Asianet Suvarna News Asianet Suvarna News

ಪತಿಯೆದುರೇ ಭಾಗ್ಯಶ್ರೀಯನ್ನು ಎತ್ತಿಕೊಂಡ ಸೈಫ್​, ಅಭಿಷೇಕ್​ : ಮುಂದೇನಾಯ್ತು?

ಮೈನೆ ಪ್ಯಾರ್​ ಕಿಯಾ ಮೂಲಕ ಬಾಲಿವುಡ್​ನಲ್ಲಿ ಹಂಗಾಮಾ ಸೃಷ್ಟಿಸಿದ್ದ ನಟಿ ಭಾಗ್ಯಶ್ರೀ ಪತಿ ಹಿಮಾಲಯ ದಾಸಾನಿ ಅವರು ಹೋಳಿ ಹಬ್ಬದ ಕುತೂಹಲದ ನೆನಪೊಂದನ್ನು ಹಂಚಿಕೊಂಡಿದ್ದಾರೆ.  ಏನದು? 
 

Amitabh Bachchan holi party when Abhishek and Saif Ali Khan thrown Bhagyashree in color tub
Author
First Published Mar 8, 2023, 5:56 PM IST

ಮೈನೆ ಪ್ಯಾರ್​ ಕಿಯಾ (Maine Pyar Kiya) ಮೂಲಕ ಭಾರಿ ಖ್ಯಾತಿ ಪಡೆದಿದ್ದ ತಾರೆ ಭಾಗ್ಯಶ್ರೀ. 1989ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಭಾಗ್ಯಶ್ರೀಯವರ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತು. ಮೈನೆ ಪ್ಯಾರ್ ಕಿಯಾ ಸಿನಿಮಾದ ಅವಕಾಶ ಭಾಗ್ಯಶ್ರಿಗೆ ಬಂದಾಗ ಅವರಿಗಿನ್ನೂ 20 ವರ್ಷ ವಯಸ್ಸು. ಚೆನ್ನಾಗಿ ಓದುತ್ತಿದ್ದ ಇವರಿಗೆ ವಿದೇಶಕ್ಕೆ ಹೋಗಿ ಮುಂದೆ ಕಲಿಯುವ ಆಸೆ. ಇದೇ  ಕಾರಣಕ್ಕೆ  ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರಂತೆ. ಸಲ್ಮಾನ್ ಖಾನ್ ಜೊತೆ ನಟಿಸುವ ನಟಿಯರು ತುದಿಗಾಲಿನಲ್ಲಿ ನಿಂತಿದ್ದ ವೇಳೆಯಲ್ಲಿ ಭಾಗ್ಯಶ್ರೀ (Bhagyashree) ಅವಕಾಶ ದೊರೆತಿದ್ದರೂ ಏಳು ಬಾರಿ ಅವಕಾಶ ನಿರಾಕರಿಸಿದ್ದರು. ಆದರೆ ಭಾಗ್ಯಶ್ರಿ ತಂದೆಗೆ  ಮಗಳು ಭಾರತದಲ್ಲಿಯೇ ಓದಲಿ ಎಂಬುದು  ಆಸೆಯಾಗಿತ್ತು. ಅದಕ್ಕೆ ಸಿನಿಮಾದಲ್ಲಿ ಆಫರ್​ ಬಂದದ್ದು ಒಂದು ಕಾರಣವಾಯಿತು. ಸಿನಿಮಾ ಒಪ್ಪಿಕೊಂಡ ಭಾಗ್ಯಶ್ರೀ  ಕೊನೆಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆ ಕೈಬಿಟ್ಟರು. ಒಲ್ಲದ ಮನಸ್ಸಿನಿಂದಲೇ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದು ಬ್ಲಾಕ್​ ಬಸ್ಟರ್​ ಆಯಿತು. ಮೈನೆ ಪ್ಯಾರ್‌ ಕಿಯಾ ಬಿಡುಗಡೆ ಆದ ಬಳಿಕ  ಮೂರು ವರ್ಷ  ವಿದ್ಯಾಭ್ಯಾಸ ಮುಗಿಸಿ ನಟನೆಯತ್ತ ವಾಲಿದರು.  ಕನ್ನಡದಲ್ಲಿ 'ಅಮ್ಮಾವ್ರ ಗಂಡ', 'ಗಂಡುಗಲಿ ಕುಮಾರರಾಮ', 'ಸೀತಾರಾಮ ಕಲ್ಯಾಣ' ಸಿನಿಮಾಗಳಲ್ಲಿ ನಟಿಸಿದರು. ಈ ಹೋಳಿ ಹಬ್ಬದ ಸಂದರ್ಭದಲ್ಲಿ ಭಾಗ್ಯಶ್ರೀ ಅವರ ಜೀವನದ ಒಂದು ಕುತೂಹಲದ ಘಟನೆ ವೈರಲ್​ ಆಗಿದೆ.

