Asianet Suvarna News Asianet Suvarna News

ಸರ್ಕಾರಿ ಜಾಹೀರಾತಿನಲ್ಲಿ ಎಡವಟ್ಟು; ಅಕ್ಷಯ್ ಕುಮಾರ್‌ಗೆ ನೆಟ್ಟಿಗರ ತರಾಟೆ

ಬಾಲಿವುಡ್ ನಟ ಅಕ್ಷಯ್ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡು ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗಷ್ಟೆ ಗುಟ್ಕ ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಅಕ್ಷಯ್ ಕುಮಾರ್ ಇದೀಗ ಸರ್ಕಾರಿ ಜಾಹೀರಾತಿನಲ್ಲಿ ನಟಿಸಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

Akshay Kumar advertisement Tweeted By Nitin Gadkari and netizens Slammed For Promoting Dowry sgk
Author
First Published Sep 13, 2022, 9:54 AM IST

ಬಾಲಿವುಡ್ ನಟ ಅಕ್ಷಯ್ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡು ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗಷ್ಟೆ ಗುಟ್ಕ ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಅಕ್ಷಯ್ ಕುಮಾರ್ ಇದೀಗ ಸರ್ಕಾರಿ ಜಾಹೀರಾತಿನಲ್ಲಿ ನಟಿಸಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಹೆದ್ದಾರಿ ಸಚಿವಾಲಯ ಜಾಹೀರಾತು ನಿರ್ಮಾಣ ಮಾಡಿದೆ. ಈ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಆದರೆ ಇದು ವರದಕ್ಷಿಣಿ ಪಿಡುಗನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಮೂಡಿಬಂದಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಅಕ್ಷಯ್​ ಕುಮಾರ್​ ಅವರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗುತ್ತಿದೆ.

ರಸ್ತೆ ಸುರಕ್ಷತೆಗು ವರದಕ್ಷಿಣೆ ವಿಚಾರಕ್ಕೂ ಎಲ್ಲಿಂದ ಸಂಬಂಧ ಅಂತೀರಾ, ಜಾಹೀರಾತಿನ ಕಾನ್ಸೆಪ್ಟ್​ ಇರುವುದೇ ಈ ರೀತಿ. ಮಗಳಿಗೆ ಮದುವೆ ಮಾಡಿ, ಅಳಿಯನ ಜೊತೆ ಕಳಿಸುವಾಗ ತಂದೆ ಕಣ್ಣೀರು ಹಾಕುತ್ತ ನಿಂತಿರುತ್ತಾರೆ. ಆಗ ಅಕ್ಷಯ್​ ಕುಮಾರ್ ಬಂದು ಒಂದು ತಕರಾರು ತೆಗೆಯುತ್ತಾರೆ. ‘ಇಂಥ ಕಾರ್​ನಲ್ಲಿ ಮಗಳು ಮತ್ತು ಅಳಿಯನನ್ನು ಕಳಿಸಿಕೊಟ್ಟರೆ ಕಷ್ಟ ಆಗುತ್ತದೆ. ಯಾಕೆಂದರೆ ಇದರಲ್ಲಿ ಎರಡೇ ಏರ್​ ಬ್ಯಾಗ್​ ಇರುವುದು. 6 ಏರ್​ ಬ್ಯಾಗ್​ ಇರುವ ಕಾರಿನಲ್ಲಿ ಕಳಿಸಿಕೊಟ್ಟರೆ ಚಿಂತೆ ಇರುವುದಿಲ್ಲ’ ಎಂದು ಅಕ್ಷಯ್​ ಕುಮಾರ್​ ಹೇಳುತ್ತಾರೆ. ಈ ಮೂಲಕ ಅಕ್ಷಯ್ ಕುಮಾರ್ ವರದಕ್ಷಿಣೆ ಪಿಡುಗನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆಕ್ರೋಶ ಕೇಳಿಬರುತ್ತಿದೆ.

ಈ ಜಾಹೀರಾತನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜಾಹೀರಾತು ಹಂಚಿಕೊಳ್ಳುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ. ಮದುವೆಯಲ್ಲಿ ಹುಡುಗನಿಗೆ ಕಾರನ್ನು ವರದಕ್ಷಿಣೆ ರೂಪದಲ್ಲಿ ನೀಡುವುದನ್ನು ಈ ಜಾಹೀರಾತು ಪ್ರಚೋದಿಸುತ್ತದೆ ಎಂಬ ಆರೋಪ ಕೇಳಿಬಂದಿದೆ. ನೆಟ್ಟಿಗರು ಈ ಜಾಹೀರಾತಿನ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಸರ್ಕಾರದ ಹಣದಲ್ಲಿ ನಿರ್ಮಾಣ ಆಗುವ ಜಾಹೀರಾತಿನಲ್ಲಿ ಇಂಥ ವಿಚಾರ ಇರಲು ಹೇಗೆ ಸಾಧ್ಯ’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.  ಅಕ್ಷಯ್ ಕುಮಾರ್ ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸರಣಿ ಸೋಲು, ಒಟಿಟಿಯಲ್ಲಿ ಸಿನಿಮಾ ರಿಲೀಸ್‌ಗೆ ಮುಂದಾದ್ರ ಅಕ್ಷಯ್ ಕುಮಾರ್? ನಿರ್ಮಾಪಕರ ಸ್ಪಷ್ಟನೆ

ಸಿನಿಮಾ ವಿಚಾರದಲ್ಲೂ ಅಕ್ಷಯ್ ಕುಮಾರ್ ಹಿನ್ನಡೆ ಸಾಧಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾ ಅಂದ್ಮೇಲೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿತ್ತು. ಹಾಕಿದ ಹಣಕ್ಕೆ ಯಾವುದೇ ಮೋಸ ಇರ್ಲಿಲ್ಲ. ಆದರೀಗ ಹಾಗಿಲ್ಲ. ಸಾಲು ಸಾಲು ಸಿನಿಮಾಗಳು ಕಂಡಿವೆ. ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ್, ಬಚ್ಚನ್ ಪಾಂಡೆ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಈ ವರ್ಷ ಅಕ್ಷಯ ಕುಮಾರ್ ಪಾಲಿಗೆ ನಿರಾಶಾದಾಯಕ ವರ್ಷವಾಗಿದೆ. ಆದರೂ ಅಕ್ಷಯ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. 

ವಿಶೇಷ ಅಭಿಮಾನಿ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ಅಕ್ಷಯ್ ನಟಿಸಿರುವ ಜಾಹೀರಾತಿನ ಉದ್ದೇಶ ಒಳ್ಳೆಯದ್ದೇ ಆಗಿದ್ದರೂ ಸಹ ಅದರ ಸ್ಕ್ರಿಪ್ಟ್ ನಿಂದ ವಿವಾದಕ್ಕೆ ಸಿಲುಕುವಂತೆ ಆಗಿದೆ. ಈ ಜಾಹೀರಾತಿನ ಸ್ಕ್ರಿಪ್ಟ್ ಬದಲಾಯಿಸಿ ಮತ್ತೆ ಚಿತ್ರೀಕರಿಸುತ್ತಾರಾ ಎಂದು ಕಾದುನೋಡಬೇಕು.     

Follow Us:
Download App:
  • android
  • ios