ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 83ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲಿ ಜನ ಬೆಚ್ಚಗೆ ಮನೆಲ್ಲಿದ್ರೆ ಬಿಗ್ ಬಿ ಶೂಟಿಂಗ್ ನಲ್ಲಿ ಬ್ಯುಸಿ. ಯುವ ನಟರಿಗಿಂತ ಹೆಚ್ಚು ಸಿನಿಮಾ ಈಗ ಅಮಿತಾಬ್ ಬಚ್ಚನ್ ಕೈನಲ್ಲಿದೆ. 

ಇವ್ರನ್ನು ನಾವು ಭಾರತೀಯ ಚಿತ್ರರಂಗದ ಮಹಾವತಾರ ಅಂತ ಕರೆದ್ರೆ ತಪ್ಪಾಗೋದಿಲ್ಲ. ಸೂಪರ್ ಸ್ಟಾರ್ ಗಳಿಗೆಲ್ಲ ಸ್ಪೂರ್ತಿ ಈ ನಟ. ಇಳಿ ವಯಸ್ಸಿನಲ್ಲೂ ವಿಶ್ರಾಂತಿ ಪಡೆದುಕೊಳ್ದೆ ನಿರಂತರ ಕೆಲ್ಸ ಮಾಡ್ತಿರುವ ಇವರ ನಟನೆ ನೋಡಿ ಅನೇಕರು ಸೂಪರ್ ಸ್ಟಾರ್ಸ್ ಆಗಿದ್ದಾರೆ. ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ, ವಯಸ್ಸು ಹೆಚ್ಚಾಗ್ತಿದ್ದಂತೆ ವಿಶ್ರಾಂತಿ ಪಡೀಲೇಬೇಕು ಅನ್ನೋ ನಿಯಮ ಇಲ್ಲ, ಮನಸ್ಸಿದ್ರೆ ಯಾವ ವಯಸ್ಸಿನಲ್ಲಾದ್ರೂ ಕೆಲ್ಸ ಮಾಡ್ಬಹುದು ಎಂಬುದನ್ನು ಇವ್ರಿಂದ ನೋಡಿ ಕಲಿಯಬೇಕು. ಸಾಮಾನ್ಯವಾಗಿ ವರ್ಷ 65 ದಾಟುತ್ತಿದ್ದಂತೆ ಜನರು ರಿಲ್ಯಾಕ್ಸ್ ಮೂಡಿಗೆ ಹೀಗ್ತಾರೆ. ನಮ್ಮಿಂದ ಇನ್ನೇನು ಸಾಧ್ಯವಿಲ್ಲ ಅಂದ್ಕೊಂಡೇ ಫೀಲ್ಡ್ ನಿಂದ ಹೊರ ಬಂದು ಮನೆಯಲ್ಲಿ ವಿಶ್ರಾಂತಿ ಪಡೀತಾರೆ. ಆದ್ರೆ 83ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದಕ್ಕೆ ತದ್ವಿರುದ್ಧ. ವಯಸ್ಸು ಹೆಚ್ಚಾಗ್ತಿದ್ದಂತೆ ಅವ್ರ ಕೆಲ್ಸ ಡಬಲ್ ಆಗಿದೆ. ಜನರು 8 ಗಂಟೆ ಕೆಲ್ಸ ಮಾಡಿ ಸುಸ್ತಾದ್ರೆ ಇವರು 12 -15 ಗಂಟೆ ನಿರಂತರ ಕೆಲ್ಸ ಮಾಡಿಯೂ ದಣಿಯೋದಿಲ್ಲ.

83ನೇ ಬರ್ತ್ ಡೇ ಸಂಭ್ರಮದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) : 

