Asianet Suvarna News Asianet Suvarna News

ನಟಿ ಆಲಿಯಾ, ಪೂಜಾ ಭಟ್​ರ ಮಗಳೆ? ಶಾಕಿಂಗ್​ ಸುದ್ದಿಗೆ ಕೊನೆಗೂ ಮೌನ ಮುರಿದ ಪೂಜಾ ಹೇಳಿದ್ದೇನು?

ನಟಿ ಆಲಿಯಾ ಭಟ್​ ಅವರು ನಟಿ ಪೂಜಾ ಭಟ್​ ಅವರ ಮಗಳು ಎಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ಪೂಜಾ ಭಟ್​ ಪ್ರತಿಕ್ರಿಯೆ ಏನು?
 

Pooja Bhatt reacts to rumours that Alia Bhatt is her daughter suc
Author
First Published Sep 13, 2023, 1:00 PM IST

ಪೂಜಾ ಭಟ್ ಇತ್ತೀಚೆಗಷ್ಟೇ ತಮ್ಮ 'ಬಿಗ್ ಬಾಸ್ OTT 2' ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಚಲನಚಿತ್ರ ನಿರ್ಮಾಪಕ-ನಟಿ ತಮ್ಮ ವೈಯಕ್ತಿಕ ಜೀವನದ ಕೆಲವು ಅಂಶಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಂತೆಯೇ, ಅವರು ಇತ್ತೀಚೆಗೆ ಮಾಡಿದ ಸಂದರ್ಶನವೊಂದರಲ್ಲಿ, 51 ವರ್ಷದ ಪೂಜಾ, ನಟಿ ಆಲಿಯಾ ಭಟ್​ ತಮ್ಮ ಮಗಳು ಎಂಬ ಸುದ್ದಿಯ ಕುರಿತು ಮೌನ ಮುಗಿದಿದ್ದಾರೆ.  ಅಷ್ಟಕ್ಕೂ ಪೂಜಾ ಕೆಲವು ದಿನಗಳಿಂದ ಸಕತ್​ ಸುದ್ದಿಯಲ್ಲಿರುವ ನಟಿ. ಇದಕ್ಕೆ ಕಾರಣ ಸ್ವಂತ ತಂದೆಯ ಜೊತೆಯೇ ಲಿಪ್​ಲಾಕ್​ ಮಾಡಿ ಸದ್ದು ಮಾಡಿರುವವರು ಇವರು.  ಸ್ಟಾರ್ಡಸ್ಟ್ ಎಂಬ ಮ್ಯಾಗಜಿನ್‌ನಲ್ಲಿ ತಂದೆ-ಮಗಳಾಗಿರುವ ಪೂಜಾ ಭಟ್‌ (Pooja Bhatt) –ಮಹೇಶ್‌ ಭಟ್‌ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಅಂದು ಮ್ಯಾಗ್‌ ಜಿನ್‌ ಗಾಗಿ ಶೂಟ್‌ ಮಾಡಲಾಗಿತ್ತು. ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್‌ ಲಿಪ್‌ ಲಾಕ್‌ ಮಾಡಿರುವ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಹಾಕಲಾಗಿತ್ತು. ಫೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ತಂದೆ-ಮಗಳ ಅಶ್ಲೀಲ ವರ್ತನೆಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ನಿರ್ದೇಶಕ ಮಹೇಶ್‌ ಭಟ್‌ ಪ್ರತಿಕಾಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿ, 'ಪೂಜಾ ನನ್ನ ಮಗಳಲ್ಲದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ' ಎಂದು ಹೇಳಿದ್ದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಆತ್ಮತೃಪ್ತಿಗಾಗಿ ಪುತ್ರಿ ಪೂಜಾ ದೇಹವನ್ನೇ ಬಳಸಿಕೊಂಡ್ರಾ ಮಹೇಶ್​ ಭಟ್​? ನಟಿ ಹೇಳಿದ್ದೇನು?
 

ಇದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಿರೋ ಪೂಜಾ, 'ತಂದೆಗೆ ಕಿಸ್ ಮಾಡಿರೋ ವಿಚಾರ ನನ್ನ ಪಾಲಿಗೆ ತುಂಬಾ ಸಾಮಾನ್ಯವಾಗಿದೆ. ಇದರಲ್ಲಿ ತಪ್ಪೇ ಇಲ್ಲ. ಈ ಪ್ರಕರಣವನ್ನು ಎಲ್ಲರೂ ತಪ್ಪಾಗಿ ತಿಳಿದುಕೊಳ್ಳಬಹುದು. ನನಗೆ ಈಗಲೂ ನೆನಪಿದೆ ಆಗ ಶಾರುಖ್‌ ಖಾನ್‌ ಅವರು ನನಗೆ ಹೇಳಿದ್ದರು. ನಿಮ್ಮ ಮಕ್ಕಳು ಸಣ್ಣದಿರುವಾಗ ನೀವು ಹೆಣ್ಣು ಮಕ್ಕಳನ್ನು ಹೊಂದಿರುವಾಗ ಮಗು ತುಂಬಾ ಬಾರಿ ಅಪ್ಪ- ಅಮ್ಮ ನನಗೊಂದು ಕಿಸ್‌ ಕೊಡಿ ಎಂದು ಹೇಳುತ್ತದೆ. ಆಗ ತಂದೆ - ತಾಯಿ ಈ ರೀತಿ ಮಾಡುತ್ತಾರೆ ಎಂದಿದ್ದರು. ನಾನು ಈಗಲೂ ನನ್ನ ತಂದೆಗೆ 10 ಪೌಂಡ್‌ ನ ಸಣ್ಣ ಮಗುವೇ ಆಗಿದ್ದೇನೆ. ನನಗೆ ಅವರು ಜೀವನವಿಡೀ ಹೀಗೆಯೇ ಇರುತ್ತಾರೆ ಎಂದು ಹೇಳಿದ್ದರು. 

ಈಗ ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ ಹರಿದಾಡಿದೆ. ಅದೇನೆಂದರೆ, ನಟಿ ಆಲಿಯಾ ಭಟ್​, ಪೂಜಾ ಅವರ ಮಗಳು ಎಂದು. ಇದಕ್ಕೆ ಸ್ಪಷ್ಟನೆ ನೀಡಿರೋ ನಟಿ, ಸಂಬಂಧಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಸೆನ್ಸ್​ ಇರಲಿ ಎಂದು ಸುದ್ದಿ ಹರಡಿದವರ ವಿರುದ್ಧ ಕಿಡಿ ಕಾರಿದ್ದಾರೆ. ಇದೊಂದು  ಅಸಂಬದ್ಧ ಸುದ್ದಿ ಎಂದು ಪೂಜಾ ಹೇಳಿದ್ದಾರೆ.  ಆಕೆ ನನ್ನ ಮಲತಂಗಿಯೇ ವಿನಾ ಮಗಳಲ್ಲ ಎಂದಿದ್ದಾರೆ. 'ಬಿಗ್ ಬಾಸ್'ನಿಂದ (Big Boss) ಹೊರಬಂದ ದಿನವೇ ಆಲಿಯಾ ನನಗೆ ಕರೆ ಮಾಡಿ 'ಪೂಜಾ, 'ಬಿಗ್ ಬಾಸ್' ಸಮಯದಲ್ಲಿ ನಾನು ನಿಮಗೆ ಹೆಚ್ಚು ಹತ್ತಿರವಾಗಿದ್ದೆ.  ನಾನು ಬಿಗ್​ಬಾಸ್​ ಮನೆಯಲ್ಲಿ  ನೋಡದ ಒಂದು ದಿನವೂ ಇರಲಿಲ್ಲ ಎಂದೂ ಹೇಳಿದ್ದಳು. ನಮ್ಮಿಬ್ಬರ ನಡುವೆ ಅಷ್ಟು ಅನ್ಯೋನ್ಯತೆ ಇದೆ. ಆದರೆ ಸುಖಾ ಸುಮ್ಮನೆ ಗಾಳಿ ಸುದ್ದಿ ಹರಿಬಿಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 
ಅಷ್ಟಕ್ಕೂ ಆಲಿಯಾ ಮತ್ತು ಪೂಜಾ ಅವರ ತಂದೆ ಮಹೇಶ್​ ಭಟ್​ ಅವರೇ. ಆದರೆ ಆಲಿಯಾ ಭಟ್​ (Alia Bhatt) ತಾಯಿ  ಸೋನಿ ಭಟ್. ಸೋನಿ ಮತ್ತು ಆಲಿಯಾ ನೋಡಲು ಕೂಡ ಒಂದೇ ರೀತಿಯಾಗಿದ್ದಾರೆ. ಮಹೇಶ್ 1970 ರಲ್ಲಿ ಕಿರಣ್ ಭಟ್ ಅವರನ್ನು ವಿವಾಹವಾಗಿದ್ದರು. ಈ ಜೋಡಿಗೆ ಪೂಜಾ ಭಟ್ ಮತ್ತು ರಾಹುಲ್ ಭಟ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಿರಣ್ ಅವರೊಂದಿಗಿನ  ಪ್ರತ್ಯೇಕವಾದ ಬಳಿಕ  ನಟಿ ಸೋನಿ ರಜ್ದಾನ್ ಅವರನ್ನು ಮಹೇಶ್​ ವಿವಾಹವಾದರು. ಇವರ ಮಕ್ಕಳೇ ಶಾಹೀನ್ ಭಟ್ ಮತ್ತು ಆಲಿಯಾ ಭಟ್.

ಮೈ ಮರೆತು ತಂದೆಗೇ ಲಿಪ್‌ ಲಾಕ್‌ ಮಾಡಿದ್ದ ನಟಿ, ಪೋಷಕರ ಮೇಲೆಯೇ ಲೈಂಗಿಕಾಸಕ್ತಿ, ಏನಿದು ಈಡಿಪಸ್ ಕಾಂಪ್ಲೆಕ್ಸ್?
 
 

Follow Us:
Download App:
  • android
  • ios