Asianet Suvarna News Asianet Suvarna News

ಮಗಳಿಗಾಗಿ ದಿನಕ್ಕೆ 4 ಪುಸ್ತಕ ಓದೋ ಆಲಿಯಾ: ಬುಕ್ ತಬ್ಬಿಕೊಂಡೆ ನಿದ್ರೆಗೆ ಜಾರುವ ರಾಹಾ

ಬಾಲಿವುಡ್ ನಟಿ ಆಲಿಯಾ ಮಗಳು ರಾಹಾ ಹುಟ್ಟಿದ್ದ ನಂತರ ಬದಲಾದ ಲೈಫ್‌ಸ್ಟೈಲ್‌, ತಮ್ಮ ಬಾಲ್ಯ  ಹಾಗೂ ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಡಿಟೇಲ್ಡ್ ಸ್ಟೋರಿ.

Alia Bhatt Reads four books a day for daughter and Raha falls asleep hugging a book reveals Bollywood Actres akb
Author
First Published Jun 19, 2024, 7:45 PM IST

ಮುಂಬೈ: ಸೆಲೆಬ್ರಿಟಿಗಳ ಲೈಫ್‌ಸ್ಟೈಲ್‌ ತುಂಬಾ ಡಿಫರೆಂಟ್ ಸದಾ ಬ್ಯುಸಿಯಾಗಿರುವ ಅವರು ತಮ್ಮ ಕುಟುಂಬದೊಂದಿಗೆ ಮಕ್ಕಳೊಂದಿಗೆ ಸಮಯ ಕಳೆಯಲು ಸಿಗುವುದು ತೀರಾ ಕಡಿಮೆ. ಹೀಗಿರುವಾದ ಬಾಲಿವುಡ್ ನಟಿ ಆಲಿಯಾ 19 ತಿಂಗಳ ಪುಟ್ಟ ಮಗುವಿನ ತಾಯಿ, ಸಿನಿಮಾ ಹಾಗೂ ತಾಯಿ ಎಂಬ ಹೊಸಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬರುತ್ತಿರುವ ಆಲಿಯಾ, ತಮ್ಮ ಮಗಳು ರಾಹಾ ಹುಟ್ಟಿದ್ದ ನಂತರ ಬದಲಾದ ಲೈಪ್‌ಸ್ಟೈಲ್‌ ಹಾಗೂ ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಡಿಟೇಲ್ಡ್ ಸ್ಟೋರಿ.

ಆಲಿಯಾ ಅವರು ತಮ್ಮ ಪುಟ್ಟ ಮಗಳಿಗಾಗಿ ದಿನಕ್ಕೆ ಮೂರರಿಂದ 4 ಪುಸ್ತಕಗಳನ್ನು ಓದುತ್ತಾರಂತೆ. ಆದರೆ ಸ್ವತಃ ಆಲಿಯಾಗೆ ತಮ್ಮ ಬಾಲ್ಯದಲ್ಲಿ ಪುಸ್ತಕದ ಮೇಲೆ ಅಂತ ಆಸಕ್ತಿಯೇನೋ ಇರಲಿಲ್ಲ, ಅಮ್ಮ ಹಾಗೂ ಅಕ್ಕ ಪುಸ್ತಕದ ಮೇಲೆ ಆಕೆಯ ಗಮನ ಸೆಳೆಯಲು ಪ್ರಯತ್ನಿಸಿದರಾದರೂ ಅದು ಯಶಸ್ವಿಯಾಗಲೇ ಇಲ್ಲ. ಆಲಿಯಾ ತಮ್ಮ ಬಾಲ್ಯದಲ್ಲಿ ಕಿಟಕಿಯಿಂದ ಹೊರಗೆ ನೋಡುತ್ತಾ ಹಗಲು ಕನಸು ಕಾಣುತ್ತಲೇ ಬಾಲ್ಯ ಕಳೆದರಂತೆ. ಆದರೆ ಪುಸ್ತಕದ ಮೇಲೆ ಸ್ವಲ್ಪವೂ ಆಸಕ್ತಿ ಇಲ್ಲದ ಆಲಿಯಾ ಅಮ್ಮನಾದ ನಂತರ ಮಗಳಿಗಾಗಿ ಪುಸ್ತಕವೊಂದನ್ನು ಬರೆದಿದ್ದಾರೆ. 

