ನೆಟ್ಟಿಗರ ಮನ ಗೆದ್ದ ಆಲಿಯಾ ಮಗಳು ರಾಹಾ, ವಿಡಿಯೋ ನೋಡಿದ್ರೆ ಮುದ್ದು ಮಾಡೋಣ ಅನ್ಸುತ್ತೆ!
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮಗಳು ರಾಹಾ ನೆಟ್ಟಿಗರ ಮನಸ್ಸು ಕದ್ದಿದ್ದಾಳೆ. ಆಕೆ ಕ್ಯೂಟ್ ವಿಡಿಯೋ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಬಾಲಿವುಡ್ ಕ್ಯೂಟ್ ಕಪಲ್ ಆಲಿಯಾ ಭಟ್ (Bollywood Cute Couple Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಮಗಳು ರಾಹಾ ಕಪೂರ್ (Raha Kapoor) ಮತ್ತೊಮ್ಮೆ ಫ್ಯಾನ್ಸ್ ಹೃದಯ ಕದಿಯೋದ್ರಲ್ಲಿ ಯಶಸ್ವಿಯಾಗಿದ್ದಾಳೆ. ಎರಡು ವರ್ಷದ ಮುದ್ದು ರಾಹಾಳ ಕ್ಯೂಟ್ ರಿಯಾಕ್ಷನ್ ವೈರಲ್ ಆಗಿದೆ. ಪಾಪರಾಜಿಗಳನ್ನು ಕಾಣ್ತಿದ್ದಂತೆ ಫ್ಲೈಯಿಂಗ್ ಕಿಸ್ ನೀಡಿದ ರಾಹಾ, ಬೈ ಎನ್ನುತ್ತ ಅಭಿಮಾನಿಗಳ ಮನಸ್ಸು ಗೆದ್ದಿದ್ದಾಳೆ.
ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ರಣಬೀರ್ ಕಪೂರ್ ಹಾಗೂ ಆಲಿಯಾ ವಿಮಾನ ಏರಿದ್ದಾರೆ. ರಾಹಾ ಜೊತೆ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಗಮನ ಸೆಳೆದಿದೆ. ರಣಬೀರ್ ಹಾಗೂ ಆಲಿಯಾ ಬೋರ್ಡಿಂಗ್ ನಲ್ಲಿ ಬ್ಯುಸಿ ಇದ್ರೆ ರಾಹಾ ಮಾತ್ರ ಪಾಪರಾಜಿಗಳು ಕೂಗ್ತಿದ್ದಂತೆ ಅವರಿಗೆ ರಿಯಾಕ್ಟ್ ಮಾಡಿದ್ದಾಳೆ. ಬಿಳಿ ಬಣ್ಣದ ಡ್ರೆಸ್ ಧರಿಸಿ, ಅಮ್ಮನಿಗೆ ಮ್ಯಾಚಿಂಗ್ ಮಾಡ್ಕೊಂಡಿದ್ದ ರಾಹಾ, ಪಾಪರಾಜಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಲ್ಲದೆ ಬೈ ಅಂತ ತನ್ನ ಕ್ಯೂಟ್ ಧ್ವನಿಯಲ್ಲಿ ಹೇಳಿದ್ದಾಳೆ. ಇದನ್ನು ಕೇಳ್ತಿದ್ದಂತೆ ನೆಟ್ಟಿಗರು ಕಳೆದು ಹೋಗಿದ್ದಾರೆ. ರಾಹಾ ರಿಯಾಕ್ಷನ್ ನೋಡಿ, ಆಲಿಯಾ ನಗ್ತಿದ್ದಾರೆ.