ಹೌದು. ಎಲ್ಲೆಡೆ ಹೋಳಿ (Holi) ಹಬ್ಬದ ಸಂಭ್ರಮ ಎರಡು ಮೂರು ದಿನಗಳಿಂದಲೇ  ಶುರುವಾಗಿದೆ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ದಿನ ಓಕುಳಿಯಾಟ ಆಡುತ್ತಿದ್ದಾರೆ. ಬಣ್ಣ ಬಣ್ಣವನ್ನು ಎರಚಿಕೊಂಡು ಸಂತಸಪಡುತ್ತಿದ್ದಾರೆ. ಇದು ಸಾಮಾನ್ಯಜನರ ಮಾತಾದರೆ  ಬಾಲಿವುಡ್ ಸೆಲೆಬ್ರಿಟಿಗಳೂ ಹೋಳಿ ಆಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣವನ್ನು ತೆರೆದರೆ ಸೆಲೆಬ್ರಿಟಿಗಳ ಆಟದ ಪರಿಯನ್ನು ನೋಡಬಹುದಾಗಿದೆ. ಇದೇ ರೀತಿ ಹಿಂದೊಮ್ಮೆ ಭಾಗ್ಯಶ್ರೀ ಹೋಳಿ ಆಟವಾಡಿದ್ದ ದಿನದ ಕುರಿತು ಈಗ ವೈರಲ್​ ಆಗಿದೆ. ಮೈನೆ ಪ್ಯಾರ್​ ಕಿಯಾದ ನಂತರ ಸಕತ್​ ಫೇಮಸ್​ ಆಗಿದ್ದ ನಟಿಯ ಬದುಕಿನ ಕುತೂಹಲದ ಘಟನೆಯಿದು. ಸೆಲೆಬ್ರಿಟಿಗಳು ಎಂದಾಕ್ಷಣ ಎಲ್ಲವೂ ಸರಿಯಾಗಿಯೇ  ಇರುತ್ತದೆ ಎಂದೇನಲ್ಲ. ಅದರಲ್ಲಿಯೂ ನಟಿಯರ ವಿಷಯಕ್ಕೆ ಬಂದಾಗ, ಅದರಲ್ಲಿಯೂ ಅವರು ಮದುವೆಯಾದ ಬಳಿಕ ಎಲ್ಲ ಪತಿಯಂದಿರ ಮನೋಭಾವವೂ ಈ ಬಣ್ಣದ ಲೋಕಕ್ಕೆ ಹೊಂದಿಕೊಳ್ಳುತ್ತದೆ ಎಂದೂ ಅಲ್ಲ. ಅಂಥದ್ದೇ ಒಂದು ಸ್ಥಿತಿಯನ್ನು ಭಾಗ್ಯಶ್ರೀ ಅನುಭವಿಸಿದ್ದರು. ಇದನ್ನು ಖುದ್ದು ಅವರ ಪತಿ ಹಿಮಾಲಯ ದಾಸಾನಿ ಅವರೇ ಶೇರ್​  ಮಾಡಿಕೊಂಡಿದ್ದಾರೆ.

ಒಂದೇ ಹುಡುಗಿ ಬೋರ್, ಕಂಟ್ರೋಲ್‌ಗೆ ಬರುವವರೆಗೂ ಮದ್ವೆ ಆಗಲ್ಲ: ಸಲ್ಲು ಹೇಳಿದ್ದ ಮಾತನ್ನ ರಿವೀಲ್ ಮಾಡಿದ ಭಾಗ್ಯಶ್ರೀ