ಸಸ್ಯಾಹಾರಿ ಪತ್ರಕರ್ತೆಗೆ ಮಾಂಸ ತಿನ್ನಿಸಿದ್ರಾ ಆಲಿಯಾ! ರಾಮನ ಪಾತ್ರಕ್ಕೆ ರಣಬೀರ್ ಮದ್ಯ ಬಿಟ್ಟಿದ್ದು ಸುಳ್ಳಾ?

ದ ಎಡ್ವೆಂಚರ್ ಆಫ್ ಇದ್ ಎ-ಮಮ್ಮ : ಇದ್ ಫೈಂಡ್ ಎ ಹೋಮ್ (The Adventures of Ed-a-Mamma: Ed Finds A Home) ಎಂಬ ಪುಸ್ತಕ ಬರೆದಿರುವ ಆಲಿಯಾ ಅದನ್ನು ತಮ್ಮ 19 ತಿಂಗಳ ಕಂದ ರಾಹಾಳಿಗೆ ಅರ್ಪಿಸಿದ್ದಾರೆ. ನಾನು ರಾಹಾಳಿಗಾಗಿ ಪ್ರತಿದಿನವೂ ಪುಸ್ತಕ ಓದುತ್ತೇನೆ, ಪ್ರತಿದಿನ ಮಧ್ಯಾಹ್ನ ಹಾಗೂ ಪ್ರತಿ ರಾತ್ರಿ ಪುಸ್ತಕ ಓದುತ್ತೇನೆ, ನಾವು ಬರೀ ಒಂದೋ ಎರಡೋ ಪುಸ್ತಕ ಓದಲ್ಲ, ಆದರೆ ಮೂರು ಪುಸ್ತಕ ಓದ್ತೇವೆ ಹಾಗೂ ಕೆಲವೊಮ್ಮೆ ಅದು ನಾಲ್ಕಾಗುತ್ತದೆ. ಅವಳು ಪುಸ್ತಕವನ್ನು ಬಹಳ ಇಷ್ಟಪಡುತ್ತಾಳೆ. ಆಕೆ ಪುಸ್ತಕವನ್ನು ತಬ್ಬಿಕೊಂಡೆ ನಿದ್ದೆ ಹೋಗುತ್ತಾಳೆ. ಇದು ಆಕೆ ಪುಸ್ತಕವನ್ನು ಎಷ್ಟು ಇಷ್ಟಪಡುತ್ತಾಳೆ ಎಂಬುದಕ್ಕೆ ಸಾಕ್ಷಿ ಎಂದು ಆಲಿಯಾ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಹೀಗಾಗಿ ಪುಟಾಣಿ ರಾಹಾ ಅಮ್ಮ ಆಲಿಯಾಳನ್ನು ದಿನವೂ ಪುಸ್ತಕ ಓದುವಂತೆ ಮಾಡುವ ಮೂಲಕ ಮಕ್ಕಳ ಸಾಹಿತ್ಯ ಪ್ರಪಂಚಕ್ಕೆ ಅಮನನ್ನು ಪರಿಚಯಿಸಿದ್ದಾಳೆ. ಆದರೆ ಇದೆಲ್ಲವೂ ನನ್ನ ಬಾಲ್ಯಕ್ಕಿಂತ ಬಹಳ ವಿಭಿನ್ನ,  ನನ್ನ ಬಾಲ್ಯದಲ್ಲಿ ನನ್ನ ಅಮ್ಮ ಸೋನಿ ರಾಜ್ದನ್ ಹಾಗೂ ಸೋದರಿ ಶಾಹಿನ್ ಭಟ್ ನನಲ್ಲಿ ಪುಸ್ತಕ ಪ್ರೇಮ ಬೆಳೆಸಲು ಬಹಳ ಪ್ರಯತ್ನಪಟ್ಟಿದ್ದರು. ಆದರೆ ತಮಾಷೆಯೆಂದರೆ ಬಾಲ್ಯದಲ್ಲಿ ನಾನು ದೊಡ್ಡ ಓದುಗಳು ಆಗಲೇ ಇಲ್ಲ, ಆದರೆ ನನ್ನ ಸೋದರಿ ಶಾಹಿನ್ ದೊಡ್ಡ ಪುಸ್ತಕ ಪ್ರೇಮಿ, ಆಕೆ ಬಾತ್‌ರೂಮ್‌ನಲ್ಲಿ ಕುಳಿತುಕೊಂಡೆ ತಡರಾತ್ರಿಯವರೆಗೂ ಹ್ಯಾರಿ ಪಾಟರ್ ಪುಸ್ತಕಗಳನ್ನು ಓದುತ್ತಿದ್ದಳು. ಅಲ್ಲದೇ ನನ್ನ ಸೋದರಿ ಹಾಗೂ ಅಮ್ಮ ಇಬ್ಬರು ಆಲಿಯಾ ಓದು ಆಲಿಯಾ ಓದು ಅಂತ ಹೇಳುತ್ತಲೇ ಇರುತ್ತಿದ್ದಿದ್ದು ನನಗೆ ಈಗಲೂ ನೆನಪಿದೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. 

