ನವದೆಹಲಿ:  ಲೇಡಿ ಗಾಗಾ ಸೋಮವಾರ ‘ಲೋಕಾ ಸಮಸ್ತಾ ಸುಖಿನೋ ಭವಂತು’ ಎಂದು ಟ್ವೀಟ್‌ ಮಾಡಿದ್ದು, ಭಾರೀ ವೈರಲ್‌ ಆಗಿದೆ. ಅಮೆರಿಕದ ಈ ಪಾಪ್‌ ಗಾಯಕಿ ಭಾರತದ ಸಂಸ್ಕೃತದ ಪದ ಬಳಕೆ ಮಾಡಿದ್ದು ಯಾಕೆ ಎಂದು ಭಾರತೀಯರಿಗೆ ಅಚ್ಚರಿ ಮೂಡಿಸಿದೆ. 

ಅಬುಧಾಬಿಯಲ್ಲಿ 8000 ವರ್ಷ ಹಳೆಯ ವಿಶ್ವದ ಪುರಾತನ ಮುತ್ತು ಪತ್ತೆ! .

ಲೋಕಾ ಸಮಸ್ತಾ ಸುಖಿನೋ ಭವಂತು ಎಂದರೆ ಜಗತ್ತಿನ ಎಲ್ಲ ಜೀವಿಗಳೂ ಸುಖವಾಗಿರಲಿ ಎಂದರ್ಥ. ಅಮೆರಿಕದ ಪಾಪ್‌ ಸಿಂಗರ್‌ ಈ ಮಂತ್ರವನ್ನು ಟ್ವೀಟ್‌ ಮಾಡಿದ್ದೇ ತಡ ಭಾರೀ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ಪದವನ್ನು ಇಟ್ಟುಕೊಂಡು ಗಾಗಾ ಆಲ್ಬಮ್‌ ತಯಾರಿಸುತ್ತಿದ್ದಾರಾ ಎಂಬ ಗುಮಾನಿ ಎದ್ದಿದೆ. 

ಈ ಟ್ವೀಟ್‌ ಅನ್ನು 32 ಸಾವಿರ ಜನರು ರೀಟ್ವೀಟ್‌ ಮಾಡಿದ್ದರೆ, ಲಕ್ಷಕ್ಕೂ ಅಧಿಕ ಲೈಕ್‌ ಜನರು ಒತ್ತಿದ್ದಾರೆ. ಸಾವಿರಾರು ವಿದೇಶಿಗರು ಇದೇನಿದು ಎಂದು ಪ್ರಶ್ನಿಸಿ ಕಾಮೆಂಟ್‌ ಮಾಡಿದ್ದಾರೆ.

ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ!