ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೊನೆಗೂ ಕೆನಡಾ ಪೌರತ್ವ ತ್ಯಜಿಸಿ ಭಾರತದ ಪ್ರಜೆ ಆಗುತ್ತಿದ್ದಾರೆ. ಭಾರತವೇ ಸರ್ವಸ್ವ ಎಂದು ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸದಾ ಸುದ್ದಿಯಲ್ಲಿರುತ್ತಾರೆ. ಆಗಾಗ ಟ್ರೋಲಿಗರ ಬಾಯಿಗೆ ತುತ್ತಾಗುವ ಅಕ್ಷಯ್ ಕುಮಾರ್ ಭಾರತದ ಪೌರತ್ವ ಹೊಂದಿಲ್ಲ ಎನ್ನುವ ಟೀಕೆ ವ್ಯಕ್ತವಾಗುತ್ತಿತ್ತು. ಅಕ್ಷಯ್ ಕುಮಾರ್ ಇನ್ನೂ ಕೆನಡಾದ ಪ್ರಜೆ ಆಗಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೀಗ ಅಕ್ಷಯ್ ಕೊನೆಗೂ ಕೆನಡಾ ಪೌರತ್ವ ತ್ಯಜಿಸಲು ನಿರ್ಧರಿಸಿದ್ದಾರೆ. ಭಾರಿ ಟೀಕೆ, ಆಕ್ರೋಶದ ಬಳಿಕ ಪೌರತ್ವ ಬದಾಲಾಯಿಸುವ ಮನಸು ಮಾಡಿದ್ದಾರೆ. ಭಾರತವೇ ಸರ್ವಸ್ವ ಎಂದು ಹೇಳಿರುವ ಅಕ್ಷಯ್ ಕುಮಾರ್ ಈಗಾಗಲೇ ಪೌರತ್ವ ಬದಲಾಯಿಸಲು ಅರ್ಜಿ ಸಲ್ಲಿಸಿದ್ದಾರೆ. 

ಆಜ್‌ತಕ್‌ನ ‘ಸೀಧಿ ಬಾತ್‌’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಕೆನಡಾ ನಾಗರಿಕತೆ ಪಡೆಯುವುದರ ಹಿಂದಿನ ಕಾರಣ ಗೊತ್ತಿಲ್ಲದೆ ಜನರು ಮಾತನಾಡುತ್ತಿದ್ದಾಗ ಬೇಸರವಾಗುತ್ತಿತ್ತು. ಭಾರತವೇ ನನ್ನ ಸರ್ವಸ್ವ. ನಾನು ಏನಾದರೂ ಗಳಿಸಿದ್ದರೆ, ಪಡೆದುಕೊಂಡಿದ್ದರೆ ಅದು ಇಲ್ಲಿಂದ. ನನಗೆ ಹಿಂತಿರುಗಿ ಬರುವ ಅದೃಷ್ಟಸಿಕ್ಕಿದೆ’ ಎಂದಿದ್ದಾರೆ.

‘90ರ ದಶಕದಲ್ಲಿ ತಮ್ಮ 15 ಸಿನಿಮಾಗಳು ನಿರಂತರವಾಗಿ ಫ್ಲಾಪ್‌ ಆದ ಮೇಲೆ ಸಿನಿಮಾ ಕೈ ಹಿಡಿಯುತ್ತಿಲ್ಲ. ಕೆಲಸ ಮಾಡಬೇಕೆನಿಸಿತು. ಕೆನಡಾದಲ್ಲಿದ್ದ ನನ್ನ ಸ್ನೇಹಿತ ನನ್ನನ್ನು ಕರೆದ. ಆಗ ನಾನು ಹೋದೆ. ಆ ವೇಳೆಗೆ ನನ್ನ ಎರಡು ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದೃಷ್ಟವಶಾತ್‌ ಅವು ಸೂಪರ್‌ ಹಿಟ್‌ ಆದವು. ಬಳಿಕ ನಾನು ಮತ್ತೆ ಭಾರತಕ್ಕೆ ಬಂದು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದೆ. ಈ ನಡುವೆ ನಾನು ಪಾಸ್‌ಪೋರ್ಟ್ ಹೊಂದಿರುವುದೇ ಮರೆತಿತ್ತು. ಈಗ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಕೆನಡಾ ಪೌರತ್ವ ತ್ಯಜಿಸಲಿದ್ದೇನೆ’ ಎಂದಿದ್ದಾರೆ.

Selfie: ಸೆಲ್ಫಿ ಮೂಲಕವೇ ಗಿನ್ನೆಸ್​ ದಾಖಲೆ ಬರೆದ ಅಕ್ಷಯ್​ ಕುಮಾರ್​

2019ರ ಲೋಕಸಭಾ ಚುನಾವಣೆ ಮುನ್ನ ಅಕ್ಷಯ್‌ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಮಾಡಿದ್ದ ಬಳಿಕ ಅವರು ಕೆನಡಾ ಪೌರ ಎಂಬುದು ತೀರಾ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕೊನೆಗೂ ಕೆನಡಾ ಪೌರತ್ವ ತೊರೆದು ಭಾರತದ ಪೌರತ್ವ ಪಡೆಯುತ್ತಿದ್ದಾರೆ. 

ಅಕ್ಷಯ್​ಗೆ ಲಕ್ಕಿಮ್ಯಾನ್​ ಆಗುವರೇ ಸಲ್ಲು ಭಾಯ್​? ಮದುವೆಯಲ್ಲಿ ಇಬ್ಬರ ಭರ್ಜರಿ ಸ್ಟೆಪ್​

ಅಕ್ಷಯ್ ಕುಮಾರ್ ಸಿನಿಮಾಗಳು

ಓ ಮೈ ಗಾಡ್-2, ಸೂರರೈ ಪೊಟ್ರು ಹಿಂದಿ ರಿಮೇಕ್, ಬಡೆ ಮಿಯನ್ ಚೋಟೆ ಮಿಯನ್, ಹೇರಾ ಫೆರಿ, ಮರಾಠಿ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 2022 ಅಕ್ಷಯ್ ಕುಮಾರ್ ಪಾಲಿಗೆ ತುಂಬಾ ನಿರಾಸೆಯ ವರ್ಷವಾಗಿತ್ತು. ಅಕ್ಷಯ್ ನಟನೆಯ ಯಾವ ಸಿನಿಮಾಗಳು ಸಕ್ಸಸ್ ಆಗಿರಲಿಲ್ಲ. 5 ಸಿನಿಮಾಗಳು ರಿಲೀಸ್ ಆಗಿತ್ತು. ಆದರೆ ಯಾವುದೇ ಸಿನಿಮಾಗಳು ಯಶಸ್ಸು ಕಂಡಿಲ್ಲ. ಹಾಗಾಗಿ ಈ ವರ್ಷವಾದರೂ ಅಕ್ಷಯ್ ಕುಮಾರ್ ಪಾಲಿಗೆ ಆಶಾದಾಯಕವಾಗಿರುತ್ತಾ ಎಂದು ಕಾದುನೋಡಬೇಕಿದೆ.