Asianet Suvarna News Asianet Suvarna News

ಥೈಲ್ಯಾಂಡ್‌ನಲ್ಲಿ ಕೈ ಕೈ ಹಿಡಿದು ಓಡಾಡಿದ ಅಮಿಶಾ & ಮಲೈಕಾ ಮಾಜಿ ಪತಿ

ಬಾಲಿವುಡ್‌ ನಟಿ ಅಮಿಷಾ ಪಟೇಲ್ ಹಾಗೂ ನಟಿ ಮಲೈಕಾ ಆರೋರಾ ಮಾಜಿ ಪತಿ ಅರ್ಬಾಜ್‌ ಖಾನ್‌ ಥೈಲ್ಯಾಂಡ್‌ನಲ್ಲಿ ಕೈ ಕೈ ಹಿಡಿದು ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ameesha Patel and Arbaaz Khan wandering together in Thailand  video goes viral fans asks to date akb
Author
First Published Nov 25, 2023, 12:15 PM IST

ಬಾಲಿವುಡ್‌ ನಟಿ ಅಮಿಷಾ ಪಟೇಲ್ ಹಾಗೂ ನಟಿ ಮಲೈಕಾ ಆರೋರಾ ಮಾಜಿ ಪತಿ ಅರ್ಬಾಜ್‌ ಖಾನ್‌ ಥೈಲ್ಯಾಂಡ್‌ನಲ್ಲಿ ಕೈ ಕೈ ಹಿಡಿದು ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಇವರ ಅಭಿಮಾನಿಗಳು ತಾವಿಬ್ಬರು ಮದ್ವೆಯಾಗುವಂತೆ ಸಲಹೆ ನೀಡುತ್ತಿದ್ದಾರೆ. ಇತ್ತ ಅಮಿಷಾ ಪಟೇಲ್ ಸಿಂಗಲ್ ಆಗಿದ್ದು, ಅತ್ತ ಸಲ್ಮಾನ್ ಖಾನ್ (Salman Khan) ಸೋದರ ಅರ್ಬಾಜ್ ಖಾನ್ ಮಲೈಕಾ ಜೊತೆಗಿನ ವಿಚ್ಛೇದನದ ಬಳಿಕ ಜಾರ್ಜಿಯಾ ಅಂಡ್ರಿಯಾನಿ ಜೊತೆ ಡೇಟಿಂಗ್‌ನಲ್ಲಿದ್ದಾರೆ.  ಇವರಿಬ್ಬರನ್ನು ಜೊತೆಯಾಗಿ ನೋಡಿದ ಫ್ಯಾನ್ಸ್ ಇವರಿಬ್ಬರು ಜೊತೆಯಾಗಿದ್ದಾರೆ. ಚೆನ್ನಾಗಿ ಕಾಣಿಸುತ್ತೆ ಇವರಿಬ್ಬರು ಮದ್ವೆಯಾದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡ್ತಿದ್ದಾರೆ. 

ಅಂದಹಾಗೆ ಇವರಿಬ್ಬರೂ ಥೈಲ್ಯಾಂಡ್‌ನ (Thailand) ಮಾಲೊಂದರ ಉದ್ಘಾಟನೆಯೊಂದರಲ್ಲಿ ಜೊತೆಯಾಗಿ ಭಾಗಿಯಾಗಿದ್ದರು.  ನಟಿ ಅಮಿಷಾ ಪಟೇಲ್ ಗದ್ದರ್ 2 ಸಿನಿಮಾದ ಯಶಸ್ಸಿನ ನಂತರ ಒಂದಾದ ಮೇಲೊಂದರಂತೆ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಕ್ರಿಕೆಟ್ ಪಂದ್ಯಾವಳಿಗಳಿಂದ ಹಿಡಿದು ಅಂಗಡಿ ಮಳಿಗೆ ಉದ್ಘಾಟನೆಯವರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತ ಅರ್ಬಾಜ್ ಖಾನ್ (Arbaaz Khan) ಹಲವು ಒಟಿಟಿ ಶೋಗಳಲ್ಲಿ (OTT Show) ಬ್ಯುಸಿಯಾಗಿದ್ದಾರೆ. ಇವರಿಬ್ಬರೂ ಜೊತೆಯಾಗಿ ಈಗ ಮಾಲೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು, ಇವರ ವೀಡಿಯೋ ಈಗ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 

