Asianet Suvarna News Asianet Suvarna News

ರಮೇಶ್‌ ಅರವಿಂದ್ ಹೇಳಿದ ವಿದೇಶ ಪ್ರವಾಸದ ಕಥೆ; ಸ್ಕೈ ಡೈವಿಂಗ್ ಅನುಭೂತಿ ಅವರ್ಣನೀಯ

ಆಸ್ಪ್ರೇಲಿಯಾ, ನ್ಯೂಝಿಲ್ಯಾಂಡ್‌ ಪ್ರವಾಸ ಮುಗಿಸಿ ಬಂದಿರುವ ರಮೇಶ್‌ ಅರವಿಂದ್‌ ಅವರ ವಿದೇಶ ಪ್ರವಾಸದ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಕನ್ನಡ ಸಂಘದ ಸಂವಾದದಲ್ಲಿ ಹಂಚಿಕೊಂಡ ವಿಚಾರಗಳನ್ನು ತಿಳಿಸಿದ್ದಾರೆ. ಇದು ಮನಸ್ಸಲ್ಲಿ ಉಳಿಯುವ ವಿಶೇಷ ಬರಹ.

Ramesh Aravind shares Australia New Zealand travel experience vcs
Author
First Published Dec 25, 2022, 11:15 AM IST

ರಮೇಶ್ ಅರವಿಂದ್

ಪ್ರತೀ ಸಿನಿಮಾ ಮುಗಿದ ಮೇಲೆ ಯಾವುದಾದರೊಂದು ಊರಿಗೆ ಹೋಗಿ ಮತ್ತಷ್ಟುಉತ್ಸಾಹ ತುಂಬಿಕೊಂಡು ಬರುವ ಅಭ್ಯಾಸವನ್ನು ಇತ್ತೀಚೆಗೆ ರೂಢಿಸಿಕೊಂಡಿದ್ದೇನೆ. ಶಿವಾಜಿ ಸುರತ್ಕಲ್‌ 2 ಸಿನಿಮಾದ ಚಿತ್ರೀಕರಣ, ಡಬ್ಬಿಂಗ್‌ ಮುಗಿಸಿಕೊಂಡು ನಾನು ಮತ್ತು ನನ್ನ ಶ್ರೀಮತಿಯವರು ನ್ಯೂಝಿಲ್ಯಾಂಡಿಗೆ ಹೋಗಿದ್ದೆವು. ಬಹಳ ವರ್ಷಗಳ ನಂತರ ನಾವಿಬ್ಬರೇ ಪ್ರವಾಸ ಹೋಗಿದ್ದು. ಅಲ್ಲಿ ಕಳೆದ ಕ್ಷಣಗಳು ಮನಸ್ಸಿನಲ್ಲಿ ಖುಷಿಯ ಚಿತ್ರಗಳಾಗಿ ಉಳಿದಿವೆ.

ಅಲ್ಲಿ ನನ್ನ ಬಹುದಿನಗಳ ಆಸೆಯೊಂದನ್ನು ತೀರಿಸಿಕೊಂಡೆ. ಬಹಳ ದಿನದಿಂದ ಸ್ಕೈ ಡೈವಿಂಗ್‌ ಮಾಡಬೇಕು ಅಂತ ಆಸೆ ಇತ್ತು. ಏರೋಪ್ಲೇನ್‌ನಿಂದ ಹಾರುವ ಹಂಬಲ. ಗಾಳಿಯಲ್ಲಿ ತೇಲುವ ಆಸೆ. ಈ ಸಲ ಹೋದಾಗ ಸ್ಕೈ ಡೈವಿಂಗ್‌ ಮಾಡಲೇಬೇಕು ಎಂದುಕೊಂಡು ಸಿದ್ಧನಾದೆ. ಏರೋಪ್ಲೇನ್‌ ಹತ್ತಿ ಮೇಲೆ ಹೋದೆವು. 20 ಸಾವಿರ ಅಡಿ ಎತ್ತರದಲ್ಲಿ ಏರೋಪ್ಲೇನ್‌ ಹಾರುತ್ತಿತ್ತು. ಇನ್ನೇನು ಸ್ಕೈಡೈವಿಂಗ್‌ ಸಮಯ ಹತ್ತಿರ ಬಂತು. ನನಗೆ ಪ್ಯಾರಾಚೂಟ್‌ ಹಾಕಿಸಿದರು. ಸ್ವಲ್ಪ ಹೊತ್ತಿಗೆ ಏರ್‌ಪ್ಲೇನ್‌ನಿಂದ ಧುಮುಕಬೇಕು.

