapurni Movie promotion Lady Superstar Nayantara praised Kannada actor Achyut Kumar akb
Author
First Published Jan 9, 2024, 1:15 PM IST

ನಟಿ ನಯನತಾರಾ ಲೇಡಿ ಸೂಪರ್ ಸ್ಟಾರ್ ಅಂತಾನೇ ಫೇಮಸ್, ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದ ನಂತರ ಈಗ ಈ ನಟಿ ಅನ್ನಪೂರ್ಣಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಚೆನ್ನಾಗಿದೆ ನಯನಾತಾರ ಅಭಿನಯವಂತೂ ಸೂಪರ್ರೋ ಸೂಪರ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆ ಜೊತೆಗೆ ಸಿನಿಮಾದ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ ಕೇಳಿ ಬಂದಿರುವುದು ಗೊತ್ತೆ. ಇದಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾ ಸೇರಿದಂತೆ ಚಿತ್ರದ ವಿರುದ್ಧವೂ ದೂರು ದಾಖಲಾಗಿದೆ. ಈ ಮಧ್ಯೆ ಈ ನಟಿ ನಯನತಾರಾ ಈ ಸಿನಿಮಾದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅಚ್ಯುತ್‌ ಕುಮಾರ್ ಅವರನ್ನು ಹಾಡಿ ಹೊಗಳಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ತುಮಕೂರು ಮೂಲ ಕನ್ನಡ ನಟ ಅಚ್ಯುತ್ ಕುಮಾರ್ ಅವರು ಕಾಂತಾರ ಸಿನಿಮಾದಲ್ಲಿ ಊರಿನ ದೊಡ್ಡಮನೆಯ ಯಜಮಾನನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಲ್ಲದೇ ಕಾಂತಾರ ಸಿನಿಮಾದಂತೆ ತಾವು ಕೂಡ ದೇಶಾದ್ಯಂತ ಫೇಮಸ್ ಆಗಿದ್ದರು. ಇದರ ಜೊತೆ  ಕೆಜಿಎಫ್ ಸಿನಿಮಾದಲ್ಲೂ ವಿಲನ್ ರೋಲ್ ಮಾಡಿದ ಅವರು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ., ಅದೇ ರೀತಿ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾದಲ್ಲೂ ರಂಗರಾಜನ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ ಅಚ್ಯುತ್ ಕುಮಾರ್. ಇದು ನಯನತಾರಾ ಅವರ ತಂದೆಯ ಪಾತ್ರ. ಇವರ ನಡವಳಿಕೆ ಹಾಗೂ ನಟನೆಯ ಬಗ್ಗೆ ಈಗ ನಯನತಾರಾ ಸಿನಿಮಾದ ಪ್ರಮೋಷನ್ ವೇಳೆ ಮಾತನಾಡಿದ್ದು, ಆ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ.

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು

ವೀಡಿಯೋ ನೋಡಿದ ಅಚ್ಯುತ್ ಕುಮಾರ್ ಅಭಿಮಾನಿಗಳು ಅವರು ನಮ್ಮವರು ಅವರು ನಮ್ಮವರು ಎನ್ನುತ್ತಿದ್ದಾರೆ. ಇದರ ಜೊತೆಗೆ ಕೆಲವರು ಅವರು ನಮ್ಮ ಮಲೆಯಾಳಿ ಎಂದು ಹೇಳಿದ್ದು, ಇದರಿಂದ ಕನ್ನಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಾರ್ ಆರಂಭಿಸಿದ್ದಾರೆ.  ಹಾಗಿದ್ರೆ ನಯನತಾರಾ ನಟನ ಬಗ್ಗೆ ಏನ್ ಹೇಳಿದ್ದಾರೆ ಈ ವೀಡಿಯೋ ನೋಡಿ. 

 
 
 
 
 
 
 
 
 
 
 
 
 
 
 

A post shared by VSV Cinemas (@vsvcinemas)

 

ಅಚ್ಯುತ್ ಕುಮಾರ್ ಒಬ್ಬರು ಅಸಾಧಾರಣ ನಟ, ಅವರೊಬ್ಬರು ತಮಿಳು ನಟರಲ್ಲ, ಅವರಿಗೆ ತಮಿಳು ಬರುವುದಿಲ್ಲ, ಭಾಷೆಯೂ ಅಷ್ಟಾಗಿ ಗೊತ್ತಿಲ್ಲ, ಆದರೆ ಅವರು ನಟನೆ ಮಾಡುವ ರೀತಿ, ಅವರು ಒಂದೊಂದು  ಪದಗಳನ್ನು ಡೈಲಾಗ್‌ಗಳನ್ನು ಹೇಳುವ ರೀತಿ ಅದೊಂದು ಅದ್ಭುತ. ಅದು ಎಷ್ಟು ಚೆನ್ನಾಗಿತ್ತು ಎಂದರೆ ನನಗೆ ನನ್ನ ಮುಂದೆ ತಂದೆಯೇ ನಿಂತು ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಅವರ ಜೊತೆ ಇರುವ ಪ್ರತಿ ಸೀನ್‌ಗಳಲ್ಲೂ ನನಗೆ ಅದೇ ಭಾವ ಮೂಡುತ್ತಿತ್ತು. ನನಗೆ ನಿಜವಾಗಿಯೂ ಆ ರೀತಿ ಅನುಭವವಾಯ್ತು. ಜಾಸ್ತಿ ಮಾತೇ ಆಡುತ್ತಿರಲಿಲ್ಲ,  ಸರ್ ಗುಡ್‌ ಮಾರ್ನಿಂಗ್ ಸರ್ ಎಂದರೆ ಕೇವಲ ತಲೆಯಷ್ಟೇ ಬಾಗಿಸುತ್ತಿದ್ದರು. ಸರ್ ನೀವು ಊಟ ಮಾಡಿದ್ರಾ ಎಂದು ಕೇಳಿದರೆ ಹೌದು ಎಂಬಂತೆ ತಲೆಯಾಡಿಸುತ್ತಿದ್ದರು. ಊಟ ಮಾಡಿದೆ ಎಂದು ಗುಡ್ ಬಾಯ್ಬಿಟ್ಟು ಹೇಳುತ್ತಿರಲಿಲ್ಲ,  ಯಾವಾಗಲೂ ಗಂಭೀರವಾಗಿಯೇ ಇರುತ್ತಿದ್ದರು. ಆದರೂ ಅವರು ತುಂಬಾ ಮಧುರ ಹಾಗೂ ಮೃದು ಸ್ವಭಾವ ವ್ಯಕ್ತಿ ಎಂದು ಅಚ್ಯುತ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ ನಟಿ.

ಅಪ್ಪಟ ಬ್ರಾಹ್ಮಣ ಹುಡುಗಿ ಪುಸ್ತಕದಲ್ಲಿ ಕದ್ದುಮುಚ್ಚಿ ನೋಡ್ತಿರೋದೇನು? ನಯನತಾರಾ ವಿಡಿಯೋ ರಿಲೀಸ್​

ಈ ವೀಡಿಯೋ ನೋಡಿದ ಕನ್ನಡಾಭಿಮಾನಿಗಳು ಫುಲ್ ಖುಷ್ ಆಗಿದ್ದು,  ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರು ಪ್ರತಿ  ಪಾತ್ರದ ಹೀರೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

Follow Us:
Download App:
  • android
  • ios