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

ಆದರೆ ನಾನು ಮಾತ್ರ ಕಿಟಕಿಯಿಂದ ಹೊರಗೆ ನೋಡುತ್ತಾ ಹಗಲು ಕನಸು ಕಾಣುತ್ತಿದ್ದೆ. ನನ್ನಜ್ಜ ನನಗೆ ಕತೆ ಹೇಳುತ್ತಿದ್ದರು. ಆದರೆ ನನಗೆ ಮಾತ್ರ ಕೂತಲ್ಲೇ ಕೂರಲು ಆಗುತ್ತಿರಲಿಲ್ಲ ನಾನು ಹೈಪರ್ ಆಕ್ಟಿವ್ ಆಗಿದೆ ಎಂದು ಬಾಲ್ಯ ನೆನಪಿಸಿಕೊಂಡಿದ್ದಾರೆ ಆಲಿಯಾ. 31 ವರ್ಷದ ಆಲಿಯಾ ಹೈವೇ, ಉಡ್ತಾ ಪಂಜಾಬ್, ರಾಜಿ, ಗಂಗೂಬಾಯಿ ಹಾಗೂ ರಾಕಿ ಔರ್ ರಾಣಿ ಕಿ ಪ್ರೇಮ ಕಹಾನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಅಂದರೆ ಇದ್ ಎ ಮಮ್ಮಾ ಎಂಬ ಮೆಟರ್ನಿಟಿ ಉಡುಗೆಗಳ ಬ್ರಾಂಡ್ ಶುರು ಮಾಡುವ ಮೊದಲೇ ತನಗೆ ಈ ಸ್ಟೋರಿ ಬುಕ್ ಮಾಡುವ ಐಡಿಯಾ ಹೊಳೆದಿತ್ತು ಎಂದು ಆಲಿಯಾ ಹೇಳಿಕೊಂಡಿದ್ದಾರೆ. 

ಹನಿಮೂನ್‌ನಲ್ಲಿ ಯಾರಾದ್ರೂ ಬಟ್ಟೆ ಧರಿಸ್ತಾರಾ ಎನ್ನುತ್ತಲೇ ತಮ್ಮ ಮಧುಚಂದ್ರದ ಗುಟ್ಟು ಬಿಚ್ಚಿಟ್ಟ ಆಲಿಯಾ!

Latest Videos
Follow Us:
Download App:
  • android
  • ios