Asianet Suvarna News Asianet Suvarna News

ಮೂಗಿನ ಸರ್ಜರಿ ಬಳಿಕ ಪ್ರಿಯಾಂಕಾ ಭಯಂಕರವಾಗಿ ಕಾಣ್ತಿದ್ರು- ಅಪ್ಪ ಅಮ್ಮ ಅಳ್ತಾ ಕೂತಿದ್ರು ಎಂದು ನೆನಪಿಸಿಕೊಂಡ ನಿರ್ದೇಶಕ

ಅಂದಕಾಣಲು ಮೂಗಿನ ಸರ್ಜರಿ ಮಾಡಿಸಿದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಎಷ್ಟು ಭಯಾನಕವಾಗಿ ಕಾಣಿಸುತ್ತಿದ್ದರು ಎಂಬ ಬಗ್ಗೆ ನಿರ್ದೇಶಕ ಅನಿಲ್​ ಶರ್ಮಾ ಹೇಳಿದ್ದಾರೆ.  
 

Anil Sharma recalls Priyanka Chopras nose surgery looked terrible suc
Author
First Published Sep 28, 2023, 5:09 PM IST

 ನಟನಾ ಪ್ರಪಂಚವೆಂದರೆ ಹಾಗೆನೇ. ಅಡಿಯಿಂದ ಮುಡಿಯವರೆಗೆ ಎಲ್ಲವೂ ಚೆನ್ನಾಗಿಯೇ  ಇರಬೇಕು. ಇಲ್ಲದಿದ್ದರೆ ಸೈಡ್​ಲೈನ್​ ಆಗುತ್ತಾರೆ. ಇದೇಕಾರಣಕ್ಕೆ ಬಣ್ಣದ ಲೋಕದ ಕನಸು ಕಂಡು ಬರುವ ಬಹುತೇಕ ಮಂದಿ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗುವುದು ಉಂಟು. ಒಂದು ಕಾಲದಲ್ಲಿ ಇಡೀ ಬಾಲಿವುಡ್​ ಆಳಿದ ನಟಿ ಶ್ರೀದೇವಿ (Shreedevi) ಕೂಡ ಮೂಗಿನ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡವರೇ. ಇವರನ್ನು ಬಿಟ್ಟರೆ ಅಂದಿನಿಂದ ಇಂದಿನವರೆಗೂ ಬಹುತೇಕ ನಟ ನಟಿಯರು ತಮ್ಮ ದೇಹದ ವಿವಿಧ ಅಂಗಗಳ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮೂಗು ಮತ್ತು ತುಟಿಗಳ ಸರ್ಜರಿ ಮಾಡಿಸಿಕೊಂಡವರೇ ಹೆಚ್ಚು. ಅಂಥವರಲ್ಲಿ ಒಬ್ಬರು ನಟಿ ಪ್ರಿಯಾಂಕಾ ಚೋಪ್ರಾ. ಮೂಗಿನ ಶಸ್ತ್ರಚಿಕಿತ್ಸೆಯ ಬಳಿಕ ಅದು ಉಲ್ಟಾ ಹೊಡೆದು ಹೇಗೆ ತಾವು ಖಿನ್ನತೆಗೆ ಜಾರಿದ್ದೆವು ಎಂಬ ಬಗ್ಗೆ ನಟಿ ಈ ಹಿಂದೆ ಮಾತನಾಡಿದ್ದರು. ಇದೀಗ ನಿರ್ದೇಶಕ ಅನಿಲ್ ಶರ್ಮಾ ಅವರು ನಟಿ ಪ್ರಿಯಾಂಕಾ ಚೋಪ್ರಾ ಅವರ ಮೂಗಿನ ಸರ್ಜರಿ ಬಗ್ಗೆ ಮಾತನಾಡಿದ್ದಾರೆ. 