ನನಗೆ ಹಾರುವುದಕ್ಕೆ ಭಯ ಇರಲಿಲ್ಲ. ಅಲ್ಲದೇ ನನ್ನ ಜೊತೆ ಹಾರುವಾಗ ಒಬ್ಬ ಇನ್‌ಸ್ಟ್ರಕ್ಟರ್‌ ಕೂಡ ಇರುತ್ತಾನೆ ಎನ್ನುವುದು ಗೊತ್ತಿತ್ತು. ನಾನು ಕುತೂಹಲದಿಂದಲೇ ತಯಾರಾದೆ. ಹಾರುವ ಕ್ಷಣ ಬಂದಿತು. ಅವರು ತಿಳಿಸಿದ ತಕ್ಷಣ ಏರೋಪ್ಲೇನ್‌ನಿಂದ ಹಾರಿದೆ. ಹಾಗೆ ಏರೋಪ್ಲೇನ್‌ನಿಂದ ಕೆಳಗೆ ಹಾರಿದ ಬಳಿಕ ಸುಮಾರು 30 ಸೆಕೆಂಡುಗಳು ನಾವು ಗಾಳಿಯಲ್ಲಿ ಹಾರುತ್ತಿರುತ್ತೇವೆ. ಅದಕ್ಕೆ ಫ್ರೀಫಾಲ್‌ ಅಂತ ಹೆಸರು. ಆಗ ಪ್ಯಾರಚೂಟ್‌ ತೆರೆದಿರುವುದಿಲ್ಲ. ಯಾವ ಆಧಾರವೂ ಇರುವುದಿಲ್ಲ. ನಾವು ಗಾಳಿಯಲ್ಲಿ ಇರುತ್ತೇವೆ. ತೇಲುತ್ತಿರುತ್ತೇವೆ. ಭೂಮಿ ಕಡೆಗೆ ವೇಗವಾಗಿ ಧಾವಿಸುತ್ತಿರುತ್ತೇವೆ.

Ramesh Aravind shares Australia New Zealand travel experience vcs

ಆ ಕೆಲವು ಸೆಕೆಂಡುಗಳ ಅನುಭೂತಿ ದೈವಿಕವಾದದ್ದು. ವಿವರಿಸುವುದಕ್ಕೆ ಸಾಧ್ಯವೇ ಇಲ್ಲದ್ದು. ಭೂಮಿ ಆಕಾಶದ ಮಧ್ಯೆ ತೇಲುತ್ತಾ ಹಾರುತ್ತಾ ಎಲ್ಲವನ್ನೂ ಮರೆಯುವ ಗಳಿಗೆ. ನಿರಾಳವಾಗುವ ಕ್ಷಣ. ನೆಮ್ಮದಿ ದಕ್ಕುವ ಅಪೂರ್ವ ಕ್ಷಣ. ಕೆಳಗಿಳಿದು ಬಂದಾಗ ನನ್ನಲ್ಲೊಂದು ಅಪರಿಮಿತವಾದ ಶಾಂತಿ ನೆಲೆಸಿತ್ತು ಎಂದು ಅನ್ನಿಸುತ್ತಿತ್ತು. ಅಲ್ಲಿಂದ ನಂತರ ವಾಟರ್‌ ಸ್ಪೋಟ್ಸ್‌ರ್‍ಗೆ ಹೋಗಿದ್ದೆ. ವಾಟರ್‌ ಜೆಟ್‌ನಲ್ಲಿ ವೇಗವಾಗಿ ಸಾಗುತ್ತಾ ನೀರಿನಾಳಕ್ಕೆ ಹೋಗಿ ಅಲ್ಲಿಂದ ಜಿಗಿಯುವ ಆಟ ಅದು. ನೀರಿನಾಳದಲ್ಲಿ ಹವಳದ ದಂಡೆಗಳನ್ನು ನೋಡುವ ಖುಷಿ ಕಾಡುತ್ತದೆ. ನನಗೆ ಇಂಥಾ ಆಟಗಳೆಲ್ಲಾ ತುಂಬಾ ಇಷ್ಟ. ಸಾಮಾನ್ಯವಾಗಿ ನಾನು ನನ್ನ ಬಗ್ಗೆಯೇ ಕಪ್ಪು ಬಿಳಿ ಗಡ್ಡ ಇರುವ ಮಗು ಅಂತ ಹೇಳುತ್ತಾ ಇರುತ್ತೇನೆ. ಇಂಥಾ ವಾಟರ್‌ ರೈಡ್‌, ರೋಲರ್‌ ಕೋಸ್ಟರ್‌ ರೈಡ್‌ಗಳಿಗೆ ಹೋಗಿ ಖುಷಿ ಪಡುತ್ತೇನೆ. ನಿಮ್ಮಲ್ಲೂ ಅಂಥಾ ಒಂದು ಮಗು ಇರುತ್ತದೆ. ಆ ಮಗುವನ್ನು ಜೋಪಾನವಾಗಿ ನೋಡಿಕೊಳ್ಳಬೇಕು.