ಆಗಿದ್ದೇನೆಂದರೆ, ಮೈನೆ ಪ್ಯಾರ್​ ಕಿಯಾ  ಬಿಡುಗಡೆಯಾಗಿ ಒಂದೇ ವರ್ಷದಲ್ಲಿ ಅಂದರೆ 1990ರಲ್ಲಿ ಭಾಗ್ಯಶ್ರೀ ಅವರ ಮದುವೆ ಹಿಮಾಲಯ ದಾಸಾನಿ (Himalaya Dasani) ಅವರ ಜೊತೆ ನೆರವೇರಿತು. ಇವರಿಗೆ ಚಿತ್ರರಂಗ ಅಷ್ಟಕ್ಕಷ್ಟೇ. ಆದರೆ ಭಾಗ್ಯಶ್ರೀ ಉತ್ತುಂಗಕ್ಕೆ ಏರಿದ್ದರು.  ಅಮಿತಾಭ್​ ಬಚ್ಚನ್​ ಅವರು  ಹೋಳಿ ಪಾರ್ಟಿ ಏರ್ಪಡಿಸಿದ್ದರು. ಇದಕ್ಕೆ ಅವರು ಭಾಗ್ಯಶ್ರೀ ದಂಪತಿಯನ್ನು ಆಹ್ವಾನಿಸಿದ್ದರು. ಅಮಿತಾಭ್​ ಬಚ್ಚನ್ (Amitabh Bhacchan) ತಮ್ಮ ಜುಹು ಬಂಗಲೆಯಲ್ಲಿ ಹೋಳಿ ಪಾರ್ಟಿ ನಡೆದಿತ್ತು.  ರಂಗು ರಂಗಿನ ಈ ಹೋಳಿ ಪಾರ್ಟಿಯಲ್ಲಿ ದೊಡ್ಡ ಟಬ್ ಇಡಲಾಗಿತ್ತು. ಈ ಪಾರ್ಟಿಗೆ ಭಾಗ್ಯಶ್ರೀ ಕೂಡ ಆಗಮಿಸಿದ್ದರು.  ಬಿಗ್ ಬಿ ಅವರ ಹೋಳಿ ಪಾರ್ಟಿಯನ್ನು ತಲುಪಿದಾಗ, ಅಭಿಷೇಕ್ ಬಚ್ಚನ್ ಮತ್ತು ಸೈಫ್ ಅಲಿ ಖಾನ್ ಈ ದಂಪತಿ ಬಳಿ  ಓಡಿ ಬಂದರು. ಪತಿಯ ಎದುರೇ  ಭಾಗ್ಯಶ್ರೀಯನ್ನು ತಮ್ಮ ಮಡಿಲಲ್ಲಿ ಎತ್ತಿಕೊಂಡ ಅವರು ಆಕೆಯನ್ನು ಬಣ್ಣದ ತೊಟ್ಟಿಗೆ ಎಸೆದರು.

ತಮ್ಮ ಎದುರೇ ಹೀಗೆ ಆಗಿದ್ದನ್ನು ನೋಡಿ ನಾನು ಸಹಿಸಿಕೊಳ್ಳಲಿಲ್ಲ. ನನ್ನ ಕೋಪ ನೆತ್ತಿಗೇರಿತು ಎಂದಿದ್ದಾರೆ ಭಾಗ್ಯಶ್ರೀ ಪತಿ ಹಿಮಾಲಯ.  ನಾನು ಭಾಗ್ಯಶ್ರೀ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದೆ. ಯಾಕೆಂದರೆ ಅವಳು ನನ್ನ ಜೊತೆ ಹೋಳಿ ಆಡದಿದ್ದರೂ ಬಚ್ಚನ್ ಪಾರ್ಟಿಯಲ್ಲಿ ಬಿರುಸಾಗಿ ಹೋಳಿ ಆಡಿದಳು. ನನ್ನ ಎದುರೇ ಇಬ್ಬರು ನಟರು ಆಕೆಯನ್ನು ಟಬ್​ನಲ್ಲಿ ಎತ್ತಿಕೊಂಡು ಮುಳುಗಿಸಿದ್ದಾಗ ನನಗೆ ನೋಡಲು ಆಗಲಿಲ್ಲ. ನಾನು ಭಾಗ್ಯಶ್ರೀ ಮೇಲೆ ಕೋಪ ಮಾಡಿಕೊಂಡೆ. ನನ್ನ ಜೊತೆ ಆಡಲು ಬಾ ಎಂದರೆ ನಿರಾಕರಿಸಿದ್ದವಳು ಇಲ್ಲಿ ಹೀಗೆ ಮಾಡಿದ್ದಳು.  ಆನಂತರ  ಮುಂದಿನ ವರ್ಷ ನನ್ನೊಂದಿಗೇ  ಹೋಳಿ ಆಡುವುದಾಗಿ ಭಾಗ್ಯಶ್ರೀ ಭರವಸೆ ನೀಡಿದಾಗ ನಾನು ಕ್ಷಮಿಸಿದೆ ಎಂದಿದ್ದಾರೆ. ಸದ್ಯ ಭಾಗ್ಯಶ್ರೀ ಸಿನಿಮಾದಿಂದ ದೂರವಿದ್ದಾರೆ. ಈಗ ಅವರ ಪುತ್ರಿ ಅವಂತಿಕಾ (Avantika) ದಾಸಾನಿ ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. 

54ನೇ ವಯಸ್ಸಿನಲ್ಲೂ ಹೇಗಿದ್ದಾರೆ ನೋಡಿ ಸಲ್ಮಾನ್‌ ಖಾನ್‌ ಮೊದಲ ನಾಯಕಿ!

Follow Us:
Download App:
  • android
  • ios