Asianet Suvarna News Asianet Suvarna News

ಅಪ್ಪಟ ಬ್ರಾಹ್ಮಣ ಹುಡುಗಿ ಪುಸ್ತಕದಲ್ಲಿ ಕದ್ದುಮುಚ್ಚಿ ನೋಡ್ತಿರೋದೇನು? ನಯನತಾರಾ ವಿಡಿಯೋ ರಿಲೀಸ್​

ಅಪ್ಪಟ ಬ್ರಾಹ್ಮಣ ಹುಡುಗಿ ಪುಸ್ತಕದಲ್ಲಿ ಕದ್ದುಮುಚ್ಚಿ ನೋಡ್ತಿರೋದೇನು? ನಯನತಾರಾ ಹೊಸ ಚಿತ್ರ ಅನ್ನಪೂರ್ಣಿ ಟೀಸರ್​  ರಿಲೀಸ್.​
 

Annapoorani teaser Nayanthara is a foodie Brahmin who secretly loves chicken suc
Author
First Published Oct 26, 2023, 5:04 PM IST

ಈಕೆ ಅಪ್ಪಟ ಬ್ರಾಹ್ಮಣರ ಹುಡುಗಿ. ಸಾಂಪ್ರದಾಯಿಕ ಈ ಮನೆಯಲ್ಲಿ ಎಲ್ಲರೂ ಪೂಜೆ ಪುನಸ್ಕಾರದಲ್ಲಿ ಮುಳುಗಿದ್ದಾರೆ.  ಅದು ಶ್ರೀರಂಗಂ ತಿರುಚ್ಚಿ.  ಅಗ್ರಹಾರದಲ್ಲಿ ಚಿಕ್ಕ ಮನೆಯಲ್ಲಿ ಇವರ ವಾಸ. ಮನೆಯಲ್ಲಿ ಎಲ್ಲರೂ ಪೂಜೆಯಲ್ಲಿ ಇರುವಾಗ  ಮ್ಯಾನೇಜ್ಮೆಂಟ್ ಸ್ಟಡೀಸ್​ಗೆ ಸಂಬಂಧಿಸಿದ ಪುಸ್ತಕ ಹಿಡಿದು ಕುಳಿತ ಈ ಯುವತಿ ಮಾತ್ರ ಏನನ್ನೋ ಕದ್ದುಮುಚ್ಚಿ ನೋಡುತ್ತಿರುತ್ತಾಳೆ. ಅಮ್ಮ ಬಂದು ಮಂಗಳಾರತಿ ನೀಡಿದಾಗ ಲಗುಬಗೆಯಿಂದ ಅದನ್ನು ತೆಗೆದುಕೊಂಡು ಮತ್ತೆ ಆ ಪುಸ್ತಕದಲ್ಲಿ ಅದನ್ನೇ ನೋಡುತ್ತಿರುತ್ತಾಳೆ. ಅಷ್ಟಕ್ಕೂ ಈಕೆ ನೋಡುತ್ತಿರುವುದು ಮತ್ತಿನ್ನೇನೂ ಅಲ್ಲ. ಚಿಕನ್​ ರೆಸಿಪಿಯನ್ನು! ಹೀಗೆ ನೋಡುತ್ತಿರುವ ಯುವತಿಯೇ ನಟಿ ನಯನತಾರಾ.  ಚಿಕನ್ ರೆಸಿಪಿಯನ್ನು ಪುಸ್ತಕದ ಒಳಗೆ ಅಡಗಿಸಿಟ್ಟಿಕೊಂಡಿರುವ ಈಕೆ,  ಟ್ರೆಡಿಷನಲ್ ಲಂಗ-ದಾವಣಿಯಲ್ಲಿ ಸೂಪರ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ತಾಯಿ ಬರುತ್ತಿದ್ದಂತೆ ಪುಸ್ತಕ ಎದೆಗವಚಿ ಆರತಿ ತೆಗೆದುಕೊಂಡು ಮತ್ತೆ ಚಿಕನ್​ ರೆಸಿಪಿ ನೋಡುತ್ತಾರೆ.
 
