Asianet Suvarna News Asianet Suvarna News

ಬಾಲಿವುಡ್ ಅಲ್ಲ, ಕನ್ನಡ ಹಾಡು ಹಾಡ್ತೀನಿ ಅಂತಿದ್ದಾರೆ ಅನಿಲ್ ಕುಂಬ್ಳೆ! ವೈರಲ್ ಆಗ್ತಿರೋ ಜಾಹೀರಾತಿದು!

ಅನಿಲ್‌ ಕುಂಬ್ಳೆ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿರೋ ಕನ್ನಡಿಗ. ಇದೀಗ ಜಾಹೀರಾತಿನಲ್ಲೂ ಇತಿಹಾಸ ಸೃಷ್ಟಿ ಮಾಡ್ತಿದ್ದಾರೆ. ಈ ಹಿಂದೆ ಇಂದಿರಾ ನಗರದ ಗೂಂಡ ನಾನು ಅನ್ನುತ್ತಾ ಕರ್ನಾಟಕದ ಬಗ್ಗೆ ಕಂಟ್ರಿ ಲವ್ ತೋರಿಸಿದ್ರು ರಾಹುಲ್ ದ್ರಾವಿಡ್. ಕುಂಬ್ಳೆ ಇದೀಗ ಅವರಿಗಿಂತಲೂ ಒಂದು ಸ್ಟೆಪ್ ಮುಂದೆ ಹೋಗಿ ಬಾಲಿವುಡ್ ಹಾಡು ಹಾಡಲ್ಲ, ಕನ್ನಡ ಹಾಡು ಹಾಡ್ತೀನಿ ಅನ್ನೋ ಮೂಲಕ ಕನ್ನಡಿಗರಿಂದ ಶಹಭಾಸ್ ಅನಿಸಿಕೊಂಡಿದ್ದಾರೆ.

Anil kumble sing Kannada song for advertise
Author
First Published Dec 25, 2022, 12:10 PM IST

'ಸಂತೋಷಕೆ ಹಾಡು ಸಂತೋಷಕೆ..' ಶಂಕರ್‌ನಾಗ್ ಅವರ 'ಗೀತಾ' ಸಿನಿಮಾದ ಈ ಹಾಡು ಯಾರಿಗಿಷ್ಟ ಇಲ್ಲ ಹೇಳಿ! ಇಂದಿಗೂ ಸಿನಿಮಾ ಹಾಡಿಗೆ ಸಂಬಂಧಿಸಿದ ಯಾವುದೇ ಸ್ಟೇಜ್ ಶೋ ಆಗಿರಲಿ, ಆರ್ಕೆಸ್ಟ್ರಾ ಆಗಿರಲಿ, ಮ್ಯೂಸಿಕ್ ಕನ್ಸರ್ಟ್ ಆಗಿರಲಿ, ಅಲ್ಲಿ ಈ ಹಾಡು ಇರಲೇಬೇಕು. 'ಗೀತಾ' ಸಿನಿಮಾದಲ್ಲಿ ಶಂಕರ್‌ನಾಗ್‌ ತನ್ನದೇ ಸ್ಟೈಲಿನಲ್ಲಿ ಸ್ಟೆಪ್ ಹಾಕಿರೋ ಈ ಹಾಡು ಎಂಭತ್ತರ ದಶಕದ್ದಾದರೂ ನಲವತ್ತು ವರ್ಷ ಕಳೆದರೂ ಈ ಹಾಡಿನ ಮಹತ್ವ ಕಡಿಮೆ ಆಗಿಲ್ಲ. ಈ ಕಾಲದ ಹುಡುಗರೂ ಈ ಹಾಡನ್ನ ಗುನುಗೋದುಂಟು, ಶಂಕರ್‌ನಾಗ್ ಸ್ಟೈಲನ್ನ ಇಮಿಟೇಟ್ ಮಾಡ್ತಾ ಡ್ಯಾನ್ಸ್ ಮಾಡೋದುಂಟು. ಇದ್ದಕ್ಕಿದ್ದಂತೆ ಆ ಹಾಡಿನ ಬಗ್ಗೆ ಇಷ್ಟುದ್ದ ಪೀಠಿಕೆ ಯಾಕೆ ಅನ್ನೋರಿಗೆ ಒಂದು ಸಮಾಧಾನದ ಉತ್ತರ - ಈ ಹಾಡು ದಾಖಲೆ ಮೇಲೆ ದಾಖಲೆ ಬರೆದ ನಮ್ಮೆಲ್ಲರ ಪ್ರೀತಿಯ ಕನ್ನಡಿಗರ ಅನಿಲ್‌ ಕುಂಬ್ಳೆ ಅವರಿಗೂ ಶಾನೆ ಇಷ್ಟ. ಅದ್ಹೇಗೆ ಸಡನ್ನಾಗಿ ರಿವೀಲ್ ಆಯ್ತು ಅಂದ್ರೆ ಅದಕ್ಕೂ ಆನ್ಸರ್ ಇದೆ- ಜಾಹೀರಾತಿನ ಮೂಲಕ!