ಅರ್ಜುನ್‌ ಕಪೂರ್‌ ಜೊತೆ ಬ್ರೇಕಪ್‌ ಆಗಿದ್ದು ನಿಜನಾ? ಕೊನೆಗೂ ಮೌನ ಮುರಿದ ಮಲೈಕಾ ಅರೋರಾ

ಈ ಕಾರ್ಯಕ್ರಮಕ್ಕಾಗಿ ಅಮಿಶಾ ಪಟೇಲ್ (Ameesha Patel) ಮಿನುಗುವ ಎಲ್‌ಬಿಡಿ ಡ್ರೆಸ್ ಧರಿಸಿದ್ದರೆ, ಅರ್ಬಾಜ್ ಖಾನ್ ಬಿಳಿ ಬಣ್ಣದ ಟೀ ಮತ್ತು ಪ್ಯಾಂಟ್‌ನೊಂದಿಗೆ ಬೂದು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. 90 ದಶಕದ ಹಾಟ್‌ ಸೆನ್ಸೇಷನ್ ಅಮಿಷಾಗೆ ಈ ಎಲ್‌ಬಿಡಿ ಡ್ರೆಸ್ ಸಖತ್ತಾಗಿ ಹೊಂಬುತ್ತಿದ್ದು, ಇದೇ ಧಿರಿಸಿನಲ್ಲಿ ಅಮಿಶಾ ಹಾಗೂ ಅರ್ಬಾಜ್ ಗದ್ದರ್ 2 ಸಿನಿಮಾದ 'ಮೇ ನಿಕ್ಲಾ ಗಡ್ಡಿ ಲೆಕೆ' ಹಾಡಿಗೆ ಕ್ಲಬ್ ಒಳಗೆ ಸಖತ್ ಹೆಜ್ಜೆ ಹಾಕಿದರು.  ಈ ಕಾರ್ಯಕ್ರಮದಲ್ಲಿ ಹಲವು ಭಾರತೀಯರು ಭಾಗಿಯಾಗಿದ್ದರು. 

ಇವರ ಈ ವೀಡಿಯೋ ವೈರಲ್ ಆದಂತೆ ಅವರ ಅಭಿಮಾನಿಗಳು ಅಮಿಷಾ ಹಾಗೂ ಅರ್ಬಜ್ ಜೊತೆಗಿದ್ದರೆ ಚೆಂದ ಎಂದು ಕಾಮೆಂಟ್ ಮಾಡ್ತಿದ್ದಾರೆ. ಅಮೀಶಾ ಪಟೇಲ್ ಸಲ್ಮಾನ್ ಖಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಎಲ್ಲಾ ಖಾನ್‌ಗಳ ಜೊತೆ ಕೆಲಸ ಮಾಡಿದ 90 ರ ದಶಕದ ನಟಿಯರಲ್ಲಿ ಅವರು ಒಬ್ಬರು. ಹೀಗಾಗಿ ಅವರಿಬ್ಬರು ಡೇಟ್ ಮಾಡಬೇಕೆಂಬುದು ಅವರ ಅಭಿಮಾನಿಗಳ ಒತ್ತಾಯ.

ನಿಜವಾದ ವಯಸ್ಸು ಮುಚ್ಚಿಟ್ಟ ಮಲೈಕಾ ಅರೋರಾ ಸಿಕ್ಕಾಪಟ್ಟೆ ಟ್ರೋಲ್‌

ಇತ್ತ ಅಮಿಷಾ ಅಭಿನಯದ ಗದ್ದರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗೂ ಅಧಿಕ ಗಳಿಕೆ ಮಾಡಿದ್ದು, ಇದು ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ ಗೆದ್ದ ಸೂಪರ್ ಸಿನಿಮಾ ಎಂಬ ವಿಮರ್ಶೆಗೆ ಪಾತ್ರವಾಗಿದೆ.  ಇನ್ನು ಥೈಲ್ಯಾಂಡ್ ಬಗ್ಗೆ ಹೇಳುವುದಾದರೆ ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್ ಅತ್ಯಂತ ಜನಪ್ರಿಯ ತಾಣವಾಗಿದೆ. ಅಲ್ಲಿನ ಕೆಲ ಕ್ಲಬ್‌ಗಳ ಮಾಲೀಕರೂ ಭಾರತೀಯರಾಗಿದ್ದಾರೆ. ಥಾಯ್ ನಗರದ ನೈಟ್‌ಕ್ಲಬ್ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿದೆ.

ಬಟ್ಟೆಯೇ ಹಾಕದೆ, ನೂಲಿನ ಎಳೆಯಿಂದ ಮೈ ಮುಚ್ಚಿಕೊಂಡ ಮಲೈಕಾ, ನೋಡೋಕೆ ಎರಡು ಕಣ್‌ ಸಾಲ್ತಿಲ್ಲ ಎಂದ ನೆಟ್ಟಿಗರು!

 

Follow Us:
Download App:
  • android
  • ios