ಶೇಕ್ ಹ್ಯಾಂಡ್ ಮಾಡುವುದೂ ಹರಾಮ್? ಕೈ ಮುಂದೆ ಮಾಡಿದ ರಾಜಕುಮಾರನಿಂದ ಬಿಸಿಬಿಸಿ ಚರ್ಚೆ ಶುರು!
ಶೇಕ್ ಹ್ಯಾಂಡ್ ಮಾಡಲು ರಾಜಕುಮಾರ ಕೈಮುಂದೆ ಮಾಡಿದಾಗ, ಮುಸ್ಲಿಂ ಮಹಿಳೆ ಹಲಾಲ್ ಎನ್ನುವ ಕಾರಣಕ್ಕೆ ನಿರಾಕರಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ನಾರ್ವೆಯ ರಾಜಕುಮಾರ ಕೈಮುಂದೆ ಮಾಡಿದಾಗ ಮುಸ್ಲಿಂ ಮಹಿಳೆಯೊಬ್ಬರು ಶೇಕ್ ಷ್ಯಾಂಡ್ ಮಾಡಲು ನಿರಾಕರಿಸಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ಮುಸ್ಲಿಂ ಸಂಪ್ರದಾಯದಲ್ಲಿ ಶೇಕ್ ಹ್ಯಾಂಡ್ ಮಾಡುವುದು ಹರಾಮ್ ಎನ್ನುವುದು. ಇಸ್ಲಾಮಿಕ್ ಸಂಪ್ರದಾಯದಲ್ಲಿ ಸಂಬಂಧವಿಲ್ಲದ ಪುರುಷರು ಮತ್ತು ಮಹಿಳೆಯರ ನಡುವಿನ ದೈಹಿಕ ಸಂಪರ್ಕವನ್ನು "ಹರಾಮ್" (ನಿಷೇಧಿತ) ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಬ್ಬರ ಹಸ್ತ ಸ್ಪರ್ಷವಾಗುವ ಶೇಕ್ ಹ್ಯಾಂಡ್ ಕೂಡ ಹರಾಮ್ ಎಂದು ನಂಬಲಾಗಿರುವ ಕಾರಣ, ಮಹಿಳೆ ಅದನ್ನು ನಿರಾಕರಿಸಿದ್ದಾರೆ. ಸಾಮಾನ್ಯ ಜನರಲ್ಲಿ ಆದರೆ ಇದು ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ ವಿಶೇಷವಾಗಿ ಔಪಚಾರಿಕ ಅಥವಾ ರಾಜತಾಂತ್ರಿಕ ವಿಷಯಗಳು ಬಂದಾಗ ಶೇಕ್ ಹ್ಯಾಂಡ್ ಮಾಡುವುದು ಸಾಮಾನ್ಯ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದರಿಂದ ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ನಾರ್ವೆ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿ, ಹಸ್ತಲಾಘವವನ್ನು ಗೌರವ ಮತ್ತು ಸೌಜನ್ಯದ ಮೂಲಭೂತ ಸೂಚಕವಾಗಿ ನೋಡಲಾಗುತ್ತದೆ, ಇದೇ ಕಾರಣಕ್ಕೆ ಇದು ಇಷ್ಟು ಚರ್ಚೆಗೆ ಬರಲು ಕಾರಣವಾಗಿದ್ದರೂ, ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಮಹಿಳೆಯ ದೃಷ್ಟಿಕೋನದಿಂದ, ಅವರು ತಮ್ಮ ಧಾರ್ಮಿಕ ತತ್ವಗಳಿಗೆ ಬದ್ಧವಾಗಿರುವ ಕಾರಣ ಸ್ಥಾನ ಯಾವುದೇ ಆದರೂ ಆಕೆ ಮುಸ್ಲಿಂ ಮಹಿಳೆಯಾಗಿರುವ ಹಿನ್ನೆಲೆಯಲ್ಲಿ ಅವರು ಮಾಡಿದ್ದು ಸರಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಹರಾಮ್ ಎನ್ನುವ ಹೆಸರಿನಲ್ಲಿ ಪವಿತ್ರ ಗ್ರಂಥ ಕುರಾನ್‌ನಲ್ಲಿ ಇಲ್ಲದ ವಿಷಯಗಳನ್ನು ವಿನಾಕಾರಣ ಮಹಿಳೆಯರ ಮೇಲೆ ಹೇರಲಾಗುತ್ತಿದೆ ಎನ್ನುವ ಇನ್ನೊಂದು ವಾದವೂ ಹುಟ್ಟಿಕೊಂಡಿದೆ.
