Asianet Suvarna News Asianet Suvarna News

ಬಡೇ ಮಿಯಾ ಚೋಟೆ ಮಿಯಾ ಟೀಸರ್ ಲಾಂಚ್; ಸೈನಿಕರ ಗೆಟಪ್‌ನಲ್ಲಿ ಅಕ್ಷಯ್ ಕುಮಾರ್-ಟೈಗರ್ ಶ್ರಾಫ್!

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್‌ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ‌ ಮೀಯಾ ಚೋಟೆ‌ ಮೀಯಾ ಚಿತ್ರ ನಿರ್ಮಿಸಲಾಗಿದೆ. 

Akshay kumar and tiger shroff lead bade miyan chote miyan teaser launch srb
Author
First Published Jan 26, 2024, 3:34 PM IST

ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ನಟನೆಯ 'ಬಡೇ ಮಿಯಾ ಚೋಟೆ ಮೀಯಾ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದೇ‌ ಮೊದಲ ಬಾರಿಗೆ ಅಕ್ಕಿ ಹಾಗೂ ಟೈಗರ್ ಶ್ರಾಫ್ ಒಟ್ಟಿಗೆ ಅಭಿನಯಿಸಿದ್ದಾರೆ. ಮೈ ಜುಮ್‌ ಎನಿಸುವ ಆಕ್ಷನ್ ಸೀಕ್ವೆನ್ಸ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿವೆ.

ಆಕ್ಷನ್ ಜೊತೆಗೆ ದೇಶಭಕ್ತಿ ಅಂಶಗಳನ್ನು ಸೇರಿಸಿ ಟೀಸರ್ ಕಟ್ ಮಾಡಲಾಗಿದೆ. ಸೈನಿಕರಾಗಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅಬ್ಬರಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್‌ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇಲ್ಲಿಯವರಗೂ ಖುಷಿ ಗೌಡ 'ದರ್ಶನ್ ಶ್ರೀನಿವಾಸ'ರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ; ಪವಿತ್ರಾ ಗೌಡ

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್‌ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ‌ ಮೀಯಾ ಚೋಟೆ‌ ಮೀಯಾ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ,‌ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.‌ 

ಕ್ರೈಸ್ತ ಕೌನ್ಸಿಲರ್ ಆಗಿರುವ 'ಶ್ರೀರಾಮಚಂದ್ರ' ನಟಿ ಮೋಹಿನಿ; ಬದಲಾಗಿದೆ ಬದುಕು, ವಿಭಿನ್ನ ನಿಲುವು!

ವಶು ಭಗ್ನಾನಿ ಮತ್ತು ಪೂಜಾ ಎಂಟರ್ ಟೈನ್ಮೆಂಟ್ AAZ ಫಿಲ್ಮಂಸ್ ಸಹಯೋಗದಡಿ ಬಡೇ‌ ಮಿಯಾ ಚೋಟೆ ಮೀಯಾ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಏಪ್ರಿಲ್ 2024 ಈದ್ ಸ್ಪೆಷಲ್ ಆಗಿ ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ನಟ ಅಕ್ಷಯ್ ಕುಮಾರ್ ಜತೆ ಟೈಗರ್ ಶ್ರಾಫ್ ಕೂಡ ತೆರೆ ಹಂಚಿಕೊಂಡಿದ್ದು ಈ ಇಬ್ಬರ ಫ್ಯಾನ್ಸ್‌ಗಳೂ ಕೂಡ ಸಿನಿಮಾ ಬಿಡುಗಡೆಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ. 

ದೀಕ್ಷಿತ್ ಶೆಟ್ಟಿ ಜತೆ 'ಬ್ಲಿಂಕ್' ಆಗ್ತಿರೋ ಚೈತ್ರಾ ಆಚಾರ್ ಡ್ಯೂಯೆಟ್ ಧಮಾಕಾ; ರಿಪಬ್ಲಿಕ್ ಡೇ ಸ್ಪೆಷಲ್‌ ಟ್ರೀಟ್!

Akshay kumar and tiger shroff lead bade miyan chote miyan teaser launch srb

Follow Us:
Download App:
  • android
  • ios