ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಮಗಳಿಗೂ ಇದೆ ಖಿನ್ನತೆ. ಇದನ್ನು ಸ್ವತಂ ಅಮೀರ್ ಪುತ್ರಿ ಇರಾ ಖಾನ್ ಹೇಳಿದ್ದಾಳೆ. ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ ಇರಾ, ನಾನು ಬಹಳಷ್ಟು ಖಿನ್ನತೆಗೊಳಗಾಗಿದ್ದೆ ಎಂದಿದ್ದಾರೆ.

ಮಾನಸಿಕ ಆರೋಗ್ಯ ದಿನದಂದು ವಿಡಿಯೋ ಮೂಲಕ ಮಾತನಾಡಿ, ಮೆಂಟಲ್ ಹೆಲ್ತ್‌ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಾನಸಿಕ ಆರೋಗ್ಯ ಜಾಗೃತಿಯ ಬಗ್ಗೆ ಕಾಳಜಿ ವಹಿಸಲು ಅವರು ಮುಂದಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ ಇರಾ, ಡಿಪ್ರೆಷನ್ ಬಗ್ಗೆ ಮಾತನಾಡಿದ್ದಾರೆ. ಕೆಲವು ವರ್ಷ ಖಿನ್ನತೆಗೊಳಗಾಗಿದ್ದೆ, ಆದರೆ ಈಗ ಆರಾಮವಾಗಿ ದ್ದೇನೆ ಎಂದಿದ್ದಾರೆ.

ನಟನೆಯಲ್ಲ, ಭಿನ್ನ ಉದ್ಯೋಗ ಆರಿಸ್ಕೊಂಡ ಅಮೀರ್ ಖಾನ್ ಮಗಳು

ಹಾಯ್.. ನಾನು ಖಿನ್ನತೆಗೊಳಗಾಗಿದ್ದೇನೆ. ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಡಿಪ್ರೆಷನ್‌ಗೊಳಗಾಗಿದ್ದೆ. ನನಗೊಬ್ಬ ವೈದ್ಯರೂ ಇದ್ದರು. ಆದರೆ ಈಗ ಆರಾಮವಾಗಿದ್ದೇನೆ. ನಾನು ಮಾನಸಿಕ ಆರೋಗ್ಯದ ಬಗ್ಗೆ ಏನಾದರೂ ಮಾಡಬೇಕು, ಆದರೆ ಏನು ಮಾಡಬೇಕೆಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಹಾಗಾಗಿ ನಾನು ನಿಮ್ಮನ್ನು ಒಂದು ಜರ್ನಿಗೆ ಕರೆದೊಯ್ಯುತ್ತೇನೆ. ಇದು ನನ್ನ ಜರ್ನಿ. ಏನಾಗುತ್ತದೆ ನೋಡಿ. ನಮ್ಮನ್ನು ನಾವು ಅರಿತುಕೊಳ್ಳುತ್ತೇವೆ. ಮಾನಸಿಕ ಅನಾರೋಗ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.

ಎಲ್ಲಿ ಆರಂಭಿಸಿದ್ದೇವೆ ಅಲ್ಲೇ ಆರಂಭಿಸೋಣ. ನಾನು ಡಿಪ್ರೆಸ್ ಆಗಿದ್ದು ಯಾವುದರ ಬಗ್ಗೆ..? ಡಿಪ್ರೆಸ್ ಆಗೋಕೆ ನಾನ್ಯಾರು..? ನನ್ನಲ್ಲಿ ಎಲ್ಲವೂ ಇದೆ ಅಲ್ಲವೇ..? ಎಂದು ಕೇಳಿದ್ದಾರೆ.

ಮಗಳ ಜತೆ ಬಂದು ಅಮಿರ್ ಖಾನ್ ಕೊಟ್ಟ ಲಾಕ್ ಡೌನ್ ಸರ್ಪ್ರೈಸ್

ಅಮೀರ್ ಮೊದಲ ಪತ್ನಿ ರೀನಾ ದತ್ತಾ ಜೊತೆಗಿನ ಮಗಳು ಇರಾ ಖಾನ್. ಈ ಸಂಬಂಧದಲ್ಲಿ ಜುನೈದ್ ಎಂಬ ಮಗನೂ ಇದ್ದಾನೆ. ಇತ್ತೀಚೆಗಷ್ಟೇ ಇರಾ ತಾನು ಮಾಡಿದ ಮೊದಲ ಕಾರ್ಟೂನ್ ಫೋಟೋ , ವಿಡಿಯೋ ಶೇರ್ ಮಾಡಿಕೊಂಡಿದ್ದರು.