KBC 15: ಏಳು ಕೋಟಿಯ ಒಡೆಯನಾಗ್ತಾನಾ 21ರ ತರುಣ? ಉಸಿರು ಬಿಗಿಹಿಡಿಯುವ ವಿಡಿಯೋ ವೈರಲ್​

ಕೌನ್​ ಬನೇಗಾ ಕರೋರ್​ಪತಿಯ 15ನೇ ಸಂಚಿಕೆ ಕುತೂಹಲ ಹೆಚ್ಚಿಸಿದೆ. ಪಂಜಾಬ್​ನ ಈ ಯುವಕ ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರೆ ಏಳು ಕೋಟಿ ರೂಪಾಯಿ ಗೆಲ್ಲಲಿದ್ದಾರೆ. 
 

Jaskaran Singh is the first crorepati this season creates suspense over Rs 7 cr suc

ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವ ಗಾದೆ ಮಾತನ್ನು ಇದಾಗಲೇ ಹಲವಾರು ಮಂದಿ ಸಾಬೀತು ಮಾಡಿದ್ದಾರೆ. ಇನ್ನು ನಟನೆಯ ವಿಷಯಕ್ಕೆ ಬಂದರೆ ಕೆಲವು ಹಿರಿಯ ನಟರಿಗೆ ಸರಿಸಾಟಿ ಯುವಕರೂ ಇಲ್ಲವೇನೋ ಎನ್ನಿಸುತ್ತದೆ. ಅಂಥವರಲ್ಲಿ ಒಬ್ಬರು ನಟ ಅಮಿತಾಭ್ ಬಚ್ಚನ್ (Amitabh Bachchan). ಅಮಿತಾಭ್​ ಅವರಿಗೆ ಈಗ 80 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ, ಕೆಲವು ಕಡೆಗಳಲ್ಲಿ ಹಿನ್ನೆಗೆ ದನಿಯನ್ನೂ ನೀಡುತ್ತಾರೆ. ಈ ವಯಸ್ಸಿನಲ್ಲಿಯೂ ಬಿಡುವಿಲ್ಲದೇ ಅವಿರತವಾಗಿ ದುಡಿಯುತ್ತಿದ್ದಾರೆ ಅಮಿತಾಭ್​. ಈಗ ಅವರ ಜನಪ್ರಿಯ ಕಾರ್ಯಕ್ರಮ  ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ.  ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್​.

14 ಕಂತುಗಳನ್ನು ಪೂರೈಸಿರುವ ಈ ಷೋ, ಇದೀಗ 15ನೇ ಕಂತಿಗೆ ಪದಾರ್ಪಣೆ ಮಾಡಿದೆ. ಸಹಸ್ರಾರು ಮಂದಿ ಕೋಟ್ಯಧಿಪತಿಯಾಗುವ ಕನಸು ಹೊತ್ತು ಈ ಷೋನಲ್ಲಿ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಒಂದು ಕೋಟಿ ಗೆಲ್ಲುವ ಅವಕಾಶವಿತ್ತು. ಅದನ್ನೀಗ ಏಳು ಕೋಟಿಗೆ ಏರಿಸಲಾಗಿದೆ. ಪ್ರತಿ ಹಂತದಲ್ಲಿಯೂ ಕುತೂಹಲ ತಣಿಸುವ ಈ ಕಾರ್ಯಕ್ರಮದಲ್ಲಿ ಇದೀಗ 21 ವರ್ಷದ ಯುವಕನೊಬ್ಬ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.  

