ಸುಶಾಂತ್ ಪ್ರಕರಣದಲ್ಲಿ ಅಂಕಿತಾ ಲೋಖಂಡೆ ಅವರಿಗೆ ಪತಿ ವಿಕ್ಕಿ ಜೈನ್ ಹೇಗೆ ಬೆಂಬಲಕ್ಕೆ ನಿಂತಿದ್ದರು ಎನ್ನುವುದನ್ನು ವಿವರಿಸಿದ್ದಾರೆ. 'ಸುಶಾಂತ್ ಮತ್ತು ನಾನು 2016ರಲ್ಲಿ ಬ್ರೇಕಪ್ ಮಾಡಿಕೊಂಡೆವು. 2018ರಲ್ಲಿ ವಿಕ್ಕಿ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ವಿಕ್ಕಿಗೆ ಸುಶಾಂತ್ ಗೊತ್ತಿತ್ತು. ವಿಕ್ಕಿ ಮೊದಲು ಗೊತ್ತಿತ್ತು ಆದರೆ ಸ್ನೇಹಿತರಾಗಿರಲಿಲ್ಲ. 2018ರ ಬಳಿಕ ನಾವು ಸ್ನೇಹಿತರಾದೆವು. ಒಂದು ದಿನ ನಾನು ವಿಕ್ಕಿಯನ್ನು ಕೆಲಸದ ವಿಚಾರವಾಗಿ ಕರೆದಿದ್ದೆ, ಅಲ್ಲಿಂದ ಇಬ್ಬರ ಸ್ನೇಹ ಗಟ್ಟಿಯಾಯಿತು. ಜೂನ್ 2020ರಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ ವಿಕ್ಕಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. 

ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಇಹಲೋಕ ತ್ಯಾಜಿಸಿ 2 ವರ್ಷಗಳೇ ಕಳೆಯಿತು. ಇಂದಿಗೆ ಸರಿಯಾಗಿ (ಜೂನ್ 14, 2020) ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಬಾಲಿವುಡ್‌ಗೆ ಬರಸಿಡಿಲಿನಂತೆ ಬಂದು ಅಪ್ಪಳಿತ್ತು. ಮುಂಬೈನ ಬಾಂದ್ರದ ತನ್ನ ಅಪಾರ್ಟ್ನೆಂಟ್‌ನಲ್ಲಿ ಸುಶಾಂತ್ ಸಿಂಗ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅಸಹಜ ಸಾವು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಮಾಡಿತ್ತು. ಸಾವಿನ ಬಳಿಕ ನಡೆದ ಅನೇಕ ಬೆಳವಣಿಗಳು ಬಾಲಿವುಡ್‌ಗೆ ದೊಡ್ಡ ಹೊಡೆತ ನೀಡಿತ್ತು. ಸುಶಾಂತ್ ನಿಧನಹೊಂದಿ ಎರಡು ವರ್ಷಗಳೇ ಕಳೆದಿವೆ. ಸಾವಿನ ತನಿಖೆ ಇನ್ನು ಸಂಪೂರ್ಣವಾಗಿಲ್ಲ. ಸಿಬಿಐ ಅಂಗಳದಲ್ಲಿರುವ ಸುಶಾಂತ್ ಪ್ರಕರಣದ ಅಂತಿಮ ತೀರ್ಪು ಇನ್ನು ಹೊರಬಿದ್ದಿಲ್ಲ. ಅಭಿಮಾನಿಗಳು ಸುಶಾಂತ್ ಸಾವುಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಸುಶಾಂತ್ ಸಿಂಗ್ ನಿಧನ ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸುಶಾಂತ್ ಇನ್ನಿಲ್ಲ ಎಂದು ನೆನೆದು ಕಾಣ್ಣೀರಾಕಿದ್ದರು. ಇಂದು ಎರಡನೇ ಪುಣ್ಯತಿಥಿ ದಿನ ಸುಶಾಂತ್ ಸಿಂಗ್ ಅವರ ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ಈ ಸಮಯದಲ್ಲಿ ಸುಶಾಂತ್ ಕುಟುಂಬದವರು, ಸ್ನೇಹಿತರು ಮತ್ತು ಆಪ್ತರು ಸುಶಾಂತ್ ಸಿಂಗ್ ಅವರನ್ನು ವಿಶೇಷವಾಗಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸುಶಾಂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶದಲ್ಲಿ ಅಂಕಿತಾ, ಮಾಜಿ ಗೆಳೆಯನ ಸಾವು ಹೇಗೆ ಪರಿಣಾಮ ಬೀರಿತು, ಅದರಿಂದ ಹೇಗೆ ಹೊರಬಂದರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಅಂಕಿತಾ ಪತಿ ವಿಕ್ಕಿ ಜೈನ್ ಹೇಗೆ ಬೆಂಬಲಕ್ಕೆ ನಿಂತಿದ್ದರು ಎನ್ನುವುದನ್ನು ಸಹ ವಿವರಿಸಿದ್ದಾರೆ. 

