ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!

ಈ ಅಭಿಮಾನಿಗಳ ಕಾರಣಕ್ಕೆ, ಅವರ ಖುಷಿಗಾಗಿ ಸ್ಟಾರ್ ನಟರುಗಳು ಹೊರಗಡೆ ತೋರಿಸಿಕೊಳ್ಳದೇ ಕದ್ದುಮುಚ್ಚಿ ಭೇಟಿಯಾಗುವುದು, ಕಾಲ್ ಮಾಡಿಕೊಂಡು ಮಾತನಾಡುವುದು ಇವೆಲ್ಲ ಬಹಳಷ್ಟು ಕಾಲದಿಂದಲೂ ನಡೆದುಕೊಂಡೇ ಬಂದಿವೆ. ಈ ಅಭಿಮಾನಿ ದೇವರುಗಳಿಗೋಸ್ಕರ ಸ್ಟಾರ್ ನಟರು ತಮ್ಮತನವನ್ನೂ ಬದಿಗೊತ್ತಿ ಕದ್ದುಮುಚ್ಚಿ ಗೌರವಿಸುವುದನ್ನು...

Kannada film star actors shows togetherness in recent days srb

ಕನ್ನಡ ಚಿತ್ರರಂಗದಲ್ಲಿ (Kannada Film Industry) ಅಂದು, ಅಂದರೆ ಐದು ವರ್ಷದ ಹಿಂದೆ ಇದ್ದ ಒಂದು ಸ್ಟಾರ್ ವಾರ್‌ ಇಂದು ಮಾಯವಾಗಿದೆ. ಇದು ನಿಜವಾಗಿಯೂ ತುಂಬಾ ಒಳ್ಳೆಯ ಬೆಳವಣಿಗೆ ಅಂತಿದಾರೆ ಸೋಷಿಯಲ್ ಮೀಡಿಯಾದಲ್ಲಿ ಹಲವರು. ಡಾ ರಾಜ್‌ಕುಮಾರ್-ಡಾ ವಿಷ್ಣುವರ್ಧನ್ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ಗಲಾಟೆ, ಸ್ಟಾರ್ ವಾರ್, ಪರಸ್ಪರ ಮುನಿಸು, ಬೇರೆ ನಟರಿಗೆ ತಮ್ಮತಮ್ಮ ಸಿನಿಮಾಗಳಲ್ಲಿ ಡೈಲಾಗ್ ಮೂಲಕ ಟಾಂಗ್ ಕೊಡುತ್ತಾರ ಎಬ ಮಾತುಗಳು, ಇವೆಲ್ಲವೂ ನಡೆಯುತ್ತಲೇ ಬಂದಿವೆ ಎಂಬುದು ಹಲವರಿಗೆ ತಿಳಿದಿರುವ ಸಂಗತಿ. ಆದರೆ ಇತ್ತಿಚೆಗೆ ಅದು ಸಾಕಷ್ಟು ಬದಲಾಗಿದೆ, ಇಲ್ಲವೇ ಇಲ್ಲ ಎಂಬಷ್ಟು ಮಾಯವಾಗಿದೆ ಎನ್ನಬಹುದು. 

ಈ ಅಭಿಮಾನಿಗಳ ಕಾರಣಕ್ಕೆ, ಅವರ ಖುಷಿಗಾಗಿ ಸ್ಟಾರ್ ನಟರುಗಳು ಹೊರಗಡೆ ತೋರಿಸಿಕೊಳ್ಳದೇ ಕದ್ದುಮುಚ್ಚಿ ಭೇಟಿಯಾಗುವುದು, ಕಾಲ್ ಮಾಡಿಕೊಂಡು ಮಾತನಾಡುವುದು ಇವೆಲ್ಲ ಬಹಳಷ್ಟು ಕಾಲದಿಂದಲೂ ನಡೆದುಕೊಂಡೇ ಬಂದಿವೆ. ಈ ಅಭಿಮಾನಿ ದೇವರುಗಳಿಗೋಸ್ಕರ ಸ್ಟಾರ್ ನಟರು ತಮ್ಮತನವನ್ನೂ ಬದಿಗೊತ್ತಿ ಕದ್ದುಮುಚ್ಚಿ ಗೌರವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು ಎಂಬುದು ಇತ್ತೀಚೆಗೆ 'ವೀಕೆಂಡ್ ವಿತ್ ರಮೇಶ್' ಶೋ, ಅಲ್ಲೊಂದು ಇಲ್ಲೊಂದು ಸಂದರ್ಶನಗಳ ಮೂಲಕ ಬಹಿರಂಗ ಆಗುತ್ತಿವೆ. ಈ ಮೊದಲು ಅವೂ ಕೂಡ ಹೊರಜಗತ್ತಿಗೆ ಗೊತ್ತಾಗದಂತೆ ಇರುತ್ತಿತ್ತು. 