ಅಮಿತಾಭ್ ಪತ್ನಿ ಜಯಾ ಬಚ್ಚನ್​ಗೆ ಧರ್ಮೇಂದ್ರ ಮೇಲೆ ಕ್ರಷ್​ ಇತ್ತಂತೆ! ಗುಟ್ಟು ಈಗಾಯ್ತು ರಟ್ಟು

ಪಂಜಾಬ್ ಮೂಲದ 21 ವರ್ಷದ ಜಸ್ಕರನ್ ಸಿಂಗ್ (Jaskaran Singh) ಇನ್ನೇನು ಮಿಲಿಯನೇರ್ ಆಗಲು ಒಂದೇ ಹೆಜ್ಜೆ ಬಾಕಿ ಇದೆ. ಅವರು ಈಗ ಒಂದು ಕೋಟಿ ರೂಪಾಯಿಗಳನ್ನು ಗೆದ್ದೇ ಬಿಟ್ಟಿದ್ದಾರೆ. ಏಳು ಕೋಟಿ ರೂಪಾಯಿ ಗೆಲ್ಲುವುದು ಬಾಕಿ ಇದೆ.  ಮುಂಬರುವ ಸಂಚಿಕೆಯ ಪ್ರೋಮೋವನ್ನು ವಾಹಿನಿಯು ಬಿಡುಗಡೆ ಮಾಡಿದ್ದು,  ಇದನ್ನು ನೋಡಿದರೆ ಜಸ್ಕರನ್ ಮಿಲಿಯನೇರ್ ಆಗುವುದು ಸ್ಪಷ್ಟವಾಗಿದೆ. ಆದರೆ, 7 ಕೋಟಿ ಗೆಲ್ಲುತ್ತಾರೋ ಇಲ್ಲವೋ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅಮಿತಾಭ್ ಬಚ್ಚನ್ ಮತ್ತು ವಾಹಿನಿ 7 ಕೋಟಿ ಪ್ರಶ್ನೆಗೆ ಸಸ್ಪೆನ್ಸ್ ಕಾಯ್ದುಕೊಂಡಿದೆ. ಸೋನಿ ಟಿವಿ ಶೇರ್ ಮಾಡಿರುವ ವಿಡಿಯೋದಲ್ಲಿ ಜಸ್ಕರನ್ ಹಾಟ್ ಸೀಟ್ ಮೇಲೆ ಕುಳಿತಿದ್ದಾರೆ. ಅನೇಕ ಸ್ಪರ್ಧಿಗಳು ಮಿಲಿಯನೇರ್ ಆಗುವುದನ್ನು ನಾನು ನೋಡಿದ್ದೇನೆ ಎಂದು ಅಮಿತಾಬ್ ಬಚ್ಚನ್ ಮೊದಲಿನಿಂದಲೂ ಹೇಳುತ್ತಿದ್ದಾರೆ. ಇದಾದ ನಂತರ 16ನೇ ಪ್ರಶ್ನೆಯನ್ನು 7 ಕೋಟಿ ರೂ.ಗೆ ಕೇಳಿದ್ದು ಪ್ರೇಕ್ಷಕರ ಉಸಿರು ನಿಂತಿದೆ.

ಪಂಜಾಬ್‌ನ ಖಲ್ರಾ ನಿವಾಸಿಯಾದ ಜಸ್ಕರನ್, ಯುಪಿಎಸ್‌ಸಿ ಆಕಾಂಕ್ಷಿ ಮತ್ತು ಅಡುಗೆ ಮಾಡುವ ಕುಟುಂಬದಿಂದ ಬಂದವರು. ಅವರು ರೂ 7 ಕೋಟಿ ಪ್ರಶ್ನೆಯನ್ನು ಪ್ರಯತ್ನಿಸುತ್ತಾರೆಯೇ ಅಥವಾ ರೂ 1 ಕೋಟಿ ಗೆದ್ದ ನಂತರ ತ್ಯಜಿಸುತ್ತಾರೆಯೇ ಎಂಬುದನ್ನು ಚಾನಲ್ ಇನ್ನೂ ಬಹಿರಂಗಪಡಿಸಿಲ್ಲ. 'ಕೌನ್ ಬನೇಗಾ ಕರೋಡ್​ಪತಿ' ಸಂಚಿಕೆ ಸೆಪ್ಟೆಂಬರ್ 4 ಮತ್ತು 5 ರಂದು ಪ್ರಸಾರವಾಗಲಿದೆ.

Latest Videos
Follow Us:
Download App:
  • android
  • ios