ಹೆಣ್ಣು ಮಗುವಿಗೆ ಪೋಷಕರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಕಪೂರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 

ಬಾಲಿವುಡ್ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಹಾಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ರಿಲೈನ್ಸ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕಪೂರ್ ಮತ್ತು ಭಟ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶುಗಳು ಹರಿದು ಬರುತ್ತಿದೆ. 

'ಆಲಿಯಾ ಭಟ್ ಲೇಬರ್ ರೂಮ್‌ಗೆ ಹೋಗಿದ್ದಾರೆ 45-50 ನಿಮಿಷಗಳಲ್ಲಿ ಡೆಲಿವರಿ ಆಗಲಿದೆ. ವೈದ್ಯರು ಚೆಕಪ್ ಮಾಡುತ್ತಿದ್ದಾರೆ' ಎಂದು ಆಲಿಯಾ ಆಸ್ಪತ್ರೆ ಪ್ರವೇಶ ಮಾಡುವಾಗ ಭಟ್ ಕುಟುಂಬದವರು ಇಟೈಮ್ಸ್‌ಗೆ ತಿಳಿಸಿದ್ದರು. 

ಮಹೇಶ್‌ ಭಟ್‌ಗೆ ಮೂವರು ಹೆಣ್ಣು ಮಕ್ಕಳಿರುವ ಕಾರಣ ಆಲಿಯಾ ಮೆಟರ್ನಲ್‌ ಸೈಡ್‌ ಬರ್ತ್‌ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅದಕ್ಕೂ ಹೆಚ್ಚಾಗಿ ಮಗು ನೋಡಲು ಯಾರಂತಿದೆ ಏನೆಂದು ಹೆಸರು ಇಡಬಹುದು ಎನ್ನುವ ಚರ್ಚೆ ಕೂಡ ಜೋರಾಗಿದೆ.

ಮ್ಯಾರೀಡ್‌ ಲೈಫ್‌ ಬಗ್ಗೆ ಮಾತು:

'ಅಂತಹ ದೊಡ್ಡ ಬದಲಾವಣೆ ಆಗಿಲ್ಲ. ನಾವು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ನಾವು ಮದುವೆಯಾಗೋಣ ಎಂದುಕೊಂಡೆವು. ನಮಗೂ ಕೆಲವು ಬದ್ಧತೆಗಳಿದ್ದವು. ಮದುವೆಯ ಮರುದಿನವೇ ನಾವಿಬ್ಬರೂ ಕೆಲಸಕ್ಕೆ ಹೊರಟೆವು. ಆಲಿಯಾ ಶೂಟಿಂಗ್‌ಗೆ ಹೋಗಿದ್ದಳು ಮತ್ತು ನಾನು ಮನಾಲಿಯಲ್ಲಿದ್ದೆ.ಆಕೆ ಲಂಡನ್ ನಿಂದ ಬಂದಾಗ ನನ್ನ ‘ಶಂಶೇರಾ’ ಚಿತ್ರ ಬಿಡುಗಡೆಯಾಗುತ್ತದೆ. ಅದರ ನಂತರ ನಾವು ಒಂದು ವಾರ ರಜೆ ತೆಗೆದುಕೊಳ್ಳಲು ಯೋಚಿಸುತ್ತೇವೆ. ನಾವು ಮದುವೆಯಾಗಿದ್ದೇವೆ ಎಂದು ನಮಗೆ ಇನ್ನೂ ತಿಳಿದಿಲ್ಲ' ಎಂದು ರಣಬೀರ್ ಮಾತನಾಡಿದ್ದಾರೆ.

ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ರಣಬೀರ್:

ಅಯಾನ್ ಮುಖರ್ಜಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡುವಾಗ ಅನ್‌ಸ್ಕ್ರೀನ್ ಕ್ಯಾರೆಕ್ಟ್‌ ಮತ್ತು ಆಫ್‌ಸ್ಕ್ರೀನ್‌ ಕ್ಯಾರೆಕ್ಟರ್‌ನಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ರಣಬೀರ್ ರಿವೀಲ್ ಮಾಡಿದ್ದಾರೆ. 

ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ಬಾತ್‌ರೂಮ್‌ಗೂ ಹೋಗಲ್ಲ: ರಣಬೀರ್ ಕಪೂರ್

'ನಾನು ಇಂಡಿಪೆಂಡೆಂಟ್‌ ಅಂತ ಎಲ್ಲೇ ಹೋದ್ದರೂ ಹೇಳಿಕೊಳ್ಳುತ್ತೀನಿ ಆದರೆ ರಿಯಾಲಿಟಿ ಬೇರೆ ಇದೆ. ನಾನು ಅಲಿಯಾ ಮೇಲೆ ತುಂಬಾ ಡಿಪೆಂಡ್ ಆಗಿರುವೆ. ಆಲಿಯಾ ಪಕ್ಕದಲ್ಲಿ ಇಲ್ಲ ಅಂದ್ರೆ ನಾನು ತಿಂಡಿನೂ ತಿನ್ನುವುದಿಲ್ಲ ಬಾತ್‌ರೂಮ್‌ಗೂ ಹೋಗುವುದಿಲ್ಲ. ಆಲಿಯಾ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಮೇಲೆ ನನ್ನ ಕೆಲಸ ಆರಂಭಿಸುವುದು. ನನ್ನ ಪಕ್ಕ ಆಲಿಯಾ ಇದ್ದರೆ ಧೈರ್ಯ ಹೆಚ್ಚಾಗುತ್ತದೆ ಜೊತೆಗಿದ್ದೀವಿ ಅಂದ್ರೆ ನಾವು ರೊಮ್ಯಾನ್ಸ್‌ ಮಾಡ್ತೀವಿ ಅಂತಲ್ಲ ಸುಮ್ಮನೆ ಕುಳಿತುಕೊಳ್ಳಬೇಕು ಅಂತಲ್ಲ ಕಣ್ಣಿಗೆ ಕಾಣಿಸಿಕೊಂಡರೆ ಅಷ್ಟೇ ಸಾಕು' ಎಂದು ರಣಬೀರ್ ಹೇಳಿದ್ದಾರೆ.

ರಣಬೀರ್ ಮಾತುಗಳನ್ನು ಆಲಿಯಾ ಭಟ್ ಒಪ್ಪಿಕೊಂಡಿದ್ದಾರೆ 'ನಾನು ಪಕ್ಕದಲ್ಲಿ ಇಲ್ಲ ಅಂದ್ರೆ ರಣಬೀರ್‌ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ. ನಾನು ಸುತ್ತಲಿಲ್ಲ ಅಂದ್ರೆ ರಣಬೀರ್ ಪ್ರತಿಯೊಂದು ಕೆಲಸವನ್ನು ಲಾಸ್ಟ್‌ ಮಿನಿಟ್‌ಗೆ ಬಿಡುತ್ತಾನೆ' ಎಂದಿದ್ದಾರೆ ಆಲಿಯಾ ಭಟ್.