ಯಕ್ಷಗಾನ ವೇಷದಲ್ಲಿ ಮಿಂಚಿದ ರಮೇಶ್ ಅರವಿಂದ್!

ಅಲ್ಲಿಂದ ನಾವು ಆಸ್ಪ್ರೇಲಿಯಾಗೆ ಹೋದೆವು. ಅಲ್ಲಿ ಹಲವು ದಿನಗಳ ಕಾಲ ಇದ್ದೆ. ಅಲ್ಲಿ ತಿರುಗಾಡಿದೆ. ಅಲ್ಲಿನ ಜನ ಜೀವನ ನೋಡಿದೆ. ಅವರು ಕ್ರೀಡೆಗೆ, ಆರೋಗ್ಯಕ್ಕೆ ಕೊಡುವ ಮಹತ್ವ ನೋಡಿ ಖುಷಿಪಟ್ಟೆ. ಅಲ್ಲಿ ಆರನೇ ಕ್ಲಾಸಿನವರೆಗೆ ಮಕ್ಕಳು ಒಂದೇ ಪುಸ್ತಕ ಬ್ಯಾಗಲ್ಲಿ ಹಾಕಿಕೊಂಡು ಹೋಗುತ್ತಾರೆ. ಉಳಿದಂತೆ ಚಿಫ್ಸ್‌, ಚಾಕ್ಲೇಟ್‌ ಇತ್ಯಾದಿ ತಿಂಡಿಗಳಿರುತ್ತವೆ. ಅದನ್ನು ನೋಡಿ ನನಗೆ ಸಂತೋಷವಾಯಿತು. ಮಕ್ಕಳ ಬ್ಯಾಗು ಇರಬೇಕಾದದ್ದು ಹಾಗೆಯೇ ಅಲ್ಲವೇ.

ಈ ಎರಡು ದೇಶಗಳಿಗೆ ಹೋದಾಗ ನನಗೆ ಅತೀವ ತೃಪ್ತಿ ಕೊಟ್ಟಸಂಗತಿ ಎಂದರೆ ಪ್ರಕೃತಿ. ಅವರು ದೇವರು ಸೃಷ್ಟಿಸಿದ ಪ್ರಾಕೃತಿಕ ಸೌಂದರ್ಯವನ್ನು ಹಾಗೇ ಇಟ್ಟಿದ್ದಾರೆ. ವಿರೂಪಗೊಳಿಸಿಲ್ಲ. ಬಹಳ ಕಡೆಗಳಲ್ಲಿ ಚಂದದ ಜಾಗಗಳಲ್ಲಿ ಬೇಲಿ ಹಾಕಿ ಆ ಜಾಗದ ಚಂದವನ್ನೇ ಕಡಿಮೆಗೊಳಿಸುತ್ತಾರೆ. ಅವರು ಅದ್ಯಾವುದನ್ನೂ ಮಾಡಿಲ್ಲ. ಸಹಜ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ನಟನಾಗಿ ಕರ್ನಾಟಕವನ್ನು ಸುತ್ತಿದ ಅನುಭವದಲ್ಲಿ ಹೇಳುವುದಾದರೆ ಅಂಥಾ ಚಂದದ ಜಾಗಗಳು ಕರ್ನಾಟಕದಲ್ಲೂ ಇವೆ. ಆದರೆ ಅವುಗಳನ್ನು ಸ್ಪಷ್ಟವಾಗಿ ಜನರಿಗೆ ಹೇಳುವ ವ್ಯವಸ್ಥೆ ಇಲ್ಲ. ಆ ಜಾಗಗಳಿಗೆ ಸರಿಯಾಗಿ ತಲುಪುವಂಥಾ ಸೌಲಭ್ಯವೂ ಇರುವುದಿಲ್ಲ. ಇವೆರಡೂ ಸರಿ ಮಾಡಿದರೆ ನಮ್ಮ ಕರ್ನಾಟಕದ ಅತಿ ಚಂದದ ಜಾಗಗಳಿಗೂ ಎಲ್ಲರೂ ಹೋಗಬಹುದು. ಪರವಶರಾಗಬಹುದು.

