ಅಜಯ್‌ ದೇವಗನ್‌ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ

*   ಕಿಚ್ಚ ಸುದೀಪ್‌ಗೆ ಸಿಎಂ ಸೇರಿದಂತೆ ಎಲ್ಲರ ಬೆಂಬಲ
*   ಹಿಂದಿಯಂತೆ ಕನ್ನಡಕ್ಕೂ ಗೌರವ ನೀಡಲು ಆಗ್ರಹ
*   ಹೇರಿ​ಕೆ​ಗಷ್ಟೇ ವಿರೋ​ಧ-ಬರ​ಗೂ​ರು

Kannadigas Outrage Against Bollywood Actor Ajay Devgan Statement grg

ಹುಬ್ಬಳ್ಳಿ(ಏ.28):  ಹಿಂದಿ​ಯನ್ನು ಮುಂದಿ​ಟ್ಟು​ಕೊಂಡು ಬಾಲಿವುಡ್‌ ನಟ ಅಜಯ್‌ ದೇವಗನ್‌(Ajay Devgan) ಎಬ್ಬಿ​ಸಿದ ರಾಷ್ಟ್ರಭಾಷೆ ವಿವಾ​ದ ಇದೀಗ ಕನ್ನ​ಡಿ​ಗರ(Kannadigas) ಸ್ವಾಭಿ​ಮಾನ ಕೆಣ​ಕಿದೆ. ಹಿಂದಿ ರಾಷ್ಟ್ರ​ಭಾಷೆ ಅಲ್ಲ, ಕನ್ನ​ಡ​ದಂತೆ ಈ ರಾಷ್ಟ್ರದ ಒಂದು ಭಾಷೆ ಅಷ್ಟೆ. ಕರ್ನಾಟ​ಕ​ದಲ್ಲಿ(Karnataka) ಕನ್ನ​ಡವೇ ಸಾರ್ವ​ಭೌಮ ಎಂಬ ಒಕ್ಕೊ​ರಲ ಕೂಗು ಮೊಳ​ಗಿ​ದೆ. ಅಜಯ್‌ ದೇವ​ಗನ್‌ ಟ್ವೀಟ್‌ಗೆ ತಿರು​ಗೇಟು ನೀಡಿದ ನಟ ಕಿಚ್ಚ ಸುದೀ​ಪ್‌ಗೆ(Sudeep) ಮುಖ್ಯ​ಮಂತ್ರಿ ಬೊಮ್ಮಾಯಿ ಸೇರಿದಂತೆ ರಾಜ್ಯದ ಪ್ರಮುಖ ರಾಜ​ಕಾರ​ಣಿ​ಗ​ಳು ಹಾಗೂ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಆಯಾ ರಾಜ್ಯ​ಗ​ಳಲ್ಲಿ ಮಾತೃ​ಭಾ​ಷೆಯೇ ಸಾರ್ವ​ಭೌಮ, ಹಿಂದಿ(Hini) ವಿಚಾ​ರ​ವಾಗಿ ಸುದೀಪ್‌ ಹೇಳಿದ್ದು ಸರಿ​ಯಾ​ಗಿಯೇ ಇದೆ ಎಂದು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ(Basavaraj Bommai), ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಹೇಳಿ​ದ​ರೆ, ಹಿಂದಿ​ಯನ್ನು ರಾಷ್ಟ್ರ​ಭಾಷೆ ಎಂದು ಒಪ್ಪಲು ಸಾಧ್ಯ​ವೇ ಇಲ್ಲ, ಕನ್ನ​ಡದಂತೆ ಹಿಂದಿಯೂ ದೇಶದ ಒಂದು ಅಧಿ​ಕೃತ ಭಾಷೆ, ಹಿಂದಿಗೆ ಗೌರವ ನೀಡು​ವಂತೆ ಕನ್ನ​ಡ​ವನ್ನೂ ಪ್ರತಿ​ಯೊ​ಬ್ಬರು ಗೌರವಿಸ​ಬೇ​ಕೆಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸೇರಿ​ದಂತೆ ಹಲವರು ಹೇಳಿದ್ದಾರೆ.

