ಸಿನಿಮಾಗಿಂತಲೂ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುವ  ನಟಿ ಅಮಲಾ ಪೌಲ್‌ ಮಾಜಿ ಪತಿ ವಿಜಯ್‌ ಗಂಡು ಮಗುವಿಗೆ ತಂದೆಯಾಗಿದ್ದಾರೆ. ನಟಿ ಅಮಲಾ ಜೊತೆ ವಿಚ್ಛೇದನ ಪಡೆದ ನಂತರ ಡಾ.ಐಶ್ವರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದು ಪೋಷಕರಾಗಿರುವ ಸಂಭ್ರಮವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

ಹೆಬ್ಬುಲಿ' ನಟಿಯನ್ನು ಮದುವೆಯಾಗಿ ನನ್ನ ಮಗನ ಬದುಕೇ ಹಾಳಾಯಿತು; ಕಣ್ಣೀರಿಟ್ಟ ನಿರ್ಮಾಪಕ

ಕಳೆದ ವರ್ಷ ಜುಲೈ 11ರಂದು ವಿಜಯ್ ಹಾಗೂ ಐಶ್ವರ್ಯ ಸಾಂಸಾರಿಕ ಬದುಕಿಗೆ ಕಾಲಿಟ್ಟರು. ಶನಿವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಐಶ್ವರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಿಜಯ್ ಮಾಧ್ಯಮದವರಿಗೆ ತಿಳಿಸಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

2011ರಲ್ಲಿ 'ದೈವ ತಿರುಮಗಳ್' ಚಿತ್ರೀಕರಣದ ವೇಳೆ ವಿಜಯ್ ಹಾಗೂ ಅಮಲಾ ನಡುವೆ ಪ್ರೇಮ ಅರಳಿತ್ತು ಮೂರು ವರ್ಷಗಳ ಕಾಲ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ವೈಮನಸ್ಸಿನಿಂದ ಇಬ್ಬರು  ಮದುವೆಯಾಗಿ ಎರಡೇ ವರ್ಷಗಳಲ್ಲಿ  ವಿಚ್ಛೇದನ ಪಡೆದುಕೊಂಡರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅಮಲಾ ಸಿನಿಮಾಗಳಲ್ಲಿ ನಟಿಸಬಾರದು ಎಂದು ವಿಜಯ್ ಪೋಷಕರು ನಿರ್ಧರಿಸುತ್ತಾರೆ ಹಾಗೂ ಅವರು ಒಂದು ವರ್ಷದೊಳಗೆ ಕುಟುಂಬಕ್ಕೆ ಹೊಸ ಅತಿಥಿ ಬರಬೇಕೆಂದು ಡಿಮ್ಯಾಂಡ್‌ ಮಾಡಲಾಗುತ್ತದೆ. ಇದಕ್ಕೆ ಒಪ್ಪದ ಅಮಲಾ ಪೌಲ್‌ ವಿಜಯ್  ಪೋಷಕರ ವಿರುದ್ಧ ಹೋಗುತ್ತಾರೆ. 

ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ; ಇದು ಲವ್‌ ಅಲ್ಲ Live-in-Relationship!

ತಂದೆಯದ ಸಂತೋಷದಲ್ಲಿರುವ ವಿಜಯ್ ಟ್ಟೀಟ್‌ ಮಾಡಿದ್ದಾರೆ.  'ನನ್ನ ಜೀವನದ ಪಯಣ ತುಂಬಾನೇ ಸ್ಪೇಷಲ್ ಹಾಗೂ ಡಿಫರೆಂಟ್. ಎಲ್ಲರಂತೆ ನಾನೂ ಜೀವನದಲ್ಲಿ ಸುಖ,ದುಃಖ , ನೋವು ಹಾಗೂ ನಲಿವುಗಳನ್ನು ಕಂಡಿರುವೆ. ಆದರೆ ಈ ಎಲ್ಲಾ ಸಂದರ್ಭದಲ್ಲೂ ನನ್ನ ಜತೆ ನಿಂತದ್ದು ಪ್ರೇಸ್‌ ಹಾಗೂ ಮಾಧ್ಯಮ ಮಿತ್ರರು. ಅವರು ನನ್ನ ಸ್ನೇಹಿತರು ಮಾತ್ರವಲ್ಲ ನನ್ನ ಕುಟುಂಬದವರು. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಕುಟುಂಬಕ್ಕೆ ಪ್ರೈವರ್ಸಿ ಕೊಟ್ಟ ಕಾರಣ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು  ಬರೆದಿದ್ದಾರೆ.