'ಕಾಶ್ಮೀರ್ ಫೈಲ್ಸ್' ಚಿತ್ರದಿಂದ 'ಬಚ್ಚನ್ ಪಾಂಡೆ'ಗೆ ದೊಡ್ಡ ಹೊಡೆತ- ಅಕ್ಷಯ್ ಕುಮಾರ್ ಹೇಳಿದ್ದೇನು?

ದಿ ಕಾಶ್ಮೀರ್ ಫೈಲ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿಯೂ ಕೋಟಿ ಕೋಟಿ ಕಮಾಯಿ ಮಾಡಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮೆಚ್ಚಿಕೊಂಡಿರುವ ಅಕ್ಷಯ್, ಈ ಚಿತ್ರದಲ್ಲಿ ಕಹಿ ಸತ್ಯವನ್ನು ಎತ್ತಿತೋರಿಸಿದ್ದಾರೆ ಎಂದಿದ್ದಾರೆ, ಜೊತೆಗೆ ಈ ಸಿನಿಮಾದಿಂದ ಬಚ್ಚನ್ ಪಾಂಡೆ ಗಳಿಕೆಮೇಲೆ ಹೊಡೆತ ಬಿದ್ದಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

Akshay Kumar admits The Kashmir Files hugely impacted his Bachchhan Paandey box office run

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್(Akshay Kumar) ಇತ್ತೀಚಿಗಷ್ಟೆ ಬಚ್ಚನ್ ಪಾಂಡೆ(Bachchhan Paandey) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಸಕ್ಸಸ್ ಫುಲ್ ಹಾದಿಯಲ್ಲಿರುವ ನಟ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಸಿನಿಮಾ ನಿರೀಕ್ಷೆಯ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಮೊದಲ ವಾರ 50 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಬಚ್ಚನ್ ಪಾಂಡೆ ವಿಫಲವಾಗಿದೆ. ಇದು ಅಕ್ಷಯ್ ಕುಮಾರ್ ಇತ್ತೀಚಿನ ಸಿನಿಮಾ ಗಳಿಕೆಯಲ್ಲೇ ಅತೀ ಕಡಿಮೆಯಾಗಿದೆ. ಈ ಬಗ್ಗೆ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್(Kashmir Files) ಸಿನಿಮಾದಿಂದ ತಮ್ಮ ಸಿನಿಮಾಗೆ ಹೊಡೆತ ಬಿದ್ದಿದೆ ಎನ್ನುವುದನ್ನು ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿಯೂ ಕೋಟಿ ಕೋಟಿ ಕಮಾಯಿ ಮಾಡಿದೆ. ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದ ಸಮಯದಲ್ಲಿ ಚಿತ್ರಮಂದಿರಕ್ಕೆ ಬಂದ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾಗೆ ದೊಡ್ಡ ಹೊಡೆದ ಬಿದ್ದಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾದ್ಯಮಗಳ ಜೊತೆ ಮಾತನಾಡಿರುವ ಅಕ್ಷಯ್ ಕುಮಾರ್, ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮೆಚ್ಚಿಕೊಂಡಿರುವ ಅಕ್ಷಯ್, ಈ ಚಿತ್ರದಲ್ಲಿ ಕಹಿ ಸತ್ಯವನ್ನು ಎತ್ತಿತೋರಿಸಿದ್ದಾರೆ ಎಂದಿದ್ದಾರೆ ಜೊತೆಗೆ ಈ ಸಿನಿಮಾದಿಂದ ಬಚ್ಚನ್ ಪಾಂಡೆ ಗಳಿಕೆಮೇಲೆ ಹೊಡೆತ ಬಿದ್ದಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೂ ಬಚ್ಚನ್ ಪಾಂಡೆ ಗಳಿಕೆ ಸಂತೋಷ ತಂದಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