ಹೌದು, ಅನಿಲ್ ಕುಂಬ್ಳೆ ಅವರು ಇದೀಗ ಒಂದು ಜಾಹೀರಾತಿನ ಮೂಲಕ ತನ್ನ ಕನ್ನಡ ಪ್ರೀತಿ ತೋರಿಸಿದ್ದಾರೆ. ಇದು ಖಾಸಗಿ ಕಂಪನಿಗಾಗಿ ಮಾಡಿರೋ ಆಡ್. ಈ ಹಿಂದೆ ರಾಹುಲ್‌ ದ್ರಾವಿಡ್ ಅವರ ಒಂದು ಆಡ್ ಸಖತ್ ಫೇಮಸ್ ಆಗಿದ್ದು ನಿಮಗೆ ನೆನಪಾಗಿರಬಹುದು. 'ಇಂದಿರಾನಗರದ ಗೂಂಡಾ ನಾನು' ಅನ್ನುತ್ತಾ ಕನ್ನಡ ಪದ ಬಳಸಿ ಮಾತಾಡಿದ್ದ ಆಡ್ ಅದು. ಕೂಲ್ ಆಂಡ್ ಹ್ಯಾಂಡ್‌ಸಮ್‌ ಮ್ಯಾನ್ ದ್ರಾವಿಡ್ ಅವರ ಆ ರಗಡ್‌ ಲುಕ್, ಡೈಲಾಗ್ ಜನರಿಗೆ ಎಷ್ಟು ಇಷ್ಟ ಆಯ್ತು ಅಂದ್ರೆ ಜನ ಇವತ್ತೂ ರಾಹುಲ್ ದ್ರಾವಿಡ್‌ನ ಇಂದಿರಾ ನಗರದ ಗೂಂಡಾ ಅಂತ ತಮಾಷೆ ಮಾಡೋದುಂಟಂತೆ. ಅದನ್ನು ಇತ್ತೀಚೆಗೆ ಅವರೇ ಹೇಳ್ತಿದ್ರು. ಹಿಂದೆ ರಾಹುಲ್ ದ್ರಾವಿಡ್ ಅವರ 'ಇಂದಿರಾ ನಗರದ ಗೂಂಡಾ..' ಆಡ್ ಬಂದಿದ್ದು ಒಂದು ಖಾಸಗಿ ಕಂಪನಿ ಬಗ್ಗೆ. ಇದೀಗ ಅದೇ ಕಂಪನಿ ದಾಖಲೆ ವೀರ ಕ್ರಿಕೆಟರ್, ಹೆಮ್ಮೆಯ ಕನ್ನಡಿಗ ಅನಿಲ್‌ ಕುಂಬ್ಳೆ ಅವರನ್ನು ಬಳಸಿ ಒಂದು ಆಡ್‌ ಮಾಡಿದೆ. ಸಖತ್ ಫನ್ನಿ ಆಗಿರೋ ಈ ವೀಡಿಯೋ ಕನ್ನಡಿಗರ ಮನಗೆದ್ದಿದ್ದು ಶಂಕರ್‌ನಾಗ್ ಅವರ ಹಾಡನ್ನು ಕಂಬ್ಳೆ ಹಾಡಿದಾಗ.

