Kangana Ranaut: ಖಾನ್ ಮತ್ತು ಮುಸ್ಲಿಮರ ಮೇಲೆ ಲವ್: ಕಂಗನಾಗೆ ನೆಟ್ಟಿಗರಿಂದ ಭರ್ಜರಿ ಕ್ಲಾಸ್
ನಟಿ ಕಂಗನಾ ಖಾನ್ ನಟರು ಮತ್ತು ಮುಸ್ಲಿಮರ ಕುರಿತಾಗಿ ನೀಡಿರುವ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು?
ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರಾಗಿರುವ ನಟಿ ಕಂಗನಾ ರಣಾವತ್ ( Kangana Ranaut) ಅವರ ಟ್ವಿಟರ್ ಕೊನೆಗೂ ಮರಳಿ ಬಂದಿದೆ. ಕೆಲ ತಿಂಗಳುಗಳಿಂದ ಅವರ ಟ್ವಿಟರ್ ಬ್ಯಾನ್ ಮಾಡಲಾಗಿತ್ತು. ಅದೀಗ ವಾಪಸ್ ಬರುತ್ತಿದ್ದಂತೆಯೇ ಕಂಗನಾ 'ಪಠಾಣ್' ಕುರಿತು ಒಂದರ ಮೇಲೊಂದರಂತೆ ಟ್ವೀಟ್ಗಳ ಸುರಿಮಳೆಗೈಯುತ್ತಿದ್ದಾರೆ. 'ಪಠಾಣ್' (Pathaan) ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಮೊನ್ನೆ ಟ್ವೀಟ್ ಮಾಡಿದ್ದ ಈಕೆ, 'ಇದು ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ (Pakistan) ಹಾಗೂ ಐಎಸ್ಐ (ISI) ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂದು ತೋರಿಸುತ್ತಿದೆ. ಶತ್ರುರಾಷ್ಟ್ರ ಪಾಕಿಸ್ತಾನ ಹಾಗೂ ಐಎಸ್ಐನ ಒಳ್ಳೆಯವರು ಎಂದು ತೋರಿಸುವ ಮೂಲಕ ಈ ಸಿನಿಮಾ ಯಶಸ್ಸು ಕಾಣುತ್ತಿದೆ. ಭಾರತದಲ್ಲಿ ಯಾವಾಗಲೂ ಮೊಳಗೋದು ಜೈ ಶ್ರೀರಾಮ್ ಮಾತ್ರ’ ಎಂದಿದ್ದರು.
ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ, ನಾಲ್ಕು ದಿನಗಳಲ್ಲಿ ಪಠಾಣ್ 200 ಕೋಟಿ ರೂಪಾಯಿ ಗಳಿಸಿರುವುದರ ಕುರಿತು ಟಾಂಗ್ ನೀಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್ನಲ್ಲಿ (Box office) ಯಶಸ್ಸು ಗಳಿಸಿರುವ ಕುರಿತು ಮಾತನಾಡಿರುವ ನಟಿ, 'ದೇಶವು ಖಾನ್ (Khan) ಮತ್ತು ಮುಸ್ಲಿಂ (Muslim) ನಟರ ಪರವಾಗಿ ಪಕ್ಷಪಾತಿಯಾಗಿದೆ. ಅವರಿಗೆ ಮಣೆ ಹಾಕುವಂತೆ ತೋರುತ್ತಿದೆ. ಈ ದೇಶವು ಎಲ್ಲಾ ಖಾನ್‌ಗಳನ್ನು ಮಾತ್ರ ಮತ್ತು ಕೇವಲ ಖಾನ್‌ಗಳನ್ನು ಮಾತ್ರ ಪ್ರೀತಿಸುವಂತೆ ತೋರುತ್ತಿದೆ. ದೇಶದಲ್ಲಿ ಮುಸ್ಲಿಂ ನಟಿಯರ ಮೇಲಿನ ಪ್ರೀತಿಯೂ ಹೆಚ್ಚಾಗಿದೆ. ಆದ್ದರಿಂದ ಭಾರತವನ್ನು ದ್ವೇಷ ಮತ್ತು ಫ್ಯಾಸಿಸಂ ಎಂದು ದೂಷಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.
Pathaan: ಶಾರುಖ್ ಸಿನಿಮಾ ಸಕ್ಸಸ್ ಹಿಂದೆ ಪಾಕಿಸ್ತಾನದ ISI ನಂಟು: ಕಂಗನಾ ರಣಾವತ್
ಕಂಗನಾ ಹೇಳುತ್ತಿರುವುದು ನೂರಕ್ಕೆ ನೂರು ನಿಜ ಎಂದು ಹಲವು ಕಮೆಂಟಿಗರು ಪರವಾಗಿ ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಕಂಗನಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಕಂಗನಾ ಅವರ ಧಾಕಡ್ (Dhadak) ಸಿನಿಮಾ ಮೊದಲ ದಿನ ಗಳಿಸಿದ್ದು 55 ಲಕ್ಷ ರೂಪಾಯಿ ಮಾತ್ರ. ಒಟ್ಟಾರೆಯಾಗಿ ಅದು ಗಳಿಸಿದ್ದು ಕೇವಲ 2.58 ಕೋಟಿ ರೂಪಾಯಿ. ಆದರೆ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದು ಭರ್ಜರಿ ಕಲೆಕ್ಷನ್ (Collection) ಮಾಡಿದೆ. ಇದನ್ನು ಸಹಿಸದ ಕಂಗನಾ ಹತಾಶೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ’ ಎಂದು ನೆಟ್ಟಿಗರೊಬ್ಬರು ಕಿಡಿ ಕಾರಿದ್ದಾರೆ.
ಇನ್ನೊಬ್ಬ ಬಳಕೆದಾರ, 'ಭಾರತದ ಬಗ್ಗೆ ಹೀಗೆ ಮಾತನಾಡುವ ನೀವು ಈ ದೇಶದ ಭಾಗವಲ್ಲ ಎಂದು ಹೇಳುತ್ತಿರುವಿರಾ?' ಎಂದು ಪ್ರಶ್ನಿಸಿದ್ದಾರೆ. 'ನೀವು ವಿನಾಕಾರಣ ಖಾನ್‌ಗಳ ಮೇಲೆ ದಾಳಿ ಮಾಡುತ್ತಿದ್ದೀರಿ. ನೀವೊಬ್ಬ ಹಿಂದೂಫೋಬಿಕ್ (Hindufobic) ಎಂದು ಗರಂ ಆಗಿದ್ದರೆ, ಮತ್ತೊಂದು ಟ್ವೀಟ್‌ನಲ್ಲಿ, 'ಮುಸ್ಲಿಮರು ಮತ್ತು ಮುಸ್ಲಿಮೇತರರನ್ನು ಕಾಮಾಲೆಯ ಕಣ್ಣಿನಿಂದ ನೋಡುವುದು ನಿಮಗೆ ಇರುವ ರೋಗ. ಇದು ಬಹಳ ಆಳವಾಗಿ ಹೋಗಿದೆ. ಇಂಥ ರೋಗ ಹೆಚ್ಚಾದರೆ ಅದು ಕೊಳೆಯುತ್ತಾ ಸಾಗುತ್ತದೆ' ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗ, 'ನೀವು ಭಾರತೀಯರನ್ನು ಖಾನ್/ಮುಸ್ಲಿಂ ಎಂದು ವಿಭಜಿಸುತ್ತಿದ್ದೀರಿ. ಇದೇ ದ್ವೇಷ ನಿಮ್ಮನ್ನು ಸುಡುತ್ತದೆ. ಎಲ್ಲರೂ ಕೇವಲ ಭಾರತೀಯರು, ನೀವು ಅವರನ್ನು ಏಕೆ ಲೇಬಲ್ (Lable) ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬರು, 'ನೀವು ಇದೇ ರೀತಿ ಯೋಚನೆ ಮಾಡ್ತೀರಿ ಅಂದ್ರೆ ಕಂಗನಾ ಬದಲು ಕೈನಾತ್ (Kainath) ಎಂದು ಹೆಸರು ಬದಲಾಯಿಸಿಕೊಳ್ಳಿ ( ಉರ್ದು ಭಾಷೆಯಲ್ಲಿ ಕೈನಾತ್ ಅಂದ್ರೆ ವಿಶ್ವ ಎಂದರ್ಥ)' ಎಂದಿದ್ದಾರೆ.
Urfi Javed: ಶಾರುಖ್ ಖಾನ್ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?
ಅಂದಹಾಗೆ, ಸದ್ಯ ನಟಿ ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ (Emergency) ಚಿತ್ರದ ಕೆಲಸದಲ್ಲಿ ಬಿಜಿ ಆಗಿದ್ದಾರೆ. ಈ ಸಿನಿಮಾವನ್ನು ಅವರೇ ನಿರ್ದೇಶಿಸುತ್ತಿದ್ದಾರೆ. ಅಲ್ಲದೇ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಹಾಗಾಗಿ ತಮ್ಮ ಆಸ್ತಿಯನ್ನೆಲ್ಲ ಅಡವಿಟ್ಟು ಈ ಚಿತ್ರಕ್ಕೆ ಅವರು ಹಣ ಹಾಕಿದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.