 

ಪ್ರವಾಸದ ಸಂದರ್ಭದಲ್ಲಿಯೇ ಆಸ್ಪ್ರೇಲಿಯಾದ ಸಿಡ್ನಿ, ಮೆಲ್ಬೋರ್ನ್‌, ಬ್ರಿಸ್ಬೇನ್‌ ಕನ್ನಡ ಸಂಘಗಳಲ್ಲಿ ಸಂವಾದದಲ್ಲಿ ಪಾಲ್ಗೊಂಡೆ. ಆ ಸಂವಾದಗಳಲ್ಲಿ ಹೇಳಿದ ಮೂರು ವಿಚಾರಗಳನ್ನು ಹಂಚಿಕೊಂಡು ನನ್ನ ವಿದೇಶ ಪ್ರವಾಸದ ಅನುಭವ ಕಥನ ಕೊನೆಗೊಳಿಸುತ್ತೇನೆ.

1. ಬೂಮರಾಂಗ್‌

ಆಸ್ಪ್ರೇಲಿಯಾದಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದ. ಅವನಿಗೆ ಭಾರತದ ಬಗ್ಗೆ ಗೊತ್ತಿತ್ತು. ಆದರೆ ಕರ್ನಾಟಕದ ಬಗ್ಗೆ ಗೊತ್ತಿರಲಿಲ್ಲ. ನಾನು ಮ್ಯಾಪ್‌ ತೆಗೆದು ನಮ್ಮ ಕರ್ನಾಟಕವನ್ನು ತೋರಿಸಿದೆ. ಅವನು ಕರ್ನಾಟಕದ ಮ್ಯಾಪ್‌ ನೋಡಿ, ಐಠಿ ್ಝಟಟks ್ಝಜಿkಛಿ a ಚಿಟಟಞಛ್ಟಿa್ಞಜ ಎಂದ. ಬೂಮರಾಂಗ್‌ ಎಂದರೆ ಆಸ್ಪ್ರೇಲಿಯಾದ ಒಂದು ಆಯುಧದ ಹೆಸರು. ನೀವು ಯಾರಿಗಾದರೂ ಆ ಆಯುಧ ಬಳಸಿ ಘಾಸಿ ಮಾಡಿದ ನಂತರ ಮತ್ತೆ ನಿಮ್ಮ ಬಳಿಗೇ ಬರುವ ಆಯುಧ ಅದು. ಕರ್ನಾಟಕ ಆ ಆಯುಧದ ಥರಾನೇ ಕಾಣಿಸುತ್ತದೆ ಅಂತ ಅವನು ಹೇಳಿದ. ನಮ್ಮ ಕರ್ನಾಟಕವೂ ಹಾಗೆಯೇ ಅಲ್ವಾ ಅಂತ ಆ ಕ್ಷಣ ಹೊಳೆಯಿತು. ನಾವು ಎಲ್ಲಿಗೇ ಹೋದರೂ ಎಲ್ಲೇ ಇದ್ದರೂ ಕರ್ನಾಟಕ, ಕನ್ನಡ ನಮ್ಮ ಬಳಿಗೆ ಮತ್ತೆ ಮತ್ತೆ ವಾಪಸ್‌ ಬರುತ್ತಲೇ ಇರುತ್ತದೆ.

2. ನೀವು ಈಗ ಎಲ್ಲಿದ್ದೀರಿ!

