Periods panties ಬಳಸೋ ಮುನ್ನ ಇವಿಷ್ಟು ಗೊತ್ತಿದ್ದರೆ ಒಳ್ಳೆಯದು
ಮಹಿಳೆಯರ ಮೆನ್ ಸ್ಟ್ರುವಲ್ ಹೈಜಿನ್ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಗಿದೆ. ಇದೀಗ ಇಲ್ಲಿ ಇನ್ನಷ್ಟು ಹೊಸ ಮಾಹಿತಿ ತಿಳಿಸಲಾಗಿದೆ. ಇದನ್ನು ನೀವು ತಿಳಿದುಕೊಳ್ಳಲೇಬೇಕು. ಇಲ್ಲಿಯವರೆಗೆ ಪಿರಿಯಡ್ಸ್ ಸಮಯದಲ್ಲಿ ಟ್ಯಾಂಪೂನ್ಸ (Tampons), ಸ್ಯಾನಿಟರಿ ಪ್ಯಾಡ್ (Sanitary Pad) ಗಳನ್ನು ನೀವು ಸಾಕಷ್ಟು ಬಳಸಿರಬಹುದು, ಆದರೆ ಇಂದು ನಾವು ನಿಮಗೆ ಪಿರಿಯಡ್ಸ್ ಪ್ಯಾಂಟಿಗಳ ಬಗ್ಗೆ ಹೇಳುತ್ತೇವೆ ಮತ್ತು ಅದು ಸುರಕ್ಷಿತವೇ? ಅಥವಾ ಅಸುರಕ್ಷಿತವೇ ಎಂದು ನಿಮಗೆ ತಿಳಿಸುತ್ತೇವೆ?
ಸ್ಯಾನಿಟರಿ ಪ್ಯಾಡ್‌ಗಳಿಂದ ಹಿಡಿದು, ಟ್ಯಾಂಪೂನ್‌ಗಳು, ಸಿಲಿಕಾನ್ ಕಪ್‌ಗಳಂತಹ ಅನೇಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಋತುಸ್ರಾವದಲ್ಲಿ ಬಳಸಲು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ, ಇದನ್ನು ಮೀರಿ, ಪೀರಿಯಡ್ ಪ್ಯಾಂಟಿಗಳು (period panties) ಸಹ ತುಂಬಾ ಟ್ರೆಂಡ್ ನಲ್ಲಿವೆ ಮತ್ತು ಅದರ ಬಗ್ಗೆ ನೀವು ಸಾಕಷ್ಟು ಜಾಹೀರಾತುಗಳನ್ನು ನೋಡಿರಬಹುದು.
ಇವುಗಳ ಬಗ್ಗೆ ಕೇಳಿದಾಗ ಮಹಿಳೆಯರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ ಈ ಪಿರಿಯಡ್ಸ್ ಪ್ಯಾಂಟಿ ಎಂದರೇನು? ಇದನ್ನು ಹೇಗೆ ಬಳಸಲಾಗುತ್ತದೆ ಮತ್ತು ಅದನ್ನು ಬಳಸುವುದು ಎಷ್ಟು ಸುರಕ್ಷಿತ? ಇಂದು ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸೋಣ ಮತ್ತು ಋತುಚಕ್ರದ ಪ್ಯಾಂಟೀಸ್ ಬಗ್ಗೆ ಎಲ್ಲವನ್ನೂ ನಿಮಗೆ ಹೇಳೋಣ...
ಪೀರಿಯಡ್ ಪ್ಯಾಂಟಿ ಎಂದರೇನು?
ಸ್ಯಾನಿಟರಿ ಪ್ಯಾಡ್‌ಗಳು, ಟ್ಯಾಂಪೂನ್‌ಗಳು, ಸಿಲಿಕಾನ್ ಕಪ್‌ಗಳ ನಂತರ ಪೀರಿಯಡ್ ಪ್ಯಾಂಟಿಗಳು ಹೊಸ ಪಿರಿಯಡ್ಸ್ ಉತ್ಪನ್ನ. ಹೆಸರಿನ ಅರ್ಥವು ಸ್ಯಾನಿಟರಿ ಪ್ಯಾಡ್‌ನಂತೆ (sanitary pad) ಕಾರ್ಯನಿರ್ವಹಿಸುವ ಪ್ಯಾಂಟಿಗಳು. ಇದನ್ನು ಎರಡು ಟ್ಯಾಂಪೂನ್‌ಗಳಿಗೆ ಸಮನಾದ ರಕ್ತವನ್ನು ಹೀರಿಕೊಳ್ಳುವಂತೆ ತಯಾರು ಮಾಡಲಾಗಿದೆ ಎಂದು ಹೇಳಲಾಗುತ್ತೆ. ಅವುಗಳನ್ನು ತೊಳೆಯಬಹುದು ಮತ್ತು ಮರುಬಳಕೆ ಮಾಡಬಹುದು, ಇದು ಅವುಗಳನ್ನು ಹೆಚ್ಚು ಮಿತವ್ಯಯಕಾರಿ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುತ್ತದೆ.
ಪಿರಿಯಡ್ಸ್ ಪ್ಯಾಂಟೀಸ್ ನ ಪ್ರಯೋಜನಗಳು
ಇವುಗಳನ್ನು ಧರಿಸುವುದು ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಹೆಚ್ಚು ಹಗುರ. ಅವುಗಳನ್ನು ದೀರ್ಘಕಾಲದವರೆಗೆ ಧರಿಸಬಹುದು. ವಿಶೇಷವಾಗಿ ರಾತ್ರಿಯಿಡೀ ಧರಿಸಬಹುದು, ಇದು ಸೋರಿಕೆಯಿಂದ (leakage) ರಕ್ಷಣೆಯನ್ನು ಒದಗಿಸುತ್ತದೆ. ಯಾವುದೇ ರೀತಿಯಲ್ಲಿ ಲೀಕ್ ಆಗೋದಿಲ್ಲ.
ಪ್ರಯಾಣದ ಸಮಯದಲ್ಲಿ ಇದು ಸುರಕ್ಷಿತ ಮತ್ತು ಸುಲಭವಾಗಿರುತ್ತದೆ, ಟ್ರಾವೆಲ್ ಮಾಡುವಾಗ ಪ್ಯಾಡ್ ಪದೇ ಪದೇ ಬದಲಾಯಿಸುವ ತೊಂದರೆಯೂ ಇದರಿಂದ ತಪ್ಪುತ್ತೆ.
ಈ ಪಿರಿಯಡ್ಸ್ ಪ್ಯಾಡ್ ಪರಿಸರ ಸ್ನೇಹಿಯೂ ಹೌದು. ಆದರೆ ಮತ್ತೊಂದೆಡೆ ಸ್ಯಾನಿಟರಿ ಪ್ಯಾಡ್ಗಳು (sanitary pad) ಪ್ರಕೃತಿಯಲ್ಲಿ ಬೇಗನೆ ವಿಲೀನವಾಗೋದಿಲ್ಲ ಮತ್ತು ಪರಿಸರದ ಆರೋಗ್ಯಕ್ಕೆ ಹಾನಿಕಾರಕ.
ಪಿರಿಯಡ್ಸ್ ಪ್ಯಾಂಟಿಗಳ ಅನಾನುಕೂಲತೆಗಳು
1. ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸಾಮಾನ್ಯ ಒಳ ಉಡುಪುಗಳಿಗೆ ಹೋಲಿಸಿದರೆ ದುಬಾರಿಯಾಗಬಹುದು.
2. ಪಿರಿಯಡ್ಸ್ ಪ್ಯಾಂಟೀಸ್ ಋತುಚಕ್ರದ ರಕ್ತದ ವಾಸನೆ (periods smell) ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ ಮತ್ತು ಇದು ಹೆಚ್ಚಿನ ವಾಸನೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ವಿಶೇಷವಾಗಿ ನೀವು ಅವುಗಳನ್ನು ದೀರ್ಘಕಾಲದಿಂದ ಬಳಸಿದರೆ ವಾಸನೆ ಹೆಚ್ಚುತ್ತೆ..
ಪಿರಿಯಡ್ಸ್ ಪ್ಯಾಂಟಿಗಳು ನಿಜವಾಗಿಯೂ ಆರೋಗ್ಯಕರವೇ?
ಪೀರಿಯಡ್ ಪ್ಯಾಂಟಿಗಳ ಬಗ್ಗೆ ವಿಭಿನ್ನ ವಿಷಯಗಳನ್ನು ಹೇಳಲಾಗುತ್ತದೆ. ಪಿರಿಯಡ್ಸ್ ಪ್ಯಾಂಟಿಗಳು ಹೇಗೆ ಹೈಜಿನ್ ಆಗಿರುತ್ತೆ ಅನ್ನೋ ಬಗ್ಗೆ ಇನ್ನೂ ಮಹಿಳೆಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅನೇಕ ಮಹಿಳೆಯರು ಇದನ್ನು ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಒಳ ಉಡುಪು ಬಳಸಲು ಸಾಕಷ್ಟು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ.
ಪೀರಿಯಡ್ ಪ್ಯಾಂಟಿಗಳನ್ನು ಬಳಸುವುದು ಹೇಗೆ?
ಸಾಮಾನ್ಯ ಒಳಉಡುಪುಗಳಂತೆ ಪೀರಿಯಡ್ ಪ್ಯಾಂಟಿಗಳನ್ನು ಧರಿಸಬಹುದು. ನೀವು ದಿನಕ್ಕೆ ಸುಮಾರು 12 ಗಂಟೆಗಳ ಕಾಲ 1 ಪೀರಿಯಡ್ ಒಳ ಉಡುಪುಗಳನ್ನು ಧರಿಸಬಹುದು. ಆದಾಗ್ಯೂ, ಬಳಕೆಯ ನಂತರ ನೀವು ಅದನ್ನು ಚೆನ್ನಾಗಿ ತೊಳೆಯುವುದು ಮತ್ತು ಅದನ್ನು ಮತ್ತೆ ಬಳಸುವ ಮೊದಲು ಅದು ಸಂಪೂರ್ಣವಾಗಿ ಡ್ರೈ ಆಗುವಂತೆ ನೋಡಿಕೊಳ್ಳಬೇಕು.