ರಣಬೀರ್ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?
ಇದು ಚರ್ಚೆಗೆ ಗ್ರಾಸವಾಗುತ್ತಲೇ ಹರಾಮ್ ಮತ್ತು ಮುಸ್ಲಿಂ ಮಹಿಳೆಯರ ರಕ್ಷಣೆಯ ಕುರಿತು ಕೆಲವು ವಾದ-ಪ್ರತಿವಾದ- ಚರ್ಚೆಗಳು ಹುಟ್ಟಿಕೊಂಡಿವೆ. ಮಹಿಳೆ ಅಥವಾ ಬೇರೆಯವರೊಂದಿಗೆ ಕೈಕುಲುಕಬೇಡಿ ಎಂದು ಎಂದಿಗೂ ಇಸ್ಲಾಂ ಹೇಳುವುದಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಸಂಸ್ಕೃತಿ ಅಥವಾ ಸಂಪ್ರದಾಯಕ್ಕೆ ಸಂಬಂಧಿಸಿಲ್ಲ. ಕೆಲವರಿಗೆ ಪುರುಷರ ಜೊತೆ ಕೈಕಲುಕುವುದು ಅಷ್ಟು ಸರಿಯೆನಿಸುವುದಿಲ್ಲ. ಆದರೆ ಇದಕ್ಕೆ ಹಲಾಲ್ ಎನ್ನುವ ಕಾರಣ ಕೊಡುವುದು ಸರಿಯಲ್ಲ ಎಂದಿದ್ದಾರೆ.
ಮತ್ತೆ ಕೆಲವರು, ಕೆಲವು ಸಮಾಜಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ನೀವು ಯಾರೊಬ್ಬರ ಕೈಕುಲುಕುವಿಕೆಯನ್ನು ತಿರಸ್ಕರಿಸಿದರೆ ಅದು ಆಕ್ರಮಣಕಾರಿ ಎನಿಸುತ್ತದೆ. ನೀವು ಕೆಲಸದ ಸ್ಥಳದಲ್ಲಿ ಅಥವಾ ಬೇರೆ ಯಾವುದಾದರೂ ಸ್ಥಳದಲ್ಲಿ ಹ್ಯಾಂಡ್‌ಶೇಕ್ ಮಾಡಬೇಕಾದರೆ ನೀವು ಮಾಡಬಹುದು, ಅದು ಪರವಾಗಿಲ್ಲ ಆದರೆ ನಿಮ್ಮ ಉದ್ದೇಶಗಳು ಯಾವಾಗಲೂ ಉತ್ತಮವಾಗಿರಬೇಕು. ಅದೊಂದು ಸಾಂಸ್ಕೃತಿಕ ವಿಷಯ ಎನ್ನುವುದು ಅವರ ವಾದ. ಅಷ್ಟಕ್ಕೂ ಇಸ್ಲಾಂನಲ್ಲಿ ಹಲಾಲ್ ಕುರಿತು ಏನು ಹೇಳಲಾಗಿದೆ ಎಂದು ಕೆಲವು ಕಮೆಂಟಿಗರು ಬರೆದಿದ್ದಾರೆ. ಅವರ ಪ್ರಕಾರ, ವ್ಯಭಿಚಾರ, ಯಾರೊಬ್ಬರ ಹಕ್ಕನ್ನು ಕಸಿದುಕೊಳ್ಳುವುದು, ಯಾರೊಬ್ಬರ ಗೌರವ, ಜೀವನ ಮತ್ತು ಹಣದ ವಿರುದ್ಧ ದಂಗೆ ಏಳುವುದು, ದೇವರೊಂದಿಗೆ ಪಾಲುದಾರರನ್ನು ಸಂಯೋಜಿಸುವುದು ಹಾಗೂ ಹರಾಮ್ ಅಲ್ಲದ ಯಾವುದನ್ನಾದರೂ ನಿಮ್ಮದೇ ಆದ ಹರಾಮ್ ಎಂದು ಘೋಷಿಸುವುದು ಇವೆಲ್ಲವೂ ಹರಾಮ್ ಅಡಿ ಬರುತ್ತದೆ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕುಮಾರನಿಗೆ ಹ್ಯಾಂಡ್‌ಶೇಕ್ ನಿರಾಕರಿಸಿರುವುದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಉಫ್! ಎಂತೆಂಥ ಲವ್ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್ ರಿಲೇಷನ್ಷಿಪ್ ಅಂತೆ! ಹಾಗಂದ್ರೆ ಏನ್ ಗೊತ್ತಾ?