ಅಮೆರಿಕಾದ ಖ್ಯಾತ ಗಾಯಕಿ,ಕವಿಯತ್ರಿ  ಹಾಗೂ ನಟಿ ಲೇಡಿ ಗಾಗ ತನ್ನ ಮಧುರವಾದ ಧ್ವನಿಯಿಂದ ಕೋಟ್ಯಾಂತರ ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ.  ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಸಿರುವ ಲೇಡಿ ಗಾಗ ನಿಜ ಜೀವನದ ಕಥೆಯನ್ನು ಎಂದಿಗೂ ಯಾರೋಂದಿಗೂ ಹಂಚಿಕೊಂಡವರಲ್ಲ. 

'ಲೋಕಾ ಸಮಸ್ತಾ ಸುಖಿನೋ ಭವಂತು': ಅಮೆರಿಕಾ ಪಾಪ್ ಗಾಯಕಿ ಲೇಡಿ ಗಾಗ!

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಲೇಡಿ ಗಾಗ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. '19ನೇ ವಯಸ್ಸಿನಲ್ಲಿ ನನ್ನ ಮೇಲೆ ಪದೇ ಪದೇ ಅತ್ಯಾಚಾರವಾಗಿತ್ತು' ಎಂದೇಳಿ ನೋವಿನ ಘಟನೆಯ ಬಗ್ಗೆ ಮಾತನಾಡಿದ್ದಾರೆ . ಇದಾದ ನಂತರ ನಾನು ಮಾನಸಿಕ ಒತ್ತಡಕ್ಕೆ ಒಳಗಾಗಿ ಪೋಸ್ಟ್‌ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ ಖಾಯಿಲೆಯನ್ನು ಎದುರಿಸುತ್ತಿದ್ದೆ.

ಈ ಘಟನೆಯನ್ನು ಎದುರಿಸುತ್ತಿದ್ದ ವೇಳೆ ತಮ್ಮ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಳ್ಳುತ್ತಾರೆ, ಒಂದು ದಿನ ನೀನು ಮತ್ತೊಂದು ಹುಡುಗಿ ಜೊತೆ ಹೊಟೇಲ್ ಹೋಗಿದ್ದಾಗ ನನ್ನ ಧ್ವನಿ ನೀನು ಕೇಳುತ್ತೀಯಾ, ನಾನು ಸಾಧನೆ ಮಾಡಿ ಪ್ರಶಸ್ತಿ ಪಡೆಯುವುದನ್ನು ನೀನು ನೋಡುತ್ತೀಯಾ ಎಂದು ಹೇಳಿ ಅಲ್ಲಿಂದ ಹೊರಟರಂತೆ. ಆ ನಂತರ ನಿರಂತರ ಶ್ರಮದಿಂದ ಏಕಾಏಕಿ ಪ್ರಸಿದ್ಧಿ ಪಡೆಯುತ್ತಾರೆ,ಇಡೀ ವಿಶ್ವಕ್ಕೆ ಅದ್ಭುತ ಗಾಯಕಿಯಾಗಿ ಪರಿಚಯವಾಗುತ್ತಾರೆ.