ಅಂದಹಾಗೆ ಇದು ನಯನತಾರಾ ಅವರ ಹೊಸ ಚಿತ್ರದ ಟೀಸರ್​. ನಯನತಾರಾ ಅವರು ಟ್ವಟಿರ್​ನಲ್ಲಿ ಈ ಟೀಸರ್ ಶೇರ್ ಮಾಡಿದ್ದಾರೆ. ನೀಲೇಶ್ ಕೃಷ್ಣ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಸಿನಿಮಾ ಕುರಿತು ನಿಮ್ಮ ಪ್ರೀತಿ ನಿಮ್ಮನ್ನು ಇನ್ನೂ ಎತ್ತರಕ್ಕೆ ಬೆಳೆಸುತ್ತದೆ. ನಿಮ್ಮ ಮ್ಯಾಜಿಕ್ ತೋರಿಸುವ ಸಮಯ ಎಂದಿದ್ದಾರೆ. ಚಿತ್ರದ ಹೆಸರು ಅನ್ನಪೂರ್ಣಿ. ಶಾರುಖ್​ ಖಾನ್​ ಜೊತೆ ನಯನತಾರಾ ನಟಿಸಿದ ‘ಜವಾನ್​’ ಸಿನಿಮಾ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಸಿನಿಮಾದಲ್ಲಿ ಅವರು ಲೇಡಿ ಕಾಪ್​ ಪಾತ್ರ ಮಾಡಿದ್ದರು. ಆ್ಯಕ್ಷನ್​ ದೃಶ್ಯಗಳನ್ನೂ ಅಭಿನಯಿಸಿದ್ದರು. ಇದಾದ ಮೇಲೆ 75ನೇ ಚಚಿತ್ರವಾದ ಅನ್ನಪೂರ್ಣಿಯಲ್ಲಿ ನಟಿ ನಟಿಸುತ್ತಿದ್ದಾರೆ. ಇದರ ಟೀಸರ್​ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ನಟ ಜೈ, ಸತ್ಯರಾಜ್, ಅಚ್ಯುತ್ ಕುಮಾರ್, ಕೆಎಸ್ ರವಿಕುಮಾರ್, ರೆಡಿನ್ ಕಿಂಗ್​ಸ್ಲೇ, ಕುಮಾರಿ ಸಚು, ಕಾರ್ತಿಕ್ ಕುಮಾರ್ ಹಾಗೂ ಸುರೇಶ್ ಚಕ್ರವರ್ತಿ ಈ ಚಿತ್ರದಲ್ಲಿ ನಟಿಸಿದ್ದಾರೆ.  ನಿಲೇಶ್ ಕೃಷ್ಣ ನಿರ್ದೇಶನದ ಅನ್ನಪೂರ್ಣಿಗೆ  ತಮನ್ ಎಸ್. ಅವರ ಸಂಗೀತವಿದೆ. ಅನ್ನಪೂರ್ಣಿ ಸಿನಿಮಾವನ್ನು ಝೀ ಸ್ಟುಡಿಯೋ ನಿರ್ಮಿಸಿದೆ.
 

ಅಪ್ಪನ ವಯಸ್ಸಿನ ಹೀರೋ ಜತೆ ರೊಮ್ಯಾನ್ಸ್‌, ಲಿಪ್‌ಲಾಕ್‌ಗೆ ನಯನತಾರಾ ರೆಡಿ? ಅಯ್ಯೋ ಅಂತಿದ್ದಾರೆ ಫ್ಯಾನ್ಸ್‌