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಸಂದರ್ಶನವೊಂದರಲ್ಲಿ (Interview) ತಮ್ಮ 'ಡಾರ್ಕ್ ಫೇಸ್' ಬಗ್ಗೆ ಬಹಿರಂಗಪಡಿಸಿದ್ದರು. ಅದು ಅವರ  ಮೂಗಿನ ಶಸ್ತ್ರಚಿಕಿತ್ಸೆಯ ಕುರಿತು. ಮೂಗನ್ನು ಅಂದ ಮಾಡಿಸಿಕೊಳ್ಳುವ ಸಲುವಾಗಿ ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ತಪ್ಪಾದಾಗ ತಾವು ಅನುಭವಿಸಿದ ಆಳವಾದ ಖಿನ್ನತೆಯ ಕುರಿತು ಮಾತನಾಡಿದ್ದರು. ಇದರೊಂದಿಗೆ, ಮೂಗು ಶಸ್ತ್ರಚಿಕಿತ್ಸೆ ಹದಗೆಟ್ಟ ಕಾರಣ, ಅನೇಕ ಚಿತ್ರಗಳಿಂದ ತಮ್ಮನ್ನು  ತೆಗೆದುಹಾಕಲಾಗಿತ್ತು ಎಂಬ ಬಗ್ಗೆಯೂ ತಿಳಿಸಿದ್ದರು. 'ಶಸ್ತ್ರಚಿಕಿತ್ಸೆಯ ನಂತರ, ನನ್ನ ಮುಖವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಲಾರಂಭಿಸಿತು ಮತ್ತು ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ' ಎಂದು ಪ್ರಿಯಾಂಕಾ ಹೇಳಿದ್ದರು.  ನನ್ನ ವೃತ್ತಿಜೀವನ ಪ್ರಾರಂಭವಾಗುವ ಮೊದಲು ಕೊನೆಗೊಳ್ಳಲಿದೆ ಎಂದೇ ಭಾವಿಸಿದೆ. ಮೂರು ಚಿತ್ರಗಳು ನನ್ನಿಂದ ಕೈಬಿಟ್ಟು ಹೋದವು. ಆಗ ನನ್ನ ನೆರವಿಗೆ ನಿಂತವರು ನನ್ನ ತಂದೆ. ನಾನು ಏನಾದರೂ ಮಾಡಿಕೊಂಡು ಬಿಡುತ್ತೇನೆ ಎಂಬ ಭಯದಲ್ಲಿ ನಾನು ನಿನ್ನೊಂದಿಗೆ ರೂಮಿನಲ್ಲಿ ಇರುತ್ತೇನೆ ಎಂದು ನನ್ನ ತಂದೆ ಹೇಳಿ ನನ್ನ ಜೊತೆ ಇರುತ್ತಿದ್ದರು ಎಂದಿದ್ದರು.

ಪತಿ ನಿಕ್​ ಹಾಡುವಾಗ ಕಣ್ಣೀರಿಟ್ಟ ಪ್ರಿಯಾಂಕಾ: ಮಕ್ಕಳು ಹಾಡಿದ್ರೆ ಹೀಗೇ ಅನ್ನೋದಾ ಟ್ರೋಲಿಗರು!
 
ಇದೀಗ ಅನಿಲ್​ ಶರ್ಮಾ ಅವರು ಹೇಳಿದ್ದಾರೆ. ಮೂಗಿನ ಶಸ್ತ್ರಚಿಕಿತ್ಸೆಗೆ ಪ್ರಿಯಾಂಕಾ ಅದ್ಯಾಕೆ ಮುಂದಾದರೋ ಗೊತ್ತಿಲ್ಲ. 2003ರಲ್ಲಿ ನಾನು  ಪ್ರಿಯಾಂಕಾ ಜೊತೆ ದಿ ಹೀರೋ: ದಿ ಲವ್​ಸ್ಟೋರಿ ಆಫ್ ಎ ಸ್ಪೈ ಸಿನಿಮಾ ಮಾಡಿದ್ದೆ. ಆಕೆ ತುಂಬಾ  ಕಠಿಣ ಶ್ರಮದಿಂದ ನಟಸುತ್ತಿದ್ದರು. ನಟನೆಯೂ ಚೆನ್ನಾಗಿತ್ತು. ಆದರೆ ಮೂಗಿನ ಶಸ್ತ್ರಚಿಕತ್ಸೆಗೆ ಒಳಗಾಗಿ ಹಲವಾರು ಸಿನಿಮಾಗಳಿಂದ ಪ್ರಿಯಾಂಕಾ ಅವರನ್ನು ಹಲವು ನಿರ್ಮಾಪಕರು ಕೈಬಿಟ್ಟರು ಎಂದು ಅನಿಲ್​ ಶರ್ಮಾ ಹೇಳಿದ್ದಾರೆ. ಎಲ್ಲವೂ ಚೆನ್ನಾಗಿತ್ತು, ನನ್ನ ಪತ್ನಿಯೇ ಪ್ರಿಯಾಂಕಾ ಕೈಗೆ ಚೆಕ್ ಇಟ್ಟಿದ್ದರು. ಸಿನಿಮಾ ಸೈನ್ ಆಗಿತ್ತು. ನಾನು ಟ್ರಿಪ್ ಮುಗಿಸಿ ಬರುವಾಗ ಪ್ರಿಯಾಂಕಾ ಸರ್ಜರಿಯಾಗಿತ್ತು. ಚೆನ್ನಾಗಿದ್ದಳಲ್ಲ, ಯಾಕಾಗಿ ಸರ್ಜರಿ ಮಾಡಿಸಿಕೊಂಡರು ಎಂದುಕೊಂಡೆ. ಆಕೆ ತುಂಬಾ  ವಿಚಿತ್ರವಾಗಿ ಕಾಣುತ್ತಿದ್ದಳು. ಕಪ್ಪಾಗಿದ್ದಳು. ಅವಳು ತನ್ನ ಜೊತೆ ಇದೇನು ಮಾಡಿಕೊಂಡಳು ಎಂದು ಎಲ್ಲರೂ ಚರ್ಚಿಸುತ್ತಿದ್ದರು ಎಂದು ಆ ದಿನಗಳನ್ನು ಅನಿಲ್​ ಶರ್ಮಾ ನೆನಪಿಸಿಕೊಂಡಿದ್ದಾರೆ.
  