ಹಿರಿಯ ಸ್ಪರ್ಧಿ ಮಾತು ಕೇಳಿ ಅನುಶ್ರೀ ಕಣ್ಣೀರು ಸುರಿಸಿದರು, 'ವಿಪಿ' ಕೈ ಮುಗಿದು ಕಾಲಿಗೆ ಬಿದ್ದರು!

ಇತ್ತೀಚೆಗೆ ಅಟ್‌ಲೀಸ್ಟ್ ಅದನ್ನು, ಅಂದರೆ ಒಗ್ಗಟ್ಟನ್ನು, ಪರಸ್ಪರ ಗೌರವಾದರಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳುವಷ್ಟರ ಮಟ್ಟಿಗೆ ಸ್ಟಾರ್ ನಟರು ಪ್ರಬುದ್ಧತೆ ತೋರಿಸುತ್ತಿದ್ದಾರೆ ಎನ್ನಬಹುದು. ಕಾರಣ, ಈಗ್ಗೆ ಹತ್ತು ದಿನಗಳ ಹಿಂದೆ ನಡೆದ ಉಪೇಂದ್ರ ಅವರ 'ಯುಐ' ಪ್ರೀಮಿಯರ್ ಶೋ, ಅದಕ್ಕೂ ಮೊದಲು ಶಿವಣ್ಣ ಅವರನ್ನು ಅಮೆರಿಕಕ್ಕೆ ಕಳಿಸಿಕೊಡುವ ಸಮಯ, ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಪ್ರೀಮಿಯರ್ ಶೋ, ಹೀಗೆ ಹಲವಾರು ಸಂದರ್ಭಗಳಲ್ಲಿ ಇಡೀ ಚಿತ್ರರಂಗ, ಅದಿರಲಿ ಸ್ಟಾರ್ ನಟರುಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ ಎನ್ನಬಹುದು. ಇದು ಹೀಗೇ ಮುಂದುವರಿಯಲಿ ಎಂಬುದು ಹಲವರ ಆಶಯವಾಗಿದೆ. 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಈ ಸ್ಟಾರ್ ವಾರ್, ಫ್ಯಾನ್ಸ್‌ ವಾರ್ ಎಂಬುದು ಜಗತ್ತಿನ ಎಲ್ಲ ಕಡೆಗಳಲ್ಲಿ ಇದೆ ಎನ್ನಬಹುದು. ಅದರಲ್ಲೂ ಭಾರತದಲ್ಲಂತೂ ಇದ್ದೇ ಇದೆ. ಅದರಲ್ಲೂ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ನಾವು ಇದನ್ನು ಡಾ ರಾಜ್‌ ಕಾಲದಿಂದಲೂ ಕಾಣುತ್ತಲೇ ಬಂದಿದ್ದೇವೆ. ಇದೊಂಥರಾ 'ಹೆರಿಡಿಟರಿ' ಸಮಸ್ಯೆ ಎನ್ನುವಂತೆ ಬೆಳೆದುಕೊಂಡು ಬಂದಿದೆ. ಜನಸಾಮಾನ್ಯರೂ ಕೂಡ ಇಂದು ಹಳೆಯ ಘಟನೆಗಳು, ಸ್ಟಾರ್ ವಾರ್ ನೆನಪಿಸಿಕೊಂಡು ಅದನ್ನು ಆಯಾ ಸ್ಟಾರ್‌ಗಳು ಅಂದೇ ಬಗೆಹರಿಸಿಕೊಳ್ಳಬೇಕಿತ್ತು. ಹಾಗೆ ಮಾಡಿದಿದ್ದರೆ ಇಂದು ಅದು 'ಬಣ'ಗಳಂತೆ ಕೆಲಸ ಮಾಡುತ್ತಿರಲಿಲ್ಲ ಎನ್ನುತ್ತಿರುವುದು ಸೀಕ್ರೆಟ್‌ ಸಂಗತಿಯೇನಲ್ಲ. 

ಸುದೀಪ್ ಮ್ಯಾಕ್ಸ್ ಸಿನಿಮಾ ಹೊಗಳಿ 'ಜೈ ಕಿಚ್ಚ ಬಾಸ್' ಎಂದ ಯಶ್ ಫ್ಯಾನ್ಸ್!