'ಮೊದಲನೆದಾಗಿ ನಾನು ಕಾಶ್ಮೀರ್ ಫೈಲ್ಸ್ ಕಂಡ ಯಶಸ್ಸಿನಿಂದ ಉತ್ಸುಕನಾಗಿದ್ದೇನೆ. ಇದು ನಮ್ಮ ಸಿನಿಮಾದ ಶಕ್ತಿಯನ್ನು ಹೇಳುತ್ತದೆ' ಎಂದಿದ್ದಾರೆ. 'ಬಚ್ಚನ್ ಪಾಂಡೆ ಸಿನಿಮಾಗಿಂತ ಕಾಶ್ಮೀರ್ ಫೈಲ್ಸ್ ಉತ್ತಮವಾಗಿ ಹೋಗುತ್ತಿದೆ. ಹಾಗಂತ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ದೂಷಿಸುತ್ತಿಲ್ಲ. ಕಾಶ್ಮೀರ್ ಫೈಲ್ಸ್ ಬಿರುಗಾಳಿ ಎಬ್ಬಿಸಿದೆ, ಆದರೆ ನಾವು ಅದಕ್ಕೆ ಸಿಲುಕಿದೆವು' ಎಂದು ಹೇಳಿದ್ದಾರೆ.

ಮಗನ ಕ್ಯಾನ್ಸರ್ ಚಿಕಿತ್ಸೆ ವೇಳೆ ಅಕ್ಷಯ್ ಕುಮಾರ್ ಮಾಡಿದ ಸಹಾಯ ನೆನೆದ ಇಮ್ರಾನ್ ಹಶ್ಮಿ

ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಇತ್ತೀಚಿನ ಸಿನಿಮಾಗಳ ಯಶಸ್ಸು ದಕ್ಷಿಣ ಭಾರತೀಯ ಸಿನಿಮಾಗಳ ರಿಮೇಕ್ ಗಳನ್ನು ಆಧರಿಸಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇದು ಸಂಪೂರ್ಣವಾಗಿ ನಿಜವಲ್ಲ, ನಾನು ಸ್ವಂತ ಕತೆಯನ್ನು ಮಾಡುತ್ತೇನೆ. ನನ್ನ ಮುಂದಿನ ಸಿನಿಮಾದಲ್ಲಿ ಪೃಥ್ವಿರಾಜ್, ರಕ್ಷಾ ಬಂಧನ್, ರಾಮ್ ಸೇತು, OMG2, ಗೂರ್ಖಾ ಚಿತ್ರಗಳು ರಿಮೇಕ್ ಅಲ್ಲ. ಕೆಲವು ರಿಮೇಕ್ ಚಿತ್ರಗಳಿವೆ. ಆದರೆ ಅದಕ್ಕೆ ಕಾರಣ ನಾವು ನೋಡಿದ ಮತ್ತು ಪ್ರೀತಿಸಿದ ಸಿನಿಮಾಗಳು ಹಾಗಾಗಿ ಅವುಗಳನ್ನು ಪ್ರೇಕ್ಷಕರ ಮುಂದೆ ತರಲು ಬಯಸುತ್ತೇನೆ. ಇದು ಕೇವಲ ಏಕಮುಖ ವ್ಯವಹಾರವಲ್ಲ, ದಕ್ಷಿಣದ ಸಿನಿಮಾರಂಗ ಸಹ ಬೀಲಿವುಡ್ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದೆ. ಓ ಮೈ ಗಾಡ್, ಸ್ಪೆಷಲ್ 26 ಅಂತಹ ನನ್ನದೇ ಸಿನಿಮಾಗಳು ದಕ್ಷಿಣ ಭಾರತದಲ್ಲಿ ರಿಮೇಕ್ ಆಗಿವೆ' ಎಂದಿದ್ದಾರೆ.

ಬಚ್ಚನ್ ಪಾಂಡೆ 2ನೇ ದಿನದ ಕಲೆಕ್ಷನ್; ಅಕ್ಷಯ್ ಸಿನಿಮಾ ಗಳಿಸಿದೆಷ್ಟು?

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮೊದಲ ವಾರದಲ್ಲೇ ಕಾಶ್ಮೀರ್ ಫೈಲ್ಸ್ 100 ಕೋಟಿ ಕ್ಲಬ್ ದಾಟಿ ಮುನ್ನುಗ್ಗಿತ್ತು. ಆದರೆ ಬಚ್ಚನ್ ಪಾಂಡೆ ಮೊದಲ ವಾರ ಕೇವಲ 46 ಕೋಟಿ ರೂ. ಗಳಿಕೆ ಮಾಡಿತ್ತು. ಇವತ್ತಿಗೂ ಕಾಶ್ಮೀರ್ ಫೈಲ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಅನೇಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಸಿನಿಮಾದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

Latest Videos
Follow Us:
Download App:
  • android
  • ios