Asianet Suvarna News Asianet Suvarna News

ಸೈಫ್​ ಅಲಿಯನ್ನು ಮದ್ವೆಯಾಗಿದ್ದು ಜೀವನದ ಅತಿದೊಡ್ಡ ತಪ್ಪು: ಮಗಳು ಸಾರಾಗೆ ಅಮೃತಾ ಸಿಂಗ್​ ಬುದ್ಧಿಮಾತು

 ಸೈಫ್​ ಅಲಿಯನ್ನು ಮದ್ವೆಯಾಗಿದ್ದು ಜೀವನದ ಅತಿದೊಡ್ಡ ತಪ್ಪು: ಮಗಳು ಸಾರಾಗೆ ಅಮೃತಾ ಸಿಂಗ್​ ಬುದ್ಧಿಮಾತು
 

Amrita Singh said  daughter Sara If she marries like me I will slap you suc
Author
First Published Nov 24, 2023, 3:34 PM IST

ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ನಟಿ ಸಾರಾ ಅಲಿ ಖಾನ್​ ಈ ದಂಪತಿ ಪುತ್ರಿ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.  

ಅಷ್ಟಕ್ಕೂ ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು.  

ಕರೀನಾ ಮನೆಯಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಗಂಡಂದಿರ ಫೋಟೋ! ಬಯಲಾಯ್ತು ಗುಟ್ಟು...

ಇದೀಗ ಅಮೃತಾ ಸಿಂಗ್​ಗೆ ತಾವು ಸೈಫ್​ ಅಲಿಯನ್ನು ಮದ್ವೆಯಾಗಿದ್ದು, ಜೀವನದಲ್ಲಿ ಮಾಡಿದ ಅತಿದೊಡ್ಡ ತಪ್ಪು ಎನಿಸಿದೆ. ಇದೇ ಕಾರಣಕ್ಕೆ, ಮಗಳು ಸಾರಾ ಅವರಿಗೆ ಬುದ್ಧಿ ಮಾತು ಹೇಳಿದ್ದಾರಂತೆ. ಈ ಕುರಿತು ಸಂದರ್ಶನವೊಂದರಲ್ಲಿ ಖುದ್ದು ಅಮೃತಾ ಸಿಂಗ್​ ಹೇಳಿಕೊಂಡಿದ್ದಾರೆ. ಒಂದು ವೇಳೆ  ಮಗಳು ನನ್ನಂತೆ ಮದುವೆ ಆದರೆ ಅವಳ ಕೆನ್ನೆಗೆ ಹೊಡೆಯುತ್ತೇನೆ ಎಂದು ಅಮೃತಾ ಸಿಂಗ್ ಹೇಳಿದ್ದಾರೆ.  ಮಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡುವ ವೇಳೆ ಅಮೃತಾ ಸಿಂಗ್​ ಅವರು,  ಸಾರಾ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ನನ್ನಂತೆ ನನ್ನ ಮಗಳು ಗುಟ್ಟಾಗಿ, ಸಣ್ಣ ವಯಸ್ಸಿನಲ್ಲಿ ಮದುವೆಯಾಗುವ ತಪ್ಪು ಮಾಡಿದರೆ ನಾನು ಅವಳ ಕೆನ್ನೆಗೆ ಹೊಡೆಯುತ್ತೇನೆ. ನನ್ನ ಮಕ್ಕಳು ಅದೇ ತಪ್ಪನ್ನು ಪುನರಾವರ್ತಿಸುವುದು ನನಗೆ ಇಷ್ಟವಿಲ್ಲ’ ಎಂದು ಅಮೃತಾ ಹೇಳಿದ್ದಾರೆ.  

ವಿಚ್ಛೇದನದ ಬಳಿಕ ಅಮೃತಾ ಸಿಂಗ್​ ಮತ್ತೆ ಮದುವೆಯಾಗಿಲ್ಲ. ಸೈಫ್​ ಅಲಿ ಕರೀನಾ ಜೊತೆ ಮದ್ವೆಯಾಗಿ ಮತ್ತೆ ಇಬ್ಬರು ಮಕ್ಕಳ ಅಪ್ಪನಾಗಿದ್ದಾರೆ. ಒಟ್ಟೂ ಅವರಿಗೆ ಈಗ ನಾಲ್ವರು ಮಕ್ಕಳು.  ಸಂದರ್ಶನವೊಂದರಲ್ಲಿ, ಸಾರಾ ಕೂಡ ತಮ್ಮ ತಾಯಿ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದರು. ನನ್ನ ಅಮ್ಮ  ದಾಂಪತ್ಯದಲ್ಲಿ ಸಂತೋಷ ಇರಲಿಲ್ಲ. ಒಟ್ಟಿಗೆ ಅತೃಪ್ತರಾಗುವುದಕ್ಕಿಂತ ಬೇರ್ಪಡುವುದು ಉತ್ತಮ ಎಂದು ಅವರು ಭಾವಿಸಿದರು. ತಂದೆಗೆ ವಿಚ್ಛೇದನ ನೀಡಿದ್ದು ಅವರ ಅತ್ಯುತ್ತಮ ನಿರ್ಧಾರದಲ್ಲಿ ಒಂದು. ಬಹಳ ವರ್ಷಗಳ ನಂತರ ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ ಎಂದಿದ್ದರು. 

ಸೂಪರ್​ಸ್ಟಾರ್​ ಬಾಲಕೃಷ್ಣ ವಿರುದ್ಧ ನಟಿ ವಿಚಿತ್ರಾ ಬಳಿಕ ರಾಧಿಕಾ ಆಪ್ಟೆ ಲೈಂಗಿಕ ದೌರ್ಜನ್ಯ ಆರೋಪ?

Follow Us:
Download App:
  • android
  • ios