ನಟಿ ಆಲಿಯಾ ಭಟ್‌ ಮತ್ತು ನಟಿ ರಣಬೀರ್‌ ಕಪೂರ್‌ ಮದ್ವೆಯಾಗಿ ಎರಡು ವರ್ಷಗಳಾಗಿದ್ದು, ಇದೀಗ ಆಲಿಯಾ ಭಟ್‌ ಹನಿಮೂನ್‌ ಕುರಿತು ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ.  

 ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರದ್ದು. ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ಏಪ್ರಿಲ್ 2022 ರಲ್ಲಿ ಮುಂಬೈನ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು. ಏಳೇ ತಿಂಗಳಿಗೆ ನಟಿ ಗರ್ಭಿಣಿಯಾದರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿ ಸಕತ್‌ ಸದ್ದು ಮಾಡಿದ್ದರು. ಮದುವೆಗೂ ಮುನ್ನವೇ ನಟಿ ಗರ್ಭಿಣಿಯಾಗಿದ್ದರು ಎಂದು ಬಿ-ಟೌನ್‌ನಲ್ಲಿ ಬಿಸಿಬಿಸಿ ಚರ್ಚೆಯಾಗಿತ್ತು. 

ಇದೀಗ ನಟಿ ತಮ್ಮ ಹನಿಮೂನ್‌ ಪಯಣದ ಕುರಿತು ಈ ಹಿಂದೆ ಹೇಳಿದ ವಿಡಿಯೋ ಒಂದು ಸಕತ್‌ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ತಮ್ಮ ಚಿಕ್ಕಮ್ಮನ ಜೊತೆ ಮಾತನಾಡುತ್ತಿರುವ ವಿಡಿಯೋ ಆಗಿದೆ. ಇದರಲ್ಲಿ ಅವರು ತಮ್ಮ ಹನಿಮೂನ್‌ ಕುರಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಚಿಕ್ಕಮ್ಮ ಹನಿಮೂನ್‌ನಲ್ಲಿ ಯಾವ ಬಟ್ಟೆಗಳನ್ನು ಧರಿಸಿದ್ದಿ ಎಂದು ಪ್ರಶ್ನಿಸಿದಾಗ ನಟಿ, ಹನಿಮೂನ್‌ನಲ್ಲಿ ಯಾರು ಬಟ್ಟೆ ಧರಿಸುತ್ತಾರೆ ಎಂದು ಹೇಳಿದ್ದಾರೆ. ಇದರ ವಿಡಿಯೋ ಮಿಂಚಿನಂತೆ ವೈರಲ್‌ ಆಗಿದ್ದು, ಥಹರೇವಾಗಿ ಕಮೆಂಟ್ಸ್‌ಗಳು ಬರುತ್ತಿವೆ. ಅಷ್ಟಕ್ಕೂ ಹನಿಮೂನ್‌ ಮಾಡಿದ್ದು, ಮದುವೆಗೆ ಮುನ್ನವೇ ಅಥವಾ ನಂತರವೇ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ಟ್ರೋಲಿಗರು.

ಸೌಂದರ್ಯ ಸ್ಪರ್ಧೆ ಕಿರೀಟ ಮಾರಾಟಕ್ಕಿದೆ! ಬ್ಯೂಟಿ ಸ್ಪರ್ಧೆಯ ಶಾಕಿಂಗ್ ವಿಷ್ಯ ರಿವೀಲ್​ ಮಾಡಿದ ​ಮಿಸಸ್​ ವರ್ಲ್ಡ್​

ಇನ್ನು ಆಲಿಯಾ ಕುರಿತು ಹೇಳುವುದಾದರೆ, ಇವರು ವೃತ್ತಿಜೀವನದುದ್ದಕ್ಕೂ, ಅವರು ಹಲವು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಇವರು ಎರಡು ವರ್ಷದ ರಾಹಾಗೆ ಅಮ್ಮನಾಗಿದ್ದಾರೆ. ಇದರ ಹೊರತಾಗಿಯೂ ಈಕೆ ಈಗಲೂ ಮೋಸ್ಟ್​ ವಾಂಟೆಡ್​ ನಟಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿದ್ದ ಆಲಿಯಾ ಭಟ್‌, ನನ್ನ 11ನೇ ವಯಸ್ಸಿನಲ್ಲಿ ನಾನು ರಣಬೀರ್‌ರನ್ನು ಭೇಟಿಯಾಗಿದ್ದೆ. ಬ್ಲ್ಯಾಕ್‌ ಸಿನಿಮಾದ ಆಡಿಷನ್‌ನಲ್ಲಿ ಅವರ ಪರಿಚಯವಾಗಿತ್ತು. ಅಂದಿನಿಂದಲೇ ನನಗೆ ಅವರ ಮೇಲೆ ಕ್ರಶ್‌ ಆಗಿತ್ತು ಎಂದು ವಿವರಿಸಿದ್ದರು.

ಹನಿಮೂನ್‌ ವಿಷಯದ ಕುರಿತು ಹೇಳುವ ಸಂದರ್ಭದಲ್ಲಿಲೇ ತಮ್ಮ ಪ್ರೆಗ್ನೆನ್ಸಿ ಕುರಿತು ನಟಿ ಹೇಳಿರುವ ಕೆಲವು ವಿಷಯಗಳೂ ಇದೀಗ ಬೆಳಕಿಗೆ ಬಂದಿದೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾಗ, ಈಕೆಯ ಫ್ಯಾನ್ಸ್​ ಆಲಿಯಾಗೆ ಏನು ಇಷ್ಟ ಎಂಬ ಬಗ್ಗೆ ಸಾಕಷ್ಟು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದರಂತೆ. ಮಾತ್ರವಲ್ಲದೇ ನಟಿ ಗರ್ಭಿಣಿಯಾದಾಗ ಎಲ್ಲಿ ಬಟ್ಟೆ ಖರೀದಿಸುತ್ತಾರೆ ಎನ್ನುವ ಬಗ್ಗೆಯೂ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದರಂತೆ. ತಮಗೆ ಗರ್ಭಾವಸ್ಥೆಯಲ್ಲಿ ಕೋಲ್ಕತಾದ ನೋಲೆನ್ ಗುಡ್ ಸ್ವೀಟ್​ ತಿನ್ನಬೇಕು ಎಂದು ಹಂಬಲಿಸಿರುವುದಾಗಿ ಹೇಳಿದ್ದರು ನಟಿ. ಆಲಿಯಾ ಬೆಂಗಾಲಿ ಸಿಹಿತಿಂಡಿಗಳನ್ನು ನಿಯಮಿತವಾಗಿ ತಿನ್ನಬೇಕು ಎನ್ನಿಸಿತ್ತಂತೆ. 

ಕಿರುತೆರೆ ಕಲಾವಿದರ ಜೊತೆ ಮೈಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ ಮಹಾನಟಿಯರು: ಉಫ್​ ಎಂದ ಫ್ಯಾನ್ಸ್​