ರಮೇಶ್‌ ಅರವಿಂದ್ ಹೇಳಿದ ವಿದೇಶ ಪ್ರವಾಸದ ಕಥೆ; ಸ್ಕೈ ಡೈವಿಂಗ್ ಅನುಭೂತಿ ಅವರ್ಣನೀಯ

ಹೌದು, ಅನಿಲ್‌ ಕುಂಬ್ಳೆ ಜಾಹೀರಾತಿಗಾಗಿ ಒಂದು ಕನ್ನಡ ಹಾಡು ಹಾಡಿದ್ದಾರೆ. ಅದು ಶಂಕರ್‌ ನಾಗ್‌ ಅವರ 'ಗೀತಾ' ಸಿನಿಮಾದ 'ಸಂತೋಷಕೆ..' ಹಾಡು. ಎಂಭತ್ತರ ದಶಕದ ಇಂದಿಗೂ ಫೇಮಸ್ ಆಗಿರೋ ಈ ಹಾಡನ್ನು ಅನಿಲ್‌ ಕುಂಬ್ಳೆ ಬಾಯಲ್ಲಿ ಕೇಳೋದೇ ಖುಷಿ. ಕ್ಯಾಂಡಿಡ್‌ನಂತೆ ಈ ಆಡ್‌ ಇದೆ. ಇದರಲ್ಲಿ ಜಾಹೀರಾತು ನಿರ್ದೇಶಕರು ಅನಿಲ್‌ ಕುಂಬ್ಳೆ ಅವರಿಗೆ ಒಂದು ಸಿನಿಮಾ ಹಾಡು, ಬಾಲಿವುಡ್‌ ಹಾಡು ಹಾಡುತ್ತ ಮಾತು ಶುರು ಮಾಡಲು ಹೇಳ್ತಾರೆ. ಆದ್ರೆ ಹೆಮ್ಮೆಯ(Pride) ಕನ್ನಡಿಗ ಕುಂಬ್ಳೆ ಕೂಲಾಗಿ, ನಾನ್ಯಾಕೆ ಬಾಲಿವುಡ್ ಹಾಡು ಹಾಡಲಿ, ನಾನು ಕನ್ನಡ ಹಾಡು ಹಾಡ್ತೀನಿ. ಎಂಭತ್ತರ ದಶಕದಲ್ಲಿ ಭಾರೀ ಫೇಮಸ್(Famous) ಆಗಿರೋ ಹಾಡಿದು ಅಂತ ಶಂಕರ್‌ನಾಗ್ ಅವರ 'ಸಂತೋಷಕೆ..ಹಾಡೂ ಸಂತೋಷಕೆ,, ಕುಣಿದು ತಾಳಕೆ ಕುಣಿದು..' ಅನ್ನೋ ಹಾಡನ್ನು ಹಾಡ್ತಾರೆ. ಯಾವುದೋ ನಿರೀಕ್ಷೆಯಲ್ಲಿದ್ದ ಆ ಆಡ್ ಡೈರೆಕ್ಟರ್‌ಗೆ ತಲೆಕೆಟ್ಟು ಕಂಪನಿ ಬಗ್ಗೆ ಇರೋ ಡೀಟೇಲ್(Detail) ಹೇಳಿ ಅಂತ ಡಿಕ್ಟೇಟ್ ಮಾಡ್ತಾ ಹೋಗ್ತಾನೆ.

ಮಕ್ಕಳಿಗೆ ಕ್ರಿಸ್ಮಸ್‌ ಕುಕ್ಕೀಸ್ ತಯಾರಿಸಲು ಹೇಳಿಕೊಟ್ಟ ರಾಧಿಕಾ ಪಂಡಿತ್; ಫೋಟೋ ವೈರಲ್

ಮೋರ್ ಲೋಕಲ್ ಮೋರ್ ಯೂನಿವರ್ಸಲ್ ಅನ್ನೋದು ರಿಷಬ್ ಶೆಟ್ಟಿ ಯಾವಾಗಲೂ ಹೇಳೋ ಮಾತು. ಈ ಐಡಿಯಾವನ್ನೇ ತನ್ನ ಕಾಂಸೆಪ್ಟ್‌ನಲ್ಲಿ(Concept) ಬಳಸಿ ಜಾಣ ಅಂತ ಬೆನ್ನು ತಟ್ಟಿಸಿಕೊಂಡಿದೆ ಖಾಸಗಿ ಕಂಪನಿ. ಈ ಹಿಂದೆ ಬೆಂಗಳೂರಿನ ಇಂದಿರಾ ನಗರವನ್ನು ಒಂದು ಆಡ್ ಮೂಲಕ ದೇಶಕ್ಕೆ ಪರಿಚಯಿಸಿದ ಹಾಗೆ ಇದೀಗ ಕನ್ನಡದ ಫೇಮಸ್ ಕ್ಲಾಸಿಕ್ ಹಾಡನ್ನು ದೇಶಕ್ಕೆ ತಲುಪಿಸೋ ಕೆಲಸವನ್ನು ಈ ಆಡ್ (Advertaise) ಮಾಡ್ತಿದೆ. ಅದಕ್ಕೆ ಕುಂಬ್ಳೆ ಅದ್ಭುತ ಫೇಸ್ ಆಗಿದ್ದಾರೆ. ಅಂದಹಾಗೆ ಈ ಆಡ್ ಈಗ ಸೋಷಿಯಲ್‌ ಮೀಡಿಯಾದಲ್ಲೆಲ್ಲ ವೈರಲ್ ಆಗ್ತಿದೆ. ಅನಿಲ್ ಕುಂಬ್ಳೆ ಕನ್ನಡ ಪ್ರೀತಿ ಕನ್ನಡಿಗರು ಮಾತ್ರ ಅಲ್ಲ ಅವರ ಎಲ್ಲ ಫ್ಯಾನ್ಸ್‌ ಮನಸ್ಸು ಮುಟ್ಟಿದೆ.

 

Follow Us:
Download App:
  • android
  • ios