ಟಾಲಿವುಡ್ ನಟ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರ ವಾನಿಟಿ ವಾನ್ ವಾಲ್ಕನ್ ಅಪಘಾತಕ್ಕೊಳಗಾಗಿದೆ. ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬರುವ ದಾರಿಯಲ್ಲಿ ಅಪಘಾತ ನಡೆದಿದೆ.

ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಶೂಟಿಂಗ್ ಮುಗಿಸಿ ಶನಿವಾರ ಹೈದರಾಬಾದ್‌ಗೆ ಮರಳಿದ್ದಾರೆ. ಸ್ನೇಹಾ ರೆಡ್ಡಿ ಅಲ್ಲು ಅರ್ಜುನ್ ತನ್ನ ಮಕ್ಕಳ ಜೊತೆ ಇರೋ ಫೊಟೋ ಸೇರ್ ಮಾಡಿದ್ದಾರೆ. ಇದರಲ್ಲಿ ಅಯನ್ ಮತ್ತು ಅರ್ಹಾ ತಂದೆಯ ಸುತ್ತಮುತ್ತ ಖುಷಿಯಿಂದ ಓಡಾಡುವುದನ್ನು ಕಾಣಬಹುದು.

ಅಭಿಷೇಕ್‌ಗೆ ಕಪಾಳಮೋಕ್ಷ ಮಾಡಿದ ಅಮಿತಾಬ್‌ ಅಭಿಮಾನಿ!

ಶೂಟಿಂಗ್ ಮುಗಿಸಿ ಅಲ್ಲು ಅರ್ಜುನ್ ಆರಾಮವಾಗಿ ಮನೆಗೆ ತಲುಪಿದರೂ ಅವರ ಮೇಕಪ್ ಟೀಂ ಹಿಂದಿರುಗಿ ಹೈದರಾಬಾದ್‌ಗೆ ಬರುತ್ತಿದ್ದ ವೇಳೆ ಅಪಘಾತವಾಗಿದೆ. ರಾಂಪಚೋದಾವರಂನಿಂದ ಮರಳಿ ಬರುವಾಗ ಘಟನೆ ನಡೆದಿದೆ.

ಮೇಕಪ್ ತಂಡ ಅಲ್ಲು ಅರ್ಜುನ್ ಅವರ ವಾನಿಟಿ ವ್ಯಾನ್ ಫಾಲ್ಕನ್‌ನಲ್ಲಿ ಪ್ರಯಾಣಿಸುತ್ತಿತ್ತು. ಡ್ರೈವರ್ ಬ್ರೇಕ್ ಹಾಕುವಾಗ ಹಿಂದೆ ಇದ್ದ ವಾಹನ ಹಿಂಬದಿಯಿಂದ ಬಂದು ಡಿಕ್ಕಿಯಾಗಿದೆ. ಯಾವುದೇ ಅಪಾಯವಿಲ್ಲದೆ ತಂಡ ಪಾರಾಗಿದೆ.

ಸಮಂತಾಗೆ 15 ಮಿಲಿಯನ್ ಫಾಲೋವರ್ಸ್: ನಟಿ ಥ್ಯಾಂಕ್ಸ್ ಹೇಳಿದ್ದು ಹೀಗೆ

ಖಮ್ಮಮ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಟ ಅಲ್ಲು ಅರ್ಜುನ್ ಅವರು ಅಪಘಾತದ ಸಂದರ್ಭ ವ್ಯಾನ್‌ನಲ್ಲಿರಲಿಲ್ಲ. ಅಲ್ಲು ಅರ್ಜುನ್ ಅವರ ವಾಲ್ಕನ್ ಅವರ ಬೆಲೆ ಬಾಳುವ ಆಸ್ತಿಗಳಲ್ಲಿ ಒಂದು.

ರಿನೋವೇಷನ್ ಇರುವ ವಾಹನವನ್ನು 2019ರಲ್ಲಿ 7 ಕೋಟಿ ಕೊಟ್ಟು ಖರೀದಿಸಿದ್ದರು ಅಲ್ಲು ಅರ್ಜುನ್. ಇದರಲ್ಲಿ ಸ್ಪೋರ್ಟ್ಸ್ ಲೆದರ್ ಸೀಟ್, ಲೈಟಿಂಗ್ಸ್ ಸೇರಿ ಹಲವು ಆಪ್ಶನ್‌ಗಳಿವೆ.