ಅಂದು ನಟ ರೆಬೆಲ್ ಸ್ಟಾರ್ ಅಂಬರೀಷ್, ಅನಂತ್ ನಾಗ್ ಸೇರಿದಂತೆ ಹಲವರು ಹಾಗೂ ಅವರ ಅಭಿಮಾನಿಗಳು ಅಂತಹ ಯಾವುದೇ ಫ್ಯಾನ್ಸ್‌ ವಾರ್‌ಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಎಲ್ಲರೊಂದಿಗೆ ಸ್ನೇಹ-ಗೌರವದಿಂದ ಇದ್ದು ಸಾಮರಸ್ಯ ಕಾಪಾಡಿಕೊಂಡಿದ್ದರು. ಹೆಚ್ಚಿನ ಸ್ಟಾರ್‌ಗಳು ಅಭಿಮಾನಿಗಳ ಮಧ್ಯೆ ಅದು ಕಂಡುಬಂದಾಗ ಕೂಡ 'ಮೌನಂ ಸಮ್ಮತಿ ಲಕ್ಷಣಂ' ಎಂಬಂತೆ ಇದ್ದುಬಿಟ್ಟು ಅದು ಇನ್ನೂ ಹೆಚ್ಚಾಗಲು ಕಾರಣರಾದರು ಎಂಬುದು ಇಂದು ಬಹುತೇಕ ಎಲ್ಲರೂ ಹೇಳುವ ಹಾಗೂ ಒಪ್ಪುವ ಮಾತು. 

ಅದೇನೇ ಇದ್ದರೂ ಈಗ ಸರಿ ಮಾಡುವುದು ಕಷ್ಟವೇ. ಈಗ ಇಲ್ಲದಿರುವವರು ಬಂದು ಅದನ್ನು ಮತ್ತೆ ಸರಿ ಮಾಡಲಿ ಎಂದು ಬಯಸಲು ಅಸಾಧ್ಯ. ಆದರೆ ಇಂದಿನ ಸ್ಟಾರ್ ನಟರು ಹಾಗೂ ಅವರ ಫ್ಯಾನ್ಸ್‌ ಆ ಬಗ್ಗೆ ಸಾಕಷ್ಟು ಪ್ರಬುದ್ಧತೆ ಪ್ರದರ್ಶಿಸುತ್ತಿರುವುದು ಸದ್ಯ ಕಂಡುಬರುತ್ತಿದೆ. ಅದರಲ್ಲೂ ಉಪೇಂದ್ರ, ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್, ವಿನೋದ್ ರಾಜ್ ಅಂಥವರ ಫ್ಯಾನ್ಸ್‌ ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 

ಯಶ್ ನಡತೆ ಬಗ್ಗೆ ಆಕ್ಷೇಪ ಎತ್ತಿದ ಸುದೀಪ್ ಫ್ಯಾನ್ಸ್‌, ರಾಕಿಂಗ್ ಸ್ಟಾರ್‌ಗೆ ಬುದ್ಧಿ ಹೇಳಿದ್ದ ಕನ್ನಡದ ಕಿಚ್ಚ!

ಕಿಚ್ಚ ಸುದೀಪ್ ಅವರ ಬಗ್ಗೆಯಂತೂ 'ಸ್ಟಾರ್‌ಗಳನ್ನು ಒಗ್ಗೂಡಿಸುವ ಕಲೆಗಾರ' ಎಂದೇ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ. ಸದ್ಯ ನಟ ದರ್ಶನ್ ಅವರು ವೈಯಕ್ತಿಕ ಸಮಸ್ಯೆಯಲ್ಲಿ ಸಿಲುಕಿರುವುದರಿಂದ ಅವರ ಬಗ್ಗೆ ಈಗ ಯಾವುದೇ ಮಾತು ಹೇಳುವುದು ಸಮಂಜಸವಲ್ಲ. ಆದರೆ, ಇಂದು ಸುದೀಪ್-ದರ್ಶನ್ ಅಭಿಮಾನಿಗಳ ವಾರ್ ಅಷ್ಟಾಗಿ ಕಂಡು ಬರುತ್ತಿಲ್ಲ. ಸುದೀಪ್-ಯಶ್ ಫ್ಯಾನ್ಸ್‌ಗಳಂತೂ ಕೈಕೈ ಹಿಡಿದುಕೊಂಡು ಓಡಾಡುವುದೊಂದೇ ಬಾಕಿ ಎನ್ನಬಹುದು. ಉಳಿದ ಫ್ಯಾನ್ಸ್‌ ಗಲಾಟೆಗಳೂ ಕಂಡುಬರುತ್ತಿಲ್ಲ. ಫ್ಯಾನ್ಸ್‌ಗಳ ಗಲಾಟೆಗಳು ಇಲ್ಲದಿದ್ದರೆ ಎಲ್ಲ ಸ್ಟಾರ್‌ಗಳು ಕೂಡ ಅವರವರ ಕೆಲಸಕಾರ್ಯಗಳನ್ನು ಮಾಡಿಕೊಂಡು ಇರಬಹುದು. 

