Asianet Suvarna News Asianet Suvarna News

ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಮದುಮಗಳಾದ ಆಲಿಯಾ ರೆಡಿಯಾಗಿದ್ದು ಹೇಗೆ? ವಿಡಿಯೋ ವೈರಲ್​

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಲ ನಟಿ ಆಲಿಯಾ ಭಟ್​ ಮದುವೆಯ ದಿನದ ಸೀರೆಯನ್ನೇ ತೊಟ್ಟು ಮದುಮಗಳಾಗಿ ಕಂಡದ್ದು ಹೇಗೆ?
 

Alia Bhatt  Receives National Film Award 2023 For Gangubai Kathiawadi  suc
Author
First Published Oct 18, 2023, 3:30 PM IST

ನಿನ್ನೆ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಯಿತು.  ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳು ಮತ್ತು ಕಲಾವಿದರು  ಮನ್ನಣೆಯನ್ನು ಪಡೆದರು.  ಕನ್ನಡದ ರಕ್ಷಿತ್‌  ಶೆಟ್ಟಿ (Rakshit Shetty ಅಭಿನಯದ 777 ಚಾರ್ಲಿ (777 Charlie) ಜೊತೆ ಹಲವಾರು ನಟ-ನಟಿಯರು ಅವಾರ್ಡ್​ ಪಡೆದರು. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಾಧಾರಣವಾಗಿ ಎಲ್ಲರೂ ಭಾರಿ ಮೇಕಪ್​ನೊಂದಿಗೆ, ಭರ್ಜರಿ ಡ್ರೆಸ್​ ಮಾಡಿಕೊಂಡು ಮಿಂಚುವುದು ಸರ್ವೇ ಸಾಮಾನ್ಯ. ಅದೇ ರೀತಿ ನಟಿ ಆಲಿಯಾ ಭಟ್​ ಕೂಡ ನಿನ್ನೆ ಮಿಂಚಿದ್ದರು. ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಚಿತ್ರದಲ್ಲಿನ ವೇಶ್ಯೆ ಪಾತ್ರದ ಅದ್ಭುತ ನಟನೆಗಾಗಿ ನಟಿಗೆ ಈ ಪ್ರಶಸ್ತಿ ದೊರೆತಿದೆ. ಆದರೆ ನಟಿ ಎಲ್ಲರಿಗಿಂತಲೂ ಹೈಲೈಟ್​ ಆಗಲು ಕಾರಣ, ಆಕೆ ಮದುವೆಯ ದಿನ ಧರಿಸಿದ್ದ ಸೀರೆಯನ್ನೇ ಉಟ್ಟು ಪ್ರಶಸ್ತಿ ಸ್ವೀಕರಿಸಲು ಬಂದಿದ್ದು! ಹೌದು. ಮದುವೆಯ ದಿನ ಹೇಗೆ ಮದುಮಗಳಾಗಿ ಕಾಣುತ್ತಿದ್ದರೋ, ಅದೇ ರೀತಿ ಅದೇ ಸೀರೆಯನ್ನುಟ್ಟು ವೇದಿಕೆಯ ಮೇಲೆ ಮದುಮಗಳಂತೆ ಕಂಗೊಳಿಸಿದರು ನಟಿ ಆಲಿಯಾ ಭಟ್​. 

  ನಟ ರಣಬೀರ್ ಕಪೂರ್ ಅವರೊಂದಿಗೆ ಆಗಮಿಸಿದ ಆಲಿಯಾ, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.  ಪ್ರಸಿದ್ಧ ವಸ್ತ್ರವಿನ್ಯಾಸಕ ಸಬ್ಯಸಾಚಿಯವರ ಸೂಕ್ಷ್ಮವಾದ ಗೋಲ್ಡನ್ ಕಸೂತಿಯನ್ನು ಒಳಗೊಂಡಿರುವ ಮದುವೆ ದಿನ ಧರಿಸಿದ್ದ ಬಿಳಿ ಬಣ್ಣದ ಸೀರೆಯಲ್ಲಿ ಆಲಿಯಾ ಕಾಂತಿಯುತವಾಗಿ ಕಾಣುತ್ತಿದ್ದರು. ನಟಿ ತನ್ನ ಕೂದಲನ್ನು ಬನ್‌ನಲ್ಲಿ ಕಟ್ಟಿದರು, ಈವೆಂಟ್‌ಗಾಗಿ ವಿಭಿನ್ನವಾದ ಆಭರಣಗಳನ್ನು ಧರಿಸಿದ್ದರು. ಪ್ರಶಸ್ತಿ ಸಮಾರಂಭದ ಚಿತ್ರಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪ್ರತಿಷ್ಠಿತ ಕಾರ್ಯಕ್ರಮದಿಂದ ಅಭಿಮಾನಿಗಳು ನಟಿಗೆ ಶುಭಾಶಯ ಕೋರಿದ್ದಾರೆ.

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿಗೆ ಗೌರವ ಪ್ರದಾನ

ಇದೇ ವೇಳೆ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಅವರ ಮಾಡಿಸಿಕೊಂಡಿರುವ ಕ್ಯೂಟ್​ ವಿಡಿಯೋಶೂಟ್​ ವೈರಲ್​ ಆಗಿದೆ.  ಆಕೆ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಪತಿ ರಣಬೀರ್ ತನ್ನ ಮೊಬೈಲ್‌ನಲ್ಲಿ ವಿಶೇಷ ಕ್ಷಣವನ್ನು ಸೆರೆಹಿಡಿಯುತ್ತಿದ್ದರು. ಅಂದಹಾಗೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷ ಏಪ್ರಿಲ್ 14 ರಂದು ಮುಂಬೈನಲ್ಲಿ   ಮದುವೆಯ ದಿನದಂದು ಚಿನ್ನದ ಆಭರಣಗಳೊಂದಿಗೆ ಇದೇ  ಬಿಳಿಯ ಸೀರೆಯಲ್ಲಿ ಆಲಿಯಾ  ಮಿಂಚುತ್ತಿದ್ದರು.  ಜನಪ್ರಿಯ ಕುಂದನ್ ಆಭರಣಗಳೊಂದಿಗೆ ಮೇಕ್ಅಪ್ ಅನ್ನು ಸರಳವಾಗಿ ಮಾಡಿಕೊಂಡಿದ್ದರು. 

ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ತಾವು ಸೀರೆಯನ್ನೇ ಉಟ್ಟಿದ್ದೇಕೆ ಎಂದು ತಿಳಿಸಿದ ಆಲಿಯಾ,  'ನಾನು ಸೀರೆಯನ್ನು ಪ್ರೀತಿಸುತ್ತೇನೆ. ಇದು ವಿಶ್ವದ ಅತ್ಯಂತ ಆರಾಮದಾಯಕವಾದ ಉಡುಪಾಗಿದೆ. ಅದಕ್ಕಾಗಿಯೇ ನಾನು ನನ್ನ ಮದುವೆಗೆ  ಲೆಹೆಂಗಾ ಬದಲು ಸೀರೆ ಧರಿಸಿದ್ದೆ. ಅವಾರ್ಡ್​ ಫಂಕ್ಷನ್​ನಲ್ಲಿಯೂ ಇದನ್ನೇ  ಧರಿಸುವುದಕ್ಕೂ ಅದೇ ಕಾರಣ ಎಂದಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಮುಂಬೈನ ಮೊದಲ ವೇಶ್ಯೆಯ ಜೀವನ ಚರಿತ್ರೆ ಆಧಾರಿತ ಚಿತ್ರ ಇದರಲ್ಲಿ ಈಕೆಯ ಪಾತ್ರವನ್ನು ಆಲಿಯಾ ಅದ್ಭುತವಾಗಿ ನಟಿಸಿದ್ದಾರೆ. 

ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು- ಜನರೂ ರಿಪೋರ್ಟ್​ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?


 

Follow Us:
Download App:
  • android
  • ios