ಮರು ಜನ್ಮವಿದ್ದರೆ ನನಗಿರುವ ಒಂದೇ ಆಸೆ ಎಂದರೆ... 80 ವರ್ಷದ ಅಮಿತಾಭ್ ಹೇಳಿದ್ದೇನು?
ಮುಂದಿನ ಜನ್ಮ ಇದ್ದರೆ ಏನಾಗಬಯಸುವಿರಿ ಎಂದು ಕೇಳಿದ ಪ್ರಶ್ನೆಗೆ ನಟ ಅಮಿತಾಭ್ ಬಚ್ಚನ್ ಹೇಳಿದ್ದೇನು ಗೊತ್ತಾ?
ಅಮಿತಾಭ್ ಬಚ್ಚನ್... (Amitabh Bachchan) ಬಾಲಿವುಡ್ ಕಂಡ ಅಪರೂಪದ ನಟ ಇವರು. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್ ಬಚ್ಚನ್ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ.
ಇದೀಗ ಕೌನ್ ಬನೇಗಾ ಕರೋರ್ಪತಿಯ 15ನೇ ಸೀಸನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿನ್ನೆ (ಆಗಸ್ಟ್ 31) ಅವರು ತಮ್ಮ ಬ್ಲಾಗ್‌ಗೆ ಬಂದ ಬಿಗ್ ಬಿ ತಮ್ಮ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15 ರ ಸಮಯದಲ್ಲಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಜನರು ತಮ್ಮ ಶಕ್ತಿಯಿಂದ ಹೇಗೆ ಬೆರಗಾಗುತ್ತಾರೆ ಎಂದು ಅವರು ಚರ್ಚಿಸಿದರು. ಜನರು ತಮಗೆ ಪದೇ ಪದೇ ಕೇಳುವ ಪ್ರಶ್ನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಜನರು ಪದೇ ಪದೇ ನನಗೆ ನನ್ನ ಫಿಟ್ನೆಸ್ ಬಗ್ಗೆ ಕೇಳುತ್ತಲೇ ಇರುತ್ತಾರೆ, ನನಗೆ ಈ ಎನರ್ಜಿ ಹೇಗೆ ಬಂತು ಎಂದು ಪ್ರಶ್ನಿಸುತ್ತಲೇ ಇರುತ್ತಾರೆ.
KBC 15: ಏಳು ಕೋಟಿಯ ಒಡೆಯನಾಗ್ತಾನಾ 21ರ ತರುಣ? ಉಸಿರು ಬಿಗಿಹಿಡಿಯುವ ವಿಡಿಯೋ ವೈರಲ್
ಆಗಾಗ್ಗೆ ಅದೇ ಬಗ್ಗೆ ಅವರನ್ನು ಕೇಳುತ್ತಾರೆ. ನಟನು ತನ್ನ ಹೆತ್ತವರಾದ ಹರಿವಂಶ್ ರಾಯ್ ಬಚ್ಚನ್ (Harivamsh Rai Bachchan) ಮತ್ತು ತೇಜಿ ಬಚ್ಚನ್ ಅವರನ್ನು ಈಗಿರುವ ರೀತಿಯಲ್ಲಿ ಬೆಳೆಸಿದ್ದಕ್ಕಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾನು ಇಷ್ಟೊಂದು ಫಿಟ್ ಆಗಿರಲು ಅವರೇ ಕಾರಣ. ಇದರಲ್ಲಿ ನನ್ನದೇನೂ ಇಲ್ಲ. ನನ್ನ ಶಕ್ತಿಯೂ ಅವರಿಂದಲೇ ಬಂದಿರುವುದು. ಇದಕ್ಕೂ ಮೀರಿ ಕೇಳಿದರೆ, ನಾನು ಹೀಗೆಯೇ ಹುಟ್ಟಿದ್ದೇನೆ ಎಂದು ಹೇಳಬೇಕು. ಇದರ ಬಗ್ಗೆ ಇನ್ನೂ ಕೇಳಬೇಕು ಎಂದರೆ ನೀವು ನನ್ನನ್ನು ಸೃಷ್ಟಿಸಿದವನನ್ನೇ ಕೇಳಬೇಕು ಎಂದು ನಕ್ಕಿದ್ದಾರೆ ಬಿಗ್ ಬಿ.
ಇನ್ನು ಮತ್ತೊಂದು ಜನ್ಮವಿದ್ದರೆ ಏನು ಆಗಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತಾಭ್ ಬಚ್ಚನ್ ಅವರು, ಈ ಜನ್ಮದಲ್ಲಿ ನನಗೆ ಬೇಕಾದಷ್ಟು ಸ್ಟಾರ್ಡಮ್ ಸಿಕ್ಕಿದೆ. ಕೋಟ್ಯಂತರ ಅಭಿಮಾನಿಗಳು ಸಿಕ್ಕಿದ್ದಾರೆ. ಈ ಅಭಿಮಾನ, ಸ್ಟಾರ್ಡಮ್ ಎಲ್ಲವೂ ಈ ಜನ್ಮಕ್ಕೆ ಸಾಕು. ಒಂದು ವೇಳೆ ಮುಂದಿನ ಜನ್ಮ ಎಂದೇನಾದರೂ ಇದ್ದರೆ, ನಾನು ಬಯಸುವುದು ನನ್ನ ತಂದೆ ತಾಯಿಯಾದ ಹರಿವಂಶ್ ಮತ್ತು ತೇಜಿ ಬಚ್ಚನ್ ಅವರ ಮಗನಾಗಿ ಮತ್ತೊಮ್ಮೆ ಹುಟ್ಟಲು ಬಯಸುತ್ತಾರೆ. ಇದೇ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರು ತಮ್ಮ ಜೀವನದಿಂದ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸವನ್ನು ತ್ಯಜಿಸಿದ ಸಮಯವನ್ನು ಕೂಡ ನೆನಪಿಸಿಕೊಂಡಿದ್ದಾರೆ. ತಪ್ಪು ಎಂದು ತಿಳಿದ ತಕ್ಷಣ ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅಮಿತಾಭ್ ಬಚ್ಚನ್ ವಿರುದ್ಧ ಹೀಗೆ ಫೋಟೋ ಮೂಲಕ ಸೇಡು ತೀರಿಸಿಕೊಂಡ ಪುತ್ರಿ ಶ್ವೇತಾ!