ಹಿಂದಿ ಭಾಷಾ ವಿಚಾರ, ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ದ್ವಂದ್ವ ಹೇಳಿಕೆ

ಸುದೀಪ್‌ ಹೇಳಿ​ದ್ದು ಸರಿ​-ಸಿಎಂ:

ರಾಷ್ಟ್ರಭಾಷೆ ಕುರಿತ ವಿವಾದಾತ್ಮಕ ಟ್ವಿಟ್‌ಗೆ ಪ್ರತ್ಯುತ್ತರ ನೀಡಿ ಕನ್ನಡತನ ಮೆರೆದಿದ್ದ ಕಿಚ್ಚ ಸುದೀಪ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ​ರಿಂದ ಮೆಚ್ಚುಗೆ ವ್ಯಕ್ತ​ವಾ​ಗಿದೆ. ಸುದೀಪ್‌ ಹೇಳಿ​ದ್ದು ಸರಿ​ಯಾ​ಗಿಯೇ ಇದೆ. ಆಯಾ ರಾಜ್ಯ​ಗ​ಳಲ್ಲಿ ಮಾತೃಭಾಷೆಗಳೇ ಸಾರ್ವಭೌಮ. ಆಯಾ ರಾಜ್ಯಗಳಲ್ಲಿ ಮಾತೃಭಾಷೆಗಳಿಗೆ ಪ್ರಾಧಾನ್ಯತೆ ಇದೆ. ಇದನ್ನು ಎಲ್ಲರೂ ಮನಗಂಡು ಗೌರವಿಸಬೇಕು ಎಂದು ತಿಳಿ​ಸಿ​ದ್ದಾ​ರೆ.

ಅಧಿ​ಕ ​ಪ್ರ​ಸಂಗ​ತ​ನ​-ಎಚ್‌​ಡಿ​ಕೆ:

ಹಿಂದಿ ವಿಚಾ​ರ​ದಲ್ಲಿ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಕೂಡ ಅಜ​ಯ್‌​ ದೇ​ವ​ಗನ್‌ ವಿರುದ್ಧ ಕಿಡಿ​ಕಾ​ರಿ​ದ್ದಾರೆ. ಅಜಯ್‌ ದೇವಗನ್‌ರದು ಅತಿರೇಕದ, ಅಧಿ​ಕ​ಪ್ರ​ಸಂಗ​ದ ಪ್ರತಿ​ಕ್ರಿಯೆ. ಹಿಂದಿ ರಾಷ್ಟ್ರ​ಭಾ​ಷೆ​ಯಲ್ಲ ಎಂಬ ಸುದೀಪ್‌ ಹೇಳಿಕೆ ಸರಿ​ಯಾ​ಗಿಯೇ ಇದೆ. ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರ್ಕಾರ ಎನ್ನುವ ಸರ್ವಾಧಿಕಾರಿ ಮನಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ದೇವಗನ್‌ ಬಡಬಡಿಸಿದ್ದಾರೆ. ಕನ್ನಡ ಚಿತ್ರರಂಗ ಇಂದು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ ಎಂದು ಟ್ವೀಟ್‌ ಮೂಲಕ ಕುಮಾ​ರ​ಸ್ವಾ​ಮಿ(HD Kumaraswamy) ಅಸಮಾ​ಧಾನ ಹೊರ​ಹಾ​ಕಿ​ದ್ದಾ​ರೆ.

ಕಾಂಗ್ರೆಸಿಗರ ಆಕ್ರೋಶ:

ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಕನ್ನ​ಡಿ​ಗ​ರಾದ ನಮಗೆ ನಮ್ಮದೇ ಆದ ಭಾಷೆ, ಸ್ವಾಭಿ​ಮಾನ ಇದೆ. ಕರ್ನಾ​ಟ​ಕ​ದಲ್ಲೇ ಕನ್ನ​ಡವೇ ಸಾರ್ವ​ಭೌಮ ಭಾಷೆ ಎಂದು ಡಿ.ಕೆ.​ಶಿ​ವ​ಕು​ಮಾರ್‌ ತಿಳಿ​ಸಿದರೆ, ಹಿಂದಿ ರಾಷ್ಟ್ರ ಭಾಷೆಯಲ್ಲ. ದೇಶದ 14 ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡ ಒಂದು ಅಷ್ಟೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ​ರಾ​ದ ರಾಮ​ಲಿಂಗಾ​ರೆಡ್ಡಿ, ಸತೀಶ್‌ ಜಾರ​ಕಿ​ಹೊಳಿ ಹೇಳಿ​ದ್ದಾ​ರೆ.
ಈ ಮಧ್ಯೆ, ಹಿಂದಿ​ಯನ್ನು ರಾಷ್ಟ್ರೀಯ ಭಾಷೆ​ಯಾಗಿ ಒಪ್ಪಲು ಸಾಧ್ಯ​ವಿಲ್ಲ. ತಮ್ಮ ಹೇಳಿ​ಕೆಗೆ ಅಜಯ್‌ ದೇವ​ಗನ್‌ ಕನ್ನಡಿ​ಗ​ರಲ್ಲಿ ಕ್ಷಮೆ ಕೋರ​ಬೇಕು. ಇಲ್ಲ​ದಿ​ದ್ದಲ್ಲಿ ಅವರ ಸಿನಿಮಾ ಕರ್ನಾ​ಟ​ಕ​ದಲ್ಲಿ ಪ್ರದ​ರ್ಶ​ನ​ವಾ​ಗಲು ಬಿಡಲ್ಲ ಎಂದು ಕರ್ನಾ​ಟಕ ರಕ್ಷಣಾ ವೇದಿ​ಕೆಯ ಪ್ರವೀಣ್‌ ಶೆಟ್ಟಿ ಎಚ್ಚ​ರಿ​ಕೆ ನೀಡಿ​ದ್ದಾ​ರೆ.