ನೀವು ಸ್ನೇಹಿತರ ಮನೆಗೆ ಹೊರಟಿದ್ದೀರಿ. ಅರ್ಧ ದಾರಿಗೆ ಹೋದ ಮೇಲೆ ದಾರಿ ಗೊತ್ತಾಗಲಿಲ್ಲ. ಸ್ನೇಹಿತರಿಗೆ ಫೋನ್‌ ಮಾಡಿ ದಾರಿ ಕೇಳುತ್ತೀರಿ. ಆಗ ಅವರು, ಈಗ ನೀವು ಎಲ್ಲಿದ್ದೀರಿ ಎಂದು ಕೇಳುತ್ತಾರೆ. ನಿಮಗೆ ನೀವು ಎಲ್ಲಿದ್ದೀರಿ ಅಂತ ಗೊತ್ತಿದ್ದರೆ ಮಾತ್ರ ಅವನು ಸರಿಯಾದ ದಾರಿ ತೋರಿಸಬಲ್ಲ. ನಿಮಗೆ ನೀವು ಎಲ್ಲಿದ್ದೀರಿ ಅಂತ ಗೊತ್ತಿಲ್ಲದೇ ಹೋದರೆ ಸರಿಯಾದ ದಾರಿ ಸಿಗುವುದಿಲ್ಲ. ನೀವು ಮಾಲ್‌ಗಳಿಗೆ ಹೋದಾಗ ಅಲ್ಲಿ ್ಗಟ್ಠ a್ಟಛಿ hಛ್ಟಿಛಿ ಎಂದು ಬೋರ್ಡು ಹಾಕಿ ನಿಮಗೆ ಗೊತ್ತು ಮಾಡಿಸುವುದು ನೋಡಿರಬಹುದು. ನೀವು ಎಲ್ಲಿದ್ದೀರಿ ಎಂದು ನಿಮಗೆ ಗೊತ್ತು ಮಾಡಿಸುವ ಕ್ರಮ ಅದು. ಕರ್ನಾಟಕ ರಾಜ್ಯೋತ್ಸವ ಕೂಡ ನೀವು ಎಲ್ಲಿದ್ದೀರಿ, ಎಲ್ಲಿಂದ ಬಂದಿದ್ದೀರಿ ಎಂದು ಹೊಸ ಪೀಳಿಗೆಗೆ, ಮುಂದಿನ ಪೀಳಿಗೆಗೆ ತಿಳಿಸುವ ಕ್ರಮ. ಅದನ್ನು ನಾವು ಮನಸ್ಸಲ್ಲಿಟ್ಟುಕೊಳ್ಳಬೇಕು.

ನಟ ರಮೇಶ್ ಅರವಿಂದ್‌ ಮುಡಿಗೆ ಗೌರವ ಡಾಕ್ಟರೇಟ್: ರಾಣಿ ಚೆನ್ನಮ್ಮ ವಿವಿಯಿಂದ ಘೋಷಣೆ

3. ಋುಣ

ಆಸ್ಪ್ರೇಲಿಯಾದಲ್ಲಿ ಸುತ್ತಾಡುವಾಗ ಅಲೆಕ್ಸಾ ಕನ್ನಡ ನ್ಯೂಸ್‌ ಹಾಕು ಎಂದು ಹೇಳಿದಾಗ ಅಲೆಕ್ಸಾ ಕೆನಡಾದ ನ್ಯೂಸ್‌ ಅನ್ನು ಹಾಕಿತು. ಅದರಲ್ಲೊಂದು ವಿಶಿಷ್ಟಸುದ್ದಿ ಇತ್ತು. ಮಗನ 21ನೇ ವರ್ಷದ ಹುಟ್ಟುಹಬ್ಬದ ದಿನ ಮಗನಿಗೆ ಒಂದು ಉಡುಗೊರೆ ಕೊಟ್ಟಿದ್ದ. ಆ ಉಡುಗೊರೆ ಏನು ಎಂದರೆ ಆ 21 ವರ್ಷಗಳಲ್ಲಿ ಅಪ್ಪ ಮಗನಿಗೆ ಮಾಡಿದ ಅಷ್ಟೂಖರ್ಚುಗಳ ಬಿಲ್‌ ಫೈಲ್‌ ಇತ್ತು. ಜ್ವರ ಬಂದಾಗ ಡಾಕ್ಟರ್‌ ಬಳಿ ಕರೆದುಕೊಂಡು ಹೋಗಿದ್ದು, ಮೋಟಾರ್‌ ಸೈಕಲ್‌ ಕೊಡಿಸಿದ್ದು ಹೀಗೆ ಎಲ್ಲಾ ಬಿಲ್‌ಗಳು. ಆ ಬಿಲ್‌ ಅನ್ನು ನೋಡಿದ ಮಗ ಏನು ಮಾಡಿದ್ದಾನೆ ಎಂದರೆ ಅಪ್ಪ ಮಾಡಿದ್ದ ಅಷ್ಟೂಸಾಲವನ್ನು ತೀರಿಸಿಬಿಟ್ಟ. ಈ ಸುದ್ದಿ ಓದಿದಾಗ ನನಗೆ ಅನ್ನಿಸಿತು, ಕೆಲವು ಸಾಲಗಳನ್ನು ನಾವು ತೀರಿಸಬಹುದು. ಆದರೆ ಕೆಲವು ಋುಣಗಳನ್ನು ನಾವು ತೀರಿಸಲಾಗುವುದಿಲ್ಲ. ಕರ್ನಾಟಕದ, ಕನ್ನಡದ ಋುಣ ಅಂಥದ್ದು. ತಾಯಿ ಮತ್ತು ತಾಯಿನಾಡಿನ ಋುಣ ಯಾವತ್ತೂ ತೀರಿಸಲು ಸಾಧ್ಯವಿಲ್ಲ.

 

Follow Us:
Download App:
  • android
  • ios