ಅಮಿತಾಬ್ ಬಚ್ಚನ್ 1942, ಅಕ್ಟೋಬರ್ 11 ರಂದು ಜನಿಸಿದ್ದಾರೆ. ಜಂಜೀರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವ್ರು ಮತ್ತೆ ಹಿಂದೆ ತಿರುಗಿ ನೋಡಿಲ್ಲ. ತಮ್ಮ ಅಧ್ಬುತ ನಟನೆ ಮೂಲಕ ಬಾಲಿವುಡ್ ಬಿಗ್ ಬಿ ಎಂದೇ ಹೆಸರು ಪಡೆದಿರುವ ಅಮಿತಾಬ್ ಬಚ್ಚನ್ 1973ರಿಂದ ಈವರೆಗೆ ನಿರಂತರವಾಗಿ ಆಕ್ಟಿಂಗ್ ಮಾಡ್ತಿದ್ದಾರೆ. ಪ್ರತಿ ವರ್ಷ ಅವರ ಎರಡು – ಮೂರು ಸಿನಿಮಾ ತೆರೆಗೆ ಬರ್ತಿದೆ. ಅದ್ರ ಜೊತೆ ಜಾಹೀರಾತು, ಕೌನ್ ಬನೇಗಾ ಕರೋಡಪತಿ ರಿಯಾಲಿಟಿ ಶೋಗಳನ್ನೂ ಅಮಿತಾಬ್ ಬಚ್ಚನ್ ಮಿಂಚುತ್ತಿದ್ದಾರೆ. 1973ರಲ್ಲಿ ಜಂಜೀರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಅಮಿತಾಬ್ ಬಚ್ಚನ್ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೂಲಿ, ಶರಾಬಿ, ಆಜ್ ಕಾ ಅರ್ಜುನ್ ಸೇರಿದಂತೆ 1990ರವರೆಗೆ ಅಮಿತಾಬ್ ಬಚ್ಚನ್ ನಟಿಸಿದ ಚಿತ್ರವೆಲ್ಲ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

Amruthadhaare ಮೂಲಕ ಮನಗೆದ್ದ ಭೂಮಿಕಾ ಪುತ್ರ, ರಿಯಲ್​ ಅಪ್ಪನ ಜೊತೆ ಕ್ಯೂಟ್​ ಫೋಟೋಶೂಟ್​

ಅನಾರೋಗ್ಯದ ಮಧ್ಯೆ ಶೂಟಿಂಗ್ : 

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅಮಿತಾಬ್ ಬಳಲುತ್ತಿದ್ದಾರೆ. ಈ ವಿಷ್ಯವನ್ನು ಅಮಿತಾಬ್ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಹಂಚಿಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಬಿಗ್ ಬಿ ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗಿದ್ದರು. ಅವರ ಲಿವರ್ ಸೋಂಕಿಗೆ ಒಳಗಾಗಾಗಿತ್ತು. ಅನಾರೋಗ್ಯದ ಮಧ್ಯೆಯೂ ನಟನೆ ಬಿಡದ ಅಮಿತಾಬ್ ಬಚ್ಚನ್ 2000 ರಿಂದ 2019 ರವರೆಗೆ 56 ಸಿನಿಮಾ ಮಾಡಿ ದಾಖಲೆ ಬರೆದ್ರು. 2019ರಲ್ಲಿ ಮತ್ತೆ ಆರೋಗ್ಯ ಸಮಸ್ಯೆಗೆ ಒಳಗಾದ ಅಮಿತಾಬ್ ಬಚ್ಚನ್, ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ರೂ ಅಮಿತಾಬ್ ರೆಸ್ಟ್ ಮಾಡ್ಲಿಲ್ಲ. 

ನಟನ ಕಣ್ಣಲ್ಲಿ ಕಣ್ಣಿಟ್ಟು ನಂಗೆ ಪತಿ ಸಿಕ್ಕರೂ ಎಂದ ರಾಖಿ ಸಾವಂತ್: ಕಕ್ಕಾಬಿಕ್ಕಿಯಾದ ನಟ

2020ರಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ, ಕೊರೊನಾ ಗೆದ್ದು ಬಂದ ಅಮಿತಾಬ್ ಬಚ್ಚನ್, 2019ರಿಂದ 2024ರ ಟೈಂನಲ್ಲಿ ಎಂಟು ಸಿನಿಮಾ ಮಾಡಿದ್ದಾರೆ. ಅಮೀರ್ ಖಾನ್, ಶಾರುಖ್ ಖಾನ್ ಸೇರಿದಂತೆ ಯಾವುದೇ ನಟರು ಈ ಅವಧಿಯಲ್ಲಿ ಇಷ್ಟೊಂದು ಸಿನಿಮಾ ಮಾಡಿಲ್ಲ. 83ನೇ ವಯಸ್ಸಿನಲ್ಲೂ ಅಮಿತಾಬ್ ಖಾಲಿ ಕುಳಿತಿಲ್ಲ. ಅಮಿತಾಬ್ ಬಚ್ಚನ್ ಬ್ರಹ್ಮಾಸ್ತ್ರ ಭಾಗ 2, ಕಲ್ಕಿ 2898 AD ಭಾಗ 2 ಮತ್ತು ಆಂಖೇನ್ ಭಾಗ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಶೂಟಿಂಗ್ ಜೊತೆ ರಿಯಾಲಿಟಿ ಶೂಟಿಂಗ್ ಮಾಡ್ತಿರುವ ಬಚ್ಚನ್ ಗೆ ಸುಸ್ತಾಗಲ್ವಾ?