'ಸುಶಾಂತ್ ಮತ್ತು ನಾನು 2016ರಲ್ಲಿ ಬ್ರೇಕಪ್ ಮಾಡಿಕೊಂಡೆವು. 2018ರಲ್ಲಿ ವಿಕ್ಕಿ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ವಿಕ್ಕಿಗೆ ಸುಶಾಂತ್ ಗೊತ್ತಿತ್ತು. ವಿಕ್ಕಿ ಮೊದಲು ಗೊತ್ತಿತ್ತು ಆದರೆ ಸ್ನೇಹಿತರಾಗಿರಲಿಲ್ಲ. 2018ರ ಬಳಿಕ ನಾವು ಸ್ನೇಹಿತರಾದೆವು. ಒಂದು ದಿನ ನಾನು ವಿಕ್ಕಿಯನ್ನು ಕೆಲಸದ ವಿಚಾರವಾಗಿ ಕರೆದಿದ್ದೆ, ಅಲ್ಲಿಂದ ಇಬ್ಬರ ಸ್ನೇಹ ಗಟ್ಟಿಯಾಯಿತು. ಜೂನ್ 2020ರಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ ವಿಕ್ಕಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು' ಎಂದಿದ್ದಾರೆ. 

ಹೊಸ ಮನೆಗೆ ಶಿಫ್ಟ್‌ ಆದ Ankita Lokhande ಗೃಹ ಪ್ರವೇಶದ ಫೋಟೋಗಳು

'ಅಂಕಿತಾ, ಸುಶಾಂತ್ ಸಿಂಗ್ ಅವರ ಬೆಸ್ಟ್ ಫ್ರೆಂಡ್, ಯಾವಾಗಲು ಸುಶಾಂತ್ ಜೊತೆ ಇರಬೇಕೆಂದು ಅನೇಕರು ಟ್ರೋಲ್ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಂಕಿತಾರನ್ನು ಬಿಟ್ಟುಬಿಡಿ ಎಂದು ವಿಕ್ಕಿಗೆ ಹೇಳುತ್ತಿದ್ದರು. ಪತ್ನಿಯಾದವಳು ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಸಂದರ್ಶನದಲ್ಲಿ ಮಾತನಾಡುವುದನ್ನು ನೋಡುವುದು ಗಂಡನಿಗೆ ತುಂಬಾ ಕಷ್ಟ. ಅದು ಅಷ್ಟು ಸುಲಭವಲ್ಲ. ಪ್ರತಿದಿನ ವಿಭಿನ್ನ ಸ್ಟೋರಿ ಹೊರಬರುತ್ತಿತ್ತು. ನಾನು ಯಾವಾಗಲು ಸುಶಾಂತ್ ಬಗ್ಗೆ ಮಾತನಾಡುತ್ತಿದ್ದೆ. ವಿಕ್ಕಿ ತುಂಬಾ ಗೌರವಾನ್ವಿತ ಕುಟುಂಬದಿಂದ ಬಂದವರು. ಆ ಸಮಯದಲ್ಲಿ ವಿಕ್ಕಿ ಯಾವಾಗಲು ಹೇಳುತ್ತಿದ್ದು ಏನು ಆಗಿಲ್ಲ, ಎಲ್ಲದು ಒಳ್ಳೆಯದಾಗುತ್ತದೆ ಎನ್ನುತ್ತಿದ್ದರು. ಇದು ವಿಕ್ಕಿಗೆ ಮಾತ್ರ ಅಲ್ಲ, ನನ್ನ ಕುಟುಂಬಕ್ಕೂ ತುಂಬಾ ಕಷ್ಟದ ಸಮಯವಾಗಿತ್ತು' ಎಂದರು.

Sushant Singh Death Anniversary; ಸುಶಾಂತ್ ಇಲ್ಲದೇ 2 ವರ್ಷ, ಸಹೋದರಿಯ ಭಾವುಕ ಪತ್ರ

'ಯಾರು ಏನೆ ಹೇಳಿದರು ವಿಕ್ಕಿ ನನಗೆ, ಸುಶಾಂತ್‌ಗೆ ಯಾವುದು ಒಳ್ಳೆಯದು ಎಂದು ಅನಿಸುತ್ತೋ ಅದನ್ನು ನೀನು ಮಾಡು ಎಂದು ಹೇಳುತ್ತಿದ್ದರು. ಸುಶಾಂತ್ ಸಾವಿನ ಬಳಿಕ ನಾನು ಅವನ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಸುಶಾಂತ್ ಸಾವಿನ ಬಳಿಕ ಸುಮಾರು 6 ತಿಂಗಳಾದರೂ ನನ್ನ ಮತ್ತು ಸುಶಾಂತ್ ಬಗ್ಗೆ ವಿಭಿನ್ನ ಸ್ಟೋರಿಗಳು ಬರುತ್ತಿದ್ದವು. ನಾನೇನಾದರು ವಿಕ್ಕಿ ಸ್ಥಾನದಲ್ಲಿದ್ದರೆ ಹಳೆಯ ಘಟನೆಗಳ ಬಗ್ಗೆ ಮಾತನಾಡುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ವಿಕ್ಕಿ ನನ್ನ ಬೆಂಬಲಕ್ಕೆ ನಿಂತ ಕಾರಣದಿಂದ ನಾನು ಸುಶಾಂತ್ ಪರ ನಿಲ್ಲಲು ಸಾಧ್ಯವಾಯಿತು' ಎಂದು ಅಂಕಿತಾ ಮಾಜಿ ಗೆಳೆಯ ಸುಶಾಂತ್ ಸಾವಿನ ಬಳಿಕ ಎದುರಾದ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.