Asianet Suvarna News Asianet Suvarna News

Oo Antava song: ರಶ್ಮಿಕಾಳನ್ನೇ ಸೈಡ್‌ಲೈನ್ ಮಾಡಿದ ಸಮಂತಾ ಪುಷ್ಪಾ ಡ್ಯಾನ್ಸ್!

ಊ ಅಂಟಾವಾ ಮಾಮ.. ಅಂತ ಮಾದಕವಾಗಿ ಕುಣಿದ ಸಮಂತಾಗೆ ವಿಶ್ವವೇ ಉಘೇ ಅಂದಿದೆ. ಸಮಂತಾ ಅನ್ನೋ ಎವರ್‌ಗ್ರೀನ್ ಸುಂದರಿಯಲ್ಲಿ ಅಂಥಾ ವಿಶೇಷತೆ ಏನಿದೆ?

 

Oa Antava song becomes very popular and Samatha becomes number one in world trending
Author
Bengaluru, First Published Dec 28, 2021, 12:44 PM IST

'ಪುಷ್ಪ' (Pushpa) ಸಿನಿಮಾ ಹೆಸ್ರು ಮಾಡಿತೋ ಬಿಟ್ಟಿತೋ ಅನ್ನೋ ಮ್ಯಾಟರನ್ನು ಸದ್ಯ ಸೈಡಿಗಿಡಾಣ. ಆದರೆ ಪುಷ್ಪ ಮೂಲಕ ಸಮಂತಾ (Samantha) ಹಾಕಿದ ಸ್ಟೆಪ್‌ಗೆ ಇದೀಗ ವಿಶ್ವವೇ ಫಿದಾ ಆಗಿದೆ. 'ಊ ಅಂಟಾವಾ ಮಾವ ಊ ಊ ಅಂಟಾವಾ' ಹಾಡು ಸಮಂತಾಗಿರೋ ಮಾರ್ಕೆಟ್ ಯಾವ ಲೆವೆಲ್‌ನದು ಅಂತ ಪ್ರೂವ್ ಮಾಡಿದೆ. ಒಂದೇ ಒಂದು ಹಾಡಿನ ಮೂಲಕ ರಾತ್ರಿ ಬೆಳಗಾಗೋದ್ರೊಳಗೆ ಸಮಂತಾ ವಿಶ್ವದ ನಂಬರ್‌ 1 ಪಟ್ಟಕ್ಕೇರಿದ್ದಾರೆ. 

ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಚಿತ್ರ ಭರ್ಜರಿ ಕಲೆಕ್ಷನ್ ಮಾಡೇ ಮಾಡುತ್ತೆ ಅಂತ ಎಲ್ಲರೂ ಮಾತಾಡಿಕೊಳ್ತಿದ್ರು. ಆದರೆ ಈ ಚಿತ್ರ ಜನ ನಿರೀಕ್ಷೆಯನ್ನು ರೀಚ್ ಆದ ಹಾಗಿಲ್ಲ. ಅಂದುಕೊಂಡದ್ದಕ್ಕಿಂತ ಕಡಿಮೆ ಕಲೆಕ್ಷನ್ಅನ್ನು ಪುಷ್ಪಾ ದಾಖಲಿಸಿದೆ. ಚಂದನ ಕದ್ದು ಸಾಗಿಸುವ ದರೋಡೆಕೋರನಾಗಿ ಅಲ್ಲು ಅರ್ಜುನ್‌ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿದ್ದಾರೆ. ಈ ಸಿನಿಮಾ ರಶ್ಮಿಕಾ ಅವರನ್ನು ಎಲ್ಲೋ ಕೊಂಡು ಹೋಗಿ ನಿಲ್ಲಿಸಬಹುದು ಅನ್ನೋ ನಿರೀಕ್ಷೆಯೂ ಈಗ ಪೂರೈಸಿದಂತಿಲ್ಲ. ಇದರಲ್ಲಿ ರಶ್ಮಿಕಾ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡರೂ ಅವ್ರಿಗೆ ಜನರ ಮೆಚ್ಚುಗೆ ಸಿಕ್ಕಿದ್ದು ಅಷ್ಟಕ್ಕಷ್ಟೇ.

ಸಮಂತಾ ಆಯ್ತು, ಸಾಯಿ ಪಲ್ಲವಿಯೂ ಕೊಡ್ತಾರಾ Bollywoodಗೆ ಎಂಟ್ರಿ?

ಆದರೆ ಈ ಸಿನಿಮಾದಲ್ಲಿ ಕೇವಲ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡ ಸಮಂತಾ ಮಾತ್ರ ಇದೀಗ ವಿಶ್ವಕ್ಕೇ ನಂಬರ್‌ 1 ಆಗಿದ್ದಾರೆ. 2021ರಲ್ಲಿ ಅತೀ ಹೆಚ್ಚು ಜನ ನೋಡಿದ ಟಾಪ್ 100 ಹಾಡುಗಳಲ್ಲಿ ಪುಷ್ಪ ಚಿತ್ರದ 'ಊ ಅಂಟಾವಾ ಮಾವ..ಊ ಊ ಅಂಟಾವ ಮಾವ' ನಂ.1 ಹಾಡಾಗಿ ಮಿಂಚುತ್ತಿದೆ. ಈ ಹಾಡು ಬಿಡುಗಡೆ ಆಗಿ ಹೆಚ್ಚು ದಿನಗಳೇನೂ ಆಗಿಲ್ಲ. ಡಿಸೆಂಬರ್ 10ನೇ ತಾರೀಕಿಗೆ ಈ ಹಾಡು ಬಿಡುಗಡೆಯಾಗಿದ್ದು. ಇದೀಗ ಕೆಲವೇ ದಿನಗಳಲ್ಲಿ ಅತ್ಯಧಿಕ ವೀಕ್ಷಣೆ ಕಾಣುತ್ತಿದೆ. ಸುಮಾರು 1.5 ಮಿಲಿಯನ್ ಜನ ಯೂಟ್ಯೂಬ್‌ನಲ್ಲಿ ಈ ಹಾಡು ಕೇಳಿ ಲೈಕ್ ಬಟನ್ ಒತ್ತಿದ್ದಾರೆ. ಭರ್ಜರಿ ಒಂಭತ್ತೂವರೆ ಕೋಟಿ ಜನ ಈ ಹಾಡನ್ನು ನೋಡಿದ್ದಾರೆ. ಇದು ಯೂಟ್ಯೂಬ್‌ನ ಲೆಕ್ಕಾಚಾರ. ಇನ್ನು ಬೇರೆ ಬೇರೆ ಸೈಟ್‌ಗಳಲ್ಲೂ ಸಾಕಷ್ಟು ಮಂದಿ ಹಾಡು ಕೇಳಿ ಸಮಂತಾ ಜೊತೆಗೆ ಸ್ಟೆಪ್ಸ್ ಹಾಕಿದ್ದಾರೆ. ಸಮಂತಾ ಅವರಿಗೆ ಹಿನ್ನೆಲೆಯಿಂದ ಈ ಹಾಡು ಹಾಡಿರೋದು ಇಂದ್ರವತಿ ಚೌಹಾಣ್.

ಪುರುಷರ ಸಂಘದಿಂದ ಸಾಕಷ್ಟು ವಿರೋಧವನ್ನೂ ಎದುರಿಸಿದ್ದ ಈ ಹಾಡನ್ನು ಬರೆದವರು ಚಂದ್ರ ಬೋಸ್. ದೇವಿ ಶ್ರೀ ಪ್ರಸಾದ್ ಅವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಸಮಂತಾ ರುತ್‌ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.

Samantha Ruth Prabhu: ಒಂದೇ ಕಡೆ ಶೂಟಿಂಗ್ ಮಾಡ್ತಿದ್ರೂ ಮುಖ ಮುಖ ನೋಡಿಲ್ಲ ಸಮಂತಾ-ನಾಗ್

ಹಾಗೆ ನೋಡಿದರೆ ಸಮಂತಾ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ. ಅವರು ಮೊದಲು ಸುದ್ದಿಯಾಗಿದ್ದು ಡಿವೋರ್ಸ್ ಕಾರಣಕ್ಕೆ. ಸಮಂತಾ ಅವರ ಬೋಲ್ಡ್ ಅಭಿನಯವೇ ನಾಗ ಚೈತನ್ಯ ಅವರ ಜೊತೆಗೆ ಸಂಬಂಧ ಮುರಿದುಕೊಳ್ಳಲು ಕಾರಣ ಆಯ್ತು. ಇದಕ್ಕೆ ಪೂರಕವಾಗಿ ನಾಗಚೈತನ್ಯ (Nagachaitanya) ಇತ್ತೀಚಿನ ಸಂದರ್ಶನ ಒಂದರಲ್ಲಿ ನನ್ನ ಕುಟುಂಬದ ಘನತೆಗೆ ಚ್ಯುತಿ ತರುವಂಥಾ ಚಿತ್ರಗಳಲ್ಲಿ ನಾನು ಅಭಿನಯಿಸೋದಿಲ್ಲ ಅನ್ನುವ ಮೂಲಕ ಸಮಂತಾ ಅವರು 'ಫ್ಯಾಮಿಲಿ ಮ್ಯಾನ್ 2'ನಲ್ಲಿ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರೋದೇ ತನ್ನಿಬ್ಬರ ವಿಚ್ಛೇದನಕ್ಕೆ ಕಾರಣವಾಯ್ತು ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದರು.

ಡಿವೋರ್ಸ್ (Divorce) ನಂತರ ಸಮಂತಾ ಸಿನಿಮಾ ಗ್ರಾಫ್ ಫುಲ್‌ ಕೆಳಕ್ಕಿಳಿಯುತ್ತೆ ಅಂತ ಸಾಕಷ್ಟು ಅಪಪ್ರಚಾರ ಮಾಡಲಾಯ್ತು. ಜೊತೆಗೆ ಸಮಂತಾ ಬಗ್ಗೆ ವೈಯುಕ್ತಿಕವಾಗಿ ಅವಹೇಳನಕಾರಿ ಸ್ಟೇಟ್‌ಮೆಂಟ್‌ಗಳೂ ಬಂದವು. ಇದರಿಂದ ಕೊಂಚ ಬೇಸರ ಪಟ್ಟುಕೊಂಡರೂ ಆಮೇಲೆ ಚೇತರಿಸಿಕೊಂಡ ಸಮಂತಾ ಈ ಹಾಡಿನ ಬಳಿಕ ಮತ್ತೆ ತಮ್ಮ ಪಾಪ್ಯುಲಾರಿಟಿ ಗ್ರಾಫ್ ಏರಿಸಿಕೊಂಡಿದ್ದಾರೆ. ನಾಗ ಚೈತನ್ಯಗಿಂತ ತಾನು ಸಾಕಷ್ಟು ಪ್ರತಿಭಾವಂತೆ ಅನ್ನೋದನ್ನು ಸಾಧಿಸಿ ತೋರಿಸಿದ್ದಾರೆ.

Samantha Ruth Prabhu Trolled: ಜಂಟಲ್‌ಮ್ಯಾನ್‌ನಿಂದ 50 ಕೋಟಿ ದೋಚಿದ್ರಾ ಸಮಂತಾ ?

Follow Us:
Download App:
  • android
  • ios