ಆಗಲೇ ಪ್ರಿಯಾಂಕರನ್ನು ಮೀಟಿಂಗ್​ಗೆ ಕರೆದೆ. ಜೋರಾಗಿ ಅಳುತ್ತಾ ಕೂತಿದ್ದರು. ಆಕೆ ಅಳುವುದು ನೋಡಿ ನಾನೂ  ಶಾಕ್ ಆದೆ.  ಸೈನ್ ಮಾಡಿದವರು ಸಿನಿಮಾ ಕ್ಯಾನ್ಸಲ್ ಮಾಡತೊಡಗಿದರು. ಪ್ರಿಯಾಂಕಾ ಅವರ ಅವರ ತಂದೆ ತಾಯಿ ತುಂಬಾ ಒಳ್ಳೆಯವರು. ಅವರೂ ಅಳುತ್ತಿದ್ದರು. ಆಪರೇಷನ್ ಬಗ್ಗೆ ಹೇಳಿದರು. ನಟಿಯ ಮೂಗಿನ ಕೆಳಗೆಯೂ ಒಂದು ಮಾರ್ಕ್ ಆಗಿತ್ತು. ಇದು ಗುಣವಾಗಲು ಹಲವಾರು ತಿಂಗಳುಗಳೇ ಬೇಕಾದವು ಎಂದರು.

ಮಗಳಿಗೆ ಚಂದ ಮಾಮನ ತೋರಿಸ್ತಿರೋ ಪ್ರಿಯಾಂಕಾ- ಸೋ ಕ್ಯೂಟ್​ ಎಂದ ಫ್ಯಾನ್ಸ್

ಈ ಹಿಂದೆ ಪ್ರಿಯಾಂಕಾ  ಕೂಡ  ನಿರ್ದೇಶಕ ಅನಿಲ್ ಶರ್ಮಾ (Anil  Sharma) ಅವರನ್ನು ಶ್ಲಾಘಿಸಿದ್ದರು.  'ಚಿತ್ರದಲ್ಲಿ ನಾನು ನಾಯಕಿಯಾಗಿ ನಟಿಸಬೇಕಾಗಿತ್ತು, ಆದರೆ ಇದ್ದಕ್ಕಿದ್ದಂತೆ ನನ್ನನ್ನು ಸೈಡ್ ರೋಲ್‌ಗೆ ಬದಲಾಯಿಸಲಾಯಿತು. ಆ ಚಿತ್ರನಿರ್ಮಾಪಕ (ಅನಿಲ್ ಶರ್ಮಾ) ತುಂಬಾ ಕರುಣಾಮಯಿ. ಎಲ್ಲವೂ ನನ್ನ ವಿರುದ್ಧವಾಗಿದ್ದಾಗ, ನನ್ನ ಪರ ನಿಂತರು. ಚಿತ್ರದಲ್ಲಿ ನಿನ್ನ ರೋಲ್​ ಸ್ವಲ್ಪವೇ ಇದ್ದರೂ, ಸಂಪೂರ್ಣ ಪ್ರಯತ್ನದಿಂದ ಅದನ್ನು ನಿಭಾಯಿಸಬೇಕು ಎಂದಿದ್ದರು. ನಾನು ಅದಕ್ಕೆ ತಲೆಬಾಗಿ ಅವರು ಹೇಳಿದ್ದನ್ನು ಪಾಲಿಸಿದೆ. ಇದರಿಂದ ನನಗೆ ಅವಕಾಶಗಳು ಸಿಕ್ಕವು ಎಂದಿದ್ದರು. 

Follow Us:
Download App:
  • android
  • ios