Asianet Suvarna News Asianet Suvarna News

ಮುಂದುವರೆದ ಅಕ್ಷಯ್ ಕುಮಾರ್ ಸೋಲಿನ ಸರಣಿ; ನೆಲಕಚ್ಚಿದ ವರ್ಷದ ಮೊದಲ ಸಿನಿಮಾ, ಕಾಲೆಳೆದ ಕಂಗನಾ ರಣಾವತ್

ಅಕ್ಷಯ್ ಕುಮಾರ್ ಸೋಲಿನ ಸರಣಿ ಈ ವರ್ಷವೂ ಮುಂದುವರೆದಿದೆ. ಸಾಲು ಸಾಲು ಸಿನಿಮಾಗಳ ಸೋಲಿಗೆ ಸೆಲ್ಫಿ ಸಿನಿಮಾ ಕೂಡ ಸೇರಿದೆ. 

Akshay Kumar's Selfie flop disaster and marks his worst opening in over a decade sgk
Author
First Published Feb 25, 2023, 3:09 PM IST | Last Updated Feb 26, 2023, 10:33 AM IST

2022 ಬಾಲಿವುಡ್ ಪಾಲಿಗೆ ನಿರಾಸೆಯ ವರ್ಷವಾಗಿತ್ತು. ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್ ಕುಮಾರ್ ಕೂಡ ಅಭಿಮಾನಿಗಳನ್ನು ಮೋಡಿ ಮಾಡಲು ಸೋತಿದ್ದರು. ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು  ರಿಲೀಸ್ ಆಗಿತ್ತು. ಆದರೆ ಯಾವ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಸಾಲು ಸಾಲು ಸೋಲಿನಿಂದ ಅಕ್ಷಯ್ ಕಂಗೆಟ್ಟಿದ್ದರು. ಈ ವರ್ಷವಾದರೂ ಸಿನಿಮಾಗಳು ಅಭಿಮಾನಿಗಳ ಹೃದಯ ಗೆಲ್ಲುತ್ತಾ ಎಂದು ಎದುರು ನೋಡುತ್ತಿದ್ದು ಅಕ್ಷಯ್. ಆದರೆ ಈ ವರ್ಷ ಬಂದ ಮೊದಲ ಸಿನಿಮಾವೇ ನೆಲ ಕಚ್ಚಿದೆ. 

ಅಕ್ಷಯ್ ಕುಮಾರ್ ಸದ್ಯ ಸೆಲ್ಫಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸೆಲ್ಫಿ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಗಿದೆ. ಭಾರಿ ನಿರೀಕ್ಷೆಯೊಂದಿಗೆ ಬಂದ ಸೆಲ್ಫಿ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಇಲ್ಲ. ಸೆಲ್ಫಿ ಮೊದಲ ದಿವನೇ ನೀರಸ ಪ್ರತಿಕ್ರಿಯೆ ಕಂಡಿದೆ. ಮೊದಲ ದಿನ 1.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ಸಿನಿಮಾ ಅಂದ್ರೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ದೊಡ್ಡ ನಿರೀಕ್ಷೆ ಇರುತ್ತದೆ. ಆದರೆ ಕೇವಲ 1.30 ಕೋಟಿ ಗಳಿಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. 

ಕೇವಲ ಸಿಂಗಲ್ ಡಿಜಿಟ್ ಗಳಿಕೆ ಮಾಡುವ ಮೂಲಕ ಕಳೆದ 10 ವರ್ಷಗಳಲ್ಲೇ ಅಕ್ಷಯ್ ಕುಮಾರ್ ಸಿನಿಮಾ ಗಳಿಸಿದ ಅತ್ಯಂತ ಕಡಿಮೆ ಗಳಿಕೆ ಇದಾಗಿದೆ. ದೊಡ್ಡ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾ ಕೇವಲ 1 ಕೋಟಿ ರೂಪಾಯಿ ಗಳಿಸಿರುವುದು ಭಾರಿ ಅಚ್ಚರಿ ಮೂಡಿಸಿದೆ. ದುರಂತ ಎಂದರೆ ಕಾರ್ತಿಕ್ ಆರ್ಯನ್ ಅವರ ಶೆಹಜಾದ ಸಿನಿಮಾಗಿಂತ ಕಡಿಮೆ ಗಳಿಕೆ ಮಾಡಿದೆ. ಶೆಹಜಾದ ಸಿನಿಮಾ ಮೊದಲ ದಿನ 2.92 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. 

ಸೆಲ್ಫಿ ಸಿನಿಮಾ ದಕ್ಷಿಣ ಭಾರತದ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂ ಡ್ರೈವಿಂಗ್ ಲೈಸೆನ್ಸ್ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನಲ್ಲಿ  ಪೃಥ್ವಿರಾಜ್ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ  ನಟಿಸಿದ್ದರು. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಚಿಂತೆ ಮಾಡ್ಬೇಡ ಮಗ, ದೇವರು ನಿನ್ನೊಂದಿಗೆ ಇದ್ದಾನೆ; ತಾಯಿಯನ್ನು ನೆನೆದು ಕಣ್ಣೀರಿಟ್ಟ ಅಕ್ಷಯ್ ಕುಮಾರ್

ಕಂಗನಾ ಕಿಡಿ 

ಸೆಲ್ಫಿ ಸಿನಿಮಾ ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿಬಂದಿದೆ. ಸಿನಿಮಾ ಸೋತ ಬಗ್ಗೆ ನಟಿ ಕಂಗನಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕರಣ್ ಜೋಹರ್ ಸಿನಿಮಾ 10 ಲಕ್ಷ ರೂಪಾಯಿ ಕೂಡ ಗಲಿಸಿಲ್ಲ ಎಂದು ಕಾಲೆಳೆದಿದ್ದಾರೆ. 'ಕರಣ್ ಜೋಹರ್ ಸಿನಿಮಾದ ಸೆಲ್ಫಿ ಮೊದಲ ದಿನ 10 ಲಕ್ಷ ಗಳಿಕೆ ಕಂಡಿಲ್ಲ. ಒಬ್ಬ ಟ್ರೇಡ್ ಅಥವಾ ಮಾಧ್ಯಮದವರು ಅದರ ಬಗ್ಗೆ ಮಾತನಾಡುವುದನ್ನು ನಾನು ನೋಡಿಲ್ಲ. ನನಗೆ ಕಿರುಕುಳ ನೀಡುವ ರೀತಿಯಲ್ಲಿ ಅವರನ್ನು ಅಪಹಾಸ್ಯ ಮಾಡುವುದನ್ನು ಅಥವಾ ಬೆದರಿಸುವುದನ್ನು ಮರೆತುಬಿಡಿ' ಎಂದು ಹೇಳಿದ್ದಾರೆ. 

ಕೊನೆಗೂ ಕೆನಡಾ ಪೌರತ್ವ ತ್ಯಜಿಸಿ ಭಾರತದ ಪ್ರಜೆ ಆಗ್ತಿದ್ದಾರೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಬಳಿ ಇರುವ ಸಿನಿಮಾಗಳು 

ಸಾಲು ಸಾಲು ಸೋಲು ಕಂಡರೂ ಅಕ್ಷಯ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಓ ಮೈ ಗಾಡ್-2, ಸೂರರೈ ಪೋಟ್ರು ಹಿಂದಿ ರಿಮೇಕ್,  ಬಡೆ ಮಿಯನ್ ಚೋಟೆ ಮಿಯನ್, ಹೇರಾ ಫೆರಿ, ಮರಾಠಿ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios