ಪಿರಿಯಡ್ಸ್ ಬಗ್ಗೆ ತಾತನ ಜೊತೆ ಮುಕ್ತವಾಗಿ ಮಾತಾಡ್ತೀನಿ; ಅಮಿತಾಭ್ ಮೊಮ್ಮಗಳು ನವ್ಯಾ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಲೈಂಗಿಕತೆ ಮತ್ತು ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಲೈಂಗಿಕತೆ ಮತ್ತು ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ದೇಶದಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಪ್ರವೇಶ ನೀಡಲು ಇನ್ನು ತುಂಬಾ ದೂರ ಇದೆ. ಆದರೆ ಇಂದು ತಾನು ಅಜ್ಜನೊಂದಿಗೆ ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತೇನೆ ಇದು ಪ್ರಗತಿಯ ಸಂಕೇತವಾಗಿದೆ ಎಂದು ಹೇಳಿದರು.
ಋತುಚಕ್ರ ಮತ್ತು ಮಾನಸಿಕ ಆರೋಗ್ಯ ವಿಚಾರಗಳನ್ನು ನಿಷೇಧಿತ ವಿಚಾರ ಎನ್ನುವ ಹಾಗೆ ನೋಡುವುದನ್ನು ಮೊದಲು ನಿಲ್ಲಿಸಬೇಕು. ಈ ವಿಚಾರಗಳನ್ನು ಸ್ನೇಹಿತರು, ಕುಟುಂಬ ಮತ್ತು ಗೆಳೆಯರೊಂದಿಗೆ ಮುಕ್ತವಾಗಿ ಚರ್ಚಿಸುವಂತೆ ಆಗಬೇಕು ಎಂದು ನವ್ಯಾ ಹೇಳಿದರು.
'ಋತುಚಕ್ರವನ್ನು ಅನೇಕ ಸಮಯದಿಂದ ನಿಷೇಧಿತ, ಮುಜುಗರದ ಸಂಗತಿ ಎನ್ನುವ ಹಾಗೆ ಬಿಂಬಿಸಲಾಗಿದೆ. ಆದರೆ ಈಗ ಕೊಂಚ ಮಟ್ಟಿನ ಪ್ರಗತಿ ಆಗಿದೆ. ನಾನು ಇಂದು ನನ್ನ ತಾತನೊಂದಿಗೆ ಕುಳಿತು ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ, ಇದು ಪ್ರಗತಿಯ ಸಂಕೇತವಾಗಿದೆ' ಎಂದರು. ಈ ವಿಷಯಗಳ ಬಗ್ಗೆ ಮುಕ್ತ ಸಂಭಾಷಣೆಗಳು ಕೇವಲ ಮಹಿಳೆಯರು ಮತ್ತು ಯುವತಿಯರಿಗೆ ಮಾತ್ರ ಸೀಮಿತಗೊಳಿಸಬಾರದು ಎಂದು ನವ್ಯಾ ಹೇಳಿದರು. 'ಈ ಬಗ್ಗೆಯ ಸಂಭಾಷಣೆಯಯಲ್ಲಿ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಸೇರಿಕೊಂಡಿರುವುದು ಅದ್ಭುತವಾಗಿದೆ. ಮನೆಯಿಂದನೆ ಬದಲಾವಣೆ ಪ್ರಾರಂಭವಾಗಬೇಕಿದೆ. ಏಕೆಂದರೆ ಬದಲಾವಣೆ ಯಾವಾಗಲೂ ಮನೆಯಲ್ಲಿ ಪ್ರಾರಂಭವಾಗುತ್ತದೆ. ಮಹಿಳೆಯರು ಸಮಾಜಕ್ಕೆ ಹೋಗುವ ಮೊದಲು ಮತ್ತು ಅದರ ಬಗ್ಗೆ ಮಾತನಾಡುವ ಮೊದಲು ಮನೆಯಲ್ಲಿ ತಮ್ಮ ಸ್ವಂತ ದೇಹದ ಬಗ್ಗೆ ಆರಾಮದಾಯಕವಾಗಿರಬೇಕು' ಎಂದು ನವ್ಯಾ ಅಭಿಪ್ರಾಯ ಪಟ್ಟರು.
Periods panties ಬಳಸೋ ಮುನ್ನ ಇವಿಷ್ಟು ಗೊತ್ತಿದ್ದರೆ ಒಳ್ಳೆಯದು
ಇನ್ನು ಮಾತು ಮುಂದುವರೆಸಿದ ನವ್ಯಾ ನನಗೆ ಬೇಕಾದುದನ್ನು ಮಾತನಾಡಲು ಪ್ರೋತ್ಸಾಹಿಸುವಂತ ಕುಟುಂಬದಲ್ಲಿ ಬೆಳೆಯುವ ಅದೃಷ್ಟ ನನಗೆ ಸಿಕ್ಕಿದೆ' ಎಂದು ಹೇಳಿದರು. ಅಮಿತಾಭ್ ಮೊಮ್ಮಗಳು ಸಿನಿಮಾರಂಗಕ್ಕೆ ಯಾವಾಗ ಬರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ ನವ್ಯಾ ಇದುವರೆಗೂ ಚಿತ್ರರಂಗದ ಎಂಟ್ರಿ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.
Women health :7 ದಿನಗಳವರೆಗೆ ಪಿರಿಯಡ್ಸ್ ಬ್ಲೀಡಿಂಗ್ ಆಗುತ್ತಾ? ತಜ್ಞರು ಏನ್ ಹೇಳ್ತಾರೆ…
ನವ್ಯಾ ಆರಾ ಹೆಲ್ತ್ ಸಂಸ್ಥೆಯ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನವ್ಯಾ ಶಿಕ್ಷಣ ಕ್ಷೇತ್ರಗಳಲ್ಲಿ ಲಿಂಗ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆರ್ಥಿಕ ಸ್ವಾತಂತ್ರ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಮತ್ತು ಕೌಟುಂಬಿಕ ಹಿಂಸೆ ಈ ಎಲ್ಲದರ ಬಗ್ಗೆಯೂ ನವ್ಯಾ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ನವ್ಯಾ ಸಿನಿಮಾರಂಗಕ್ಕೆ ಯಾವಾಗ ಬರ್ತಾರೆ ಎಂದು ಸಿನಿ ಪ್ರಿಯರು ಕಾಯುತ್ತಿದ್ದಾರೆ.