‘ಅನ್ನಪೂರ್ಣಿ’ ಸಿನಿಮಾದಲ್ಲಿ ನಯನತಾರಾ ಅವರು ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮನೆ ಹೇಗಿರುತ್ತದೆ ಎಂಬುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಇದು ಅವರ 75ನೇ ಸಿನಿಮಾ ಆದ್ದರಿಂದ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬಹಳಷ್ಟು ಅಭಿಮಾನಿಗಳು ನಯನತಾರಾ ಅವರ ಡಿಫರೆಂಟ್ ಪಾತ್ರಕ್ಕಾಗಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟೀಸರ್​ ಗಮನ ಸೆಳೆಯುತ್ತಿದೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್​ ಆಗಿದೆ. ಟೀಸರ್​ನಲ್ಲಿ ಹೆಚ್ಚೇನೂ ಮಾಹಿತಿ ರಿವೀಲ್​ ಆಗಿಲ್ಲವಾದರೂ ಕಥೆಯ ಬಗ್ಗೆ ಕೌತುಕ ಮೂಡಿರುವುದಂತೂ ನಿಜ. ನಯನತಾರಾ ಯಾವುದೇ ರೀತಿಯ ಪಾತ್ರಕ್ಕೆ ತಮ್ಮನ್ನು ತಾವು ಸೂಟ್ ಮಾಡಿಕೊಳ್ಳಬಲ್ಲರು ಎಂದು ಫ್ಯಾನ್ಸ್​ ಕಮೆಂಟ್​ ಹಾಕಿದ್ದಾರೆ.  ನಯನತಾರಾ ಪಾತ್ರಗಳನ್ನು ನಟಿಸುವುದಿಲ್ಲ, ಪಾತ್ರಗಳನ್ನು ಜೀವಿಸುತ್ತಾರೆ ಎಂದಿದ್ದಾರೆ. 
 
ಜವಾನ್ ಸಿನಿಮಾಗೆ 10 ಕೋಟಿ ಸಂಭಾವನೆ ತೆಗೆದುಕೊಂಡಿದ್ದರು ನಯನತಾರಾ. ಈಗ ಅನ್ನಪೂರ್ಣಿಯಲ್ಲಿ 12 ಕೋಟಿ ಕೇಳಿದ್ದಾರೆ ಎನ್ನಲಾಗುತ್ತಿದೆ.  . ಮಲ್ ಹಾಸನ್ ಸಿನಿ ಕರಿಯರ್ ನಲ್ಲಿ 234ನೇ ಚಿತ್ರವಾಗಿ ಬರುತ್ತಿರುವ ಈ ಚಿತ್ರ ಅತ್ಯಂತ ಮಹತ್ವಾಕಾಂಕ್ಷೆಯಿಂದ ಮೂಡಿಬರುತ್ತಿದೆ. 'ಲೇಡಿ ಸೂಪರ್ ಸ್ಟಾರ್‌' ನಯನತಾರಾ ಅವರು ಈಗ ಬಾಲಿವುಡ್‌ ಅಂಗಳಕ್ಕೂ ಕಾಲಿಟ್ಟಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿರುವ ಅವರು, ಇಬ್ಬರು  ಗಂಡು ಮಕ್ಕಳ ತಾಯಿ. ದಶಕಗಳಿಂದಲೂ ಚಿತ್ರೋದ್ಯಮದಲ್ಲಿ ಸಕ್ರಿಯರಿರುವ ಈ ನಟಿ, ಅಮ್ಮನಾದ ಮೇಲೂ  ಸೌತ್‌ನ ಟಾಪ್‌ ನಟಿ. ಜೊತೆಗೆ ಬಿಗ್ ಬಜೆಟ್‌ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.  ಶಾರುಖ್‌ ಖಾನ್‌ ಜತೆಗೆ ಜವಾನ್‌ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿ 1000 ಕೋಟಿಯ ಸಿನಿಮಾವನ್ನೂ ಮುಡಿಗೇರಿಸಿಕೊಂಡಿದ್ದಾರೆ.   

ನಾಯಕನ ತೊಡೆ ಮೇಲೆ ಕೂತ್ಕೊ ಅಂದ್ರು, ಆತ ಕಚ್ಚಿದ ಐಸ್​​ಕ್ರೀಂ ತಿನ್ನು ಅಂದ್ರು: ಆ ದಿನಗಳ ನೆನೆದ ಸುಹಾಸಿನಿ


Follow Us:
Download App:
  • android
  • ios