ಅಲ್ಲು ಅರ್ಜುನ್-ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಮಲ್ಟಿಸ್ಟಾರರ್ ಚಿತ್ರ?: ಬಾಲಿವುಡ್ ನಿರ್ಮಾಪಕರಿಂದ ಪ್ರಯತ್ನ
ಎರಡು ದಿನಗಳ ಹಿಂದೆ ರಾಹಾ ಕ್ರಿಸ್ಮಸ್ ವಿಡಿಯೋ ವೈರಲ್ ಆಗಿತ್ತು. ಕಾರಿನಿಂದ ಇಳಿದ ಆಲಿಯಾ, ಪಾಪರಾಜಿಗಳಿಗೆ ಸೌಂಡ್ ಮಾಡ್ಬೇಡಿ ಎಂದು ವಿನಂತಿ ಮಾಡಿದ್ದರು. ಸ್ವಲ್ಪ ಕಡಿಮೆ, ಸ್ವಲ್ಪ ಕಡಿಮೆ ಮಾಡಿ, ರಾಹಾ ಹೆದರುತ್ತಿದ್ದಾಳೆ ಅಂತ ಕೈ ಮುಗಿದಿದ್ದರು. ನಂತ್ರ ರಣಬೀರ್ ಕಪೂರ್ ಜೊತೆ ಕಾರಿನಿಂದ ಹೊರಗೆ ಬಂದ ಆಲಿಯಾ ಕೆಳಗೆ ಇಳಿಯೋಕೆ ಹೆದರಿದ್ರೂ ಹ್ಯಾಪಿ ಕ್ರಿಸ್ಮಸ್ ಅಂತ ವಿಶ್ ಮಾಡಿದ್ದಲ್ಲದೆ ಬಾಯ್ ಎನ್ನುತ್ತ ಕೈ ಬೀಸಿದ್ದಳು. ಈ ವಿಡಿಯೊ ನೋಡಿದ ಜನರು ಆಲಿಯಾ ಸ್ವಲ್ಪ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಅಂದ್ರೂ, ರಾಹಾ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದರು.
ಕಪೂರ್ ಕುಟುಂಬ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಈ ವರ್ಷವೂ ಕ್ರಿಸ್ಮಸ್ ಪಾರ್ಟಿ ಏರ್ಪಡಿಸಿತ್ತು. ಅದ್ರಲ್ಲಿ ಆಲಿಯಾ, ರಣಬೀರ್ ಜೊತೆ ರಾಹಾ ಮಿಂಚಿದ್ದಳು. ಅವಳ ಫೋಟೋಗಳನ್ನು ಆಲಿಯಾ, ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಆಗಾಗ ಮಗಳು ರಾಹಾ ಜೊತೆ ಕಾಣಿಸಿಕೊಳ್ತಿರುತ್ತಾರೆ. ಪಾಪರಾಜಿಗಳಿಗೆ ಹೆದರಿದ್ರೂ ರಾಹಾ ಕ್ಯೂಟ್ ರಿಯಾಕ್ಷನ್ ನೀಡೋದನ್ನು ಮರೆಯೋದಿಲ್ಲ. ರಾಹಾ ವಿಡಿಯೋ ನೋಡಿದ ಫ್ಯಾನ್ಸ್ ಲೈಕ್ ಮೇಲೆ ಲೈಕ್ ಕೊಟ್ಟಿದ್ದಾರೆ. ರಾಹಾ ದೊಡ್ಡವಳಾಗ್ತಿದ್ದಂತೆ ಜನರ ಮನಸ್ಸನ್ನು ಕದಿಯೋದು ಗ್ಯಾರಂಟಿ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ರಾಹಾ ವಿಡಿಯೋ ನೋಡಿದ ಬಳಕೆದಾರರೊಬ್ಬರು, ನನಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನೆನಪಿಗೆ ಬರ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಎದೆಗವಚಿಕೊಂಡು ಹೋಗ್ತಾರೆ. ಕೈನಲ್ಲಿ ಬಾಂಬ್ ಇಟ್ಕೊಂಡಿದ್ದಾರೋ ಇಲ್ಲ ಮಗುವನ್ನು ಎತ್ತಿಕೊಂಡಿದ್ದಾರೋ ತಿಳಿಯೋದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ನನಗೆ ಯಾವುದೇ ನಟ, ನಟಿಯರು ಇಷ್ಟವಿಲ್ಲ. ಅವರ ಮಕ್ಕಳನ್ನು ಕೂಡ ನಾನು ನೋಡೋದಿಲ್ಲ. ಆದ್ರೆ ರಾಹಾ ಓವರ್ ಕ್ಯೂಟ್. ಅವಳನ್ನು ನೋಡ್ತಿದ್ದಂತೆ ಮುಖದಲ್ಲೊಂದು ನಗು ಬರುತ್ತೆ ಎಂದು ಫ್ಯಾನ್ಸ್ ಒಬ್ಬರು ಕಮೆಂಟ್ ಮಾಡಿದ್ದಾರೆ. ಆಲಿಯಾ ಮುದ್ದು ಮಗಳು ರಾಹಾಗೆ ಈಗ ಎರಡು ವರ್ಷ. ನವೆಂಬರ್ ನಲ್ಲಿ ಹುಟ್ಟಿರುವ ಆಲಿಯಾ ಆರಂಭದಿಂದಲೂ ಸುದ್ದಿಯಲ್ಲಿದ್ದಾಳೆ.