ಅಭಿಷೇಕ್‌ಗೆ ಕಪಾಳಮೋಕ್ಷ ಮಾಡಿದ ಅಮಿತಾಬ್‌ ಅಭಿಮಾನಿ!

First Published Feb 6, 2021, 7:50 PM IST

ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಅವರಿಗೆ 45 ವರ್ಷ. ಫೆಬ್ರವರಿ 5, 1976ರಂದು ಜನಿಸಿದ ಅಭಿಷೇಕ್.  20 ವರ್ಷಗಳ ಹಿಂದೆ 2020ರಲ್ಲಿ 'ರೆಫ್ಯೂಜೀ' ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಎರಡು ದಶಕಗಳಿಂದಲೂ ಇಂಡಸ್ಟ್ರಿಯಲ್ಲಿದ್ದರೂ ತಂದೆ ಅಮಿತಾಬ್ ಬಚ್ಚನ್ ಅವರಂತೆ ಇನ್ನೂ ಸ್ಟಾರ್ಡಮ್ ಸಾಧಿಸಿಲ್ಲ. ಕೆಲವೊಮ್ಮೆ ಅಭಿಷೇಕ್ ಬಚ್ಚನ್ ಅವರ ನಟನೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸಹ ಆಗಿದ್ದಾರೆ. ಬಿಗ್ ಬಿ ಅಭಿಮಾನಿಯೊಬ್ಬರು ಅಭಿಷೇಕ್ ಅವರ ಕೆಟ್ಟ ನಟನೆಯನ್ನು ನೋಡಿ  ಕಪಾಳಮೋಕ್ಷ ಮಾಡಿದ್ದರು. ಈ ವಿಷಯವನ್ನು ಅಭಿಷೇಕ್ ಬಚ್ಚನ್ ಅವರೇ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.