ಕಿಚ್ಚ ಸುದೀಪ್ 'ಮ್ಯಾಕ್ಸ್‌' ಸಿನಿಮಾ ನೋಡಿ ಯಶ್ ಅಭಿಮಾನಿಗಳು 'ಜೈ ಕಿಚ್ಚ ಬಾಸ್' ಅಂತಿದಾರೆ, ಸುದೀಪ್ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲದೇ ಅವರ ಪರ ನಿಂತಿದ್ದಾರೆ. ಇನ್ನು ಪುನೀತ್-ದರ್ಶನ್-ಸುದೀಪ್-ಯಶ್ ಅಭಿಮಾನಿಗಳ ಮಧ್ಯೆಯೂ ಯಾವುದೇ ಗೊಂದಲಗಳು ಮೂಡುತ್ತಿಲ್ಲ. ಉಪೇಂದ್ರ ಅಭಿಮಾನಿಗಳಂತೂ 'ನಾವು ಸ್ಟಾರ್‌ ವಾರ್ ಆಟದಲ್ಲೇ ಇಲ್ಲ' ಎನ್ನುವಂತಿದ್ದಾರೆ. ಇಂದು ಎಲ್ಲ ಸ್ಟಾರ್‌ ನಟರುಗಳ ಅಭಿಮಾನಿಗಳು ಅಂಧಾಭಿಮಾನ ತೊರೆದು ಬುದ್ಧಿವಂತರು ಆಗುತ್ತಿದ್ದಾರೆ. ಜೊತೆಗೆ, ಸ್ಟಾರ್‌ಗಳೂ ಕೂಡ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. 

ಸ್ಯಾಂಡಲ್‌ವುಡ್ ಯಾವುದೇ ಸ್ಟಾರ್ ನಟನ ಅಭಿಮಾನಿಯ 'ಅಭಿಮಾನ' ಇನ್ನೊಬ್ಬ ಸ್ಟಾರ್ ನಟನ ಅವಹೇಳನ ಮಾಡುವುದು ಆಗಲೇಬಾರದು. ಪ್ರತಿಯೊಬ್ಬರ ಲೈಫಿನಲ್ಲೂ ಏಳುಬೀಳುಗಳು, ಏರಿಳಿತಗಳು ಇದ್ದೇ ಇರುತ್ತವೆ. ಅನಾರೋಗ್ಯ ಸಮಸ್ಯೆಗಳು, ವೈಯಕ್ತಿಕ ಪ್ರಾಬ್ಲಂಗಳು ಜನಸಾಮಾನ್ಯರ ಜೀವನದಲ್ಲಿ ಆದಂತೆ ಸ್ಟಾರ್ ನಟರ ಜೀವನವನ್ನೂ ಬಿಡುವುದಿಲ್ಲ. ಒಬ್ಬರು ಮೇಲಿದ್ದಾಗ ಇನ್ನೊಬ್ಬರು ಕೆಳಗೆ ಇರುವುದು ಸಹಜ. ಆದ್ರೆ, ಕಾಲಚಕ್ರ ತಿರುಗುತ್ತಲೇ ಇರುತ್ತದೆ ಎಂಬುದು ನಿಜ! 

ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಸಮಾಜದ ಶಾಂತಿಗೆ, ಚಿತ್ರರಂಗದ ಒಗ್ಗಟ್ಟು ಹಾಗೂ ಒಳಿತಿಗೆ ಸ್ಯಾಂಡಲ್‌ವುಡ್ ಸ್ಟಾರ್ ನಟರುಗಳ ಫ್ಯಾನ್ಸ್‌ ನಡೆ-ನುಡಿ ಹೀಗೇ ಇರಲಿ. ಎಲ್ಲರ ಅಭಿಮಾನಿಗಳು ಹೀಗೇಯೇ ಸಂಯಮ-ಸಹಕಾರದಿಂದ ಯಾವತ್ತೂ ಮುಂದುವರಿಯಲಿ ಎಂಬುದು ಎಲ್ಲ ಸಿನಿಪ್ರೇಮಿಗಳ ಆಶಯ ಎಂಬುದು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸುವ ಕಾಮೆಂಟ್‌ಗಳಿಂದ ತಿಳಿದುಬಂದಿದೆ. ಈಗ ಒಗ್ಗಟ್ಟಿಗೆ ಕಾರಣ ಸ್ಟಾರ್‌ಗಳು ಹಾಗೂ ಫ್ಯಾನ್ಸ್‌ಗಳು ಈ ಇಬ್ಬರದೂ ಮಾನಸಿಕ ಪ್ರಬುದ್ಧತೆ. ಇದಕ್ಕೊಂದು 'ಸಲಾಂ' ಹೇಳಲೇಬೇಕು, ಏನಂತೀರಾ? 

Latest Videos
Follow Us:
Download App:
  • android
  • ios