ದಕ್ಷಿಣ ಭಾರತದ ಮುದ್ದು ಮುಖದ ಚೆಲುವೆ ಅಮಲಾ ಪೌಲ್‌ ಬಾಳಲ್ಲಿ ಬೆಳಕಾಗಿ ಬಂದಿದ್ದಾರೆ ಸಿಂಗ್! 2014ರಲ್ಲಿ ನಿರ್ದೇಶಕ ವಿಜಯ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮಲಾ, ಕಾರಣಾಂತರಗಳಿಂದ 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದ ಅಮಲಾ ವಿಚ್ಛೇದನ ನಂತರ, ಹಲವು ಸಿನಿಮಾಗಳನ್ನು ಮಾಡಲು ಒಪ್ಪಿಕೊಳ್ಳುತ್ತಿದ್ದರು. ಈ ನಡುವೆ ಮಾಜಿ ಪತಿ ವಿಜಯ್ ಮತ್ತೊಬ್ಬ ನಟಿ ಜೊತೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಆದರೆ, ಅಮಲಾ ಮಾತ್ರ ಒಂಟಿ ಒಂಟಿಯಾಗಿಯೇ ಇದ್ದಾರೆ.

'ಹೆಬ್ಬುಲಿ' ನಟಿ ಮದುವೆ ಮುರಿದು ಬೀಳಲು ಈ ನಟನೇ ಕಾರಣ ಅಂತೆ!

2019ರಲ್ಲಿ ಆದಿಯಾ ಚಿತ್ರ ಪ್ರಚಾರದಲ್ಲಿ ಅಮಲಾ 'ನಿಜವಾದ ಪ್ರೀತಿಗೆ ಅದೆಷ್ಟೋ ನೋವುಗಳನ್ನು ದೂರ ಮಾಡುವ ಸಾಮರ್ಥ್ಯವಿದೆ' ಎಂದು ಹೇಳಿ ಕೊಂಡಿದ್ದರು. ಆದರೆ ಆ ನೈಜ ಪ್ರೀತಿ ತೋರಿಸುವ ಹುಡುಗ ಅಮಲಾಗೆ ಸಿಕ್ಕಿದ್ನಾ ಎಂಬ ಬಗ್ಗೆ ಹಲವು ಗುಸು ಗಸು ಸುದ್ದಿ ಹರಿದಾಡುತ್ತಿತ್ತು. ಇದೀಗ ಅಮಲಾ ಹೃದಯ ಕದ್ದ ಅವನು ಯಾರೆಂದು ಬಹುತೇಕ ಜಗಜ್ಜಾಹೀರವಾಗಿದೆ.

ಮುಂಬೈ ಮೂಲದ ಗಾಯಕ ಭವಿಂದ್ರ ಸಿಂಗ್ ಮತ್ತು ಅಮಲಾ ಲೀವ್‌ ಇನ್‌ ರಿಲೇಷನ್‌‌ಶಿಪ್‌ನಲ್ಲಿ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಅಮಲಾ ಬುರ್ಖಾ ಧರಿಸಿ ಸಿಂಗ್ ಜೊತೆ ಓಡಾಡುತ್ತಿರುವ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲದೇ ಭವಿಂದ್ರ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿಯೂ ಅಮಲಾ ಮುಖ ಅಸ್ಪಷ್ಟವಾಗಿದ್ದರೂ ಅಭಿಮಾನಿಗಳು ಅದರಲ್ಲಿ ಇರುವುದು ಅಮಲಾನೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಏನಮ್ಮಾ ಇದು! ಮತ್ತೆ ಟಾಪ್‌ಲೆಸ್‌ ಆದ ಹೆಬ್ಬುಲಿ ನಟಿ!

ಏನೋ ಅಪ್ಪಾ ಅಮಲಾ ಲೈಫಲ್ಲಿ ಭವಿಂದ್ರ ಬಂದಿದ್ದು ಹೌದೋ, ಇಲ್ಲವೋ ಎನ್ನುವುದು ಮಾತ್ರಿ ಇನ್ನೂ ಗೋಜಲು ಗೋಜಲಾಗಿದೆ.