ಕನ್ನಡವೇ ಸಾರ್ವಭೌಮ

ಮಾತೃಭಾಷೆ ವಿಚಾ​ರ​ದಲ್ಲಿ ನಮ್ಮ ನಿಲುವು ಸ್ಪಷ್ಟ​ವಾ​ಗಿದೆ. ಭಾಷೆ ಆಧಾರದ ಮೇಲೆ ರಾಜ್ಯಗಳು ರಚನೆಯಾಗಿವೆ. ಆಯಾ ರಾಜ್ಯಗಳಲ್ಲಿ ಮಾತೃಭಾಷೆಯೇ ಸಾರ್ವಭೌಮ. ಇದನ್ನೇ ನಟ ಸುದೀಪ್‌ ಹೇಳಿದ್ದಾರೆ. ಅವರ ಹೇಳಿಕೆ ಸರಿಯಾಗಿದೆ ಅಂತ ಮುಖ್ಯಮಂತ್ರಿ ಬಸ​ವ​ರಾಜ ಬೊಮ್ಮಾಯಿ ತಿಳಿಸಿದ್ದಾರೆ.  

ಸುದೀಪ್-ಅಜಯ್ ದೇವಗನ್ ಭಾಷೆ ವಾರ್ ಮಧ್ಯೆ ಸಿಟಿ ರವಿ ಎಂಟ್ರಿ

ಕನ್ನಡಕ್ಕೆ ಗೌರವ ನೀಡಿ

ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು. ಕರ್ನಾ​ಟ​ಕ​ದಲ್ಲಿ ಕನ್ನ​ಡವೇ ಸಾರ್ವ​ಭೌಮ ಭಾಷೆ. ನಮಗೆ ನಮ್ಮದೇ ಭಾಷೆ, ಸ್ವಾಭಿಮಾನ ಇದೆ ಅಂತ ಕೆಪಿ​ಸಿಸಿ ಅಧ್ಯ​ಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿದ್ದಾರೆ. 

ಸುದೀಪ್‌ ಹೇಳಿಕೆ ಸರಿ

ಅಜಯ್‌ ದೇವಗನ್‌ ಅತಿರೇಕದ ಪ್ರತಿ​ಕ್ರಿಯೆ ನೀಡಿ ಅಧಿಕ ಪ್ರಸಂಗತನ ಮೆರೆ​ದಿ​ದ್ದಾ​ರೆ. ಹೆಚ್ಚು ಜನ ಮಾತನಾಡುತ್ತಾರೆಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಡಬ್‌ ಮಾಡಬೇಡಿ ಎಂದರೆ ಏನರ್ಥ? ಸುದೀಪ್‌ ಹೇಳಿಕೆ ಸರಿಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ತಿಳಿಸಿದ್ದಾರೆ.  

ಹೇರಿ​ಕೆ​ಗಷ್ಟೇ ವಿರೋ​ಧ-ಬರ​ಗೂ​ರು

ನಮ್ಮ ಸಂವಿಧಾನದಲ್ಲಿ ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಕರೆದಿಲ್ಲ. ಕನ್ನಡ ಒಳಗೊಂಡು ಎಲ್ಲ ಭಾಷೆಗಳೂ ರಾಷ್ಟ್ರದ ಭಾಷೆಗಳು. ಹಾಗೆಯೇ ಹಿಂದಿ ಕೂಡಾ ರಾಷ್ಟ್ರದ ಒಂದು ಭಾಷೆ. ಹಿಂದಿ ಕಲಿಕೆ ಬೇರೆ, ಹಿಂದಿ ಹೇರಿಕೆ ಬೇರೆ. ನಾನು ಹಿಂದಿ ಕಲಿಕೆಯನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇನೆ ಅಂತ ಸಾಹಿ​ತಿ ಬರಗೂರು ರಾಮಚಂದ್ರಪ್ಪ(Baraguru Ramachandrappa) ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios