ಮಗಳನ್ನು ಅವತಾರ್- 2 ನೋಡಲು ಕರ್ಕೊಂಡು ಹೋದ ಅಕ್ಷಯ್ ಕುಮಾರ್ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ. 

'ಅವತಾರ್ ದಿ ವೇ ಆಫ್ ವಾಟರ್', ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಿನಿಮಾ. ಇಡೀ ವಿಶ್ವವೇ ಅವತಾರ್-2 ರಿಲೀಸ್‌ಗಾಗಿ ಎದುರು ನೋಡುತ್ತಿದ್ದರು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಡಿಸೆಂಬರ್ 16ರಂದು ರಿಲೀಸ್ ಆಗಿದೆ. ಭಾರತದಲ್ಲೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ -2 ಭಾರತೀಯ ಅಭಿಮಾನಿಗಳನ್ನು ಮೋಡಿ ಮಾಡಿದೆ. ಬರೋಬ್ಬರಿ 13 ವರ್ಷಗಳ ಬಳಿಕ ಅವತಾರ್ ಸೀರಿಸ್ ರಿಲೀಸ್ ಆಗಿದ್ದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ವಿಶೇಷ ಎಂದರೆ ಭಾರತದ ಅನೇಕ ಸ್ಟಾರ್ ಕಲಾವಿದರು ಸಹ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಅವತಾರ್-2 ನೋಡಿ ಎಂಜಾಯ್ ಮಾಡಿದ್ದಾರೆ. 

10 ವರ್ಷದ ಮಗಳು ನಿತಾರಾ ಅವರನ್ನು ಅವತಾರ್-2 ನೋಡಲು ಕರ್ಕೊಂಡು ಹೋಗಿದ್ದರು. ಮುಂಬೈನಲ್ಲಿ ನಡೆದ ವಿಶೇಷ ಪ್ರದರ್ಶನಕ್ಕೆ ಅಕ್ಷಯ್ ಕುಮಾರ್ ಮಗಳು ನಿತಾರಾ ಅವರವನ್ನು ಕರೆದುಕೊಂಡು ಬಂದಿದ್ದರು. ಮಗಳ ಜೊತೆ ಬಂದಿರುವ ಅಕ್ಷಯ್ ಕುಮಾರ್ ವಿಡಿಯೋ ವೈರಲ್ ಆಗಿದೆ. ಸಿನಿಮಾ, ಶೂಟಿಂಗ್ ಜೊತೆಗೆ ಅಕ್ಷಯ್ ಕುಮಾರ್ ತನ್ನ ಕುಟುಂಬದ ಜೊತೆಯೂ ಹೆಚ್ಚು ಸಮಯ ಕಳೆಯುತ್ತಾರೆ. ಅದರಲ್ಲೂ ಮಗಳೆಂದರೆ ಅಕ್ಷಯ್ ಕುಮಾರ್ ಅವರಿಗೆ ತುಂಬಾ ಪ್ರೀತಿ. ಹಾಗಾಗಿ ಇಬ್ಬರೇ ಅವತಾರ್-2 ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.

ಮಗಳು ನಿತಾರಾ ಕೈ ಹಿಡಿದೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟರು. ಮಗಳನ್ನು ತುಂಬಾ ರಕ್ಷಣೆ ಮಾಡಿದ ಅಕ್ಷಯ್ ಕುಮಾರ್ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ. ಪಾಪರಾಜಿಗಳು ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಲು ಮುಂದಾದಾಗ ಮಗಳನ್ನು ತುಂಬಾ ಕಾಳಜಿಯಿಂದ ಕರೆದುಕೊಂಡು ಹೋಗಿದ್ದಾರೆ. ಅಪ್ಪಮ-ಮಗಳ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

View post on Instagram

Avatar:The Way of Water; 'ಅವೆಂಜರ್ಸ್ ಎಂಡ್‌ಗೇಮ್' ಕಲೆಕ್ಷನ್ ಬ್ರೇಕ್ ಮಾಡಲು ವಿಫಲವಾದ 'ಅವತಾರ್-2'

ಅಂದಹಾಗೆ ಅಕ್ಷಯ್ ಕುಮಾರ್ ಅವತಾರ್-2 ವೀಕ್ಷಿಸಿ ಜೇಮ್ಸ್ ಕ್ಯಾಮರೂನ್ ಬಗ್ಗೆ ಹಾಡಿಹೊಗಳಿದ್ದಾರೆ. 'ನಿನ್ನ ರಾತ್ರಿ ಅವತಾರ ದಿ ವೇ ಆಫ್ ವಾಟರ್ ವೀಕ್ಷಿಸಿದೆ. ಅದ್ಭುತವಾಗಿದೆ. ಸಿನಿಮಾ ನೋಡಿ ನಾನು ಮಂತ್ರಮುಗ್ಧನಾದೆ. ನಿಮ್ಮ ಈ ಅದ್ಭುತ ಪ್ರತಿಭೆಗೆ ತಲೆಬಾಗುತ್ತೇನೆ ಜೇಮ್ಸ್ ಕ್ಯಾಮರೂನ್' ಎಂದು ಹೇಳಿದ್ದಾರೆ.

Scroll to load tweet…

ಅವತಾರ್-2 ಭಾರತದ ಅನೇಕ ಭಾಷೆಯಲ್ಲಿ ರಿಲೀಸ್ ಆಗಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಡಬ್ ಆಗಿ ತೆರೆಗೆ ಬಂದಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ಸೇರಿದಂತೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಭಾರತದಲ್ಲೂ ಅವತಾರ್-2 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಅಂದಹಾಗೆ ಅವತಾರ್-2 ಸಿನಿಮಾ ಹಾಲಿವುಡ್‌ನ ಸ್ಪೈಡರ್ ಮ್ಯಾನ್; ನೋ ವೇ ಹೋಮ್, ಡಾಕ್ಟರ್ ಸ್ಟ್ರೇಂಜ್; ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್ ಮತ್ತು ಅವೆಂಜರ್ಸ್: ಇನ್ಫಿನಿಟಿ ವಾರ್‌ ಸಿನಿಮಾಗಳ ಕಲೆಕ್ಷನ್ ಬ್ರೇಕ್ ಮಾಡಿದೆ. 

ಪ್ರಧಾನಿ ಮೋದಿ-ಅಕ್ಷಯ್ ಕುಮಾರ್ ಮೀಮ್ ಶೇರ್ ಮಾಡಿದ ಪ್ರಕಾಶ್ ರಾಜ್ ಸಖತ್ ಟ್ರೋಲ್

ಅವತಾರ್: ದಿ ವೇ ಆಫ್ ವಾಟರ್ ಬಗ್ಗೆ

ಒಂದು ದಶಕದ ನಂತರ ಬಂದಿರುವ ಪಾರ್ಟ್-2 ಅವತಾರ್: ದಿ ವೇ ಆಫ್ ವಾಟರ್ ಚಿತ್ರಕ್ಕೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಸಿಕ್ವೇಲ್‌ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿರುವುದು ವಿಶೇಷ. 3Dಯಲ್ಲಿ ಮೂಡಿಬಂದ ಈ ಸಿನಿಮಾ ದೊಡ್ಡ ದೃಶ್ಯ ವೈಭವವಾಗಿದೆ. Sam Worthington,Kate Winslet, Zoe Saldaña, Joel David Moore, CCH Pounder ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.